ಭಾರತದಲ್ಲಿ ಫರ್ಸ್ಟ್ ಎವರ್ BMW i4 ಎಲೆಕ್ಟ್ರಿಕ್ ಕಾರು ಬಿಡುಗಡೆ, 590KM ಮೈಲೇಜ್!

By Suvarna NewsFirst Published May 27, 2022, 3:27 PM IST
Highlights
  • 5.7 ಸೆಕೆಂಡ್‌ಗಳಲ್ಲಿ 0 - 100 ಕಿ.ಮೀ ವೇಗ ತಲುಪು ಸಾಮರ್ಥ್ಯ
  • ಒಂದು ಸಂಪೂರ್ಣ ಚಾರ್ಜ್‌ಗೆ 590 ಕಿಮೀ ಮೈಲೇಜ್
  • ಉಚಿತ BMW ವಾಲ್‌ ಬಾಕ್ಸ್‌ ಚಾರ್ಜರ್ ಇನ್ಸ್ಟಾಲೇಶನ್

ಬೆಂಗಳೂರು(ಮೇ.27) ಫರ್ಸ್ಟ್-ಎವರ್ BMW i4 ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ.  BMW ಗ್ರೂಪ್ ಭಾರತದಲ್ಲಿ ವಿಸ್ತಾರ ಎಲೆಕ್ಟ್ರಿಕ್ ಕಾರ್  ಪೋರ್ಟ್‌ಪೋಲಿಯೋ ಒದಗಿಸುತ್ತಿರುವ ಮೊದಲ ಕಾರು ಉತ್ಪಾದಕನಾಗಿದೆ.ಜುಲೈ 2022ರಿಂದ ಡೆಲಿವರಿ ಆರಂಭಗೊಳ್ಳಲಿದೆ. BMW i4 ಇ ಡ್ರೈವ್ 40 ಸ್ಪೋರ್ಟ್ ಕಾರಿನ ಬೆಲೆ 69,90,000 ರೂನಿಂದ (ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 590 ಕಿ.ಮಿ ಮೈಲೇಜ್ ರೇಂಜ್ ನೀಡಲಿದೆ.  

ಎಲೆಕ್ಟ್ರಿಫೈಯಿಂಗ್ : BMW i4 ಮೊದಲ BMW ಅತ್ಯಂತ ಶುದ್ಧ ಎಲೆಕ್ಟ್ರಿಕ್ ಮಾಡೆಲ್ ಡ್ರೈವಿಂಗ್ ಡೈನಮಿಕ್ಸ್‌ಗೆ ಗಮನ ನೀಡಿದೆ. ಇದು ಅಲ್ಟಿಮೇಟ್ ಡ್ರೈವಿಂಗ್ ಮೆಷಿನ್ ಆಗಿದ್ದುNEXTGenಜಾಯ್‌ನ ಅಂತಃಸ್ಸತ್ವ BMW ಆಟ್ಟಿಟ್ಯೂಡ್ ಪ್ರತಿನಿಧಿಸುತ್ತದೆBMW i4 ಕ್ರೀಡಾ ಕಲಿತನವನ್ನು ದೀರ್ಘ ಪ್ರಯಾಣಗಳಿಗೆ ಅನುಕೂಲ, ವೈಶಾಲ್ಯತೆ ಮತ್ತು ಪ್ರಾಯೋಗಿಕತೆಯೊಂದಿಗೆ ಸಂಯೋಜಿಸುತ್ತದೆ.

BMW X4 launch ಹೆಚ್ಚುವರಿ ಫೀಚರ್ಸ್, ಅತ್ಯಾಕರ್ಷಕ ವಿನ್ಯಾಸ, ಮೇಡ್ ಇನ್ ಇಂಡಿಯಾ BMW X4 ಕಾರು ಬಿಡುಗಡೆ!

ಆಪ್ಷನಲ್ M ಏರೋಡೈನಮಿಕ್ ಕಿಟ್ M ಏರೋಡೈಮಿಕ್ ಬಂಪರ್ಸ್, ಎಕ್ಸ್ಕ್ಲೂಸಿವ್ 18 ಅಥವಾ 19-ಇಂಚು ಒಲೈಟ್ ಏರೋಡೈನಮಿಕ್ ಅಲಾಯ್ ವ್ಹೀಲ್ಸ್ ಮತ್ತು ಹೈ-ಗ್ಲಾಸ್ ಬ್ಲಾಕ್ ಒಎಲಿಮೆಂಟ್ಸ್ ಅಲಂಕರಣಗಳು ಡೈನಮಿಕ್ ಮತ್ತು ಸ್ಪೋರ್ಟಿ ಕ್ಯಾರೆಕ್ಟರ್ ಉನ್ನತೀಕರಿಸುತ್ತವೆ. 

ಫರ್ಸ್ಟ್-ಎವರ್ BMW i4 ಅನಿಯಮಿತ ಕಿಲೋಮೀಟರ್‌ಗಳಿಗೆ ಸ್ಟಾಂಡರ್ಡ್ ಎರಡು ವರ್ಷ ವಾರೆಂಟಿಯೊಂದಿಗೆ ಬರುತ್ತದೆ. ರಿಪೇರ್ ಇನ್‌ಕ್ಲೂಸಿವ್ ಅನ್ನು ಯಾವುದೇ ಮೈಲೇಜ್ ಲಿಮಿಟೇಷನ್ ಇಲ್ಲದೆ ಮೂರನೇ ವರ್ಷದ ಕಾರ್ಯಾಚರಣೆಯಿಂದ ಗರಿಷ್ಠ ಐದು ವರ್ಷದವರೆಗೂ ವಾರೆಂಟಿ ಅನುಕೂಲಗಳನ್ನು ವಿಸ್ತರಿಸಬಹುದು. ಬ್ಯಾಟರಿಗಳು ಎಂಟು ವರ್ಷಗಳವರೆಗೆ ಅಥವಾ ೧೬೦,೦೦೦ ಕಿಲೋಮೀಟರ್‌ಗಳವರೆಗೆ ಮೌಲಿಕವಾಗಿರುತ್ತವೆ. 

BMW ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ಲೋನ್, ಇನ್ಷೂರೆನ್ಸ್ ಮತ್ತು ವೆಹಿಕಲ್ ಸರ್ವೀಸಸ್‌ಗೆ ಕಂಪ್ಲೀಟ್ ಪ್ಯಾಕೇಜ್ ನೀಡುತ್ತಿದ್ದು ಅದರಲ್ಲಿಯೂ ಫರ್ಸ್ಟ್-ಎವರ್ BMW i4 ಗಾಗಿಯೇ  ವಿನ್ಯಾಸಗೊಳಿಸಲಾಗಿದೆ. ಪ್ರಯೋಜನಗಳಲ್ಲಿ ಅನುಕೂಲಕರ ಮತ್ತು ಕಸ್ಟಮೈಸ್ ಮಾಡಬಲ್ಲ ಮಾಲೀಕತ್ವದ ಪ್ಲಾನ್‌ಗಳಾದ BMW 360 ಡಿಗ್ರಿ ಇದ್ದು ಬೈಬ್ಯಾಕ್ ವ್ಯಾಲ್ಯೂ 4 ವರ್ಷಗಳವರೆಗೆ ನೀಡುತ್ತದೆ. ಶೇಕಡಾ 100 ರಷ್ಟು ಫೈನಾನ್ಸಿಂಗ್ ಕೂಡ ಲಭ್ಯವಿದ್ದು ಹೆಚ್ಚುವರಿ BMW ವಾಲ್‌ಬಾಕ್ಸ್ ಚಾರ್ಜರ್ ಒಳಗೊಂಡಿರುತ್ತದೆ. ಇನ್ಷೂರೆನ್ಸ್ ಹೆಚ್ಚುವರಿ ಆಯ್ಕೆಗಳಾದ ಜೀ಼ರೊ ಡಿಪ್ರಿಸಿಯೇಷ್, ಬ್ಯಾಟರಿ ಕವರ್ ಮತ್ತು ಇನ್‌ವಾಯ್ಸ್ಗೆ ರಿಟರ್ನ್ ಹೆಚ್ಚುವರಿ ಆಯ್ಕೆಗಳೊಂದಿಗೆ ಗರಿಷ್ಠ ರಕ್ಷಣೆ ನೀಡುತ್ತದೆ. ಕಾಂಪ್ಲಿಮೆಂಟರಿ 5-ವರ್ಷ ರೋಡ್-ಸೈಡ್ ಅಸಿಸ್ಟೆನ್ಸ್ ಚಲನೆಯಲ್ಲಿ ಪೋರ್ಟಬಲ್ ರೋಡ್‌ಸೈಡ್ ಚಾರ್ಜಿಂಗ್‌ನಂತಹ ಸೌಲಭ್ಯಗಳಿಂದ ಸಂಪೂರ್ಣ ಮನಃಶ್ಯಾಂತಿ ನೀಡುತ್ತದೆ.  

BMW MINI ಭಾರತದಲ್ಲಿ 47.20 ಲಕ್ಷ ರೂ. ದರದ ಎಲೆಕ್ಟ್ರಿಕ್ ಮಿನಿ ಕೂಪರ್ ಎಸ್ ಬಿಡುಗಡೆ!

ಫರ್ಸ್ಟ್-ಎವರ್ BMW i4 ಇ ಡ್ರವ್ 40
BMW i4ದೋಷರಹಿತವಾಗಿ ಟ್ರೈಲ್ ಬ್ಲೇಜಿಂಗ್‌ನ ಡೈನಮಿಸಂ ಮತ್ತು ಸಸ್ಟೇನಬಿಲಿಟಿಯನ್ನು ಶುದ್ಧ ಎಲೆಕ್ಟ್ರಿಕ್ ಮಾದರಿಯಲ್ಲಿ ನೀಡುತ್ತದೆ. ಇದು ನಿಮ್ಮ ನಾಡಿಮಿಡಿತ ಹೆಚ್ಚಿಸುವ ನೋಟ ನೀಡುತ್ತದೆ.  

ಕಾರಿನ ಫ್ಯೂಚರಿಸ್ಟಿಕ್ ಹೊರಾಂಗಣ ಡಿಸೈನ್ ಅಥ್ಲೆಟಿಕ್ ಈಸ್ಥೆಟಿಕ್ಸ್ನೊಂದಿಗೆ ಸಂಯೋಜಿಸಿದ್ದು ಸ್ಪಷ್ಟ ಸರ್ಫೇಸ್ ಭಾಷೆ ಮತ್ತು ಪ್ರಗತಿಶೀಲ ನಿಖರತೆ ನೀಡುತ್ತದೆ. ಇದು ತನ್ನ ವರ್ಗದಲ್ಲಿ ಅತ್ಯಂತ ಏರೋಡೈನಮಿಕ್ ಎಲೆಕ್ಟಿçಕ್ ವೆಹಕಲ್ ಆಗಿದೆ. ಮುಂಬದಿಯು ವಿಸ್ತಾರ ಮುಚ್ಚಲ್ಪಟ್ಟ ಮೇಲ್ಮೆöÊಗಳು ಮತ್ತು ನಿಖರ ಲೈನ್‌ಗಳನ್ನು ಹೊಂದಿದೆ. ಫ್ರಂಟ್ ಏಪ್ರನ್‌ನಲ್ಲಿ ಗ್ರೇ ಇನ್‌ಲೇ ಮತ್ತು ಲಂಬದ ಬದಿಯ ಓಪನಿಂಗ್ಸ್ ವಾಹನದ ಕಾರ್ಯ ನಿರ್ವಹಣೆಯ, ಆಧುನಿಕ ಲಕ್ಷಣ ಒತ್ತಿ ತೋರಿಸುತ್ತದೆ. ರೇಡಿಯೇಟರ್ ಗ್ರಿಲ್‌ನ ಸಂಕ್ಷಿಪ್ತ ಮರು ನಿರೂಪಣೆ ಮತ್ತು ನೀಲಿ ರಿಂಗ್ BMW  ಬ್ಯಾಡ್ಜ್ ಸುತ್ತಲೂ ಇದೆ.  ಸಂಕ್ಷಿಪ್ತ ಐ-ಶೇಪ್ಡ್ ರಿಯರ್ ಐಇಆ ಲೈಟ್ಸ್ ಅವುಗಳ ತೆಳುವಾದ ಕಂಟರ‍್ಸ್ ಮತ್ತು ಸಮಾನಾಂತರ ಗೆರೆಗಳೊಂದಿಗೆ  BMW i4 ರಸ್ತೆಯನ್ನು ಹೇಗೆ ಅಪ್ಪುತ್ತದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಹಗುರ ಏರೋಡೈನಮಿಕ್ ವ್ಹೀಲ್ಸ್ ಡ್ರೆೈವಿಂಗ್ ಶ್ರೇಣಿ ಹೆಚ್ಚಿಸಲು ಕೊಡುಗೆ ನೀಡುತ್ತದೆ. ರಿಯರ್ ಆಕ್ಸಲ್‌ನಲ್ಲಿ ಏರ್ ಸಸ್ಪೆನ್ಷನ್ ಆಟೊಮ್ಯಾಟಿಕ್ ಸೆಲ್ಫ್-ಲೆವೆಲ್ಲಿಂಗ್ ಕಾರ್ಯದಿಂದ ತೀಕ್ಷ್ಣ ತಿರುವುಗಳಲ್ಲಿ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಮುಕ್ತ, ಐಷಾರಾಮ ಹಾಗೂ ಆಕರ್ಷಕವಾದ ಒಳಾಂಗಣವು ಡ್ರೈವರ್ರ್-ಫೋಕಸ್ಟ್ ಕಾಕ್‌ಪಿಟ್ ಮತ್ತು ಉದಾರ ಸ್ಥಳದ ಪರಿಸರ ತರುತ್ತದೆ.

ವಾಹನದ ಕಾಕ್‌ಪಿಟ್‌ಗೆ ಆಧುನಿಕತೆಯ ಸ್ಪರ್ಶ ನೀಡುತ್ತದೆ.ಉನ್ನತ ಗುಣಮಟ್ಟದ ವಸ್ತುಗಳ ಅನ್ಯೋನ್ಯತೆ, ಬಹುಮಾದರಿ, ಇಂಟ್ಯೂಟಿವ್ ಆಪರೇಟಿಂಗ್ ಕಾನ್ಸೆಪ್ಟ್ ಸ್ಪೋರ್ಟ್ ಸೀಟ್ಸ್ನೊಂದಿಗೆ ಮತ್ತು ಸ್ಪೋರ್ಟ್ ಸ್ಟೀರಿಂಗ್ ವ್ಹೀಲ್, ಚಾಲಕ ಮತ್ತು ಮುಂಬದಿಯ ಪ್ರಯಾಣಿಕರಿಗೆ ಪ್ರತ್ಯೇಕ ಪ್ರದೇಶಗಳು ಮತ್ತು ಅಕೌಸ್ಟಿಕ್ ಗ್ಲೇಜಿ಼ಂಗ್ ಅಲ್ಪ ದೂರ ಪ್ರಯಾಣದಂತೆಯೇ ದೂರ ಪ್ರಯಾಣಗಳಿಗೆ ಆನಂದದಾಯಕ ಪರಿಸರ ಸೃಷ್ಟಿಸುತ್ತದೆ. ಸ್ಪೋರ್ಟ್ ಸೀಟ್ಸ್ ತನ್ನ ಉನ್ನತ ಗುಣಮಟ್ಟದ ಅಲಂಕಾರಿಕ ಹೊಲಿಗೆಯಿಂದ ವಿಶೇಷವಾದ ಸೊಗಸಾದ ವರ್ಧನೆ ನೀಡುತ್ತದೆ. ಮೂರು ಪ್ರಯಾಣಿಕರವರೆಗೆ ಉದಾರ ಹೆಡ್ ಮತ್ತು ಲೆಗ್ ರೂಮ್‌ನ ಬ್ಯಾಕ್‌ಸೀಟ್ ಆನಂದಿಸಬಹುದು. ಆರು ಆಯ್ಕೆ ಮಾಡಬಲ್ಲ ವಿನ್ಯಾಸಗಳೊಂದಿಗೆ ಆಂಬಿಯೆAಟ್ ಲೈಟಿಂಗ್ ಪ್ರತಿ ಮನಸ್ಥಿತಿಗೂ ವಾತಾವರಣ ಸೃಷ್ಟಿಸುತ್ತದೆ. ಥ್ರೀ-ಜೋ಼ನ್ ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ನ್ಯಾನೊ ಫೈಬರ್ ಫಿಲ್ಟರ್‌ನೊಂದಿಗೆ ಗಾಳಿಯ ಗುಣಮಟ್ಟ ಗರಿಷ್ಠಗೊಳಿಸುತ್ತದೆ.

click me!