ಇಂಧನ ಬೆಲೆ ಏರಿಕೆಗೆ ಬ್ರೇಕ್ ಹಾಕಲಿವೆ ದೇಶದ ಟಾಪ್ 10 ಬಜೆಟ್ ಕಾರುಗಳು; ಇಲ್ಲಿದೆ ಕಂಪ್ಲೀಟ್ ಲಿಸ್ಟ್!

Published : May 25, 2026, 09:16 PM IST
budget cars 2025

ಸಾರಾಂಶ

ಇಂಧನ ದರಗಳು ಗಗನಕ್ಕೇರಿದ್ದು, ಹೊಸ ಕಾರು ಖರೀದಿದಾರರು ಆತಂಕದಲ್ಲಿದ್ದಾರೆ. ಈ ಲೇಖನದಲ್ಲಿ, 4 ರಿಂದ 10 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಲಭ್ಯವಿರುವ, ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಭಾರತದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ನವದೆಹಲಿ (ಮೇ.25): ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದು, ದೇಶೀಯ ತೈಲ ಕಂಪನಿಗಳು ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಹಾಕಿವೆ. ಕಳೆದ 10 ದಿನಗಳಲ್ಲಿ ಬರೋಬ್ಬರಿ ನಾಲ್ಕುಬಾರಿ ಇಂಧನ ದರವನ್ನು ಪರಿಷ್ಕರಿಸಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ ಒಟ್ಟು 5 ರೂಪಾಯಿ ಹಾಗೂ ಸಿಎನ್‌ಜಿ (CNG) ದರದಲ್ಲಿ ಪ್ರತಿ ಕೆಜಿಗೆ 4 ರೂಪಾಯಿಗಳಷ್ಟು ಭಾರಿ ಏರಿಕೆ ಮಾಡಲಾಗಿದೆ.

ಈ ಹಠಾತ್ ದರ ಏರಿಕೆಯಿಂದಾಗಿ ಈಗಾಗಲೇ ಇಎಂಐ (EMI) ಮೂಲಕ ಕಾರು ಖರೀದಿಸಿದವರ ಬಜೆಟ್ ಸಂಪೂರ್ಣ ಏರುಪೇರಾಗಿದ್ದರೆ, ಹೊಸ ಕಾರು ಖರೀದಿಸಲು ಯೋಜಿಸುತ್ತಿರುವ ಮಧ್ಯಮ ವರ್ಗದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಮುಂಬರುವ ದಿನಗಳಲ್ಲಿ ತೈಲ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳೂ ದಟ್ಟವಾಗಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಗ್ರಾಹಕರ ಕೈಹಿಡಿಯುವುದು ಅತ್ಯುತ್ತಮ ಮೈಲೇಜ್ ನೀಡುವ ಕಾರುಗಳು ಮಾತ್ರ. 4 ಲಕ್ಷದಿಂದ 10 ಲಕ್ಷ ರೂಪಾಯಿ ಬಜೆಟ್‌ನಲ್ಲಿ ಲಭ್ಯವಿರುವ, ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಗಳಲ್ಲಿ ಧೂಳೆಬ್ಬಿಸುತ್ತಿರುವ ಭಾರತದ ಟಾಪ್ 10 ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳ ಸಂಪೂರ್ಣ ವಿವರ ಇಲ್ಲಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ದೇಶದ ಟಾಪ್ 10 ಬಜೆಟ್ ಕಾರುಗಳು

1. ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio)

  • ಆರಂಭಿಕ ಬೆಲೆ: 4.70 ಲಕ್ಷ ರೂ.
  • ಮೈಲೇಜ್: ಪೆಟ್ರೋಲ್ ಆವೃತ್ತಿಯಲ್ಲಿ ಪ್ರತಿ ಲೀಟರ್‌ಗೆ 26.68 ಕಿ.ಮೀ ಮತ್ತು ಸಿಎನ್‌ಜಿ ಆವೃತ್ತಿಯಲ್ಲಿ ಪ್ರತಿ ಕೆಜಿಗೆ 34.43 ಕಿ.ಮೀ.

2. ಮಾರುತಿ ಸುಜುಕಿ ಡಿಜೈರ್ (Maruti Suzuki Dzire)

  • ಆರಂಭಿಕ ಬೆಲೆ: 6.26 ಲಕ್ಷ ರೂ.
  • ಮೈಲೇಜ್: ಪೆಟ್ರೋಲ್‌ನಲ್ಲಿ ಪ್ರತಿ ಲೀಟರ್‌ಗೆ 25.71 ಕಿ.ಮೀ ಹಾಗೂ ಸಿಎನ್‌ಜಿಯಲ್ಲಿ ಪ್ರತಿ ಕೆಜಿಗೆ 33.73 ಕಿ.ಮೀ.

3. ಮಾರುತಿ ಸುಜುಕಿ ವ್ಯಾಗನ್ ಆರ್ (Maruti Suzuki WagonR)

  • ಆರಂಭಿಕ ಬೆಲೆ: 4.99 ಲಕ್ಷ ರೂ.
  • ಮೈಲೇಜ್: ಪೆಟ್ರೋಲ್‌ನಲ್ಲಿ ಪ್ರತಿ ಲೀಟರ್‌ಗೆ 25.19 ಕಿ.ಮೀ ಮತ್ತು ಸಿಎನ್‌ಜಿಯಲ್ಲಿ ಪ್ರತಿ ಕೆಜಿಗೆ 34.05 ಕಿ.ಮೀ.

4. ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso)

  • ಆರಂಭಿಕ ಬೆಲೆ: 3.50 ಲಕ್ಷ ರೂ.
  • ಮೈಲೇಜ್: ಪೆಟ್ರೋಲ್‌ನಲ್ಲಿ ಪ್ರತಿ ಲೀಟರ್‌ಗೆ 25.3 ಕಿ.ಮೀ ಹಾಗೂ ಸಿಎನ್‌ಜಿಯಲ್ಲಿ ಪ್ರತಿ ಕೆಜಿಗೆ 32.73 ಕಿ.ಮೀ.

5. ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10)

  • ಆರಂಭಿಕ ಬೆಲೆ: 3.70 ಲಕ್ಷ ರೂ.
  • ಮೈಲೇಜ್: ಪೆಟ್ರೋಲ್‌ನಲ್ಲಿ ಪ್ರತಿ ಲೀಟರ್‌ಗೆ 24.9 ಕಿ.ಮೀ ಮತ್ತು ಸಿಎನ್‌ಜಿಯಲ್ಲಿ ಪ್ರತಿ ಕೆಜಿಗೆ 33.85 ಕಿ.ಮೀ.

6. ಟಾಟಾ ಟಿಯಾಗೊ (Tata Tiago)

  • ಆರಂಭಿಕ ಬೆಲೆ: 4.60 ಲಕ್ಷ ರೂ.
  • ಮೈಲೇಜ್: ಪೆಟ್ರೋಲ್‌ನಲ್ಲಿ ಪ್ರತಿ ಲೀಟರ್‌ಗೆ 19.01 ಕಿ.ಮೀ ಹಾಗೂ ಸಿಎನ್‌ಜಿಯಲ್ಲಿ ಪ್ರತಿ ಕೆಜಿಗೆ 28.06 ಕಿ.ಮೀ.

7. ಹ್ಯುಂಡೈ ಗ್ರಾಂಡ್ ಐ10 ನಿಯೋಸ್ (Hyundai Grand i10 Nios):

  • ಆರಂಭಿಕ ಬೆಲೆ: 5.55 ಲಕ್ಷ ರೂ.
  • ಮೈಲೇಜ್: ಪೆಟ್ರೋಲ್‌ನಲ್ಲಿ ಪ್ರತಿ ಲೀಟರ್‌ಗೆ 18 ಕಿ.ಮೀ ಮತ್ತು ಸಿಎನ್‌ಜಿಯಲ್ಲಿ ಪ್ರತಿ ಕೆಜಿಗೆ 27 ಕಿ.ಮೀ.

8. ಟಾಟಾ ಟಿಗೋರ್ (Tata Tigor):

  • ಆರಂಭಿಕ ಬೆಲೆ: 5.55 ಲಕ್ಷ ರೂ.
  • ಮೈಲೇಜ್: ಪೆಟ್ರೋಲ್‌ನಲ್ಲಿ ಪ್ರತಿ ಲೀಟರ್‌ಗೆ 19.6 ಕಿ.ಮೀ ಹಾಗೂ ಸಿಎನ್‌ಜಿಯಲ್ಲಿ ಪ್ರತಿ ಕೆಜಿಗೆ 28.06 ಕಿ.ಮೀ.

9. ರೆನಾಲ್ಟ್ ಕ್ವಿಡ್ (Renault Kwid):

  • ಆರಂಭಿಕ ಬೆಲೆ: 4.30 ಲಕ್ಷ ರೂ.
  • ಮೈಲೇಜ್: ಪೆಟ್ರೋಲ್ ಆವೃತ್ತಿಯಲ್ಲಿ ಪ್ರತಿ ಲೀಟರ್‌ಗೆ 22.3 ಕಿ.ಮೀ (ಈ ಮಾಡೆಲ್‌ನಲ್ಲಿ ಸಿಎನ್‌ಜಿ ಆಯ್ಕೆ ಇರುವುದಿಲ್ಲ).

10. ಸಿಟ್ರನ್ ಸಿ3 (Citroen C3)

  • ಆರಂಭಿಕ ಬೆಲೆ: 4.99 ಲಕ್ಷ ರೂ.
  • ಮೈಲೇಜ್: ಪೆಟ್ರೋಲ್‌ನಲ್ಲಿ ಪ್ರತಿ ಲೀಟರ್‌ಗೆ 19.3 ಕಿ.ಮೀ ಹಾಗೂ ಸಿಎನ್‌ಜಿಯಲ್ಲಿ ಪ್ರತಿ ಕೆಜಿಗೆ 28.1 ಕಿ.ಮೀ.

ಜಾಗತಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಸಾರ್ವಜನಿಕ ವಲಯದ ತೈಲ ಕಂಪನಿಗಳು ಮುಂಬರುವ ದಿನಗಳಲ್ಲಿ ಇಂಧನ ದರವನ್ನು ಮತ್ತಷ್ಟು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ಇಂತಹ ಇಂಧನ ಬಿಕ್ಕಟ್ಟಿನ ಸಮಯದಲ್ಲಿ ಹೊಸ ಕಾರು ಖರೀದಿಸುವ ಮಧ್ಯಮ ವರ್ಗದ ಗ್ರಾಹಕರು ಕೇವಲ ಕಾರಿನ ಲುಕ್ ಅಥವಾ ವೈಶಿಷ್ಟ್ಯಗಳಿಗೆ ಮರುಳಾಗದೆ, ಮೈಲೇಜ್ ಹಾಗೂ ಸಿಎನ್‌ಜಿ ಇಂಧನ ಆಯ್ಕೆಗಳಿರುವ ಇಂತಹ ಬಜೆಟ್ ಕಾರುಗಳನ್ನು ಆಯ್ದುಕೊಂಡರೆ ಮಾತ್ರ ತಿಂಗಳ ಇಂಧನ ವೆಚ್ಚವನ್ನು ನಿಯಂತ್ರಣದಲ್ಲಿಟ್ಟುಕೊಂಡು ಭಾರಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

 

PREV
Read more Articles on
click me!

Recommended Stories

ಪೆಟ್ರೋಲ್ ಬೆಲೆ ಏರಿಕೆಯಾದರೂ ಚಿಂತೆ ಇಲ್ಲ, ಜೂ.5ಕ್ಕೆ ಮಾರುತಿ ಸುಜುಕಿ ಫ್ಲೆಕ್ಸ್ ಫ್ಯೂಯೆಲ್ ಕಾರು ಲಾಂಚ್
27 KM ಮೈಲೇಜ್ ಕೊಡುವ ಹೊಸ ಫೇಸ್‌ಲಿಫ್ಟ್‌ ಕಾರು ಭಾರತದಲ್ಲಿ ಬಿಡುಗಡೆ: ಕೇವಲ ₹11.99 ಲಕ್ಷಕ್ಕೆ ಲಕ್ಷುರಿ ಫೀಚರ್ಸ್!