Toyota Mirai ಭಾರತದ ಮೊದಲ ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಟೊಯೋಟಾ ಮಿರಾಯ್ ಬಿಡುಗಡೆ!

Published : Mar 16, 2022, 08:14 PM IST
Toyota Mirai ಭಾರತದ ಮೊದಲ ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಟೊಯೋಟಾ ಮಿರಾಯ್ ಬಿಡುಗಡೆ!

ಸಾರಾಂಶ

ಭಾರತದ ಮೊದಲ ಹೈಡ್ರೋಜನ್ FCEV  ಟೋಯೋಟಾ ಮಿರಾಯ್ ಬಿಡುಗಡೆ ಮಾಡಿ ಗಡ್ಕರಿ ಅತ್ಯಾಧುನಿಕ ತಂತ್ರಜ್ಞಾನದ ಕಾರು,ಇಂಧನ ಭರ್ತಿಗೆ 5 ನಿಮಿಷ ಸಾಕು

ನವದೆಹಲಿ(ಮಾ.16) ಟೊಯೊಟಾ ಭಾರತದ ಮೊದಲ ಸಂಪೂರ್ಣ ಹೈಡ್ರೋಜನ್ ಎಲೆಕ್ಟ್ರಿಕ್ ವಾಹನ ಮಿರಾಯ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೂತನ ಕಾರನ್ನು ಬಿಡುಗಡೆ ಮಾಡಿದ್ದಾರೆ. ಹೈಡ್ರೋಜನ್ ಎಲೆಕ್ಟ್ರಿಕ್ ವಾಹನ ಭಾರತದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ನೊಂದಿಗೆ ಬ್ರಾಂಡ್‌ನ ಪ್ರಾಯೋಗಿಕ ಯೋಜನೆಯ ಭಾಗವಾಗಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ.Mirai ಪ್ರಪಂಚದ  FCEV ಗಳಲ್ಲಿ ಒಂದಾಗಿದೆ ಮತ್ತು ಸಂಪೂರ್ಣವಾಗಿ ಹೈಡ್ರೋಜನ್ ಉತ್ಪಾದಿಸಿದ ಎಲೆಕ್ಟ್ರಿಕ್ ಪವರ್‌ನಿಂದ ಚಲಿಸುತ್ತದೆ.

Toyota Glanza ಹೊಚ್ಚ ಹೊಸ ಟೋಯೋಟಾ ಗ್ಲಾಂಜಾ ಕಾರು ಬಿಡುಗಡೆ, ಬೆಲೆ 6.39 ಲಕ್ಷ ರೂ!

ಕಾರಿನ ಎರಡನೇ ತಲೆಮಾರಿನ ಪುನರಾವರ್ತನೆಯನ್ನು ಕರ್ನಾಟಕದ ಟೊಯೊಟಾದ ಸ್ಥಾವರದಲ್ಲಿ ತಯಾರಿಸಲಾಗುವುದು. ಈ ಕಾರನ್ನು ಮೂಲತಃ ಕಳೆದ ವರ್ಷ ಜಾಗತಿಕವಾಗಿ ಪರಿಚಯಿಸಲಾಯಿತು. ಇದು ಒಂದೇ ಟ್ಯಾಂಕ್‌ನಲ್ಲಿ 646 ಕಿಮೀ ವ್ಯಾಪ್ತಿ ಮೈಲೇಜ್ ರೇಂಜ್ ನೀಡುತ್ತದೆ. ಇಂಧನ ತುಂಬಲು ಸುಮಾರು 5 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

 

 

ದೇಶದಲ್ಲಿನ ಇಂಧನ ವಾಹನಗಳಿಗೆ ಪರ್ಯಾವಾಗಿ ಹಾಗೂ ಇಂಗಾಲ ಹೊಸಸೂಸದ, ಮಾಲಿನ್ಯ ಸೃಷ್ಟಿಸದ ವಾಹನಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಟೊಯೋಟಾ ಮಿರಾಯ್ ಮೊದಲ ಆಯ್ಕೆಯಾಗಲಿದೆ. ಮಿರಾಯ್ ಹೆಚ್ಚಿನ ಒತ್ತಜ ಹೈಡ್ರೋಜನ್ ಇಂಧನ ಟ್ಯಾಂಕ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದು ಪ್ರಮುಖವಾಗಿ ಪವರ್‌ಟ್ರೇನ್ ಮೂಲಕ ಹೈಡ್ರೋಜನ್‌ನ್ನು ನೀರು ಹಾಗೂ ಆಮ್ಲಜನಕವಾಗಿ ಒಡೆಯುತ್ತದೆ. ಈ ಒಡೆಯುವಿಕೆಯಲ್ಲಿ ಉತ್ಪಾದನೆಗೊಳ್ಳುವ ಶಕ್ತಿಯಿಂದ ವಾಹನ ಚಲಿಸಲಿದೆ. ಸಾಂಪ್ರದಾಯಿಕ ICEಗಳಿಗಿಂತ ಭಿನ್ನವಾಗಿ ಹೈಡ್ರೋಜನ್ ಇಂಧನ ಪವರ್‌ಟ್ರೇನ್ ಟೈಲ್ ಪೈಪ್‌ನಿಂದ ನೀರನ್ನು ಹೊರಸೂಸುತ್ತದೆ.

Toyota Hilux Launch ಬಹುನಿರೀಕ್ಷಿತ ಟೊಯೋಟಾ ಹಿಲಕ್ಸ್ SUV ಪಿಕ್ಅಪ್ ಬಿಡುಗಡೆ!

ಟೊಯೋಟಾ ಫಾಚ್ರ್ಯೂನರ್‌ ಹಾಗೂ ಲೆಜೆಂಡರ್‌ ಬಂತು
ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ನ ಹೈಎಂಡ್‌ ಎಸ್‌ಯುವಿ ಟೊಯೋಟಾ ಫಾಚ್ರ್ಯೂನರ್‌ ಹಾಗೂ ಟೊಯೋಟಾ ಲೆಜೆಂಡರ್‌ ಇದೀಗ ಮಾರ್ಕೆಟ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿವೆ. ಈ ಪ್ರೀಮಿಯಂ ಡಿಸೈನ್‌ ಕಾರ್‌ ಐಷಾರಾಮಿ, ಶಕ್ತಿಶಾಲಿ ಹಾಗೂ ಭರ್ಜರಿ ಸ್ಟೈಲ್‌ನ ಒಟ್ಟಂದದ ಹಾಗಿದೆ ಅಂತ ಕಂಪೆನಿ ಹೇಳಿದೆ. ಫಾಚ್ಯೂನರ್‌ನಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ವೇರಿಯೆಂಟ್‌ಗಳಿವೆ. 2.8 ಲೀಟರ್‌ ಡೀಸೆಲ್‌ ಇಂಜಿನ್‌ನ ಎಸ್‌ಯುವಿಯಲ್ಲಿ 6 ಸ್ಪೀಡ್‌ ಅಟೊಮ್ಯಾಟಿಕ್‌ ಹಾಗೂ 6 ಸ್ಪೀಡ್‌ ಮ್ಯಾನ್ಯುವಲ್‌ ಟ್ರಾನ್ಸ್‌ಮಿಶನ್‌ಗಳಿವೆ. ಇಂಟೆಲಿಜೆಂಟ್‌ ಮ್ಯಾನ್ಯುವಲ್‌ ಟ್ರಾನ್ಸ್‌ಮಿಶನ್‌ ಆಯ್ಕೆಯೂ ಇದೆ. 2.7 ಲೀಟರ್‌ ಪೆಟ್ರೋಲ್‌ ಇಂಜಿನ್‌ನ ಫಾಚ್ರ್ಯೂನರ್‌, 6 ಸ್ಪೀಡ್‌ ಅಟೊಮ್ಯಾಟಿಕ್‌ ಹಾಗೂ 5 ಸ್ಪೀಡ್‌ ಮ್ಯಾನ್ಯುವಲ್‌ ಟ್ರಾನ್ಸ್‌ಮಿಶನ್‌ ಹೊಂದಿದೆ. ಲೆಜೆಂಡರ್‌ ಸ್ಲೀಕ್‌ ಆ್ಯಂಡ್‌ ಕೂಲ್‌ ಡಿಸೈನ್‌ನಲ್ಲಿದ್ದು ಮುತ್ತಿನ ಬಿಳಿಪು ಬಣ್ಣದ ಜೊತೆಗೆ ಬ್ಲ್ಯಾಕ್‌ ರೂಫ್‌ ಬಣ್ಣಗಳಲ್ಲಿ ಲಭ್ಯ.

ಟೊಯೋಟಾ ಹೊಸ ಕಾರು ಅರ್ಬನ್‌ ಕ್ರೂಸರ್‌
ಟೊಯೋಟಾ ಕಾರುಗಳಿಗೆ ಇರುವ ಮರ್ಯಾದೆಯೇ ಬೇರೆ. ಹಾಗಾಗಿ ಹೊಸ ಕಾರುಗಳು ಬಂದಾಗೆಲ್ಲಾ ಟೊಯೋಟಾಭಿಮಾನಿಗಳ ಸಂಘ ಒಮ್ಮೆ ಅತ್ತ ನೋಡಿಯೋ ನೋಡುತ್ತದೆ. ಈಗ ಮತ್ತೆ ಟೊಟೋಟಾ ಕಡೆಗೆ ನೋಡುವ ಸಂದರ್ಭ ಬಂದಿದೆ. ಟೊಯೋಟಾ ತನ್ನ ಹೊಚ್ಚ ಹೊಸ ಎಸ್‌ಯುವಿ ಅರ್ಬನ್‌ ಕ್ರೂಸರ್‌ ಬಿಡುಗಡೆ ಮಾಡಿದೆ. ಅಟೋಮ್ಯಾಟಿಕ್‌ ಮತ್ತು ಮ್ಯಾನ್ಯುವಲ್‌ ಎರಡೂ ಮಾದರಿಗಳಲ್ಲಿ ಕಾರು ಲಭ್ಯ. ನಿಮಗೆ ಯಾವುದು ಸುಲಭವೋ ಅದರ ಕಡೆ ಮನಸ್ಸು ಕೊಡಬಹುದು. ಟೊಯೋಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ಒಂದಾದ ಮೇಲೆ ಹೊರಬರುತ್ತಿರುವ ಟೊಯೋಟಾದ ಎರಡನೇ ಕಾರು ಇದು. ಮಾರುತಿ ಬ್ರೆಜ್ಜಾ ಕಾರಿನ ಟೊಯೋಟಾ ವರ್ಷನ್‌.

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ