ಭಾರತದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ವೆಲಾರ್ ಡೆಲಿವರಿ ಆರಂಭ!

Published : Jun 17, 2021, 06:55 PM IST
ಭಾರತದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ವೆಲಾರ್ ಡೆಲಿವರಿ ಆರಂಭ!

ಸಾರಾಂಶ

ಅತ್ಯಾಧುನಿಕ ತಂತ್ರಜ್ಞಾನ, ದಕ್ಷ ಎಂಜಿನ್ ಸೇರಿದಂತೆ ಹಲವು ವಿಶೇಷತೆ 2.0 ಲೀ. ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ ಎಂಜಿನ್ ವೇರಿಯೆಂಟ್  ರೇಂಜ್ ರೋವರ್ ವೆಲಾರ್ ಎಕ್ಸ್ ಶೋ ರೂಂ ಬೆಲೆಯನ್ನು 79.87 ಲಕ್ಷ

ಬೆಂಗಳೂರು(ಜೂ.17): ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ಭಾರತದಲ್ಲಿ ಹೊಸ ರೇಂಜ್ ರೋವರ್ ವೆಲಾರ್ ಡೆಲಿವರಿ ಆರಂಭಿಸಿದೆ.  ಹೊಸ ವೆಲಾರ್ ಇಂಜಿನಿಯಮ್ 2.0 ಲೀ. ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌,  ಆರ್-ಡೈನಾಮಿಕ್ ಎಸ್ ಟ್ರಿಮ್‍ನಲ್ಲಿ ಲಭ್ಯವಿದೆ. 2.0 ಲೀ ಪೆಟ್ರೋಲ್ ಎಂಜಿನ್ 184 ಕಿ.ವ್ಯಾ ಮತ್ತು 365 NM ಟಾರ್ಕ್ ಶಕ್ತಿಯನ್ನು ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ . 2.0 ಎಲ್ ಡೀಸೆಲ್ ಎಂಜಿನ್ 150 KW ಮತ್ತು 430 NM ಟಾರ್ಕ್ ಶಕ್ತಿಯನ್ನು ನೀಡುತ್ತದೆ. ಭಾರತದಲ್ಲಿ ಹೊಸ ರೇಂಜ್ ರೋವರ್ ವೆಲಾರ್ ಎಕ್ಸ್ ಶೋ ರೂಂ ಬೆಲೆಯನ್ನು 79.87 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಗರಿಷ್ಠ 70 ಕಿ.ಮೀ. ವೇಗದ ಮಿತಿ ಮೀರಿದ್ರೆ ಬೀಳುತ್ತೆ ಫೈನ್!

ರೇಂಜ್ ರೋವರ್ ವೆಲಾರ್ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ SUV.  ಇದು ಅವಂತ್-ಗಾರ್ಡ್ ವಿನ್ಯಾಸ, ಐಷಾರಾಮಿ ಮತ್ತು ತಂತ್ರಜ್ಞಾನದ ಮಿಶ್ರಣವಾಗಿದೆ.  ಹೊಸ ತಂತ್ರಜ್ಞಾನ ಮತ್ತು ಅನುಕೂಲಕರ ವೈಶಿಷ್ಟ್ಯಗಳ ಪರಿಚಯದೊಂದಿಗೆ, ರೇಂಜ್ ರೋವರ್ ವೆಲಾರ್ ಎಂದಿಗಿಂತಲೂ ಹೆಚ್ಚು ಆಕರ್ಷಕ ಹಾಗೂ ಬಲಿಷ್ಠವಾಗಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಹೇಳಿದರು

ಇದು ಜಗತ್ತಿನ ಅತ್ಯಂತ ದುಬಾರಿ ಪಾರ್ಕಿಂಗ್ ಲಾಟ್. ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!.

ಹೊಸ ರೇಂಜ್ ರೋವರ್, ವೆಲಾರ್ 3 ಡಿ ಸರೌಂಡ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಏರ್ ಸಸ್ಪೆನ್ಷನ್, PM2.5 ಫಿಲ್ಟರ್‍ನೊಂದಿಗೆ ಕ್ಯಾಬಿನ್ ಏರ್ ಅಯಾನೈಸೇಶನ್ ಮತ್ತು ಹೊಸ ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಸಿಸ್ಟಮ್‍ನಂತಹ ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಹಿಂದೆಂದಿಗಿಂತಲೂ ಸ್ವಚ್ಛ, ಸುರಕ್ಷಿತ ಮತ್ತು ಸ್ಮಾರ್ಟ್ ಆಗಿದ್ದು, ತಾಂತ್ರಿಕವಾಗಿ ಸುಧಾರಿತ ಐಷಾರಾಮಿ SUVಗಳಲ್ಲಿ ಇದೂ ಒಂದಾಗಿದೆ.

ಭಾರತದಲ್ಲಿ ಲ್ಯಾಂಡ್ ರೋವರ್ ಉತ್ಪನ್ನಗಳ ಪೋರ್ಟ್‍ಫೋಲಿಯೊ
ಭಾರತದ ಲ್ಯಾಂಡ್ ರೋವರ್ ಶ್ರೇಣಿಯು 20MYRange Rover Evoqueï (@ 59.04 ಲಕ್ಷದಿಂದ ಪ್ರಾರಂಭ), Discovery Sport (@ 65.30 ಲಕ್ಷದಿಂದ ಪ್ರಾರಂಭ), New Range Rover Velar (@ 79.87 ಲಕ್ಷದಿಂದ ಪ್ರಾರಂಭ), Defender 110 (@ 83.38 ರಿಂದ ಪ್ರಾರಂಭ) ಲಕ್ಷ), Range Rover Sport (@ 91.27 ಲಕ್ಷದಿಂದ ಪ್ರಾರಂಭ) ಮತ್ತು Range Rover (@ 210.82 ಲಕ್ಷದಿಂದ ಪ್ರಾರಂಭ) ಗಳನ್ನು ಒಳಗೊಂಡಿದೆ. ಪ್ರಸ್ತಾಪಿಸಲಾದ ಎಲ್ಲಾ ಬೆಲೆಗಳು ಭಾರತದಲ್ಲಿನ ಎಕ್ಸ್ ಶೋರೂಮ್ ಬೆಲೆಗಳಾಗಿವೆ.

PREV
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್