ASEAN NCAP ಕ್ರ್ಯಾಶ್ ಟೆಸ್ಟ್: 2021 ಹೋಂಡಾ ಸಿವಿಕ್‌ಗೆ 5 ಸ್ಟಾರ್!

By Suvarna News  |  First Published Nov 9, 2021, 5:27 PM IST

ಜಪಾನ್ ಮೂಲದ ಹೋಂಡಾ (Honda) ಹಲವು ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಕಾರುಗಳ ಮೂಲಕ ಹೆಸರುವಾಸಿಯಾಗಿದೆ. ಭಾರತದಲ್ಲೂ ಈ ಕಂಪನಿಯ ಕಾರುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಕಂಪನಿಯ 2021 ಹೋಂಡಾ ಸಿವಿಕ್ (Honda Civic) ಆಸಿಯಾನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿನಲ್ಲಿ 5 ಸ್ಟಾರ್ ಸಂಪಾದಿಸಿದೆ. ಆ ಮೂಲಕ ಸಿವಿಕ್ ಸುರಕ್ಷತೆಯ ಕಾರ್ ಎಂಬುದನ್ನು ಸಾಬೀತುಪಡಿಸಿದೆ. 


ಹೋಂಡಾ ಕಂಪನಿಯ ಐಕಾನಿಕ್ ಕಾರ್ ಎನಿಸಿಕೊಂಡಿರುವ ಹೋಂಡಾ ಸಿವಿಕ್ (Honda Civic) ಗ್ರಾಹಕರನ್ನು ಮನಸೊರೆಗೊಳ್ಳುತ್ತಿದೆ. ಕಳೆದ ಜೂನ್‌ನಲ್ಲಿ ಬಿಡುಗಡೆಗೊಂಡಿರುವ 2021 ಹೋಂಡಾ ಸಿವಿಕ್ ತನ್ನ ಸ್ಟೈಲ್, ಪವರ್ ಫುಲ್ ಎಂಜಿನ್ ಹಾಗೂ ಅತ್ಯಾಧುನಿಕ ಫೀಚರ್‌ಗಳಿಂದ ಸೆಡಾನ್ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. 11ನೇ ತಲೆಮಾರಿನ ಹೋಂಡಾ ಸಿವಿಕ್ ಸುರಕ್ಷತೆಯ ದೃಷ್ಟಿಯಿಂದಲೂ ಮುಂದಿದೆ.

ಆಸಿಯಾನ್ ಎನ್‌ಸಿಎಪಿ (ASEAN NCAP) ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ 2021 ಹೋಂಡಾ ಸಿವಿಕ್ 5 ಸ್ಟಾರ್ ಪಡೆದುಕೊಂಡಿದೆ. ಈ ಕ್ರ್ಯಾಶ್‌ ಟೆಸ್ಟ್‌ನಲ್ಲಿ ಅದು ಒಟ್ಟಾರೆ 83.47 ಪಾಯಿಂಟ್‌ಗಳನ್ನು ಕಲೆ ಹಾಕಿದೆ. 2021-2021ರ ಪ್ರೊಟೋಕಾಲ್‌ನಲ್ಲಿ ಆಸಿಯಾನ್ ಎನ್‌ಸಿಎಪಿ ಕ್ರ್ಯಾಶ್‌ ಟೆಸ್ಟ್‌ ಎದುರಿಸಿದ ಹೋಂಡಾ ಕಂಪನಿಯ  ಮೊದಲ ಮಾಡೆಲ್ ಇದಾಗಿದೆ. ಅಡಲ್ಟ್ ಅಕ್ಯುಪಂಟ್ ಪ್ರೋಟೆಕ್ಷನ್(AOP) ವಿಭಾಗದಲ್ಲಿ ಒಟ್ಟಾರೆ 40 ಪಾಯಿಂಟ್ ಹಾಗೂ ಚೈಲ್ಡ್ ಅಕ್ಯುಪಂಟ್ ಪ್ರೋಟೆಕ್ಷನ್(COP) ವಿಭಾಗದಲ್ಲಿ  ಸೇಫ್ಟಿ ಅಸಿಸ್ಟ್ ಟೆಕ್ನಾಲಜಿಸಿ (SAT) ಹಾಗೂ ಮೋಟಾಸೈಕ್ಲಿಸ್ಟ್ ಸೇಫ್ಟಿ (MS) ತಲಾ ಒಟ್ಟಾರೆಯಾಗಿ 20 ಪಾಯಿಂಟ್‌ಗಳನ್ನು ಪಡೆಯಲು ಶಕ್ಯವಾಗಿದೆ.

Latest Videos

ಈ ತಿಂಗಳು ಎಂಟು ಕಾರು ಲಾಂಚ್! ಆ ಕಾರುಗಳು ಯಾವವು?

2021ರ ಹೋಂಡಾ ಸಿವಿಕ್‌ನಲ್ಲಿ ಅಳವಡಿಸಲಾಗಿರುವ ABS, ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB), CPD ಸುರಕ್ಷತೆಯ ಮಟ್ಟವನ್ನು ಹೆಚ್ಚಿಸಿವೆ. ಇವುಗಳ ಜೊತೆಗೆ, ಫಾರ್ವರ್ಡ್ ಕೊಲ್ಲಿಸನ್ ವಾರ್ನಿಂಗ್ (FCW), ಲೇನ್ ಡಿಪಾರ್ಚರ್ ವಾರ್ನಿಂಗ್ (LDW), ಲೇನ್ ಕೀಪ್ ಅಸಿಸ್ಟ್ (LKA) ಮತ್ತು ಡ್ರೈವರ್ ಅಟೆನ್ಷನ್ ಮಾನಿಟರ್ (DAM) ತಂತ್ರಜ್ಞಾನಗಳು ಹೊಸ ಹೋಂಡಾ ಸಿವಿಕ್‌ನ ಸುರಕ್ಷತೆಯನ್ನು ಹೆಚ್ಚಿಸಿವೆ. 

ಆಸಿಯಾನ್ ಎನ್‌ಸಿಎಪಿ ಹಂಗಾಮಿ ಚೇರ್ಮನ್ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರೊ. ಐಆರ್, ಟಿಎಸ್, ಖೈರಿಲ್ ಅನ್ವರ್ ಅಬು ಕಾಸಿಮ್,  ಸಾಂಕ್ರಾಮಿಕ ಪರಿಸ್ಥಿತಿಯ ಹೊರತಾಗಿಯೂ, ಕಾರು ತಯಾರಕರು ತಾವು ಉತ್ಪಾದಿಸುತ್ತಿರುವ ಹೊಸ ವಾಹನಗಳನ್ನು ಹೊಸ ಆಸಿಯಾನ್ ಎನ್‌ಸಿಎಪಿ 2021-2025 ಪ್ರೋಟೊಕಾಲ್‌ ಅಡಿಯಲ್ಲಿ ಅಗತ್ಯವಿರುವ ಸುರಕ್ಷತಾ ಅವಶ್ಯಕತೆಗಳನ್ನು ಪೂರೈಸಲು ಶ್ರಮಿಸಿದ್ದಾರೆ. ಹೊಸ ಪ್ರೋಟೋಕಾಲ್ ನಿಗದಿಪಡಿಸಿದ ಕಟ್ಟುನಿಟ್ಟಾದ ಅಗತ್ಯತೆಯ ಹೊರತಾಗಿಯೂ, ಹೋಂಡಾದ ಮತ್ತೊಂದು ಮಾದರಿಯು ಮತ್ತೊಂದು 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಹೊಸ ಸೆಡಾನ್‌ನಲ್ಲಿ ಅಳವಡಿಸಲಾಗಿರುವ ಪ್ರಸ್ತುತ ಪ್ರಬುದ್ಧ ತಂತ್ರಜ್ಞಾನಗಳನ್ನು ಹೊರತುಪಡಿಸಿ, ಹೊಸ ಸಿವಿಕ್ ಮೋಟಾರ್‌ಸೈಕಲ್‌ಗಾಗಿ ಹೊಸ ಸ್ವಾಯತ್ತ ತುರ್ತುಸ್ಥಿತಿ ಬ್ರೇಕಿಂಗ್ ಅನ್ನು ಅಭಿವೃದ್ಧಿಪಡಿಸುವ ಮತ್ತು ಸಜ್ಜುಗೊಳಿಸುವ ಮೂಲಕ ಮತ್ತಷ್ಟು ಮುಂದುವರಿಸಕೊಂಡಿದೆ ಎಂದು ಹೇಳಿದ್ದಾರೆ.

Suzuki Celerio: ನ.10ಕ್ಕೆ ಹೊಸ ಸೆಲೆರಿಯೋ ಲಾಂಚ್, ಹೇಗಿದೆ ಈ ಕಾರು?

ಲ್ಯಾಟಿನ್ ಎನ್‌ಸಿಎಪಿನಲ್ಲಿ ಬಲೆನ್ಯೂ ಶೂನ್ಯ
ಭಾರತದಲ್ಲಿ ತಯಾರಾದ ಸುಜುಕಿ ಬಲೆನೋ ಕಾರನ್ನು ಲ್ಯಾಟಿನ್ ಅಮೆರಿಕಾ (Latin America)ದ ಎನ್‌ಸಿಎಪಿ (NCAP) ಕಾರ್‌ ಕ್ರ್ಯಾಶ್‌ ಟೆಸ್ಟಿಂಗ್‌ಗೆ ಇತ್ತೀಚೆಗೆ ಗುರಿಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಬಲೆನೋ ಕಾರ್ ಫೇಲ್ ಆಗಿದೆ. ಲ್ಯಾಟಿನ್ ಎನ್‌ಸಿಎಪಿ (Latin NCAP) ಕಾರ್ ಟೆಸ್ಟಿನಲ್ಲಿ ಬಲೆನೋ ಶೂನ್ಯ ಸಂಪಾದನೆ ಮಾಡಿದೆ!

ಭಾರತದಲ್ಲೂ ಭಾರೀ ಜನಪ್ರಿಯವಾಗಿರುವ ಈ ಬಲೆನೋ, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ. ಭಾರತದಲ್ಲಂತೂ ಕಾರ್ ತುಂಬ ಜನಪ್ರಿಯವಾಗಿದೆ. ಆದರೆ, ಲ್ಯಾಟಿನ್ ಎನ್‌ಸಿಎಪಿ ಕಾರ್ ಕ್ರ್ಯಾಶ್‌ಟೆಸ್ಟಿನಲ್ಲಿ ಶೂನ್ಯ ಸಾಧನೆ ಮಾಡುವ ಮೂಲಕ ನಿರಾಸೆ ಮೂಡಿಸಿದೆ. ಇತ್ತೀಚೆಗಷ್ಟೇ ಸ್ವಿಫ್ಟ್ (Swift) ಕೂಡ ಕಾರ್ ಕ್ರ್ಯಾಶ್ ಟೆಸ್ಟಿನಲ್ಲಿ ಫೇಲ್ ಆಗಿತ್ತು.

ಭಾರತದ ಗುಜರಾತ್‌ (Gujarat)ನ ಅಹ್ಮದಾಬಾದ್‍ನ (Ahmadabad) ಘಟಕದಲ್ಲಿ ತಯಾರಾಗುವ ಬಲೆನೋ ಹ್ಯಾಚ್‌ಬ್ಯಾಕ್ ಕಾರುಗಳನ್ನು ಜಪಾನ್ (Japan) ಮೂಲದ ಸುಜುಕಿ ಲ್ಯಾಟಿನ್ ಅಮೆರಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಬಲೆನೋ ಮಾತ್ರವಲ್ಲದೇ ಸ್ವಿಫ್ಟ್ ಕಾರನ್ನು ಈ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟ ಮಾಡುತ್ತದೆ. 

Toyota ಸಬ್ ಕಾಂಪಾಕ್ಟ್ ಕಾರ್ Aygo X ಅನಾವರಣ, ಪಂಚ್‌ಗೆ ಠಕ್ಕರ್

click me!