ಕಿಯಾ ಇಂಡಿಯಾ ಮಾರಾಟ ಶೇ.18ರಷ್ಟು ಹೆಚ್ಚಳ: ಸೋನೆಟ್ ಬೇಡಿಕೆ ಏರಿಕೆ

By Suvarna News  |  First Published May 3, 2022, 3:05 PM IST

ಕಿಯಾ ಇಂಡಿಯಾ (Kia India) 2022ರ ಏಪ್ರಿಲ್‌ ತಿಂಗಳಲ್ಲಿ ಶೇ.18ರಷ್ಟು ಮಾರಾಟ ಹೆಚ್ಚಳವನ್ನು ದಾಖಲಿಸಿದೆ. ಇದರಲ್ಲಿ ಕಿಯಾ ಸೋನೆಟ್ನ (Kia Sonet) ಹೆಚ್ಚಿದ ಬೇಡಿಕೆ ಇದಕ್ಕೆ ಉತ್ತಮ ಕೊಡುಗೆ ನೀಡಿದೆ.


ಕಿಯಾ ಇಂಡಿಯಾ (Kia India) 2022ರ ಏಪ್ರಿಲ್ ತಿಂಗಳಲ್ಲಿ ಶೇ.18ರಷ್ಟು ಮಾರಾಟ ಹೆಚ್ಚಳವನ್ನು ದಾಖಲಿಸಿದೆ. ಇದರಲ್ಲಿ ಕಿಯಾ ಸೋನೆಟ್ನ (Kia Sonet) ಹೆಚ್ಚಿದ ಬೇಡಿಕೆ ಇದಕ್ಕೆ ಉತ್ತಮ ಕೊಡುಗೆ ನೀಡಿದೆ. ಏಪ್ರಿಲ್ ತಿಂಗಳಲ್ಲಿ ಕೊರಿಯನ್ ಕಾರು ತಯಾರಕ ಕಂಪನಿ ಕಿಯಾ (Kia), ಒಟ್ಟು 19,019 ವಾಹನಗಳ ಮಾರಾಟವನ್ನು ದಾಖಲಿಸಿದೆ. ಇದರಲ್ಲಿ ಸೆಲ್ಟೋಸ್ ಎಸ್ಯುವಿ (SUV) 7,506, ಸೋನೆಟ್ನ 5,404, ಕ್ಯಾರೆನ್ಸ್ MPV (Carens MPV) 5,754 ಮತ್ತು ಕಾರ್ನಿವಲ್ನ (Carnival) 355 ವಾಹನಗಳು ಸೇರಿವೆ. 2021ರ ಏಪ್ರಿಲ್ ನಲ್ಲಿ ದಾಖಲಾದ ಮಾರಾಟಕ್ಕೆ ಹೋಲಿಸಿದರೆ, ಕಿಯಾ ಇಂಡಿಯಾ ಈ ವರ್ಷ ಶೇ. 18 ರಷ್ಟು ಬೆಳವಣಿಗೆ ದಾಖಲಿಸಿದೆ.

ಇದರೊಂದಿಗೆ ಕಿಯಾ ಇಂಡಿಯಾ ಏಪ್ರಿಲ್ನಲ್ಲಿ ವರ್ಷದಿಂದ ವರ್ಷಕ್ಕೆ 19,019 ವಾಹನಗಳ ಮಾರಾಟವನ್ನು ದಾಖಲಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ತಯಾರಕರು 16,111 ವಾಹನಗಳನ್ನು ಡೀಲರ್ಗಳಿಗೆ ರವಾನಿಸಿದ್ದಾರೆ. 2022ರ ಏಪ್ರಿಲ್ನಲ್ಲಿ ಕಿಯಾ, ಶೇ.6.5ರ ಸದೃಢ ಮಾರುಕಟ್ಟೆ ಷೇರು ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.0.9ರಷ್ಟು ಹೆಚ್ಚಿದೆ. 
ಇನ್ನೊಂದೆಡೆ, ಕಿಯಾ ಇಂಡಿಯಾ ಕೂಡ EV  ವಲಯಕ್ಕೆ ತನ್ನ ಪ್ರವೇಶವನ್ನು ಖಚಿತಪಡಿಸಿದೆ. ವಾಹನ ತಯಾರಕರು ಈ ವರ್ಷದ ಕೊನೆಯಲ್ಲಿ EV6 ಅನ್ನು ದೇಶಕ್ಕೆ ತರಲಿದ್ದಾರೆ. Kia EV6 ಗಾಗಿ ಬುಕಿಂಗ್ಗಳು 2022ರ ಮೇ 26 ರಿಂದ ಪ್ರಾರಂಭವಾಗುತ್ತದೆ. ಭಾಋತದಲ್ಲಿ ಕೇವಲ 100 ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. 
ಕಳೆದ ತಿಂಗಳು, ಕಿಯಾ 2022 ರ ಸಾಲಿನಲ್ಲಿ ಕಂಪನಿ, ಸೆಲ್ಟೋಸ್ ಮತ್ತು ಸೋನೆಟ್ ಎಸ್ಯುವಿ (Seltos and Sonet SUV)ಗಳನ್ನು ನವೀಕರಿಸಿದೆ. 2022 ಕಿಯಾ ಸೆಲ್ಟೋಸ್ ಈಗ ಐಎಂಟಿ ಗೇರ್ಬಾಕ್ಸ್ ಅನ್ನು 1.5-ಲೀಟರ್ ಡೀಸೆಲ್ ಎಂಜಿನ್ನೊಂದಿಗೆ ಬರುತ್ತದೆ. 

Tap to resize

Latest Videos

ನವೀಕರಿಸಿದ Kia Sonet ಕೂಡ ಹೊಸ ಸುರಕ್ಷತಾ ವೈಶಿಷ್ಟ್ಯಗಳು, ತಾಜಾ ಬಣ್ಣದ ಯೋಜನೆಗಳು, ಹೊಸ ಬ್ರ್ಯಾಂಡ್ ಲೋಗೋ ಮತ್ತು ಹೆಚ್ಚುವರಿ ರೂಪಾಂತರಗಳನ್ನು ಹೊಂದಿದೆ.
ಕಂಪನಿಯ ಕಾರ್ಯಕ್ಷಮತೆಯ ಕುರಿತು ಪ್ರತಿಕ್ರಿಯಿಸಿದ ಕಿಯಾ ಇಂಡಿಯಾದ VP ಮತ್ತು ಮಾರಾಟ ಮತ್ತು ಮಾರುಕಟ್ಟೆ ಮುಖ್ಯಸ್ಥ ಹರ್ದೀಪ್ ಸಿಂಗ್ ಬ್ರಾರ್, “ಕಿಯಾ ಇಂಡಿಯಾ 2022 ರಲ್ಲಿ ಪ್ರತಿ ತಿಂಗಳು ಸರಾಸರಿ 20,000 ವಾಹನಗಳನ್ನು ಮಾರಾಟ ಮಾಡಿದೆ ಮತ್ತು ಇದು ಆರೋಗ್ಯಕರ ಬೆಳವಣಿಗೆಯಾಗಿದೆ. 2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಜಾಗತಿಕ ವಾಹನೋದ್ಯಮವು ಪೂರೈಕೆ ಸರಪಳಿಯ ತೊಂದರೆಗಳೊಂದಿಗೆ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ನಾವು ನಮ್ಮ ವಾಹನಗಳಿಗೆ ಭಾರಿ ಬೇಡಿಕೆಯನ್ನು ಪಡೆಯುತ್ತಿದ್ದೇವೆ ಮತ್ತು ಕಾಯುವ ಅವಧಿಯನ್ನು ನಿಯಂತ್ರಣದಲ್ಲಿಡಲು ನಾವು ನಮ್ಮ ಉತ್ಪಾದನೆಯನ್ನು ಸ್ಥಿರವಾಗಿ ಉತ್ತಮಗೊಳಿಸುತ್ತಿದ್ದೇವೆ” ಎಂದರು.

ಇದನ್ನೂ ಓದಿ: 2022ರ ಏಪ್ರಿಲ್ ಮಾರಾಟದಲ್ಲಿ ಶೇ.6ರಷ್ಟು ಕುಸಿತ ಕಂಡ ಮಾರುತಿ ಸುಜುಕಿ

2022ರ ಫೆಬ್ರವರಿ 15ರಂದು ಭಾರತದಲ್ಲಿ ಬಿಡುಗಡೆಯಾದ ಕಿಯಾ ಕ್ಯಾರೆನ್ಸ್ ಅತ್ಯುತ್ತಮ ಬೇಡಿಕೆಯನ್ನು ಕಂಡಿದೆ. ಇಂದು ಬುಕಿಂಗ್ 50,000 ಗಡಿ ದಾಟಿದೆ ಎಂದು ಕಂಪನಿ ತಿಳಿಸಿದೆ. ಡೀಸೆಲ್ ಕ್ಯಾರೆನ್ಸ್ನ ಬೇಡಿಕೆಯು ಪೆಟ್ರೋಲ್ ಕ್ಯಾರೆನ್ಸ್ನಂತೆಯೇ ಇರುತ್ತದೆ. ಕೆಲವೇ ದಿನಗಳಲ್ಲಿ ಒಂದು ಹಾಗೂ ಎರಡನೇ  ಶ್ರೇಣಿಯ ಮಾರುಕಟ್ಟೆಗಳಿಂದ ಸುಮಾರು ಶೇ.60 ಬುಕಿಂಗ್ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಟಾಟಾ ಪ್ರಯಾಣಿಕ ವಾಹನಗಳ ದರ ಏರಿಕೆ: ವರ್ಷದಲ್ಲಿ ಎರಡನೇ ಬಾರಿಗೆ ಹೆಚ್ಚಳ

ಈ ಬೃಹತ್ ಬೇಡಿಕೆಯ ಹಿನ್ನೆಲೆಯಲ್ಲಿ ವಾಹನಗಳ ಕಾಯುವ ಅವಧಿ ಹೆಚ್ಚಳಕ್ಕೆ ಕಾರಣವಾಗಿದೆ. ಕ್ಯಾರೆನ್ಸ್ ಕಾಯುವ ಅವಧಿಯು, ವೇರಿಯಂಟ್ಗಳನ್ನು ಅವಲಂಬಿಸಿದೆ. ಐಷಾರಾಮಿ ಪ್ಲಸ್ ಟ್ರಿಮ್ಗಾಗಿ 13-14 ವಾರಗಳಿಂದ 48-49 ವಾರಗಳವರೆಗೆ ಅಥವಾ ಕ್ಯಾರೆನ್ಸ್ ಪ್ರೆಸ್ಟೀಜ್ಗಾಗಿ 11 ತಿಂಗಳುಗಳವರೆಗೆ ವಿಸ್ತರಿಸುತ್ತದೆ.

click me!