ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ಇದೀಗ, ಎಲ್ಲಾ ಕಾರುಗಳ ಫ್ರಂಟ್ ಫೇಸಿಂಗ್ (ಮುಂಬದಿ ಮುಖ ಮಾಡಿರುವ) ಸೀಟುಗಳಿಗೂ ಸೀಟ್ ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಿದೆ.
ನವದೆಹಲಿ (ಫೆ.11): ಪ್ರಯಾಣಿಕರ ಸುರಕ್ಷತೆಗಾಗಿ (Passengers Safety) ಹಲವು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ಇದೀಗ, ಎಲ್ಲಾ ಕಾರುಗಳ ಫ್ರಂಟ್ ಫೇಸಿಂಗ್ (ಮುಂಬದಿ ಮುಖ ಮಾಡಿರುವ) ಸೀಟುಗಳಿಗೂ ಸೀಟ್ ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಿದೆ. ಇದು ಕಾರಿನ ಹಿಂಭಾಗದ ನಡುವಿನ ಸೀಟುಗಳಿಗೂ ಅನ್ವಯವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ತಿಳಿಸಿದ್ದಾರೆ.
ಈ ಪ್ರಕಾರ ಕಾರು ಉತ್ಪಾದಕ ಸಂಸ್ಥೆಗಳು ತಾವು ಉತ್ಪಾದಿಸುವ ಎಲ್ಲಾ ಕಾರುಗಳಿಗೆ ಫ್ರಂಟ್ ಫೇಸಿಂಗ್ ಸೀಟುಗಳು ಮತ್ತು ಮಧ್ಯದ ಸೀಟುಗಳಿಗೆ ಸೀಟ್ ಬೆಲ್ಟ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಿದೆ. ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತಾದ ಕಡತಕ್ಕೆ ನಿನ್ನೆ(ಬುಧವಾರ)ಯಷ್ಟೇ ಸಹಿ ಹಾಕಿದ್ದೇನೆ.
undefined
ದೇಶದಲ್ಲಿ ಪ್ರತೀ ವರ್ಷ ನಡೆಯುವ 5 ಲಕ್ಷ ರಸ್ತೆ ಅಪಘಾತಗಳಲ್ಲಿ 1.5 ಲಕ್ಷಕ್ಕಿಂತ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು. ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಕಾರುಗಳಲ್ಲಿ ಕಿಟಕಿ ಪಕ್ಕದ ಸೀಟುಗಳಿಗೆ ಬೆಲ್ಟ್‌ಗಳಿವೆ. ಆದರೆ ಮಧ್ಯ ಅಥವಾ ಫ್ರಂಟ್ ಫೇಸಿಂಗ್ ಸೀಟುಗಳಿಗೆ ವಿಮಾನದಲ್ಲಿ ನೀಡಲಾಗುವ ಸೀಟು ಬೆಲ್ಟ್ ಇದೆ. ಇದು ಅಷ್ಟೇನು ಸುರಕ್ಷಿತವಲ್ಲ ಎಂಬುದು ಕೇಂದ್ರದ ವಾದ.
ಗಡ್ಕರಿಗೆ IRF ಪತ್ರ: ಭಾರತದಲ್ಲಿ ಕಾರು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇತ್ತೀಚೆಗೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾರತದಲ್ಲಿ ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ(Airbag Mandatory) ಎಂದು ಘೋಷಿಸಿದ್ದರು. ಗಡ್ಕರಿ ನಿರ್ಧಾರವನ್ನು ಬಹುತೇಕರು ಸ್ವಾಗತಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ರಸ್ತೆ ಒಕ್ಕೂಟ(IRF) ಈ ನಿರ್ಧಾರವನ್ನು ವಿರೋಧಿಸಿದೆ. ಇಷ್ಟೇ ಅಲ್ಲ ಇದು ಬಡವರ ವಿರೋಧಿ ಹಾಗೂ ಶ್ರೀಮಂತರ ಪರವಾಗಿರುವ ನಿರ್ಧಾರ ಎಂದಿದಿದೆ.
ಭಾರತದಲ್ಲಿ ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ ಮಾಡಲು ಗಡ್ಕರಿ ಸೂಚನೆ ನೀಡಿದ್ದಾರೆ. ಸದ್ಯ ಎರಡು ಏರ್‌ಬ್ಯಾಗ್ ಕಡ್ಡಾಯ ಮಾಡಲಾಗಿದೆ. ರಸ್ತೆ ಅಪಘಾತಗಳಲ್ಲಿ ಏರ್‌ಬ್ಯಾಗ್ ಇಲ್ಲದ ಕಾರಣ ಹಲವು ಜೀವಗಳು ಬಲಿಯಾಗಿದೆ. ಹೀಗಾಗಿ 6 ಏರ್‌ಬ್ಯಾಗ್ ಮೂಲಕ ಗರಿಷ್ಠ ಸುರಕ್ಷತೆ ಒದಗಿಸಲು ನಿತಿನ್ ಗಡ್ಕರಿ ಮುಂದಾಗಿದ್ದಾರೆ. ಆದರೆ ಈ ನಿರ್ಧಾರಕ್ಕೆ ಅಂತಾರಾಷ್ಟ್ರೀಯ ರಸ್ತೆ ಒಕ್ಕೂಟ (international road federation) ಹಲವು ಕಾರಣಗಳನ್ನು ನೀಡಿ ವಿರೋಧಿಸಿದೆ.
6 ಏರ್‌ಬ್ಯಾಗ್ ಕಡ್ಡಾಯ ಮಾಡುವುದರಿಂದ ಚೀನಾದಿಂದ (China) ಆಮದು ಪ್ರಮಾಣ ಹೆಚ್ಚಾಗಲಿದೆ. ಇಷ್ಟೇ ಅಲ್ಲ, ಈ ನಿರ್ಧಾರ ಶ್ರೀಮಂತರಿಗೆ (Rich) ನೆರವಾಗಲಿದೆ. ಕಾರಣ ಶ್ರೀಮಂತರು ಹೆಚ್ಚಾಗಿ ಟಾಪ್ ವೇರಿಯೆಂಟ್ ಕಾರು ಖರೀದಿಸುತ್ತಾರೆ. ಹೀಗಾಗಿ ಅವರಿಗೆ ಈ ನಿರ್ಧಾರದಿಂದ ಅನಕೂಲಗಳಾಗಲಿವೆ. ಆದರೆ ಬಡವರು (Poor) ಬೇಸ್ ಮಾಡೆಲ್ ಕಾರು ಖರೀದಿಸುತ್ತಾರೆ. 6 ಏರ್ ಬ್ಯಾಗ್ ಕಡ್ಡಾಯದಿಂದ ಕಾರಿನ ಬೆಲೆ ಹೆಚ್ಚಾಗಲಿದೆ. ದ್ವಿಚಕ್ರ ವಾಹನದಿಂದ ಕಾರು ಖರೀದಿಸಲು ಇಚ್ಚಿಸುವ ಗ್ರಾಹಕರು ಕಾರು ಕನಸಿನಿಂದ ದೂರ ಉಳಿಯಬೇಕಾಗುತ್ತದೆ. ಕಾರಿನ ಬೆಲೆ ಮತ್ತಷ್ಟು ದುಬಾರಿಯಾಗುವುದರಿಂದ ಖರೀದಿ ಸಾಧ್ಯವಾಗುವುದಿಲ್ಲ.
ಕೇಂದ್ರ ಸಚಿವ ನಿತಿನ್ ಗಡ್ಕರಿಗೇ ಕ್ರೆಡಿಟ್ ಕಾರ್ಡ್ ನೀಡಲು ನಿರಾಕರಿಸಿದ್ದ ICICI Bank
ಭಾರತದಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನಗಳನ್ನು ಬಳಸಲಾಗುತ್ತಿದೆ. ಇದ ಅವರ ಆಸಕ್ತಿಯ ಆಯ್ಕೆಯಲ್ಲ. ಇದರಲ್ಲಿ ಬಹುತೇಕರಿಗೆ ಕಾರು ಖರೀದಿ ಸಾಧ್ಯವಾಗದೆ ಕಾರಣ ಬೈಕ್, ಸ್ಕೂಟರ್ ಮೊರೆ ಹೋಗಿದ್ದಾರೆ. ಇನ್ನು ದ್ವಿಚಕ್ರ ವಾಹನದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚು. ಹೀಗಾಗಿ ಸುರಕ್ಷಿತವಾಗಿ ಪ್ರಯಾಣಿಸಲು ಹಲವರು ಬೇಸ್ ಮಾಡೆಲ್ ಕಾರು ಖರೀದಿ ಮಾಡುತ್ತಿದ್ದಾರೆ. ಆಧರೆ 6 ಏರ್‌ಬ್ಯಾಗ್ ನೀತಿಯಿಂದ ಕಾರು ಖರೀದಿ ದುಬಾರಿಯಾಗಲಿದೆ. ಇದರಿಂದ ಬಡವರು ಕಾರು ಕನಸು ನನಸು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಂತಾರಾಷ್ಟ್ರೀಯ ರಸ್ತೆ ಒಕ್ಕೂಟ ಗಡ್ಕರಿಗೆ ಪತ್ರ ಬರೆದಿದೆ.