ಕ್ರೆಟಾ, ಮಾರುತಿ ವಿಕ್ಟೋರಿಸ್ ಪ್ರತಿಸ್ಪರ್ಧಿ, ಕೇವಲ ₹21 ಸಾವಿರಕ್ಕೆ ಬುಕ್ ಮಾಡಿ ಹೊಸ ಹೋಂಡಾ ಎಲಿವೇಟ್

Published : Oct 05, 2026, 02:37 PM IST
Honda Elevate Facelift 2026

ಸಾರಾಂಶ

ಹ್ಯುಂಡೈ ಕ್ರೆಟಾ, ಮಾರುತಿ ವಿಕ್ಟೋಸಿ ಸೇರಿದಂತೆ ಪ್ರಮುಖ ಎಸ್‌ಯುವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಎಲಿವೇಟ್ ಕಾರು ನಾಳೆ ಬಿಡುಗಡೆಯಾಗುತ್ತಿದೆ. ಕೇವಲ 21 ಸಾವಿರ ರೂಪಾಯಿಗೆ ಈ ಕಾರು ಬುಕ್ ಮಾಡಿಕೊಳ್ಳಬಹುದು.

ನವದೆಹಲಿ (ಅ.05) ಭಾರತದ ಕಾರು ಮಾರುಕಟ್ಟೆ ಸ್ಪರ್ಧೆ ತೀವ್ರಗೊಳ್ಳುತ್ತಿದೆ. ಅದರಲ್ಲೂ ಪ್ರಮುಖವಾಗಿ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಹಲವು ಆಯ್ಕೆಗಳು ಲಭ್ಯವಿದೆ. ಇದೀಗ ಹೋಂಡಾ ತನ್ನ ಎಲಿವೇಟ್ ಕಾರನ್ನು ಹಲವು ಅಪ್‌ಗ್ರೇಡ್ ಮೂಲಕ ಬಿಡುಗಡೆ ಮಾಡುತ್ತಿದೆ. ಅಕ್ಟೋಬರ್ 6ರಂದು ಹೊಸ ಹೊಂಡಾ ಎಲಿವೇಟ್ ಕಾರು ಬಿಡುಗಡೆಯಾಗುತ್ತಿದೆ. 2023ರಲ್ಲಿ ಮೊದಲ ಬಾರಿಗೆ ಎಲಿವೇಟ್ ಎಸ್‌ಯುವಿ ಕಾರು ಬಿಡಗಡೆಯಾಗಿತ್ತು. ಇದಾದ ಬಳಿಕ ಮೊದಲ ಬಾರಿಗೆ ಮೇಜರ್ ಅಪ್‌ಗ್ರೇಡ್ ಮೂಲಕ ಕಾರು ಬಿಡುಗಡೆಯಾಗುತ್ತಿದೆ.

21 ಸಾವಿರ ರೂಗೆ ಬುಕ್ ಮಾಡಿ ಹೋಂಡಾ ಎಲಿವೇಟ್

ಹೋಂಡಾ ಅತ್ಯಾಕರ್ಷಕ, ಪವರ್‌ಫುಲ್ ಎಂಜಿನ್, ಹೆಚ್ಚಿನ ಸ್ಥಳವಾಕಾಶದ ಎಲಿವೇಟ್ ಕಾರನ್ನು ಕೇವಲ 21,000 ರೂಪಾಯಿಗೆ ಬುಕ್ ಮಾಡಿಕೊಳ್ಳಬಹುದು. ಈಗಾಗಲೇ ಬುಕಿಂಗ್ ಆರಂಭಗೊಂಡಿದೆ. ಹೊಸ ಕಾರಿನಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಜೊತೆಗೆ ಅಡ್ವಾನ್ಸ್ ಟೆಕ್ನಾಲಜಿ ಬಳಸಲಾಗಿದೆ.

ಹೋಂಡಾ ಎಲಿವೇಟ್ ಕಾರಿನ ಪ್ರಮುಖ ಬದಲಾವಣೆ ಎಂದರೆ ಮುಂಭಾಗದ ಗ್ರಿಲ್ ಹಾಗೂ ಲುಕ್. ಹಾರಿಜಾಂಟಲ್ ಎಲ್ಇಡಿ ಡಿಆರ್‌ಎಲ್ ಬಳಸಲಾಗಿದೆ. ಇದರಿಂದ ಕಾರಿನ ಲುಕ್ ಮತ್ತಷ್ಟು ಹೆಚ್ಚಾಗಿದೆ. ಗ್ರಿಲ್ ಮೇಲಿದ್ದ ಹೋಂಡಾ ಲೋಗವನ್ನು ಇದೀಗ ಬಾನೆಟ್ ಎಡ್ಜ್‌ನಲ್ಲಿ ಬಳಸಲಾಗಿದೆ. 17 ಇಂಚಿನ್ ಆಲಾಯ್ ವ್ಹೀಲ್ಸ್ ಬಳಸಲಾಗಿದೆ. ರೇರ್‌ನಲ್ಲಿ ಕನೆಕ್ಟೆಡ್ ಎಲ್‌ಇಡಿ ಟೈಲ್ ಲ್ಯಾಂಪ್ಸ್ ಬಳಸಲಾಗಿದೆ. ಲೈಟಿಂಗ್, ಗ್ರಿಲ್ ಸೇರಿದಂತೆ ಕೆಲ ಬದಲಾವಣೆಯೊಂದಿಗೆ ಹೊಸ ಎಲಿವೇಟ್ ಕಾರು ಹೆಚ್ಚಿನ ಆಕರ್ಷಣೆ ಪಡೆದಿದೆ.

360 ಡಿಗ್ರಿ ಕ್ಯಾಮೆರಾ ಜೊತೆ ಅಡಾಸ್ ಟೆಕ್

ಹೊಸ ಎಲಿವೇಟ್ ಕಾರಿನಲ್ಲಿ 360 ಡಿಗ್ರಿ ಕ್ಯಾಮೆರಾ ಫೀಚರ್ ನೀಡಲಾಗಿದೆ. ಇನ್ನು ಡ್ರೈವರ್‌ಗೆ ಕ್ಯಾಮೆರಾ ಬೇಸ್ ಅಸಿಸ್ಟೆನ್ಸ್ ಕೂಡ ಸಿಗಲಿದೆ. ಇದರಿಂದ ಗ್ರೇ ಏರಿಯಾಗಳ ಕುರಿತು, ಬ್ಲೈಂಡ್ ಸ್ಪಾಟ್ ಕುರಿತು ಸ್ಪಷ್ಟ ಚಿತ್ರಣವನ್ನು ಕ್ಯಾಮೆರಾ ನೀಡಲಿದೆ. ಇದರ ಜೊತೆಗೆ ಅಡಾಸ್ ಟೆಕ್ ಬಳಸಲಾಗಿದೆ. ಯಾವ ಲೆವೆಲ್ ಅಡಾಸ್ ಬಳಸಲಾಗಿದೆ ಅನ್ನೋ ಮಾಹಿತಿ ನಾಳೆ ಕಾರು ಬಿಡುಗಡೆ ವೇಳೆ ಬಯಲಾಗಲಿದೆ. ವೆಂಟಿಲೇಟೆಡ್ ಫ್ರಂಟ್ ಸೀಟ್, ಡ್ಯುಯೆಲ್ ಜೋನ್ ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಿಕ್ ಎಡ್ಜಸ್ಟ್ ಫ್ರಂಟ್ ಸೀಟ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

ಕಾರಿನ ಎಂಜಿನ್ ಹಾಗೂ ಪರ್ಫಾಮೆನ್ಸ್

ಹೋಂಡಾ ಎಲಿವೇಟ್ ಕಾರಿನ ಎಂಜಿನ್ ಹೆಚ್ಚಿನ ಬದಲಾವಣೆಗಳಿರುವ ಸಾಧ್ಯತೆಗಳಿಲ್ಲ. 1.5 ಲೀಟರ್ , 4 ಸಿಲಿಂಡರ್ ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 121 ಬಿಹೆಚ್‌ಪಿ ಪವರ್ ಹಾಗೂ 145 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸದ್ಯ ಬಿಡುಗಡೆ ಮಾಡುತ್ತಿರುವ ಹೋಂಡಾ ಎಲಿವೇಟ್ ಫೇಸ್‌ಲಿಫ್ಟ್ ಕಾರು ಟರ್ಬೋ ಎಂಜಿನ್ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ.

ಹೋಂಡಾ ಎಲಿವೇಟ್ ಕಾರಿನ ಬೆಲೆ

ಹೋಂಡಾ ಎಲಿವೇಟ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗವಾಗಿಲ್ಲ. ಸದ್ಯದ ಮಾಹಿತಿ ಪ್ರಕಾರ ಹೊಸ ಕಾರಿನ ಬೆಲೆ 11.81 ಲಕ್ಷ ರೂಪಾಯಿಯಿಂದ 16.36 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌‍ಗೆ 16.92 ಕಿ.ಮೀ ಮೈಲೇಜ್ ನೀಡಲಿದೆ ಕಂಪನಿ ಹೇಳಿಕೊಂಡಿದೆ.

PREV
Read more Articles on
click me!

Recommended Stories

ಭಾರತಕ್ಕೆ ಬರುತ್ತಿದೆ ಹೊಸ ಡೆಂಝಾ ಕಾರು, 600 ಕಿ.ಮಿ ಮೈಲೇಜ್, ಕೆಗೆಟುಕುವ ಬೆಲೆ ಜೊತೆ ಆಫರ್
ಟಾಟಾ ಎಲ್ಲಾ ಇವಿ ಕಾರುಗಳಿಗೆ BaaS ಸ್ಕೀಂ, ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆ ಕೇವಲ 4.69 ಲಕ್ಷ ರೂ