ಹಬ್ಬ ಮುಗಿದರೂ ಆಫರ್ ಮುಗಿದಿಲ್ಲ, ಅಮೇಜ್ ಸೇರಿ ಹೋಂಡಾ ಕಾರುಗಳಿಗೆ 1.86 ಲಕ್ಷ ರೂ ಡಿಸ್ಕೌಂಟ್

Published : Nov 15, 2026, 05:41 PM IST
Honda Amaze Updated

ಸಾರಾಂಶ

ಹಬ್ಬಕ್ಕೆ ಹಲವು ಕಾರು ಕಂಪನಿಗಳು ಆಫರ್ ನೀಡಿತ್ತು. ಆದರೆ ಹೋಂಡಾ ಹಬ್ಬದ ಬಳಿಕ ಭರ್ಜರಿ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಹೋಂಡಾ ಅಮೇಜ್, ಹೋಂಡಾ ಸಿಟಿ ಸೇರಿದಂತೆ ಹೋಂಡಾದ ಆಯ್ದ ಕಾರುಗಳಿಗೆ ಭರ್ಜಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ನವದೆಹಲಿ (ನ.15) ಸಾಲು ಸಾಲು ಹಬ್ಬ ಮುಗಿದಿದೆ. ಆದರೆ ಆಫರ್ ಮುಗಿದಿಲ್ಲ. ಹೋಂಡಾ ತನ್ನ ಆಯ್ದ ಕಾರುಗಳಿಗೆ ಭರ್ಜರಿ ಆಫರ್ ಘೋಷಿಸಿದೆ. ನವೆಂಬರ್ ತಿಂಗಳ ಆಫರ್ ಇದಾಗಿದೆ. ಹೋಂಡಾ ಕಾರು ಖರೀದಿಸಲು ಬಯಸಿದ್ದರೆ ಸದ್ಯ ಭಾರಿ ಡಿಸ್ಕೌಂಟ್ ಮೊತ್ತದೊಂದಿಗೆ ಕಾರು ಖರೀದಿ ಸಾಧ್ಯವಿದೆ. ಗರಿಷ್ಠ 1.86 ಲಕ್ಷ ರೂಪಾಯಿವರೆಗೆ ಡಿಸ್ಕೌಂಟ್ ನೀಡಲಾಗಿದೆ. ಈ ಡಿಸ್ಕೌಂಟ್ ಆಫರ್ ನವೆಂಬರ್ 30ರ ವರೆಗೆ ಮಾತ್ರ ಲಭ್ಯವಿದೆ.

ನವೆಂಬರ್ ಡಿಸ್ಕೌಂಟ್ 1.86 ಲಕ್ಷ ರೂ

ನವೆಂಬರ್ ತಿಂಗಳ ಹೋಂಡಾ ಡಿಸ್ಕೌಂಟ್ ಆಫರ್‌ನಲ್ಲಿ ಹೋಂಡಾ ಸಿಟಿ ಕಾರಿಗೆ ಗರಿಷ್ಠ ಆಫರ್ ನೀಡಲಾಗಿದೆ. ಹೋಂಡಾ ಸಿಟಿಗೆ 1.86 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದು ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್, ಕಾರ್ಪೋರೇಟ್ ಬೋನಸ್ ಸೇರಿದಂತೆ ಇತರ ಡಿಸ್ಕೌಂಟ್ ಒಳಗೊಂಡಿದೆ. ಕಾರು ಖರೀದಿಗೆ ಆಸಕ್ತ ಗ್ರಾಹಕರು ಹತ್ತಿರದ ಹೋಂಡಾ ಡೀಲರ್ ಸಂಪರ್ಕಿಸಿ.

ಹೋಂಡಾ ಅಮೇಜ್ ಕಾರಿಗೆ 66,800 ರೂ ಡಿಸ್ಕೌಂಟ್

ಹೋಂಡಾ ಕಾರುಗಳ ಪೈಕಿ ಅಮೇಜ್ ಕಾರು ಅತ್ಯಂತ ಬೇಡಿಕೆಯ ಕಾರಾಗಿದೆ. ನವೆಂಬರ್ ತಿಂಗಳಲ್ಲಿ ಹೋಂಡಾ ಅಮೇಜ್ ಕಾರಿಗೆ ಒಟ್ಟು 66,800 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಮಾರುತಿ ಸುಜುಕಿ ಡಿಸೈರ್, ಹ್ಯಂಡೈ ಔರಾ ಸೇರಿದಂತೆ ಸೆಡಾನ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಅಮೇಜ್ ಇದೀಗ ಆಫರ್ ಮೂಲಕ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಆಫರ್‌ಗಳು ರಾಜ್ಯದಿಂದ ರಾಜ್ಯಕ್ಕೆ ನಗರದಿಂದ ನಗರಕ್ಕೆ ವ್ಯತ್ಯಾಸವಾಗುವ ಸಾಧ್ಯತೆ ಇದೆ.

ಹೋಂಡಾ ಅಮೇಜ್ ಸೆಕೆಂಡ್ ಜನರೇಶನ್ ಆಫರ್

ಹೋಂಡಾ ಅಮೇಜ್ ಸೆಕೆಂಡ್ ಜನರೇಶನ್ ಕಾರಿಗೆ ನವೆಂಬರ್ ತಿಂಗಳಲ್ಲಿ ಒಟ್ಟು 57,600 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಹೋಂಡಾ ಸೆಕೆಂಡ್ ಜನರೇಶನ್ ಅಮೇಜ್ ಕಾರು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಡಿಸ್ಕೌಂಟ್ ಮೂಲಕ ಹೋಂಡಾ ಕಾರುಗಳು ಖರೀದಿ ಸುಲಭವಾಗಿದೆ.

ಹೋಂಡಾ ಸೆಕೆಂಡ್ ಜನರೇಶನ್ ಕಾರಿ ಎಕ್ಸ ಶೋ ರೂಂ ಬೆಲೆ 6.98 ಲಕ್ಷ ರೂಪಾಯಿ. ಇನ್ನು ಮೂರನೇ ಜನರೇಶನ್ ಕಾರಿಗೆ 7.65 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇನ್ನು ಹೋಂಡಾ ಸಿಟಿ ಕಾರಿನ ಬೆಲೆ 12 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ).

PREV
Read more Articles on
click me!

Recommended Stories

ಮಾರುಕಟ್ಟೆಯಲ್ಲಿ ಮತ್ತೆ ಸಾಮ್ರಾಜ್ಯ ಸ್ಥಾಪಿಸಲು ಬರುತ್ತಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ: ಟೆಸ್ಟಿಂಗ್ ವೇಳೆ ಬಯಲಾಯ್ತು ಭರ್ಜರಿ ಫೀಚರ್ಸ್
Kia Seltos ಸದ್ದು ಮಾಡುತ್ತಿದ್ದರೆ ಮಾರಾಟದಲ್ಲಿ ಕಿಂಗ್ ಬೇರೆಯೇ! ಮೊದಲ ಸ್ಥಾನ ಪಡೆದ ಕಾರು ಯಾವುದು?