ಟೊಯೋಟಾಗೆ ನಡುಕ, ಹೈಲಕ್ಸ್‌ಗಿಂತ ಭಾರಿ ಕಡಿಮೆ ಬೆಲೆಯಲ್ಲಿ ಮಹೀಂದ್ರ ಸ್ಕಾರ್ಪಿಯೋ ಪಿಕ್‌ಅಪ್ ಲಾಂಚ್

Published : Aug 14, 2026, 10:25 PM IST
Mahindra Scorpio Pickup Launched

ಸಾರಾಂಶ

ಮಹೀಂದ್ರ ಸ್ಕಾರ್ಪಿಯೋ ಲೈಫ್‌ಸ್ಟೈಲರ್ ಪಿಕ್ಅಪ್ ಟ್ರಕ್ ಬಿಡುಗಡೆಯಾಗಿದೆ. ನೇರವಾಗಿ ಟೋಯೋಟಾ ಹೈಲಕ್ಸ್‌ಗೆ ಪ್ರತಿಸ್ಪರ್ಧಿಯಾಗಿರುವ ಈ ಟ್ರಕ್ ಹೈಲಕ್ಸ್‌ಗಿಂತ ಭಾರಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ನವದೆಹಲಿ (ಆ.14) ಮಹೀಂದ್ರ ಇದೀಗ ಸ್ಕಾರ್ಪಿಯೋ ಎನ್ ಆಧಾರಿತ ಲೈಫ್‌‌ಸ್ಟೈಲರ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಡಿದೆ. ಟೊಯೊಟಾ ಹೈಲಕ್ಸ್, ಇಸುಜು ಡಿ ಮ್ಯಾಕ್ಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಈ ಕಾರು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಟೊಯೋಟಾ ಹೈಲೈಕ್ಸ್ ಟ್ರಕ್‌ಗಿಂತ ಅರ್ಧ ಬೆಲೆಯಲ್ಲಿ ಮಹೀಂದ್ರ ಸ್ಕಾರ್ಪಿಯೋ ಪಿಕ್ಅಪ್ ಟ್ರಕ್ ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ.

ಹೊಸ ಮಹೀಂದ್ರ ಸ್ಕಾರ್ಪಿಯೋ ಲೈಫ್‌ಸ್ಟೈಲರ್ ಟ್ರಕ್ ಬೆಲೆ

ಹೊಚ್ಚ ಹೊಸ ಮಹೀಂದ್ರ ಸ್ಕಾರ್ಪಿಯೋ ಲೈಫ್‌ಸ್ಟೈಲರ್ ಪಿಕ್ಅಪ್ ಕಾರಿನ ಆರಂಭಿಕ ಬೆಲೆ 19.75 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಟೊಯೋಟಾ ಹಿಲಕ್ಸ್ ಕಾರಿನ ಬೆಲೆ 31 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಈ ಪಿಕ್ಅಪ್ ಟ್ರಕ್‌ಗೆ ಹೋಲಿಸಿದರೆ ಸರಿಸುಮಾರು ಅರ್ಧ ಬೆಲೆಯಲ್ಲಿ ಸ್ಕಾರ್ಪಿಯೋ ಲೈಫ್‌ಸ್ಟೈಲರ್ ಪಿಕ್ಅಪ್ ಟ್ರಕ್ ಲಭ್ಯವಿದೆ.

ಗ್ಲೋಬಲ್ ಪಿಕ್ಅಪ್ ಪರಿಕಲ್ಪನೆಯಲ್ಲಿ ಈ ವಾಹನ ತಯಾರಾಗಿದೆ. ಸ್ಕಾರ್ಪಿಯೋ ಎನ್ ಆಫ್ ರೋಡರ್ ಎಸ್‌ಯುವಿ ಲ್ಯಾಡರ್ ಫ್ರೇಮ್ ಈ ಪಿಕ್ಅಪ್‌ನಲ್ಲಿ ಬಸಲಾಗಿದೆ. ಫ್ರಂಟ್ ಗ್ರಿಲ್, ಎಲ್ಇಡಿ ಹೆಡ್‌ಲೈಟ್, ಜೊತೆಗೆ ಆಫ್ ರೋಡ್ ಮೂಲಕ ಸರಾಗವಾಗಿ ಸಾಗಲು ಸರಿಹೊಂದುವ ಬಂಪರ್ ನೀಡಲಾಗಿದೆ. ಡ್ಯುಯೆಲ್ ಕ್ಯಾಬ್ ವಿನ್ಯಾಸ, ಲಗೇಜ್ ಸ್ಪೇಸ್ ಹಾಗೂ ಕಾರ್ಗೋ ಬೆಡ್ ನೀಡಲಾಗಿದೆ.

ಪವರ್‌ಫುಲ್ ಎಂಜಿನ್

4x4 ಸಾಮರ್ಥ್ಯದ ಪವರ್‌ಫುಲ್ ಎಂಜಿನ್ ನೀಡಲಾಗಿದೆ. 2.2 ಲೀಟರ್ mHawk ಟರ್ಬೊ-ಡೀಸೆಲ್ ಎಂಜಿನ್ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ನೀಡಲಾಗಿದೆ. ಫೋರ್-ವೀಲ್ ಡ್ರೈವ್, ಸ್ನೋ, ಮಡ್, ಸ್ಯಾಂಡ್ ಸೇರಿದಂತೆ ವಿವಿದ ಮೋಡ್ ಡ್ರೈವಿಂಗ್ ಫೀಚರ್ ಈ ಟ್ರಕ್‌ನಲ್ಲಿದೆ.

ಇದು ಸರಕು ಸಾಗಿಸುವ ಪಿಕ್ಅಪ್ ಎಂದುಕೊಂಡರೆ ತಪ್ಪು. ಪಿಕ್ಅಪ್ ಜೊತೆ ಪ್ರೀಮಿಯಂ ಲೈಫ್‌ಸ್ಟೈಲ್ ಕಾರಾಗಿದೆ. ಸ್ಕಾರ್ಪಿಯೋ ಎನ್ ಮಾದರಿಯಲ್ಲೇ ಸೀಟು ಹಾಗೂ ಇಂಟಿರೀಯರ್ ನೀಡಲಾಗಿದೆ.ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಹಾಗೂ ಕನೆಕ್ಟೆಡ್ ಕಾರ್ ಫೀಚರ್ ಸೇರಿದಂತೆ ಹಲವು ಸೌಲಭ್ಯಗಳಿವೆ.ಅಡಾಸ್ ಲೆವೆಲ್ 2 ಟೆಕ್, 6 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಡೆಸೆಂಟ್ ಕಂಟ್ರೋಲ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಟ್ರಕ್‌ನಲ್ಲಿದೆ.

PREV
Read more Articles on
click me!

Recommended Stories

ನಿಮ್ಮ ಕಾರು ಕನಸು ನನಸಾಗಿಸಲು ಇನ್ನು ಕೆಲ ದಿನ ಮಾತ್ರ ಬಾಕಿ, ಬಿಡುಗಡೆಯಾಗುತ್ತಿದೆ 10 ಹೊಸ ಕಾರು
ಜಸ್ಟ್‌ 21 ಸಾವಿರಕ್ಕೆ ಬುಕ್‌ ಮಾಡಿ MG ಹೆಕ್ಟರ್ ಹಾಕ್, ಆಕರ್ಷಕ ಫೀಚರ್‌ ಇರುವ ಹೊಸ ಎಸ್‌ಯುವಿ ಆಗಸ್ಟ್ 26ಕ್ಕೆ ಗ್ರ್ಯಾಂಡ್ ಲಾಂಚ್!