ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಘೋಷಿಸಿದ ಟಾಟಾ ಮೋಟಾರ್ಸ್, ಬರೋಬ್ಬರಿ 70 ಸಾವಿರ ರಿಯಾಯಿತಿ!

By Suvarna NewsFirst Published Jul 8, 2022, 4:09 PM IST
Highlights
  • ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಡಿಸ್ಕೌಂಟ್ ಆಫರ್
  • ಪಂಚ್ ಕಾರು ಹೊರತು ಪಡಿಸಿ ಉಳಿದ ಟಾಟಾ ಕಾರುಗಳಿಗೆ ಅನ್ವಯ
  • ಗರಿಷ್ಠ 70,000 ರೂಪಾಯಿ ಡಿಸ್ಕೌಂಟ್ ಆಫರ್

ಮುಂಬೈ(ಜು.08): ಟಾಟಾ ಮೋಟಾರ್ಸ್ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಅತ್ಯುತ್ತಮ ಡಿಸೈನ್, ಅಷ್ಟೇ ಉತ್ತಮ ಪರ್ಫಾಮೆನ್ಸ್, ಅದಕ್ಕಿಂತ ಮುಖ್ಯವಾಗಿ 5 ಸ್ಟಾರ್ ಸೇಫ್ಟಿ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಟಾಟಾ ಕಾರು ಮಾರಾಟದಲ್ಲೂ ದಾಖಲೆ ಬರೆದಿದೆ. ಇದೀಗ ಟಾಟಾ ಮೋಟಾರ್ಸ್ ಜುಲೈ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಿದೆ. ಗರಿಷ್ಠ 70,000 ರೂಪಾಯಿ ಆಫರ್ ಘೋಷಿಸಲಾಗಿದೆ.

ಟಾಟಾ ಹ್ಯಾರಿಯರ್, ಸಫಾರಿ, ನೆಕ್ಸಾನ್, ಅಲ್ಟ್ರೋಜ್, ಟಿಯಾಗೋ ಹಾಗೂ ಟಿಗೋರ್ ಕಾರಿಗೆ ಡಿಸ್ಕೌಂಟ್ ಆಫರ್ ಲಭ್ಯವಿದೆ. ಆದರೆ ಟಾಟಾ ಪಂಚ್, ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಕಾರಿಗೆ ಡಿಸ್ಕೌಂಟ್ ಲಭ್ಯವಿಲ್ಲ. 

ಟಾಟಾ ಹ್ಯಾರಿಯರ್ ಕಾರಿಗೆ ಗರಿಷ್ಟ ಡಿಸ್ಕೌಂಟ್ ನೀಡಲಾಗಿದೆ. 70,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದು 40,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್, 5,000 ರೂಪಾಯಿ ಕಾರ್ಪೋರೇಟ್ ಬೋನಸ್ ಹಾಗೂ 25,000 ರೂಪಾಯಿ ಹೆಚ್ಚುವರಿ ಆ್ಯಕ್ಸೆಸಸರಿ ಡಿಸ್ಕೌಂಟ್ ಸಿಗಲಿದೆ.

ಗರಿಷ್ಠ ಮಾರಾಟವಾದ ಟಾಪ್ 10 ಕಾರು, ಅಗ್ರಸ್ಥಾನದಲ್ಲಿ ವ್ಯಾಗನರ್, ನೆಕ್ಸಾನ್‌!

ಟಾಟಾ ಸಫಾರಿ ಕಾರಿಗೆ ಒಟ್ಟು 40,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಈ ಡಿಸ್ಕೌಂಟ್ 40,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಆಗಿದೆ. ಇನ್ನಿತರ ಯಾವುದೇ ಡಿಸ್ಕೌಂಟ್ ಅಥವಾ ಬೋನಸ್ ಲಭ್ಯವಿಲ್ಲ. ಟಾಟಾ ಟಿಗೋರ್ ಕಾರಿಗೆ ಒಟ್ಟು 33,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. XZ ಹಾಗೂ ಅದಕ್ಕಿಂತ ಮೇಲ್ಪಟ್ಟ ವೇರಿಯೆಂಟ್ ಟಿಗೋರ್ ಕಾರಿಗೆ ಈ ಆಫರ್ ಲಭ್ಯವಿದೆ. ಇನ್ನು ಬೇಸ್ ಹಾಗೂ  XZ ವೇರಿಯೆಂಟ್ ವರೆಗೆ ಟಗೋರ್ ಕಾರಿಗೆ 23,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಈ ಆಫರ್ ಎಕ್ಸ್‌ಚೇಂಜ್ ಬೋನಸ್, ಕಾರ್ಪೋರೇಟ್ ಬೋನಸ್ ಒಳಗೊಂಡಿದೆ.

ಟಾಟಾ ಟಿಯಾಗೋ ಹ್ಯಾಚ್‌ಬ್ಯಾಕ್ ಕಾರಿಗೆ ಒಟ್ಟು 28,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. XZ ಹಾಗೂ ಅದಕ್ಕಿಂತ ಮೇಲ್ಪಟ್ಟ ವೇರಿಯೆಂಟ್ ಟಿಯಾಗೋ ಕಾರಿಗೆ ಈ ಆಫರ್ ಲಭ್ಯವಿದೆ. ಇನ್ನು ಲೋವರ್ ವೇರಿಯೆಂಟ್ ಟಿಯಾಗೋ ಕಾರುಗಳಿಗೆ 18,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 

 

Tata Nexon EV MAX 437 ಕಿ.ಮೀ ಮೈಲೇಜ್, ಹೊಚ್ಚ ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು ಬಿಡುಗಡೆ!

ಗರಿಷ್ಠ ಮಾರಾಟದ ಮೂಲಕ ದಾಖಲಲೆ ಬರೆಯುತ್ತಿರುವ ನೆಕ್ಸಾನ್ ಕಾರಿಗೆ ಒಟ್ಟು 15,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೇರಿಯೆಂಟ್ ಕಾರಿಗೆ ಈ ಆಫರ್ ಲಭ್ಯವಿದೆ. ಪೆಟ್ರೋಲ್ ಕಾರಿಗೆ 8,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.

ಟಾಟಾ ಆಲ್ಟ್ರೋಜ್ ಡೀಸೆಲ್ ಕಾರಿಗೆ ಒಟ್ಟು 10,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಪೆಟ್ರೋಲ್ ಅಲ್ಟ್ರೋಜ್ ಕಾರಿಗೆ 7,500 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 

ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್‌ ಏಸ್‌
ಏಸ್‌ ಇವಿ ಇದು ಟಾಟಾ ಮೋಟಾರ್ಸ್‌ ಬಿಡುಗಡೆ ಮಾಡಿರುವ ಹೊಸ ಎಲೆಕ್ಟ್ರಿಕ್‌ ವಾಣಿಜ್ಯ ವಾಹನ. ಸಣ್ಣ ವಾಣಿಜ್ಯ ವಾಹನವಾಗಿದ್ದು, ಹೊಗೆ ಉಗುಳುವುದಿಲ್ಲ. ಪರಿಸರ ಸ್ನೇಹಿಯಾಗಿದೆ ಎಂದು ಕಂಪನಿ ತಿಳಿಸಿದೆ. ಇದರಲ್ಲಿ ಎವೊಜೆನ್‌ ಪವರ್‌ಟ್ರೇನ್‌ ಉದ್ದು, ಇಂಧನ ಕ್ಷಮತೆ ನೀಡುತ್ತದೆ. ಒಮ್ಮೆ ಚಾಜ್‌ರ್‍ ಮಾಡಿದರೆ 154 ಕಿಮೀ ದೂರ ಕ್ರಮಿಸಬಹುದು ಎಂದು ಕಂಪನಿ ಹೇಳಿದೆ. 130 ಎನ್‌ಎಂ ಟಾರ್ಕ್ ಹೊಂದಿದ್ದು, 27 ಕಿ.ವ್ಯಾ. ಪವರ್‌ ಉತ್ಪಾದಿಸುತ್ತದೆ. ಸರಕು ಸಾಗಣೆಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ.

ಟಾಟಾದ 21 ವಾಣಿಜ್ಯ ವಾಹನ ಬಿಡುಗಡೆ
ಇ- ಬಸ್‌, ಟ್ರಕ್‌ ಸೇರಿದಂತೆ ಸುಮಾರು 21 ವಾಣಿಜ್ಯ ವಾಹನಗಳನ್ನು ಟಾಟಾ ಮೋಟಾರ್ಸ್‌ ಬಿಡುಗಡೆ ಮಾಡಿದೆ. ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ ವಿಭಾಗದಲ್ಲಿ 7 ವಾಹನಗಳು, ಲೈಟ್‌ ಕಮರ್ಷಿಯಲ್‌ ವಿಭಾಗದಲ್ಲಿ 4 ರಿಂದ 18 ಟನ್‌ ತೂಕದ 5 ವಾಹನಗಳು ಬಿಡುಗಡೆಗೊಂಡಿವೆ. 5 ಸಣ್ಣ ಕಮರ್ಷಿಯಲ್‌ ವೆಹಿಕಲ್‌ ಬಿಡುಗಡೆಯಾಗಿದೆ. ಉತ್ತಮ ಕಾರ್ಯನಿರ್ವಹಣೆಯ ಜೊತೆಗೆ ಇಂಧನ ಉಳಿತಾಯಕ್ಕೆ ಪೂರಕವಾಗಿ ಇವುಗಳನ್ನು ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿದೆ.

click me!