ಟಾಟಾ ಎಲ್ಲಾ ಇವಿ ಕಾರುಗಳಿಗೆ BaaS ಸ್ಕೀಂ, ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆ ಕೇವಲ 4.69 ಲಕ್ಷ ರೂ

Published : Oct 04, 2026, 06:02 PM IST
Tata BaaS Scheme Extended to All EV Cars

ಸಾರಾಂಶ

ಟಾಟಾ ಮೋಟಾರ್ಸ್ ತನ್ನ ಎಲ್ಲಾ ಎಲೆಕ್ಟ್ರಿಕ್ ಕಾರುಗಳಿಗೆ BaaS ಸ್ಕೀಂ ವಿಸ್ತರಿಸಿದೆ. ಪರಿಣಾಮ ಗರಿಷ್ಠ 7.30 ಲಕ್ಷ ರೂಪಾಯಿ ಕಡಿತಗೊಂಡಿದೆ. ಇದಿಗ ಟಿಯಾಗೋ ಇವಿ ಕೇವಲ 4.69 ಲಕ್ಷ ರೂಪಾಯಿಗೆ ಲಭ್ಯವಿದೆ.

ಬೆಂಗಳೂರು (ಅ.04) ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಉತ್ತಮ ಮೈಲೇಜ್, ಪರ್ಫಾಮೆನ್ಸ್, ಕೈಗೆಟುಕುವ ಬೆಲೆ, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಕಾರಣಗಳಿಂದ ಟಾಟಾ ಇವಿ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಇದೀಗ ಕೆಲವೇ ಕೆಲವು ಇವಿ ಕಾರುಗಳಿಗೆ ಸೀಮಿತವಾಗಿದ್ದ BaaS ಸ್ಕೀಂ ಟಾಟಾದ ಎಲ್ಲಾ ಎಲೆಕ್ಟ್ರಿಕ್ ಕಾರುಗಳಿಗೆ ವಿಸ್ತರಿಸಲಾಗಿದೆ. ಇದರ ಪರಿಣಾಮ ಟಾಟಾ ಇವಿ ಕಾರುಗಳ ಬೆಲೆಯಲ್ಲಿ 2.30 ಲಕ್ಷ ರೂಪಾಯಿಯಿಂದ 7.30 ಲಕ್ಷ ರೂಪಾಯಿವರೆಗೆ ಕಡಿತಗೊಂಡಿದೆ. ಇದೀಗ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆ 4.69 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗಿದೆ.

ಏನಿದು ಬಾಸ್ ಸ್ಕೀಂ

ಟಾಟಾ ಸೇರಿದಂತೆ ಹಲವು ಕಂಪನಿಗಳು ಇದೀಗ BaaS (ಬ್ಯಾಟರಿ ಆ್ಯಸ್ ಎ ಸರ್ವೀಸ್) ಸ್ಕೀಂ ನೀಡುತ್ತಿದೆ. ಈ ಮೂಲಕ ಎಲೆಕ್ಟ್ರಿಕ್ ಕಾರು ಖರೀದಿಸುವಾಗ ಕಾರಿನ ಬ್ಯಾಟರಿಯನ್ನು ಬಾಡಿಗೆ ರೂಪದಲ್ಲಿ ಪಡೆಯವಾಗುತ್ಕದೆ. ಹೀಗಾಗಿ ದುಬಾರಿ ಬ್ಯಾಟರಿ ಬೆಲೆ ಕಡಿತಗೊಳ್ಳುತ್ತದೆ. ಪ್ರತಿ ಕಿಲೋಮೀಟರ್‌ಗೆ ಇಂತಿಷ್ಟು ಬಾಡಿಗೆ ನಿಗದಿಪಡಿಸಲಾಗಿರುತ್ತೆ. ತಿಂಗಳಿಗೆ ಇಂತಿಷ್ಟು ಬಾಡಿಗೆ ನೀಡುವ ಮೂಲಕ ಬ್ಯಾಟರಿ ನೇರವಾಗಿ ಖರೀದಿಸದೆ ಬಾಡಿಗೆ ಮೂಲಕ ಪಡೆಯುವ ಸ್ಕೀಂ ಇದಾಗಿದೆ. ಸದ್ಯ ಟಾಟಾ ಕಾರುಗಳ ಪೈಕಿ ಟಾಟಾ ಟಿಯಾಗೋ ಇವಿ, ಟಾಟಾ ಪಂಚ್ ಇವಿಗೆ ಮಾತ್ರ BaaS ಸ್ಕೀಂ ಲಭ್ಯವಿತ್ತು. ಇದೀಗ ಟಾಟಾ ನೆಕ್ಸಾನ್ ಇವಿ, ಕರ್ವ್ ಇವಿ, ಸೀಯೆರಾ ಇವಿ ಹಾಗೂ ಹ್ಯಾರಿಯರ್ ಇವಿಗೂ BaaS ಸ್ಕೀಂ ಲಭ್ಯವಿದೆ.

BaaS ಸ್ಕೀಂನಿಂದ ಟಿಯಾಗೋ ಇವಿ ಕಾರಿನ ಬೆಲೆ 2.30 ಲಕ್ಷ ರೂಪಾಯಿ ಕಡಿತಗೊಂಡರೆ, ಹ್ಯಾರಿಯರ್ ಇವಿ ಕಾರಿನ ಬೆಲೆ 7.30 ಲಕ್ಷ ರೂಪಾಯಿ ಕಡಿತಗೊಂಡಿದೆ. ಪರಿಣಾಮ ಟಾಟಾ ಎಲೆಕ್ಟ್ರಿಕ್ ಕಾರುಗಳು ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಡೌನ್‌ಪೇಮೆಂಟ್ ಹಾಗೂ ಇತರ ಮೊತ್ತಗಳು ಕಡಿಮೆಯಾಗಲಿದೆ.

BaaS ಸ್ಕೀಂ ಮೂಲಕ ಟಾಟಾ ಇವಿ ಕಾರುಗಳ ಬೆಲೆ

  1. ಟಾಟಾ ಟಿಯಾಗೋ ಇವಿ ಬೆಲೆ 4.69 ಲಕ್ಷ ರೂ + ಪ್ರತಿ ಕಿ.ಮಿಗೆ 2.6 ರೂ ಬಾಡಿಗೆ
  2. ಟಾಟಾ ಪಂಚ್ ಇವಿ ಬೆಲೆ 6.59 ಲಕ್ಷ ರೂ + ಪ್ರತಿ ಕಿ.ಮೀಗೆ 2.6 ರೂ ಬಾಡಿಗೆ
  3. ಟಾಟಾ ನೆಕ್ಸಾನ್ ಇವಿ ಬೆಲೆ 8.99 ಲಕ್ಷ ರೂ + ಪ್ರತಿ ಕಿ.ಮೀಗೆ 4.4 ರೂ ಬಾಡಿಗೆ
  4. ಟಾಟಾ ಕರ್ವ್ ಇವಿ ಬೆಲೆ 10.99 ಲಕ್ಷ ರೂ + ಪ್ರತಿ ಕಿ.ಮೀಗೆ 5 ರೂ ಬಾಡಿಗೆ
  5. ಟಾಟಾ ಸಿಯೆರಾ ಇವಿ ಬೆಲೆ 11.99 ಲಕ್ಷ ರೂ + ಪ್ರತಿ ಕಿ.ಮೀಗೆ 5.9 ರೂ ಬಾಡಿಗೆ
  6. ಟಾಟಾ ಹ್ಯಾರಿಯರ್ ಇವಿ ಬೆಲೆ 14.49 ಲಕ್ಷ ರೂ + ಪ್ರತಿ ಕಿ.ಮೀಗೆ 5.9 ರೂ ಬಾಡಿಗೆ

ಟಾಟಾ ಎಲೆಕ್ಟ್ರಿಕ್ ಕಾರುಗಳ ಮಾರಾಟ ಹೆಚ್ಚಳವಾಗಿದೆ. ಇದೀಗ ಬಾಸ್ ಸ್ಕೀಂ ಮೂಲಕ ಟಾಟಾದ ಎಲ್ಲಾ ಇವಿ ಕಾರುಗಳು ಖರೀದಿಗೆ ಸಾಧ್ಯವಾಗಿದೆ. ಇದರಿಂದ ಟಾಟಾ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ.

PREV
Read more Articles on
click me!

Recommended Stories

ಮಾರುತಿ ಸುಜುಕಿ ದಸರಾ, ದೀಪಾವಳಿ ಹಬ್ಬದ ಆಫರ್: ಈ ಕಾರುಗಳ ಖರೀದಿ ಮೇಲೆ ₹1.36 ಲಕ್ಷ ಡಿಸ್ಕೌಂಟ್!
Car Repair Cost: ಬಂಪರ್‌ನಿಂದ ಏರ್‌ಬ್ಯಾಗ್‌ವರೆಗೆ ಈ 5 ಪಾರ್ಟ್ಸ್‌ ರಿಪೇರಿ ದುಬಾರಿ!