
ನವದೆಹಲಿ (ಆ.15) ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಮಹೀಂದ್ರ ಇದೀಗ ಭರ್ಜರಿ ಅಪ್‌ಡೇಟ್ ಜೊತೆ ಹೊಸ ಮಹೀಂದ್ರ ಬಿಇ6 ಸ್ಪೊರ್ಟೆಕ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಪ್ರೀಮಿಯಂ ಹಾಗೂ ಫ್ಲ್ಯಾಗ್‌ಶಿಪ್ ವೆರಿಯೆಂಟ್ ಮೂಲಕ ಹೊಸ ಕಾರು ಬಿಡುಗಡೆಯಾಗಿದೆ. ಟ್ರಿಪಲ್ ಸ್ಕ್ರೀನ್, ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೇರಿದಂತೆ ಹೊಸ ಅದ್ಭುತ ಲೋಕವನ್ನೇ ಸೃಷ್ಟಿಸುವಲ್ಲಿ ಮಹೀಂದ್ರ ಯಶಸ್ವಿಯಾಗಿದೆ. ಆಗಸ್ಟ್ 26ರಿಂದ ಬುಕಿಂಗ್ ಮಾಡಿಗ ಗ್ರಾಹಕರಿಗೆ ಡೆಲಿವರಿ ಆರಂಭಗೊಳ್ಳಲಿದೆ.
ಹೊಸ ಮಹೀಂದ್ರ ಬಿಇ6 ಸ್ಪೋರ್ಟೆಕ್ ಕಾರಿನ ಆರಂಭಿಕ ಬೆಲ 19. 45 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಟಾಪ್ ವೇರಿಯೆಂಟ್ ಬೆಲೆ 26.95 ಲಕ್ಷ ರೂಪಾಯಿ. ವಿಶೇಷ ಅಂದರೆ ಬ್ಯಾಟರಿ ಸರ್ವೀಸ್ (BaaS - Battery as a Service) ಸೌಲಭ್ಯವನ್ನು ನೀಡಲಾಗಿದೆ. ಬ್ಯಾಟರಿ ರಹಿತವಾಗಿ ಕಾರು ಪ್ರಿಯರು ಈ ಕಾರನ್ನು 11.45 ಲಕ್ಷ ರೂಪಾಯಿಗೆ ಖರೀದಿಸಲು ಸಾಧ್ಯವಿದೆ. BaaS ಸೌಲಭ್ಯ ಮೂಲಕ ಖರೀದಿಸುವ ಗ್ರಾಹಕರು ಪ್ರತಿ ಕಿಲೋಮೀಟರ್‌ಗೆ 3.75 ರೂಪಾಯಿ ಬ್ಯಾಟರಿ ಬಾಡಿಗೆಯನ್ನು ಪಾವತಿಸಬೇಕು.
ಕಾರಿನ ಇಂಟಿರೀಯರ್ ಕೆಲ ಅದ್ಭುತ ಫೀಚರ್ ನೀಡಲಾಗಿದ್ದು, ಕೆಲ ಬದಲಾವಣೆ ಮಾಡಲಾಗಿದೆ. ಡ್ಯುಯೆಲ್ ಸ್ಕ್ರೀನ್ ಬದಲು 12.3 ಇಂಚಿನ ಡಿಜಿಟಲ್ ಸ್ಕ್ರೀನ್ ಟ್ರಿಪಲ್ ಡಿಸ್‌ಪ್ಲೆ ನೀಡಲಾಗಿದೆ. ಇದರಿಂದ ಮುಂಭಾಗದ ಸಹ ಪ್ರಯಾಣಿಕರಿಗೆ ಪ್ರತ್ಯೇಕ ಸ್ಕ್ರೀನ್ ಲಭ್ಯವಿದೆ. ಕರಾವಳಿ ಶೈಲಿಯ ಡ್ಯಾಶ್‌ಬೋರ್ಡ್ ನೀಡಲಾಗಿದೆ.ಹೆಲೋ ಸ್ಟೈಲ್ ಲೂಪ್ ವಿನ್ಯಾಸದ ಬದಲು ಕ್ಲೀನ್ ಹಾರಿಜಾಂಟಲ್ ಡ್ಯಾಶ್‌ಬೋರ್ಡ್ ನೀಡಲಾಗಿದೆ. ಟೈಪ್ ಸಿ ಯುಎಸ್‌ಬಿ ಪೋರ್ಟ್, ವೈಯರ್‌ಲೆಸ್ ಚಾರ್ಜಿಂಗ್, ಕಪ್ ಹೋಲ್ಡರ್, ರೇಕಿಂಗ್ ಟ್ಯಾನ್ ಲೆಥರ ಪ್ರೀಮಿಯಂ ಇಂಟಿರಿಯರ್ ಕಾರಿನ ಲುಕ್ ಹಾಗೂ ಐಷರಾಮಿತನ ಹೆಚ್ಚಿಸಿದೆ.
ಮಹೀಂದ್ರ ಬಿಇ6 ಸ್ಪೋರ್ಟೆಕ್ ಕಾರು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಒಳಗೊಂಡಿದೆ. ಗೂಗಲ್ ಜೆಮಿನಿ ತಂತ್ರಜ್ಞಾನದಿಂದ ಚಾಲಿತಗೊಂಡಿರುವ 17 ಎಐ ಎಜೆಂಟ್ ಮೂಲಕ ಚಾಲಕನ ಜೊತೆ ಸಂಭಾಷಣೆ ನಡೆಸಲಿದೆ. ಜೊತೆಗೆ ಚಾಲಕನಿಗೆ ನೆರವು ನೀಡಲಿದೆ. ವಾಯ್ಸ್ ಕಮಾಂಡ್ ಮೂಲಕ ಕಾರಿನ 100ಕ್ಕೂ ಹೆಚ್ಚು ಫೀಚರ್ ಹಾಗೂ 48 ಆ್ಯಪ್ ನಿಯಂತ್ರಿಸಲು ಸಾಧ್ಯವಿದೆ. ಗೇಮಿಂಗ್, ಪ್ರೈವೇಟ್ ಆಡಿಯೋ, ಡಾಲ್ಿ ವಿಶನ್ ಹಾಗೂ ಡಾಲ್ಬಿ ಅಟ್ಮಾಸ್ ಸೌಂಡ್ ಸ್ಪೀಕರ್ ನೀಡಲಾಗಿದೆ. ವಿಶೇಷ ಅಂದರೆ ಹಿಂದಿನ ಟೇಲ್‌ಗೇಟ್ ಎಲ್‌ಇಡಿ ಲೈಟ್ ಮೇಲೆ ಚಾಲಕ ತನಗೆ ಬೇಕಾದ ಸಂದೇಶಗಳನ್ನು ಪ್ರದರ್ಶಿಸಲು ಸಾಧ್ಯವಿದೆ. ಐಫೋನ್, ಆ್ಯಪಲ್ ವಾಚ್, ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮೂಲಕ ಕಾರು ಲಾಕ್ ಹಾಗೂ ಅನ್‌ಲಾಕ್ ಮಾಡಬಹುದು.
59 kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 548 ಕಿಲೋಮೀಟರ್ ಮೈಲೇಜ್ ಮೀಡುತ್ತದೆ. ಇನ್ನು 70 kWh ಬ್ಯಾಟರಿ ಪ್ಯಾಕ್ 651 ಕಿಲೋಮೀಟರ್ ಮೈಲೇಜ್ ಹಾಗೂ 79 kWh ಬ್ಯಾಟರಿ ಪ್ಯಾಕ್ 683 ಕಿಲೋಮೀಟರ್ ಮೈಲೇಜ್ ನೀಡಲಿದೆ.