ಕಾರಿನ ಡ್ಯಾಶ್‌ಬೋರ್ಡ್ ಮೇಲೆ ಕಾಲಿಡಬಾರದು ಯಾಕೆ? ಇಲ್ಲಿದೆ 4 ಕಾರಣ!

By Suvarna News  |  First Published Aug 14, 2023, 11:43 AM IST

ಲಾಂಗ್ ಡ್ರೈವ್ ವೇಳೆ ಸಹ ಪ್ರಯಾಣಿಕರು ಕಾರಿನ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಮಾಡುತ್ತಾರೆ. ಸಿನಿಮಾಗಳಲ್ಲೂ ಈ ರೀತಿಯ ಪ್ರಯಾಣದ ದೃಶ್ಯಗಳಿವೆ. ಆದರೆ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಮಾಡುವುದು ಸುರಕ್ಷಿತವಲ್ಲ. ಇದು ಹಲವು ಅಪಾಯಕ್ಕೆ ಕಾರಣವಾಗಲಿದೆ. 


ಬೆಂಗಳೂರು(ಆ.14) ಕಾರಿನ ಪ್ರಯಾಣದ ವೇಳೆ ಕೆಲವು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ರಸ್ತೆ ನಿಯಮದ ಜೊತೆಗೆ ಕಾರಿನೊಳಗೂ ಕೆಲ ನಿಯಮಗಳಿವೆ. ಹೆಚ್ಚಿನವರು ಈ ನಿಮಯಗಳನ್ನು ಪಾಲಿಸುವುದಿಲ್ಲ. ಇದರಿಂದ ಅಪಯವೂ ಹೆಚ್ಚಾಗಲಿದೆ. ಸಿಗ್ನಲ್, ಒನ್ ವೇ, ಸೀಟ್ ಬೆಲ್ಟ್ ಸೇರಿದಂತೆ ಹಲವು ನಿಯಮಗಳು ಸಿಸಿಟಿಯಲ್ಲಿ ದಾಖಲಾಗಲಿದೆ. ಹೀಗಾಗಿ ಪಾಲನೆ ಕುರಿತು ಜಾಗೃತಿ ಇದೆ. ರಸ್ತೆಯಲ್ಲಿ ಸಾಗುವಾಗ ಲೇನ್ ಶಿಸ್ತು ಕೂಡ ಅತೀ ಮುಖ್ಯ. ಇನ್ನು ಕಾರಿನ ಪ್ರಯಾಣಿಕರು ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಮಾಡುವ ದೃಶ್ಯ ಹೊಸದೇನಲ್ಲ. ಸಿನಿಮಾಗಳಲ್ಲೂ ಲಾಂಗ್ ಡ್ರೈವ್ ವೇಳೆ ಈ ರೀತಿಯ ದೃಶ್ಯಗಳು ಜನರನ್ನು ಪ್ರಚೋದಿಸುತ್ತದೆ. ಆದರೆ ಕಾರಿನ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಸುರಕ್ಷಿತವಲ್ಲ. 

ಕಾರಿನ ಡ್ಯಾಶ್‌ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಮಾಡುವುದರಿಂದ ಅಪಾಯ ಹೆಚ್ಚಾಗಲಿದೆ. ಅಪಘಾತದ ವೇಳೆ ಗಂಭೀರ ಗಾಯಗಳಾಗಲಿದೆ.ಕಾರಣ ಕೋ ಪ್ಯಾಸೆಂಜರ್ ಡ್ಯಾಶ್‌ಬೋರ್ಡ್ ಮೇಲೆ ಕಾಲಿಟ್ಟಿದ್ದರೆ, ಅದೇ ಜಾಗದಲ್ಲಿ ಕಾರಿನ ಕೋ ಪ್ಯಾಸೆಂಜರ್ ಏರ್‌ಬ್ಯಾಗ್ ಇದೆ. ಹೀಗಾಗಿ ಅಪಘಾತದ ವೇಳೆ ಏರ್‌ಬ್ಯಾಗ್ ತೆರೆದುಕೊಂಡರೂ ಸಹ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಲಿದೆ. ಕಾರಣ ಸಹ ಪ್ರಯಾಣಿಕನ ಕಾಲಿಗ ಬಲವಾದ ಹೊಡೆತ ಬೀಳಲಿದೆ.ಹೀಗಿರುವಾಗ ಏರ್‌ಬ್ಯಾಗ್ ಸಂಪೂರ್ ಪ್ರಮಾಣದಲ್ಲಿ ಸುರಕ್ಷತೆ ನೀಡುವುದಿಲ್ಲ. 

Latest Videos

undefined

ಡ್ಯಾಶ್‌ಬೋರ್ಡ್ ಮೇಲೆ ಕಾಲಿಡಲು ಹಾಗೂ ಆರಾವಾಗಿ ಕುಳಿತುಕೊಳ್ಳುವಾಗ ಸೀಟ್ ಬೆಲ್ಟ್ ಧರಿಸುವುದು ಸಾಧ್ಯವಾಗವುದಿಲ್ಲ. ಹೀಗಾಗಿ ಅಪಘಾತದ ವೇಳೆ ಸೀಟ್ ಬೆಲ್ಟ್ ಧರಿಸದಿದ್ದರೆ ಕಾರಿನ ಏರ್‌ಬ್ಯಾಗ್ ತೆರೆದುಕೊಳ್ಳುವುದಿಲ್ಲ. ಇದರಿಂದ ಅಪಾಯದ ತೀವ್ರತೆ ಹೆಚ್ಚಾಗಲಿದೆ. ಒಂದು ಸೀಟ್ ಬೆಲ್ಟ್ ತೆರೆದುಕೊಳ್ಳದಿದ್ದಲ್ಲಿ, ಕೋ ಪ್ಯಾಸೆಂಜ್ ಮಾತ್ರವಲ್ಲ, ಡ್ರೈವರ್ ಸೀಟಿನಲ್ಲಿದ್ದವರಿಗೂ ಗಾಯದ ಪ್ರಮಾಣ ಹೆಚ್ಚಾಗಲಿದೆ.

ಡ್ಯಾಶ್‌ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಮಾಡುವುದರಿಂದ ಕೇವಲ ಅಪಘಾತವಾದಾಗ ಮಾತ್ರ ಸಮಸ್ಯೆಗಳಲ್ಲ. ಕಾಲಿನ ಭಾರ ಹಾಗೂ ದಿಢೀರ್ ಬ್ರೇಕ್ ಹಾಗೂ ಎಕ್ಸಲೇಟರ್ ತುಳಿಯುವದರಿಂದ ಏರ್‌ಬ್ಯಾಗ್ ಮೇಲಿಟ್ಟಿರುವ ಕಾಲಿನ ಒತ್ತಡದಿಂದ ದಿಢೀರ್ ಏರ್‌ಬ್ಯಾಗ್ ತೆರೆದುಕೊಳ್ಳುವ ಸಾಧ್ಯತೆ ಇದೆ. ಏರ್‌ಬ್ಯಾಗ್ ಮೇಲಿನ ಡ್ಯಾಶ್‌ಬೋರ್ಡ್ ಸರಿದು ಏರ್‌ಬ್ಯಾಗ್ ತೆರೆದುಕೊಳ್ಳುವುದರಿಂದ ಕಾಲಿಗೆ ಬಲವಾದ ಪೆಟ್ಟು ಬೀಳಲಿದೆ. ಅಪಘಾತವಾಗದೇ ಸಹ ಪ್ರಯಾಣಿಕ ಗಾಯಕ್ಕೆ ತುತ್ತಾಗುವ ಸಾಧ್ಯತೆಗಳಿವೆ.

ಕಾರಿನ ಡ್ಯಾಶ್‌ಬೋರ್ಡ್ ಮೇಲಿಟ್ಟಿರುವ ಕಾಲಿನ ಭಾರದಿಂದ ಅಪಘಾತವಾದರೂ ಏರ್‌ಬ್ಯಾಗ್ ತೆರೆಯದೇ ಇರುವ ಸಾಧ್ಯತೆ ಇದೆ. ಏರ್‌ಬ್ಯಾಗ್ ಸರಿಯಾಗಿ ಕಾರ್ಯನಿರ್ವಹಿಸಲು ಕಾಲಿನ ಭಾರ ಕೂಡ ಅಡ್ಡಿಯಾಗುವ ಸಾಧ್ಯತೆ ಇದೆ. ಡ್ಯಾಶ್‌ಬೋರ್ಡ್‌ನಲ್ಲಿ ಕಾಲಿಟ್ಟು ಪ್ರಯಾಣ ಮಾಡುವುದರಿಂದ ಅರಾಮದ ಅಥವಾ ಮೋಜಿನ ಪ್ರಯಾಣಕ್ಕಿಂತ ಅಪಾಯವೇ ಹೆಚ್ಚಾಗಲಿದೆ.

ಇದರ ಜೊತೆಗೆ ಡ್ಯಾಶ್‌ಬೋರ್ಡ್ ಹಾಗೂ ವಿಂಡ್‌ಶೀಲ್ಡ್ ಹಾಗೂ ಡ್ಯಾಶ್‌ಬೋರ್ಡ್ ಬದಿಯಲ್ಲಿ ಎಸಿ ವಿಂಡ್‌ಗಳಿರುತ್ತದೆ. ಕಾಲು ಡ್ಯಾಶ್‌ಬೋರ್ಡ್ ಮೆಲಿಟ್ಟಾಗ ಕಾಲಿನ ದುರ್ವಾಸನೆ ಸಂಪೂರ್ಣ ಕಾರನ್ನು ಅವರಿಸಿಕೊಳ್ಳಲಿದೆ. ಇನ್ನು ಕಾರಿನ ಡ್ಯಾಶ್‌ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಮಾಡುವುದು ಮೋಟಾರು ವಾಹನ ನಿಯಮಕ್ಕೆ ವಿರುದ್ಧವಾಗಿದೆ. ಹೀಗಾಗಿ ದಂಡಕ್ಕೂ ಅಹ್ವಾನ ನೀಡಿದಂತೆ.

click me!