ಐಕಾನಿಕ್ ಲೋಟಸ್ ಎಲೆಟ್ರೋ (Iconic Lotus Eletro) ತಯಾರಕರು ಈಗ ಅಧಿಕೃತವಾಗಿ ಹೊಸ 600 ಎಚ್ಪಿ ಪ್ರಬಲ ಇವಿ ಬಹಿರಂಗಪಡಿಸಿದ್ದು, ಇದು ಎಸ್ಯುವಿ ಮತ್ತು ಎಲೆಕ್ಟ್ರಿಕ್ ಹೈಪರ್ ಕಾರಿನ ಮಿಶ್ರಣವಾಗಿದೆ.
ಬ್ರಿಟೀಷ್ ಮೂಲದ ಲೋಟಸ್ ಎಲೆಟ್ರೇ (Lotus Eletre) ದೀರ್ಘಕಾಲದ ನಂತರ ಜಾಗತಿಕ ಮಾರುಕಟ್ಟೆಗೆ ಅಧಿಕೃತವಾಗಿ ಎಲೆಕ್ಟ್ರಿಕ್ ಎಸ್ಯುವಿ (SUV) ಅನ್ನು ಬಿಡುಗಡೆಗೊಳಿಸಿದೆ. ಇದು ಲೋಟಸ್ನ ಮೊತ್ತಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಇದೊಂದು ಸ್ಪೋರ್ಟ್ಸ್ ಹಾಗೂ ರೇಸ್ ಕಾರ್ ಬ್ರ್ಯಾಂಡ್ ಆಗಿದ್ದು, ಶೂನ್ಯ ಹೊರಸೂಸುವಿಕೆಯ ಗ್ಯಾರಂಟಿ ನೀಡುತ್ತದೆ.
ಐಕಾನಿಕ್ ಲೋಟಸ್ ಎಲಿಸ್ (Iconic Lotus Elis) ತಯಾರಕರು ಈಗ ಅಧಿಕೃತವಾಗಿ ಹೊಸ 600 ಎಚ್ಪಿ ಪ್ರಬಲ ಇವಿ ಬಹಿರಂಗಪಡಿಸಿದ್ದು, ಇದು ಎಸ್ಯುವಿ ಮತ್ತು ಎಲೆಕ್ಟ್ರಿಕ್ ಹೈಪರ್ಕಾರ್ ಮಿಶ್ರಣವಾಗಿದೆ.
ಇದು ಎಸ್ಯುವಿ ರೂಪದಲ್ಲಿದ್ದರೂ, ರೇಸ್ ಕಾರ್ನ ಗುಣಲಕ್ಷಣಗಳನ್ನು ಒಲಗೊಂಡಿದೆ. ಲೋಟಸ್ ಎಲೆಟ್ರೆ ಅನ್ನು 600 ಎಚ್ಪಿ ಔಟ್ಪುಟ್ ಮಾತ್ರವಲ್ಲದೆ, ವಿವಿಧ ಟ್ರಿಮ್ಗಳಲ್ಲಿ ಕೂಡ ಬರಲಿದೆ. ಇದು ಮೂರು ಸೆಕೆಂಡ್ಗಳ ಒಳಗೆ 100 ಕಿಮೀ ವೇಗ ಹೆಚ್ಚಿಸುವ ಸಾಮರ್ಥ್ಯ ಹೊಮದಿದೆ. ಇದು 260 ಕಿಮೀ ಗರಿಷ್ಠ ವೇಗ ನೀಡಬಲ್ಲದು. ಇದರಲ್ಲಿ ಚಾಲನೆಯ ಸಾಮರ್ಥ್ಯ ಹೆಚ್ಚಿಸುವ ಇತರ ಅಂಶಗಳೆಂದರೆ, ಏರ್ ಸಸ್ಪೆನ್ಷನ್, ಸೀಟಿನ ಎತ್ತರ ಹೊಂದಿಸುವ ಸೌಲಭ್ಯ, ಹಿಂದಿನ ಆಕ್ಸೈಲ್ ಸ್ಟೀರಿ ಮತ್ತು ಸಕ್ರಿಯ ಆ್ಯಂಟಿ-ರೋಲ್ ಬಾರ್ಗಳು.
undefined
ಕೈಗೆಟುಕುವ ದರದ ಮಹೀಂದ್ರ KUV100 ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್!
ಕೆಲವು ಕೋನಗಳಿಂದ ಲ್ಯಾಂಬೋರ್ಗಿನಿ ಉರುಸ್ಗೆ ತಕ್ಕಮಟ್ಟಿಗೆ ಹೋಲುವ ಲೋಟಸ್ ಎಲೆಟ್ರೆ, ಕಂಪನಿಯ ಮೊದಲ SUV ಅಲ್ಲ. ಆದರೆ, ಇದು ಅದರ ಮೊದಲ ಐದು ಬಾಗಿಲುಗಳ ಕಾರಾಗಿದೆ ಈ EV ಹೊಸ 800 ವೋಲ್ಟ್ಗಳ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ ಮತ್ತು 100 ಕೆಡ್ಬ್ಲ್ಯುಎಚ್ (kWh) ಗಿಂತ ಹೆಚ್ಚಿನ ಬ್ಯಾಟರಿ ಹೊಂದಿದೆ. ಲೋಟಸ್ ಎಲೆಟ್ರೆನ ಎಲೆಕ್ಟ್ರಿಕ್ ಶ್ರೇಣಿಯು ಡಬ್ಲ್ಯುಎಲ್ಟಿಪಿ (WLTP) ಸ್ಟ್ಯಾಂಡರ್ಡ್ ಪ್ರಕಾರ ಪ್ರತಿ ಚಾರ್ಜ್ಗೆ 373 ಕಿಮೀ ಚಾಲನೆಯ ಸಾಮರ್ಥ್ಯ ನೀಡಬಲ್ಲದು. ಜೊತೆಗೆ, ಕೇವಲ 20 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜಿಂಗ್ ಪೂರೈಸಲಿದೆ.
ಇದಲ್ಲದೆ, ಆಲ್-ವೀಲ್ ಡ್ರೈವ್ ಪವರ್ಟ್ರೇನ್ ಮತ್ತು ಅದರ ಎರಡು ಎಲೆಕ್ಟ್ರಿಕ್ ಮೋಟಾರ್ಗಳು ಇದಕ್ಕೆ ಹೆಚ್ಚಿನ ಪವರ್ ನೀಡಲಿದೆ. ಒಟ್ಟು 23 ಸ್ಪೀಕರ್ಗಳೊಂದಿಗೆ 2,160 ವ್ಯಾಟ್ಗಳ ಆಡಿಯೊ ಸಿಸ್ಟಮ್ನಿಂದ ಪ್ರಯಾಣಿಕರು ಉತ್ತಮ ಸಂಗೀತವನ್ನು ಸಂಪೂರ್ಣವಾಗಿ ಆನಂದಿಸಬಹುದು. ಈ ಎಲೆಕ್ಟ್ರಿಕ್ ಎಸ್ಯುವಿ ಉತ್ಪಾದನೆಯು ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗಲಿದೆ, ಆದರೆ ಲೋಟಸ್ ಎಲೆಟ್ರೆ ಯುಕೆ ಮತ್ತು ಯುರೋಪ್ನ ಹೊರಗಿನ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review
ಲೋಟಸ್ ಚೀನಾದ ಉಹಾನ್ನಲ್ಲಿನ ತನ್ನ ಹೊಸ ಘಟಕದಲ್ಲಿ ಉತ್ಪಾದನೆ ಆರಂಭಿಸಲಿದೆ. ಇದರ ಡೆಲಿವರಿ 2023ರಿಂದ ಆರಂಭವಾಗಲಿದೆ. ಮತ್ತು ಮೊದಲ ಬ್ಯಾಚ್ ಚೀನಾ, ಬ್ರಿಟನ್ ಮತ್ತು ಆಯ್ದ ಯೂರೋಪಿಯನ್ ಮಾರುಕಟ್ಟೆಗಳಿಗೆ ಸಾಗಲಿದೆ.ಇದರ ಸ್ಪ್ಲಿಟ್-ಸ್ಟೈಲ್ ಹೆಡ್ ಲೈಟ್ಗಳು, ಓವರ್ ಹ್ಯಾಂಗಿಂಗ್ ಫ್ರಂಟ್ ಲಿಪ್, ಸ್ಲೀಟ್ ಗ್ರಿಲ್ ಡಿಸೈನ್, ಆ್ಯಕ್ಟೀವ್ ಏರೋಡೈನಮಿಕ್ಸ್, ತ್ವರಿತ ಕೂಲಿಂಗ್, ಡ್ಯುಯಲ್ ಟೋನ್ ಕಲರ್ಗಳು ಇದರ ಆಕರ್ಷಣೆಗಳಾಗಿವೆ.
ಇದರ ಕ್ಯಾಬಿನ್ನಲ್ಲಿ ಮಿನಿಮಲಿಸಂ ಥಿಯರಿ ಮೇಲೆ ಗಮನ ಹರಿಸಲಾಗಿದ್ದು, 300 ಎಂಎಂ ಉದ್ದ ಹಾಗೂ 15.1 ಇಂಚು ಉದ್ಧದ ಎಚ್ಡಿ ಇನ್ಫೋಟೈನ್ಮೆಂಟ್ ಸಿಸ್ಟಮ್ಗಳನ್ನು ಇದರಲ್ಲಿ ಕಾಣಬಹುದು.
ಹೊಸ ಹೈಪರ್ SUV "ಎಂಡ್-ಟು-ಎಂಡ್ ಸ್ವಾಯತ್ತ ಡ್ರೈವಿಂಗ್ ತಂತ್ರಜ್ಞಾನ" ಮತ್ತು OTA ಸಾಫ್ಟ್ವೇರ್ ಅಪ್ಡೇಟ್ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಇದು ಸ್ವಯಂ ಪಾರ್ಕಿಂಗ್ ಸಾಮರ್ಥ್ಯ ಹೊಂದಿರುತ್ತದೆ. ಗ್ರಾಹಕರು ತಮ್ಮ ಸ್ಮಾರ್ಟ್ಫೋನ್ ಅಪ್ಲಿಕೇಶನ್ ಅನ್ನು ಹತ್ತಿರದ ಪಾರ್ಕಿಂಗ್ ಸ್ಥಳದಿಂದ ಸ್ವಯಂ ಚಾಲಿತವಾಗಿ ಹೊರಬರುವಂತೆ ಸಂಕೇತ ನೀಡಬಹುದು. ಮತ್ತು ಚಾಲನೆ ಮುಗಿದ