ಅನಂತಪುರಂ(ಮೇ.27): ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ಕಿಯಾ ಮೋಟಾರ್ಸ್ ಸಜ್ಜಾಗಿದೆ. ಇದೇ ಜೂನ್ 2 ರಂದು ಕಿಯಾ ತನ್ನ ಹೊಚ್ಚ ಹೊಸ ಕಿಯಾ EV6 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಬಿಡುಗಡೆಗೂ ಮುನ್ನ ಇದೀಗ ಕಿಯಾ EV6 ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಆರಂಭಗೊಂಡಿದೆ. 3 ಲಕ್ಷ ರೂಪಾಯಿಗೆ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರು ಬುಕಿಂಗ್ ಮಾಡಬಹುದು.
ಹೌದು, ಕಿಯಾ ಮೋಟಾರ್ಸ್ EV6 ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಬೆಲೆ 3 ಲಕ್ಷ ರೂಪಾಯಿ. ಮೊದಲು ಬುಕ್ ಮಾಡಿದವರಿಗೆ ಮಾತ್ರ ಕಾರು ಲಭ್ಯವಾಗಲಿದೆ. ಕಾರಣ ಇದು ಲಿಮಿಟೆಡ್ ಎಡಿಶನ್ ಕಾರಾಗಿದ್ದು, 100 ಕಾರುಗಳು ಮಾತ್ರ ಲಭ್ಯವಿದೆ.
Kia Carens ಗೆ ಭಾರಿ ಬೇಡಿಕೆ: 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್
ಹೊಚ್ಚ ಹೊಸ ಕಿಯಾ EV6 ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 528 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇದು ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಅತೀ ಗರಿಷ್ಠ ಮೈಲೇಜ್ ರೇಂಜ್ ಆಗಿದೆ. ಬೆಂಗಳೂರು ಸೇರಿದಂತೆ ದೇಶದ 12 ಪ್ರಮುಖ ನಗರಗಳಲ್ಲಿ ನೂತನ EV6 ಎಲೆಕ್ಟ್ರಿಕ್ ಕಾರು ಲಭ್ಯವಾಗಲಿದೆ.
ಕಿಯಾ EV6 ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಮಾಡುವಾಗ ಕೊಂಚ ಆಲೋಚನೆ ಮಾಡುವುದು ಒಳಿತು. ಕಾರಣ ಬುಕಿಂಗ್ ಮಾಡಿದ ಕಾರು ಕ್ಯಾನ್ಸಲ್ ಮಾಡಿದರೆ 50,000 ರೂಪಾಯಿ ಕಡಿತವಾಗಲಿದೆ. 3 ಲಕ್ಷ ರೂಪಾಯಿ ಪಾವತಿ ಹಣದಲ್ಲಿ 2.50 ಲಕ್ಷ ರೂಪಾಯಿ ಮಾತ್ರ ಲಭ್ಯವಾಗಲಿದೆ.
ಜೂನ್ 2 ರಂದು ಬಿಡುಗಡೆಯಾಗಲಿರುವ ನೂತನ ಕಾರಿನ ಬೆಲೆ 40 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಿಯಾ EV6 ಎಲೆಕ್ಟ್ರಿಕ್ ಕಾರಿನ ಟಾಪ್ ಮಾಡೆಲ್ ಕಾರಿನ ಬೆಲೆ 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಕಿಯಾ ಮೋಟಾರ್ಸ್ ಕಂಪನಿಯ ಕಿಯಾ ಕಾರ್ನಿವಲ್ ಕಾರಿನ ಬೆಲೆಗಿಂತಲೂ ಅಧಿಕವಾಗಿದೆ.
ಆಕರ್ಷಕ ವಿನ್ಯಾಸ, 441 ಕಿ.ಮೀ ಮೈಲೇಜ್, ಭಾರತಕ್ಕೆ ಬರುತ್ತಿದೆ ಕಿಯಾ EV6 ಎಲೆಕ್ಟ್ರಿಕ್ ಕಾರು!
ಕಿಯಾ ಮೋಟಾರ್ಸ್ ಭಾರತದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಜನಪ್ರಿಯಗಳಿಸಿದೆ. ಕಿಯಾ ಸೆಲ್ಟೋಸ್ ಕಾರಿನ ಮೂಲಕ ಭಾರತದಲ್ಲಿ ಪಯಣ ಆರಂಭಿಸಿದ ಕಿಯಾ ಇದೀಗ ಎಲೆಕ್ಟ್ರಿಕ್ ಕಾರು ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಕಿಯಾ ಇತ್ತೀಚೆಗೆ ಕಿಯಾ ಕರೆನ್ಸ್ MPV ಕಾರು ಬಿಡುಗಡೆ ಮಾಡಿತ್ತು.
7 ಸೀಟರ್ ಕಾರು ಕಿಯಾ ಕರೆನ್ಸ್
ಕಿಯಾ ಸೆಲ್ಟೋಸ್, ಕಿಯಾ ಸಾನೆಟ್ ಮೂಲಕ ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿರುವ ಕಿಯಾ ಕಂಪನಿ ಈಗ ಹೊಸ ಕಾರನ್ನು ಅನಾವರಣ ಮಾಡಿದೆ. 6 ಸೀಟರ್ ಅಥವಾ 7 ಸೀಟರ್‌ನ ಈ ಹೊಸ ಕಾರಿನ ಹೆಸರು ಕಿಯಾ ಕರೆನ್ಸ್. ಕಿಯಾ ಕರೆನ್ಸ್‌ನ ಫೀಚರ್‌ಗಳು, ಅಂದ ಚಂದ ಇತ್ಯಾದಿಗಳನ್ನೆಲ್ಲಾ ಹೇಳಿರುವ ಕಿಯಾ ಸಂಸ್ಥೆ ಈ ಕಾರಿನ ಬಿಡುಗಡೆ ದಿನಾಂಕ, ಬೆಲೆ ಇತ್ಯಾದಿಗಳನ್ನು ಸಸ್ಪೆನ್ಸ್‌ನಲ್ಲಿ ಇಟ್ಟಿದೆ. 2022ರ ಆದಿಯಲ್ಲೇ ಈ ಕಾರು ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂಬ ಭರವಸೆ ನೀಡಿದೆ.
2 ತಿಂಗಳಲ್ಲಿ ಕಿಯಾ ಸೊನೆಟ್ ಕಾರು 50000 ಬುಕಿಂಗ್
ಕಿಯಾ ಮೋಟರ್ಸ್ ಬಿಡುಗಡೆ ಮಾಡಿರುವ ಎಸ್‌ಯುವಿ ಕಾರು ಸೊನೆಟ್‌ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡೇ ತಿಂಗಳಲ್ಲಿ 50 ಸಾವಿರ ಮಂದಿ ಈ ಕಾರನ್ನು ಬುಕ್ ಮಾಡಿದ್ದಾರೆ. ‘ಆಗಸ್ಟ್ 20ರಂದು ಬುಕಿಂಗ್ ಆರಂಭವಾದಾಗಿನಿಂದ ಭಾರತೀಯ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಪ್ರತಿ ಮೂರು ನಿಮಿಷಕ್ಕೆ ಸರಾಸರಿ ಎರಡು ಕಾರುಗಳು ಬುಕ್ ಆಗುತ್ತಿವೆ’ ಎಂದು ಕಿಯಾ ಮೋಟರ್ಸ್ ತಿಳಿಸಿದೆ. ಸೊನೆಟ್ ಮಾಡೆಲ್‌ನಡಿ ಪೆಟ್ರೋಲ್ ಅಥವಾ ಡೀಸೆಲ್ ಕಾರು ಲಭ್ಯವಿದ್ದು, 6.71 ಲಕ್ಷ ರು.ನಿಂದ ಬೆಲೆ ಆರಂಭವಾಗುತ್ತದೆ. ಸೆಪ್ಟೆಂಬರ್‌ನಲ್ಲಿ 9266 ಕಾರುಗಳುನ್ನು ಮಾರಾಟ ಮಾಡಲಾಗಿದೆ. ಬೆಲೆ ಘೋಷಣೆ ಮಾಡಿದ 12 ದಿನಗಳಲ್ಲೇ ಇಷ್ಟುಕಾರುಗಳು ಮಾರಾಟವಾಗಿವೆ.