ಮನೆ ಬಣ್ಣಕ್ಕೆ 3 ಕಾರು ರೀ-ಪೇಂಟ್‌ ಮಾಡಿಸಿದ ನಟಿ: ವ್ಯಯಿಸಿದ್ದು ಬರೋಬ್ಬರಿ 75 ಲಕ್ಷ ರೂ.!

By Contributor Asianet  |  First Published Feb 26, 2022, 5:15 PM IST

*ಮೂರು ಐಷಾರಾಮಿ ಕಾರುಗಳ ಬಣ್ಣ ಬದಲಾವಣೆ

*ಮನೆಗೆ ಹೊಂದಿಕೊಳ್ಳುವಂತೆ ಬೂದು ಬಣ್ಣಕ್ಕೆ ಪೇಂಟಿಂಗ್‌

* ಬರೋಬ್ಬರಿ 75 ಲಕ್ಷ ರೂ. ವೆಚ್ಚ


ಕಾರುಗಳೆಂದರೆ ಜನರಿಗೆ ಕ್ರೇಜ್‌ ಇರುವುದು ಸಾಮಾನ್ಯ. ಕೆಲವರು ತಮ್ಮ ಕಾರುಗಳನ್ನು ಜೋಪಾನವಾಗಿ ನೋಡಿಕೊಂಡರೆ, ಇನ್ನು ಕೆಲವರು ಆ ಕಾರುಗಳನ್ನು ತಮಗಿಷ್ಟವಾದ ರೀತಿ ಮಾಡಿಫೈ (modify) ಮಾಡಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬರು ನಟಿ ತಮ್ಮ ಮನೆಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ತಮ್ಮ ಮೂರು ಕಾರುಗಳ ಬಣ್ಣ ಬದಲಾಯಿಸಿದ್ದಾರೆ. ಇದಕ್ಕಾಗಿ ಅವರು ವೆಚ್ಚ ಮಾಡಿದ್ದು ಬರೋಬ್ಬರಿ 75 ಲಕ್ಷ ರೂ.!

ಅಮೆರಿಕದ ರಿಯಾಲಿಟಿ ಸ್ಟಾರ್  ಕಿಮ್ ಕಾರ್ಡಶಿಯನ್ (Kim Kardashian) ಯಾವಾಗಲೂ ತನ್ನ ವಿಶೇಷ ಅಭ್ಯಾಸಗಳಿಂದ ಸುದ್ದಿಯಲ್ಲಿರುತ್ತಾರೆ. ಜನರು ಆಕೆ ಬಗ್ಗೆ ಸಾಕಷ್ಟು ಟೀಕಿಸಿದರೂ, ಆಕೆಯ ಸ್ಟಾರ್ಡಮ್ (Stardom) ಅನ್ನು ನಿರ್ಲಕ್ಷಿಸಲಾಗುವುದಿಲ್ಲ. ಎಲ್ಲದರಲ್ಲೂ ತನ್ನ ಅತಿರಂಜಿತ ಅಭಿರುಚಿಗೆ ಆಕೆ ಹೆಸರುವಾಸಿ. ಇದು ಈಗ ಆಕೆ ಐಷಾರಾಮಿ ಮತ್ತು ಕ್ರೀಡಾ ಕಾರುಗಳ ಆಯ್ಕೆಗೆ ವಿಸ್ತರಣೆಯಾಗಿದೆ. ಇತ್ತೀಚೆಗೆ, ಅವರ ಕಾರುಗಳ ವೈಯಕ್ತೀಕರಣದ ಸುದ್ದಿ ಭಾರಿ ವೈರಲ್‌ ಆಗಿತ್ತು.
 ಅಮೆರಿಕದ ಪ್ರಸಿದ್ಧ ಫ್ಯಾಷನ್ ಮತ್ತು ಜೀವನಶೈಲಿ ನಿಯತಕಾಲಿಕೆ 'ವೋಗ್' (Vogue) ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ  ಕಿಮ್ ತಮ್ಮ ಬಂಗಲೆ ಮತ್ತು ಅವರ ಮೂರು ಕಾರುಗಳನ್ನು ತೋರಿಸುತ್ತಿರುವ ಚಿತ್ರಣವಿದೆ.

ಮೂರನೇ ಸಾರಿ ಪರೀಕ್ಷೆ ಬರೆದು ಪಾಸಾದ ಹಾಟ್ ನಟಿ

ವಿಶೇಷವೆಂದರೆ, ಈ ಮೂರು ಕಾರುಗಳು ಐಷಾರಾಮಿ ಕಾರುಗಳು. ಲ್ಯಾಂಬೋರ್ಗಿನಿ ಉರುಸ್ (Lamborgini Urus), ಮರ್ಸಿಡಿಸ್ ಮೇಬ್ಯಾಕ್ ಎಸ್600 (Mercedes Mayback S600) ಮತ್ತು ರೋಲ್ಸ್ ರಾಯ್ಸ್ ಘೋಸ್ಟ್ (Rolls roys Ghost). ಈ ಎಲ್ಲಾ ಕಾರುಗಳನ್ನು ಕಿಮ್‌ ತಮ್ಮ ಬಂಗಲೆಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಬೂದು ಬಣ್ಣದಲ್ಲಿ ಪೇಂಟ್‌ ಮಾಡಿಸಿದ್ದಾರೆ.

ಇದಕ್ಕಾಗಿ ಕಿಮ್‌ ಸುಮಾರು 1 ಲಕ್ಷ ಡಾಲರ್‌ ವೆಚ್ಚ ಮಾಡಿದ್ದಾರೆ. ಲಾಸ್ ಏಂಜಲೀಸ್ ಮೂಲದ ಪ್ಲಾಟಿನಂ ಮೋಟಾರ್ಸ್ಪೋರ್ಟ್ಸ್ ಈ ಪೇಂಟಿಂಗ್‌ ಕಾರ್ಯ ನಿರ್ವಹಿಸಿದೆ. ಇದಕ್ಕೆ ಪ್ಲಾಟಿನಂ ಮೋಟಾರ್ ಸ್ಪೋರ್ಟ್ಸ್ ತೆಗೆದುಕೊಂಡ ಸಮಯ ಒಂದು ತಿಂಗಳು!

ಮೂಲವೊಂದರ ಪ್ರಕಾರ, ಕಿಮ್ ಕಾರ್ಡಶಿಯನ್ ಅವರು ವೈಯಕ್ತಿಕವಾಗಿ ಪೇಂಟ್ ಕೆಲಸದ ನಿಗಾ ವಹಿಸಿದ್ದಾರೆ. ಏಕೆಂದರೆ, ಈ ಕಾರುಗಳು ಅವರ ಇಷ್ಟದ ಕಾರುಗಳಲ್ಲಿ ಕೆಲವು ಎಂದು ಹೇಳಲಾಗುತ್ತಿದೆ. 

ಈ ಕಸ್ಟಮ್ ಬೂದು ಬಣ್ಣದಿಂದ ಚಿತ್ರಿಸಲಾದ ಎಲ್ಲಾ ಮೂರು ಕಾರುಗಳು ತಮ್ಮದೇ ಆದ ರೀತಿ ವಿಶೇಷವಾಗಿದೆ. ಈ ಮೂರು ಕಾರುಗಳಲ್ಲಿ ಲ್ಯಾಂಬೋರ್ಗಿನಿ ಉರುಸ್ ಹೆಚ್ಚು ಆಕರ್ಷಣೆ ಪಡೆದುಕೊಳ್ಳುತ್ತದೆ. 2.18 ಲಕ್ಷ ಡಾಲರ್  ಮೌಲ್ಯದ ಈ ಕಾರು ಎಸ್‌ಯುವಿಗಳಲ್ಲಿ ಅತ್ಯಂತ ದುಬಾರಿ ಕಾರು ಎಂದು ಗುರುತಿಸಿಕೊಂಡಿದೆ. ಇಲ್ಲಿರುವ ಉರುಸ್ ಅನ್ನು ಅದರ ಮುಂಭಾಗದಲ್ಲಿ ವಿಶೇಷ ಬಾಡಿಯೊಂದಿಗೆ ಈಗಾಗಲೇ ಕಸ್ಟಮೈಸ್ ಮಾಡಲಾಗಿದೆ. ಉರುಸ್ನ ಹೊರತಾಗಿ, ರೋಲ್ಸ್ ರಾಯ್ಸ್ ಘೋಸ್ಟ್ಗೆ ವಿಶಿಷ್ಟವಾದ ಸ್ಪಿರಿಟ್ ಆಫ್ ಎಕ್ಸ್ಟಸಿಯನ್ನು ನೀಡಲಾಗಿದೆ. ಮೂರನೇ ಕಾರು ಮರ್ಸಿಡಿಸ್ ಮೇಬ್ಯಾಕ್ ಎಸ್600 ಸಹ ವಿಭಿನ್ನವಾಗಿ ಕಾಣುತ್ತದೆ. 

ವೋಗ್ ಹಂಚಿಕೊಂಡ ವೀಡಿಯೊ ಕ್ಲಿಪ್ನಲ್ಲಿ, ಕಿಮ್ ಕಾರ್ಡಶಿಯಾನ ಸ್ಪೋರ್ಟ್ಸ್ ಕಾರುಗಳ ಮೇಲಿನ ತಮ್ಮ ಪ್ರೀತಿಯನ್ನು ವಿವರಿಸಿದ್ದಾರೆ. ಈ ಹೊಸ ಮತ್ತು ವಿಶೇಷ ಪೇಂಟ್ ಸ್ಕೀಮ್ನೊಂದಿಗೆ, ಕಿಮ್ ಅವರು ತಮ್ಮ ಬೂದು-ಬಣ್ಣದ ಮನೆಗೆ ಹೊಂದಿಕೆಯಾಗುವಂತೆ ವಿಭಿನ್ನವಾಗಿ ಪೇಂಟ್‌ ಮಾಡಿಸಲು ಬಯಸಿದ್ದರು.

ಭಾರತದಲ್ಲಿ ಕೂಡ ಈ ದುಬಾರಿ ಕಾರುಗಳನ್ನು ಕೆಲವೇ ಕೆಲವು ಜನರು ಮಾತ್ರ ಹೊಂದಿದ್ದಾರೆ. ಅದರಲ್ಲೂ ಲ್ಯಾಂಬೋರ್ಗಿನಿ ಕಾರನ್ನು ಶ್ರೀಮಂತ ಉದ್ಯಮಿಗಳು ಮತ್ತು ಚಿತ್ರನಟರಲ್ಲಿ ಕಂಡುಬರುತ್ತದೆ. ಮಾರ್ಚ್ 2019 ರಲ್ಲಿ, ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್  ತನ್ನ ಪತ್ನಿಗೆ 'ಲಂಬೋರ್ಗಿನಿ ಉರುಸ್' ಅನ್ನು ಉಡುಗೊರೆಯಾಗಿ ನೀಡಿದ್ದರು. 

Latest Videos

click me!