ನವದೆಹಲಿ(ಮೇ.30): ಅಂಬಾಸಿಡರ್ ಕಾರು ಯಾರಿಗೆ ಗೊತ್ತಿಲ್ಲ ಹೇಳಿ. ಹೊಸ ಪೀಳಿಗೆ ಅಂಬಾಸಿಡರ್ ಕಾರು ನೋಡಿಲ್ಲದಿದ್ದರೂ, ಅಲ್ಲೊಂದು ಇಲ್ಲೊಂದು ಕಾರು ಕಾಣಸಿಗುತ್ತದೆ. ಭಾರತೀಯ ಸೇನೆಯಲ್ಲಿ ಈಗಲೂ ಕೆಲ ಅಂಬಾಸಿಡರ್ ಕಾರುಗಳಿವೆ. ರಾಜಕಾರಣಿಗಳಲ್ಲೂ ಅಂಬಾಸಿಡರ್ ಕಾರುಗಳಿವೆ. ದಶಕಗಳ ಹಿಂದೆಯೇ ಮರೆಯಾದ ಅಂಬಾಸಿಡರು ಕಾರು ಮತ್ತೆ ಹೊಸ ರೂಪದಲ್ಲಿ ಭಾರತಕ್ಕೆ ಎಂಟ್ರಿಕೊಡುತ್ತಿದೆ.
ಹಿಂದುಸ್ತಾನ್ ಮೋಟಾರ್ಸ್ ಕಂಪನಿಯ ಅಂಬಾಸಿಡರ್ ಕಾರು ಇದೀಗ ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗಲಿದೆ. ಹೊಸ ವಿನ್ಯಾಸ, ಹೊಸ ರೂಪದಲ್ಲಿ ಕಾರು ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಆಕರ್ಷಕ ವಿನ್ಯಾಸದಲ್ಲಿ ಕಾರು ಬಿಡುಗಡೆಯಾಗುತ್ತಿದೆ.
ಭಾರತೀಯ ಸೇನೆಯ ಸಾರಥಿಗೆ ಕಣ್ಣೀರಿನ ವಿದಾಯ!
ಯುರೋಪ್ ಮೂಲದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕದ ಜೊತೆ ಹಿಂದುಸ್ತಾನ್ ಮೋಟಾರ್ಸ್ ಒಪ್ಪಂದ ಮಾಡಿಕೊಂಡಿದೆ. ಹಿಂದುಸ್ತಾನ್ ಮೋಟಾರ್ಸ್ ತನ್ ಹಳೇ ಕಾರು ಘಟಕದಲ್ಲಿ ಕಾರು ಉತ್ಪಾದನೆ ಮಾಡಲು ನಿರ್ಧರಿಸಿದೆ.
ಮೂಲಗಳ ಪ್ರಕಾರ 2024ರ ವೇಳೆಗೆ ನೂತನ ಅಂಬಾಸಿಡರ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. 1958ರಲ್ಲಿ ಭಾರತದಲ್ಲಿ ಅಂಬಾಸಿಡರ್ ಕಾರು ಬಿಡುಗಡೆಯಾಗಿತ್ತು. ಬಳಿಕ ಮಾರುತಿ 800 ಭಾರತದಲ್ಲಿ ಬಿಡುಗಡೆಯಾಗುವ ಮೂಲಕ ಹಿಂದುಸ್ತಾನ್ ಅಂಬಾಸಿಡರ್ ಕಾರಿಗೆ ತೀವ್ರ ಹೊಡೆತ ನೀಡಿತು. 1980-90ರ ದಶಕದಲ್ಲಿ ಮಾರುತಿ ಕಾರುಗಳು ಭಾರತದಲ್ಲಿ ಅಗ್ರಸ್ತಾನ ಪಡೆದುಕೊಂಡಿತು. ಇದರೊಂದಿಗೆ ಅಂಬಾಸಿಡರ್ ಕಾರು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳಗೆ ಮಾತ್ರ ಸೀಮಿತವಾಯಿತು.
ಅಟಲ್ ಬಿಹಾರಿ ವಾಜಪೇಯಿ ವರೆಗೂ ಭಾರದ ಪ್ರಧಾನ ಮಂತ್ರಿಗಳು ಬಳಕೆ ಮಾಡುತ್ತಿದ್ದ ಕಾರು ಅಂಬಾಸಿಡರು. ಬಳಿಕ ಭದ್ರತೆ ಕಾರಣದಿಂದ ಪ್ರಧಾನಿ, ರಾಷ್ಟ್ರಪತಿಗಳ ಕಾರು ಬದಲಿಸಲಾಯಿತು. ಅಂಬಾಸಿಡರ್ ಕಾರು ಅತ್ಯಂತ ಸುರಕ್ಷಿತ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.2014ರಲ್ಲಿ ಅಂಬಾಸಿಡರ್ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಇದೀಗ ಹೊಸ ರೂಪದಲ್ಲಿ ಮತ್ತೆ ಅಬ್ಬರಿಸಲು ಅಂಬಾಸಿಡರು ಕಾರು ಬಿಡುಗಡೆಯಾಗಲಿದೆ.
2019ರಲ್ಲಿ ಭಾರತೀಯ ಸೇನೆ ಅಂಬಾಸಿಡರ್ ಕಾರಿನ ಬಳಕೆಗೆ ಗುಡ್ ಬೈ ಹೇಳಿತು. ಅಂಬಾಸಿಜರ್ ಕಾರು ಉತ್ಪಾದನೆ ಸ್ಥಗಿತಗೊಳಿಸಿದ ಕಾರಣ ಕಾರು ಬಳಕೆಯನ್ನು ಸೇನೆ ನಿಲ್ಲಿಸಿತು. ಕೆಲ ಸೇನಾಧಿಕಾರಿಗಳು ಈಗಲೂ ಅಂಬಾಸಿಡರ್ ಕಾರು ಬಳಕೆ ಮಾಡುತ್ತಿದ್ದಾರೆ. ಇನ್ನು ಕೆಲ ರಾಜಕಾರಣಿಗಳು ಈಗಲೂ ಅಂಬಾಸಿಡರ್ ಕಾರು ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬಸವರಾಜ್ ಹೊರಟ್ಟಿ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ತಮ್ಮ ಹಳೇ ಅಂಬಾಸಿಡರ್ ಕಾರಿನಲ್ಲಿ ಆಗಮಿಸಿ ಗಮನಸೆಳೆದಿದ್ದರು.
ವಾಜಪೇಯಿ ಕಾಲದಲ್ಲಿ ಪ್ರಧಾನಿಗೆ ಅಂಬಾಸಿಡರ್‌ನಿಂದ BMW ಕಾರು !ಯಾಕೆ ಗೊತ್ತಾ?
ಹೊರಟ್ಟಿಅವರು ತಮ್ಮ ಹುಬ್ಬಳ್ಳಿ ಮನೆಯಿಂದ ತಾವು 1980ರಲ್ಲಿ ಖರೀದಿಸಿದ್ದ ಲಕ್ಕಿ ವಾಹನ ಅಂಬಾಸಿಡರ್ ಕಾರ್‌ನಲ್ಲಿ (ಸಿಎನ್‌ಬಿ-5757) ಆಗಮಿಸಿದರು. ಮೊದಲ ಚುನಾವಣೆಯಿಂದ ನಾಮಪತ್ರ ಸಲ್ಲಿಕೆ ವೇಳೆ ಇದೇ ಕಾರು ಬಳಸುತ್ತಿರುವ ಹೊರಟ್ಟಿ, ಮಗುವಿನಂತೆ ಈ ಕಾರು ಪ್ರೀತಿಸುತ್ತೇನೆ. ಈಗ 8 ಲಕ್ಷ ಕಿಮೀ ಓಡಿದೆ ಎಂದು ಹೇಳಿದರು. ಹಲವು ಹಳ್ಳಿ, ಪಟ್ಟಣಗಳಲ್ಲಿ ಅಂಬಾಸಿಡರ್ ಕಾರುಗಳೇ ರಾರಾಜಿಸುತ್ತಿದೆ. ಐಕಾನಿಕ್ ಕಾರು ಹೊಸ ರೂಪದಲ್ಲಿ ಭಾರಿ ಸಂಚಲನ ಸೃಷ್ಟಿಸುವುದು ಖಚಿತ.