Tata vs Hyundai ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ Ai3 ಮೈಕ್ರೋ SUV ಕಾರು, ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿ!

By Suvarna News  |  First Published Jan 6, 2022, 2:14 PM IST
  • ಹ್ಯುಂಡೈ ಇಂಡಿಯಾದಿಂದ ಮತ್ತೊಂದು ಹೊಚ್ಚ ಹೊಸ ಕಾರು ಶೀಘ್ರದಲ್ಲಿ
  • ಟಾಟಾ ಪಂಚ್‌ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ನೂತನ ಕಾರು
  • ಕೈಗೆಟುಕುವ ದರದಲ್ಲಿ  ಹ್ಯುಂಡೈ Ai3 ಮೈಕ್ರೋ SUV ಕಾರು

ನವದೆಹಲಿ(ಜ.06): ಭಾರತದಲ್ಲಿ SUV ಕಾರುಗಳಿಗೆ ಭಾರಿ ಬೇಡಿಕೆ ಇದೆ.  ಹೀಗಾಗಿ ಎಲ್ಲಾ ಆಟೋ ಕಂಪನಿಗಳು(Automobile) ಸಬ್ ಕಾಂಪಾಕ್ಟ್ SUV ಕಾರುಗಳನ್ನು ಬಿಡುಗಡೆ ಮಾಡಿದೆ. ಜೊತೆಗೆ 2021ರಲ್ಲಿ ಮಾರಾಟದಲ್ಲೂ ಉತ್ತಮ ದಾಖಲೆ ಬರೆದಿದೆ. ಇದರ ನಡುವೆ ಟಾಟಾ ಮೋಟಾರ್ಸ್ ಪಂಚ್(Tata Punch) ಮೈಕ್ರೋ SUV ಕಾರು ಬಿಡುಗಡೆ ಮಾಡಿ ಭಾರಿ ಯಶಸ್ಸು ಸಾಧಿಸಿದೆ. ಇದೀಗ ಹ್ಯುಂಡೈ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ  Ai3 ಮೈಕ್ರೋ ಕಾರನ್ನು(Hyuda Ai3 Micro SUV) ಬಿಡುಗಡೆ ಮಾಡಲು ಸಜ್ಜಾಗಿದೆ. 

ಹ್ಯುಂಡೈ Ai3 ಮೈಕ್ರೋ SUV ಕಾರು ಈಗಾಗಲೇ ಸೌತ್ ಕೊರಿಯಾದಲ್ಲಿ ಬಿಡುಗಡೆಯಾಗಿದೆ. ಆದರೆ ಭಾರತದಲ್ಲಿ ಈ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಸಂಪೂರ್ಣವಾಗಿ ಭಾರತದಲ್ಲಿ ನೂತನ Ai3 ಕಾರು ಉತ್ಪಾದನೆಯಾಗಲಿದೆ. ಹೀಗಾಗಿ ಇದು ಮೇಡ್ ಇನ್ ಇಂಡಿಯಾ(Made in India) ಕಾರಿಗಿದೆ. ಸೌತ್ ಕೊರಿಯಾದಲ್ಲಿ ಮೈಕ್ರೋ SUV ಕಾರಿಗೆ Ai3 ಹೆಸರು ಇಡಲಾಗಿದೆ. ಆದರೆ ಭಾರತದಲ್ಲಿ ಹೊಸ ಹೆಸರಿನಲ್ಲಿ ನೂತನ ಕಾರು ಬಿಡುಗಡೆಯಾಗಲಿದೆ.

Tap to resize

Latest Videos

undefined

Auto Sales 2021: ಸಾಕಷ್ಟು ಅಡೆತಡೆಗಳ ನಡುವೆಯೂ ಶೇ.27ರಷ್ಟು ಮಾರಾಟದ ಪ್ರಗತಿ ಸಾಧಿಸಿದ ಆಟೊಮೊಬೈಲ್ ಕ್ಷೇತ್ರ!

ಹ್ಯುಂಡೈ Ai3 ಮೈಕ್ರೋ SUV ಎಂಜಿನ್
Ai3 ಕಾರು ಎರಡು ಪೆಟ್ರೋಲ್ ಎಂಜಿನ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.0 ಟರ್ಬೋಟಾರ್ಜ್ಡ್ ಪೆಟ್ರೋಲ್ ಎಂಜಿನ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 1.0 ಲೀಟರ್ ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ 76 hp ಪವರ್ ಹೊಂದಿದ್ದರೆ, 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 100 hp ಗರಿಷ್ಠ ಪವರ್ ಹೊಂದಿದೆ. ಎರಡು ಎಂಜಿನ್ ವೇರಿಯೆಂಟ್ 4 ಸ್ಪೀಡ್ ಟಾರ್ಕ್ ಕನ್ವರ್ಟೆಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

Ai3 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ತಯಾರಿ
ಹ್ಯುಂಡೈ Ai3 ಮೈಕ್ರೋ SUV ಕಾರು ಭಾರತದಲ್ಲಿ ಬಿಡುಗಡೆಗೆ ತಯಾರಿ ಆರಂಭಗೊಂಡಿದೆ. ಇದರ ಜೊತೆಗೆ ಇದೇ ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆ ಮಾಡಲು ಮುಂದಾಗಿದೆ. ಈಗಾಗಲೇ ಹ್ಯುಂಡೈ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಯೋಜನೆ ಅಡಿಯಲ್ಲಿ ಹ್ಯುಂಡೈ ಭಾರತದಲ್ಲಿ Ai3 ಎಲೆಕ್ಟ್ರಿಕ್ ಕಾರು  ಬಿಡುಗಡೆ ಮಾಡಲಿದೆ.

Car sales ಹ್ಯುಂಡೈ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್, ಕಳೆದ 10 ವರ್ಷಗಳಲ್ಲಿ ಗರಿಷ್ಠ ದಾಖಲೆ!

ಹ್ಯುಂಡೈ Ai3 ಮೈಕ್ರೋ SUV ಕಾರು  3,595 ಉದ್ದ, 1,595 mm ಅಗಲ ಹಾಗೂ 1,575 mm ಎತ್ತರವಿದೆ. ಇದರ ಜೊತೆಗೆ ಹ್ಯುಂಡೈ  Ai3 ಮೈಕ್ರೋ SUV ಕಾರು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರಲಿದೆ. ಜೊತೆಗೆ ಹೆಚ್ಚುವರಿ ಫೀಚರ್ಸ್ ಕೂಡ ಇದರಲ್ಲಿರಲಿದೆ. ಡಿಜಿಟಲಲ್ ಇನ್ಸ್ಟ್ರಮೆಂಟ್ ಕ್ಲಸ್ಟರ್, 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ವೆಂಟಿಲೇಶನ್ ಫ್ರಂಟ್ ಸೀಟ್, LED ಲೈಟಿಂಗ್, ಪುಶ್ ಬಟನ್ ಸ್ಟಾರ್ಟ್, ಮೊಡ್ ಲೈಟಿಂಗ್, ಏರ್ ಪ್ಯೂರಿಫೈಯರ್, ಫಾಕ್ಸ್ ಲೆದರ್ ಸೀಟ್, 7 ಏರ್‌ಬ್ಯಾಗ್ಸ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. 

Hyundai Ioniq 5 EV ಕೈಗೆಟುಕುವ ದರ, 480 ಕಿ.ಮೀ ಮೇಲೇಜ್, ಶೀಘ್ರದಲ್ಲೇ ಭಾರತದಲ್ಲಿ ಕಾರು ಬಿಡುಗಡೆ!

ಹ್ಯುಂಡೈ Ai3 ಮೈಕ್ರೋ SUV ಭಾರತದಲ್ಲಿ 2023ರಲ್ಲಿ ಬಿಡುಗಡೆಯಾಗಲಿದೆ. ಪ್ರತಿಸ್ಪರ್ಧಿ ಟಾಟಾ ಪಂಚ್ ಕಾರಿನ ಬೆಲೆ 5.49 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಹೀಗಾಗಿ ಹ್ಯುಂಡೈ ಬೆಲೆಯಲ್ಲೂ ಟಾಟಾಗೆ ಪೈಪೋಟಿ ನೀಡಲು ಮುಂದಾಗಿದೆ. ಹೀಗಾಗಿ ಆಕರ್ಷಕ ಬೆಲೆಯಲ್ಲಿ ಕಾರು ಒದಗಿಸುವುದಾಗಿ ಹೇಳಿದೆ. ಇನ್ನು ನೂತನ ಹ್ಯುಂಡೈ   Ai3 ಮೈಕ್ರೋ SUV ಕಾರು ಪಂಚ್ ಸೇರಿದಂತೆ ಮಾರುತಿ ಇಗ್ನಿಸ್, ಮಹೀಂದ್ರ KUV100, ರೆನಾಲ್ಟ್ ಕಿಗರ್, ನಿಸಾನ್ ಮ್ಯಾಗ್ನೈಟ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. 

ಶೀಘ್ರದಲ್ಲೆ ಟಕ್ಸನ್ ಬಿಡುಗಡೆ
ಭಾರತದಲ್ಲಿ ಹೊಸ ವರ್ಷದ ಮೊದಲಾರ್ಧದಲ್ಲಿ ನೂತನ ಟಕ್ಸನ್ SUV ಕಾರು ಬಿಡುಗಡೆಯಾಗಲಿದೆ. ಲಕ್ಸುರಿ ಕಾರಾಗಿರುವ ಟಕ್ಸನ್ ಹೊಸ ರೂಪ ಹಾಗೂ ಹೊಸ ಅವತಾರದಲ್ಲಿ ಬಿಡುಗಡೆಯಾಗಿಲಿದೆ. 
 

click me!