ಒಂದು BMW i7 ಕಾರಿಗೆ ಸುರಿಯುವ ಹಣದಲ್ಲಿ ಎಷ್ಟು ಕಾರುಗಳನ್ನ ಖರೀದಿ ಮಾಡಬಹುದು? ಅಚ್ಚರಿಯ ಲೆಕ್ಕಾಚಾರ

Published : Sep 27, 2026, 04:18 PM IST
BMW i7

ಸಾರಾಂಶ

BMW i7 ಒಂದು ಕಾರಿಗೆ ಸುರಿಯುವ ಹಣದಲ್ಲಿ ಎಷ್ಟು ಸಾಮಾನ್ಯ ಕಾರುಗಳು ಬರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಎಷ್ಟು ಆಲ್ಟೋ ಕಾರುಗಳು ಬರುತ್ತವೆ ಗೊತ್ತಾ? ಈ ಕುರಿತ ಒಂದು ಮಾಹಿತಿ ಇಲ್ಲಿದೆ.

ಐಷಾರಾಮಿ ಕಾರುಗಳು ಸಾಮಾನ್ಯ ಜನರ ಕೈಗೆ ಸಿಗಲ್ಲ. ಬಿಎಂಡಬ್ಲ್ಯೂ ನಂಥ ಕಾರುಗಳನ್ನ ಖರೀದಿಸಲು ನೀವು ಕೋಟಿ ಕೋಟಿ ಹಣ ಖರ್ಚು ಮಾಡಬೇಕಾಗುತ್ತದೆ. ಕೋಟಿ ಕೋಟಿ ಹಣ ಖರ್ಚು ಮಾಡೋದು ಎಲ್ಲರಿಂದಲೂ ಅಸಾಧ್ಯ. ಹಾಗಿದ್ದರೆ BMW i7 ನಂತ ಒಂದು ಐಷಾರಾಮಿ ಕಾರಿಗೆ ನೀಡುವ ಹಣದಲ್ಲಿ ಎಷ್ಟು ಕಾರುಗಳನ್ನ ಖರೀದಿ ಮಾಡಬಹುದು ಎಂಬ ಲೆಕ್ಕಾಚಾರ ಇಲ್ಲಿದೆ.

BMW ಐಷಾರಾಮಿಗೆ ಹೆಸರುವಾಸಿ. ಕಂಪನಿ ಅಭಿವೃದ್ಧಿಪಡಿಸುವ ಎಲ್ಲಾ ಕಾರುಗಳು ಕೂಡ ಐಷಾರಾಮಿ ಕಾರುಗಳೇ. ಇತ್ತೀಚೆಗೆ ಅದು ಲೆಕ್ಟ್ರಿಕ್ ಸೆಡಾನ್ BMW i7 ಎಂಬ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ರೋಮಾಂಚನಕಾರಿ ವಿನ್ಯಾಸ, ಹೈಟೆಕ್ ಫೀಚರ್ಸ್ ಹೊಂದಿದ್ದು, ತುಂಬಾ ಆಕರ್ಷಕವಗಿದೆ ಈ ಕಾರು.

ಏನೆಲ್ಲ ವ್ಯವಸ್ಥೆ ಇದೆ?

  • ವಿಶಾಲವಾದ ಮತ್ತು ಪ್ರೀಮಿಯಂ ಕ್ಯಾಬಿನ್
  • ಉತ್ತಮ ಗುಣಮಟ್ಟದ ವಸ್ತುಗಳು
  • ದೊಡ್ಡ ಪರದೆ ಮತ್ತು ಅನೇಕ ಸ್ಮಾರ್ಟ್ ಫೀಚರ್ಸ್

BMW i7 ಬೆಲೆಯು ಮಾಡೆಲ್‌ಗಳ ಮೇಲೆ ಡಿಪೆಂಡ್ ಆಗಿದೆ. ಭಾರತದ ಮಾರುಕಟ್ಟೆಯಲ್ಲಿ ಸುಮಾರು 2 ಕೋಟಿಯಿಂದ ಪ್ರಾರಂಭವಾಗಿ 2.5 ಕೋಟಿಗೂ ಹೆಚ್ಚು ಹಣ ನೀಡಬೇಕಾಗುತ್ತದೆ. ಆನ್‌ರೋಡ್, ವಿಮೆ, ತೆರಿಗೆ ಹಾಗೂ ಇತರೆ ಫೀಸ ಸೇರಿ ಇನ್ನಷ್ಟು ಹಣವನ್ನು ಸುರಿಯಬೇಕಾಗುತ್ತದೆ. BMW i7 ಕಾರನ್ನು 2 ಕೋಟಿ ಆದರೆ, ಅದರ ಬದಲಿಗೆ ಎಷ್ಟು ಕಾರುಗಳನ್ನ ಖರೀದಿ ಮಾಡಬಹುದು ಎಂಬ ವಿವರ ಹೀಗಿದೆ..

50 ಕಾರು!

ಮಾರುತಿ ಆಲ್ಟೊ ಕೆ10 ದೇಶದ ಜನಪ್ರಿಯ ಕಾರುಗಳಲ್ಲಿ ಒಂದು. ಈ ಕಾರಿನ ಆರಂಭಿಕ ಬಲೆ 4 ಲಕ್ಷ ರೂಪಾಯಿ. 2 ಕೋಟಿಯ ಬಿಎಂಡಬ್ಲ್ಯೂ ಕಾರಿನ ಬೆಲೆಯನ್ನ 4 ಲಕ್ಷಕ್ಕೆ ನೀವು ಬಾಗಿಸಿದರೆ ಬರೋಬ್ಬರಿ 50 ಅಲ್ಟೋ ಕಾರುಗಳು ಬರುತ್ತವೆ. ಅಚ್ಚರಿ ಎನಿಸಿದರೂ ಇದರೂ ಸತ್ಯ. ಒಂದು ಬಿಎಂಡಬ್ಲ್ಯೂ ಕಾರಿಗೆ 50 ಆಲ್ಟೋ ಕಾರುಗಳು ಬರುತ್ತವೆ ಅಂದರೆ ಒಮ್ಮೆ ಯೋಚಿಸಿ ನೋಡಿ..

33 ಮಾರುತಿ ಸ್ವಿಫ್ಟ್‌

ದೇಶದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್‌ ಕೂಡ ತುಂಬಾ ಫೇಮಸ್ ಇದೆ. ಇದರ ಆರಂಭಿಕ ಬೆಲೆ 6 ಲಕ್ಷದಿಂದ ಪ್ರಾರಂಭ. 2 ಕೋಟಿ ಮೌಲ್ಯವನ್ನು 6 ಲಕ್ಷಕ್ಕೆ ಲೆಕ್ಕ ಹಾಕಿದರೆ ಸುಮಾರು 33 ಕಾರುಗಳನ್ನ ಖರೀದಿಸಬಹುದಾಗಿದೆ.

18 ಹುಂಡೈ ಕ್ರೆಟಾ

ಮಧ್ಯಮ ಗಾತ್ರದ SUV ಕಾರುಗಳಲ್ಲಿ ಹುಂಡೈ ಕ್ರೆಟಾ ಜನಪ್ರಿಯತೆ ಪಡೆದುಕೊಂಡಿದೆ. ಇದರ ಆರಂಭಿಕ ಬೆಲೆ 11 ಲಕ್ಷ ರೂಪಾಯಿ. ಅಂದರೆ ನೀವು 2 ಕೋಟಿಗೆ ಲೆಕ್ಕ ಹಾಕಿದರೆ ಒಟ್ಟು 18 ಹುಂಡೈ ಕ್ರೆಟಾ ಕಾರುಗಳನ್ನ ಖರೀದಿ ಮಾಡಬಹುದು.

25 ಟಾಟಾ ನೆಕ್ಸಾನ್‌

ದೇಶದ ಅತ್ಯಂತ ಜನಪ್ರಿಯ ಕಾಂಪ್ಯಾಕ್ಟ್ SUV ಗಳಲ್ಲಿ ಒಂದು. ದೃಢವಾದ ವಿನ್ಯಾಸ, ಅತ್ಯುತ್ತಮ ಸುರಕ್ಷತಾ ರೇಟಿಂಗ್‌ಗಳು ಮುಂಚೂಣಿಯಲ್ಲಿ ಇರುವ ಕಾರುಗಳು ಅಂದರೆ ಟಾಟಾ ನೆಕ್ಸಾನ್. ಇದರ ಆರಂಭಿಕ ಬೆಲೆ 8 ಲಕ್ಷ ರೂಪಾಯಿ. 2 ಕೋಟಿಗೆ ನಾವು ಲೆಕ್ಕ ಹಾಕಿದರೆ ಅದನ್ನು ಸುಮಾರು 25 ಕಾರುಗಳು ಬರುತ್ತವೆ. ಇವೆಲ್ಲ ಒಂದು ಲೆಕ್ಕಾಚಾರ ಅಷ್ಟೇ. ನಿಮ್ಮ ಹತ್ತರ ಕೋಟಿ ಕೋಟಿ ಹಣವಿದ್ದರೆ ಬಿಎಂಡಬ್ಲ್ಯೂ ನಂತಹ ಐಷಾರಾಮಿ ಕಾರುಗಳನ್ನ ಖರೀದಿ ಮಾಡಬಹುದು.

PREV
Read more Articles on
click me!

Recommended Stories

Renault Duster Hybrid: ಅಕ್ಟೋಬರ್‌ 17ಕ್ಕೆ ಹೊಸ ಡಸ್ಟರ್‌ ಲಾಂಚ್‌; Grand Vitara, Hyryderಗೆ ನೇರ ಪೈಪೋಟಿ! ಮೈಲೇಜ್‌ ಎಷ್ಟು?
ಮಳೆಯಿಂದ ನಿಮ್ಮ ವಾಹನದ ಬ್ರೇಕ್‌ನಿಂದ ಶಬ್ದ ಬರುತ್ತಿದೆಯಾ? ಸೌಂಡ್‌ನಲ್ಲಿದೆ ಮಹತ್ವದ ಸೂಚನೆ