ಮಾರುತಿ ಬಲೆನೋ ಕಾರನ್ನು ಕ್ರಾಸ್ ಬ್ಯಾಡ್ಜ್ ಮೂಲಕ ಟೋಯೋಟಾ ಗ್ಲಾಂಜಾ ಕಾರಾಗಿ ಬಿಡುಗಡೆ ಮಾಡಲಾಗಿದೆ. ಇದೀಗ ಹೊಚ್ಚ ಹೊಸ ಬಲೆನೋ ಜೊತೆಗೆ ಅಪ್‌ಗ್ರೇಡೆಟ್ ವರ್ಶನ್ ಗ್ಲಾಂಜಾ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಡ್ರೈವಿಂಗ್ ಅನುಭವ ಹೇಗಿದೆ? ಮೈಲೇಜ್, ಕಾರಿನ ಬೆಲೆ ಸೇರಿದಂತೆ ಇತರ ಫೀಚರ್ಸ್ ಹೇಗಿದೆ? ಇದರ ವಿವರ ಇಲ್ಲಿವೆ.
ಬೆಂಗಳೂರು(ಸೆ.20): ಟೊಯೋಟಾ ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದ ಗ್ಲಾಂಜಾದ ಹೊಸ ವರ್ಷನ್ ಭಾರತದ ರೋಡುಗಳಿಗೆ ಬಂದು ಕೆಲವು ಸಮಯ ಆಗಿಹೋಗಿದೆ. ಟೊಯೋಟಾ ಮತ್ತು ಮಾರುತಿ ಸುಜುಕಿ ಸಹಭಾಗಿತ್ವ ಶುರುವಾದ ಮೇಲೆ ಮಾರುತಿ ಬಲೆನೋ ನಿಧಾನಕ್ಕೆ ಟೊಯೋಟಾ ಗ್ಲಾಂಜಾ ಆಯಿತು. ಮಾರುತಿ ಬಲೆನೋದ ಹೊಸ ವರ್ಷ ಬಂದ ಕೆಲವೇ ಸಮಯಕ್ಕೆ ಟೊಯೋಟಾ ಗ್ಲಾಂಜಾ ಕೂಡ ಬಂದಿದೆ. ಈ ಗ್ಲಾಂಜಾ ಪೂರ್ತಿ ಟೊಯೋಟಾ ಸಿಗ್ನೇಚರ್ ಸ್ಟೈಲ್ ಹೊಂದಿದೆ ಅನ್ನುವುದು ಇದರ ವಿಶೇಷತೆ.
ಹಳೆಯ ಗ್ಲಾಂಜಾಗಿಂತ(Toyota Glanza) ಅನೇಕ ಮಾರ್ಪಾಡುಗಳು ಈ ಹೊಸ ಗ್ಲಾಂಜಾದಲ್ಲಿ(Car) ಸಿಗುತ್ತವೆ. ಅದರಲ್ಲಿ ನಮ್ಮ ನಿಮ್ಮ ಮನಸ್ಸಿಗೆ ಸಂತೋಷ ಕೊಡುವ ವಿಚಾರ ಎಂದರೆ ಮೈಲೇಜ್(Mileage) ಹೆಚ್ಚು ಕೊಡುತ್ತದೆ ಅನ್ನುವುದು. ಲೆಕ್ಕಾಚಾರದ ಪ್ರಕಾರ ಲೀಟರಿಗೆ ಈ ಕಾರು 22.35 ಕಿಮೀ ಮೈಲೇಜು ನೀಡುತ್ತದೆ. ಈ ಲೆಕ್ಕ ಹಳೆಯ ಕಾರಿಗಿಂತ ಎರಡೂ ಚಿಲ್ಲರೆ ಕಿಮೀ ಜಾಸ್ತಿ. 1.2ಲೀ ಕೆ12ಎನ್ ಇಂಜಿನ್ ಹೊಂದಿರುವ ಗ್ಲಾಂಜಾದ ತಾಕತ್ತು ಅಮೋಘ. ಅಟೋಮ್ಯಾಟಿಕ್(AMT) ವರ್ಷನ್ನಿನಲ್ಲಿ ಆ್ಯಕ್ಸಿಲೇಟರ್ ಮೇಲೆ ಕಾಲಿಟ್ಟರೆ ಸಾಕು ಜಿಂಕೆಯಂತೆ ಓಡುತ್ತದೆ. ಆಫ್‌ರೋಡ್‌ನಲ್ಲಿ ಡ್ರೈವಿಂಗ್(Off Road Drving) ಮಾಡುವಾಗ ಮಾತ್ರ ನೆಲ ನೋಡಿಕೊಂಡು ಮುಂದೆ ಸಾಗಬೇಕು. ಗ್ರೌಂಡ್ ಕ್ಲಿಯರೆನ್ಸ್ ಸ್ವಲ್ಪ ಕಮ್ಮಿಯೇ ಉಂಟು.
undefined
ರೋಡ್ ಫಂಡಿಂಗ್ ಮೇಲೆ ಶೇ.90 ರಷ್ಟು ಕೊಡುಗೆ, ಟೋಯೋಟಾ ಕಾರುಗಳಿಗೆ ಭರ್ಜರಿ ಆಫರ್!
ಹಿಲ್ ಸ್ಟಾರ್ಚ್ ಅಸಿಸ್ಟ್ ಫೀಚರ್ ಮತ್ತು ಹೆಡ್ ಅಪ್ ಡಿಸ್‌ಪ್ಲೇ ಈ ಕಾರಿನ ವಿಶೇಷತೆ. ಹಿಲ್ ಸ್ಟಾರ್ಚ್ ಅಸಿಸ್ಟ್ ಫೀಚರ್ ಕಾರಣದಿಂದ ನೀವು ಎತ್ತರ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬ್ರೇಕ್‌ನಿಂದ ಕಾಲು ತೆಗೆದರೂ 3 ಸೆಕೆಂಡು ಕಾರು ಅಲ್ಲಾಡುವುದಿಲ್ಲ. ಹೆಡ್ ಅಪ್ ಡಿಸ್‌ಪ್ಲೇ ಮುಖ್ಯವಾಗಿ ಕಾರಿನ ಡಿಸ್‌ಪ್ಲೇ ನೋಡಿಕೊಂಡು ಕಾರು ಓಡಿಸುವವರಿಗೆ ಅನುಕೂಲ. ಎಚ್‌ಯುಡಿ ಎಂಬ ಬಟನ್ ಒತ್ತಿದರೆ ಸ್ಟೇರಿಂಗ್ ವ್ಹೀಲಿನ ಮೇಲೆ ಒಂದು ಪುಟಾಣಿ ಗ್ಲಾಸ್ ತೆರೆದುಕೊಳ್ಳುತ್ತದೆ. ಅದರಲ್ಲಿ ಕಾರಿನ ಡಿಸ್‌ಪ್ಲೇನಲ್ಲಿ ಕಾಣುವ ಅಂಕಿಅಂಶಗಳೆಲ್ಲಾ ಕಾಣುತ್ತವೆ. ಪದೇ ಪದೇ ಡಿಸ್‌ಪ್ಲೇ ನೋಡಿ ಕತ್ತು ನೋಯಿಸಿಕೊಳ್ಳುವುದನ್ನು ತಪ್ಪಿಸಲು ಈ ಫೀಚರ್ ರಾಮಬಾಣ.
9 ಇಂಚಿನ ಇನ್‌ಫೋಟೇನ್‌ಮೆಂಟ್ ಸಿಸ್ಟಮ್ ಬೋರ್ ಆಗದಂತೆ ನೋಡಿಕೊಳ್ಳುತ್ತದೆ. 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಪಾರ್ಕಿಂಗ್ ಕಷ್ಟಕ್ಕೆ ಸುಲಭ ಪರಿಹಾರ ಒದಗಿಸುತ್ತದೆ. 6 ಏರ್‌ಬ್ಯಾಗ್ ಅನ್ನು ಸುರಕ್ಷತೆ ಸಲುವಾಗಿ ನೀಡಲಾಗಿದೆ. 318 ಲೀ ಲಗೇಜ್ ಜಾಗವನ್ನು ಮಧ್ಯಮವರ್ಗದ ಮಂದಿಯ ಕ್ಷೇಮಕ್ಕಾಗಿಯೇ ನೀಡಲಾಗಿದೆ. ಇದರ ಬೆಲೆ ರು.6.6ಲಕ್ಷದಿಂದ ಆರಂಭಗೊಂಡು ರು.9.9 ಲಕ್ಷದವರೆಗೆ ಇದೆ.(ಎಕ್ಸ್ ಶೋರೂಮ್) ಉಳಿದಂತೆ ಕಾರು(Car Test Drive) ಸೊಗಸಾಗಿದೆ, ಪ್ರೀತಿಗೆ ತಕ್ಕಂತೆ ಒಲಿಯುತ್ತದೆ.
Toyota SUV Price ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ಘೋಷಿಸಿದ ಟೋಯೋಟಾ, ಸ್ಪರ್ಧಾತ್ಮಕ ಬೆಲೆಯಲ್ಲಿ SUV!
1.2 ಲೀಟರ್‌ನ 1197 ಸಿಸಿ ಎಂಜಿನ್ ಇರುವ ಈ ಕಾರು. ಸ್ಪೋಟ್ಸ್‌ರ್ ಡಿಸೈನ್‌ನ ಈ ಹ್ಯಾಚ್‌ಬ್ಯಾಕ್‌ನಲ್ಲಿ ಅನೇಕ ಹೊಸ ಫೀಚರಿದ್ದು, ಸ್ಪೋಟ್ಸ್‌ರ್ ಡಿಸೈನ್‌ನಲ್ಲಿದೆ. ಸುರಕ್ಷತೆಗೆ 6 ಏರ್‌ಬ್ಯಾಗ್‌ಗಳು, ಏರು ಪ್ರದೇಶದಲ್ಲಿ ಸಮತೋಲನ ಕಾಯ್ದುಕೊಳ್ಳಲು ಹಿಲ್ ಹೋಲ್ಡ್ ಕಂಟ್ರೋಲ್ ಇದರಲ್ಲಿದೆ. ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಫಾಗ್ ಲ್ಯಾಂಪ್ ಸಹ ಇದೆ. ಟೊಯೋಟಾ ಐ ಕನೆಕ್ಟ್ ಆ್ಯಪ್ ಜೊತೆಗೆ ಕನೆಕ್ಟ್ ಮಾಡಿಕೊಂಡರೆ ಕಾರಿನ ನಿಯಂತ್ರಣಕ್ಕೆ ಅನುಕೂಲವಾಗಲಿದೆ. ಮ್ಯಾನುವಲ್, ಅಟೋಮ್ಯಾಟಿಕ್ ಎರಡೂ ಮಾದರಿಗಳಲ್ಲಿ ಲಭ್ಯ. 11,000 ರು. ನೀಡಿ ಬುಕಿಂಗ್ ಮಾಡಬಹುದು.
ಆರಂಭಿಕ ಬೆಲೆ: ರು. 6,39,000 (ಎಕ್ಸ್‌ಶೋರೂಮ್