ಮಳೆಯಿಂದ ನಿಮ್ಮ ವಾಹನದ ಬ್ರೇಕ್‌ನಿಂದ ಶಬ್ದ ಬರುತ್ತಿದೆಯಾ? ಸೌಂಡ್‌ನಲ್ಲಿದೆ ಮಹತ್ವದ ಸೂಚನೆ

Published : Sep 26, 2026, 05:25 PM IST
Car Brakes Need Extra Attention

ಸಾರಾಂಶ

ಮಳೆಗಾಲದಲ್ಲಿ ವಾಹನಗಳ ಬ್ರೇಕ್‌ನಿಂದ ಶಬ್ದ ಬರುವುದು ಸಾಮಾನ್ಯ. ಬ್ರೇಕ್ ಡಿಸ್ಕ್, ಪ್ಯಾಡ್ ಬಳಿ ತುಕ್ಕು ಹಿಡಿದು ಬ್ರೇಕ್ ಹಿಡಿಯುವಾಗ ಶಬ್ದಗಳು ಕೇಳಿಸುತ್ತದೆ. ಆದರೆ ಈ ಶಬ್ದಗಳಲ್ಲೂ ಒಂದು ಅಪಾಯದ ಸೂಚನೆ ಇದೆ.

ಬೈಕ್, ಕಾರು ಸೇರಿದಂತೆ ಯಾವುದೇ ವಾಹನಗಳ ನಿರ್ವಹಣೆ, ನೀಡುವ ಸೂಚನೆಯನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಬೇಕು. ಮಳೆ ಸಂದರ್ಭಗಳಲ್ಲಿ ವಾಹನಗಳ ಕಬ್ಬಿಣಗಳ ತುಕ್ಕು ಹಿಡಿಯುವುದು ಸಾಮಾನ್ಯ. ಪ್ರಮುಖವಾಗಿ ವಾಹನಗಳ ಬ್ರೇಕ್‌ನ ಮೇಲ್ಮೆೈನಲ್ಲಿ ತೆಳುವಾದ ತುಕ್ಕು ಆವರಿಸಿಕೊಳ್ಳುತ್ತದೆ. ಹೀಗಾಗಿ ಬ್ರೇಕ್ ಹಿಡಿಯುವಾಗ ಶಬ್ದ ಕೇಳಿಸುತ್ತದೆ. ಆದರೆ ಈ ಶಬ್ದದಲ್ಲಿ ಕೆಲ ಸೂಚನೆಗಳಿವೆ. ಎಲ್ಲಾ ಶಬ್ದಗಳು ಅಪಾಯಕಾರಿಯಲ್ಲ, ಕೆಲವು ಸೂಚನೆಯನ್ನು ಗಂಭೀರವಾಗಿ ಪರಿಗಣಿಸಬೇಕು.

ತುಕ್ಕು ಹಿಡಿದು ಬ್ರೇಕ್‌ನಿಂದ ಬರವ ಶಬ್ದದಲ್ಲಿದೆ ಸೂಚನೆ

ಮಳೆಗಾಲದಲ್ಲಿ ವಾಹನಗಳ ರಿಮ್, ಬ್ರೇಕ್ ಸೇರಿದಂತೆ ಹಲವು ಭಾಗದಲ್ಲಿ ತುಕ್ಕು ಹಿಡಿಯುತ್ತದೆ. ಪ್ರಮುಖವಾಗಿ ಬ್ರೇಕ್ ಡಿಸ್ಕ್, ಪ್ಯಾಡ್ ಬಳಿ ತುಕ್ಕು ಹಿಡಿಯುವ ಕಾರಣ ವಾಹನ ಚಲಾಯಿಸಿ ಬ್ರೇಕ್ ಹಿಡಿದಾಗ ಶಬ್ದ ಕೇಳಿಸುತ್ತದೆ. ಇದು ಸಾಮಾನ್ಯ. ಆದರೆ ಕೆಲ ದೂರ ಚಲಿಸಿದ ಅಥವಾ ಆರಂಭದಲ್ಲಿ ಬ್ರೇಕ್ ಹಿಡಿದ ಬಳಿಕ ಮತ್ತೆ ಬ್ರೇಕ್ ಹಿಡಿಯುವಾಗ ಈ ಶಬ್ದ ಇರುವುದಿಲ್ಲ. ಹೀಗಿದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದರ್ಥ.

ಆದರೆ ಕೆಲ ದೂರ ಸಂಚರಿಸಿದ ಬಳಿಕ, ಅಥವಾ ಬ್ರೇಕ್ ಹಿಡಿದು ಅಂಟಿಕೊಂಡಿದ್ದ ತುಕ್ಕು ಕ್ಲೀಯರ್ ಆದರೂ ಮತ್ತೆ ಮತ್ತೆ ಬ್ರೇಕ್ ಹಿಡಿಯುವಾಗ ಶಬ್ದ ಕೇಳಿಸುತ್ತಿದ್ದರೆ ಬ್ರೇಕ್‌ನಲ್ಲಿ ಸಮಸ್ಯೆ ಇದೆ ಎಂಬ ಸ್ಪಷ್ಟ ಸೂಚನೆ ನೀಡುತ್ತದೆ. ತಕ್ಷಣವೇ ಬ್ರೇಕ್ ಸಿಸ್ಟಮ್ ಪರಿಶೀಲಿಸುವುದು ಅಗತ್ಯ. ಬ್ರೇಕ್ ರೂಟರ್ ಮೇಲಿನ ತುಕ್ಕು ಹಲವು ಬಾರಿ ಬ್ರೇಕ್ ರೂಟರ್ ಹಾನಿ ಮಾಡುತ್ತದೆ. ಇದರಿಂದ ಡಿಸ್ಕ್ ಹಾಗೂ ಬ್ರೇಕ್ ಪ್ಯಾಡ್ ಹಾನಿ ಮಾಡುತ್ತದೆ. ತುಕ್ಕು ಹಿಡಿಯುವ ಕಾರಣ ಬ್ರೇಕ್ ಹಾರ್ಡ್‌ವೇರ್, ಲೂಬ್ರಿಕೇಶನ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಬ್ರೇಕ್ , ರೂಟರ್, ಡಿಸ್ಕ್ ಹೆಚ್ಚು ಬಿಸಿಯಾಗುವ ಕಾರಣ ಬ್ರೇಕಿಂಗ್ ವೇಳೆ ಗಂಭೀರ ಸಮಸ್ಯೆಗಳು, ಜಾಮ್ ಅಥವಾ ಬ್ರೇಕ್ ಸಿಗದೆ ಇರುವ ಸಮಸ್ಯೆಗಳು ಎದುರಾಗಲಿದೆ. ಪ್ರತಿ ಬಾರಿ ಬ್ರೇಕ್ ಹಾಕುವಾಗ ಶಬ್ದ ಕೇಳಿಬಂದರೆ ಮೆಕ್ಯಾನಿಕ್ ಬಳಿ ಅಥವಾ ಸರ್ವೀಸ್ ಸೆಂಟರ್‌ನಲ್ಲಿ ಪರಿಶೀಲಿಸಬೇಕು, ಬ್ರೇಕ್ ಪ್ಯಾಡ್, ರೋಟರ್ ಹಾಗೂ ಕ್ಯಾಲಿಪರ್ ಪರಿಶೀಲಿಸುವುದು ಅಗತ್ಯವಾಗಿದೆ.

ಕೇವಲ ಶಬ್ದ ಮಾತ್ರವಲ್ಲ, ಕೆಲ ಸೂಚನೆ ಕಡೆಗಣಿಸಬೇಡಿ

ಕೇವಲ ಶಬ್ದ ಮಾತ್ರವಲ್ಲ ಬ್ರೇಕ್ ಹಾಕುವಾಗ ಎದುರಾಗುವ ಕೆಲ ಸೂಚನೆಗಳನ್ನು ಕಡೆಗಣಿಸಬಾರದು. ಪ್ರಮುಖವಾಗಿ ಬ್ರೇಕ್ ಹಾಕುವಾದ ಕಾರಿನ ಸ್ಟೀರಿಂಗ್, ವಾಹನದಲ್ಲಿ ವೈಬ್ರೇಶನ್ ಅನುಭವವಾದರೆ ಬ್ರೇಕ್ ಪರಿಶೀಲಿಸಬೇಕು. ಇನ್ನು ಬ್ರೇಕ್ ಪೆಡಲ್ ಪ್ರೆಸ್ ಮಾಡಿದಾಗ ಹೆಚ್ಚು ಒಳಗೆ ಹೋದರೆ ಅಥವಾ ಸರಿಯಾಗಿ ಬ್ರೇಕ್ ಸಿಗದಿದ್ದರೆ ಚೆಕ್ ಮಾಡಬೇಕು. ಬ್ರೇಕ್ ಹಾಕುವಾಗ ವಾಹನ ಒಂದು ಕಡೆ ಎಳೆದರೆ, ವಾಹವನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಲು ಸಾಧ್ಯವಾಗದಿದ್ದರೆ ಬ್ರೇಕ್ ಚೆಕ್ ಮಾಡಿಸಿಕೊಳ್ಳಬೇಕು.

ಬ್ರೇಕ್ ಹಾಕಿದಾಗ ಸುಟ್ಟ ವಾಸನೆ ಬಂದರೆ, ಇನ್ನು ಎಬಿಎಸ್ ಹಾಗೂ ಬ್ರೇಕ್ ವಾರ್ನಿಂಗ್ ಲೈಟ್ ಬ್ಲಿಂಕ್ ಆಗುತ್ತಿದ್ದರೆ, ಕಾರು ಸ್ವಲ್ಪ ಪ್ರಯಾಣಿಸಿದರೂ ಬ್ರೇಕ್ ಡಿಸ್ಕ್, ರೂಟರ್ ಹೆಚ್ಚು ಬಿಸಿಯಾಗುತ್ತಿದ್ದರೆ ಬ್ರೇಕ್ ಪರಿಶೀಲನೆ ಮಾಡಬೇಕು.

PREV
Read more Articles on
click me!

Recommended Stories

ಡುಯಲ್ ಸಿಲಿಂಡರ್ ಸಿಎನ್‌ಜಿ, 6 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ: ಟಾಟಾ ಏರಿಸ್ ಕಾರಿನ ಆಕರ್ಷಕ ಫೀಚರ್ಸ್ ಇಲ್ಲಿದೆ
ಹುಂಡೈ 'ಬಯಾನ್' ಟೀಸರ್ ಬಿಡುಗಡೆ: ಅಕ್ಟೋಬರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡಲಿರುವ ಹೊಸ ಎಸ್‌ಯುವಿಯ ಹೈಟೆಕ್ ವೈಶಿಷ್ಟ್ಯಗಳು