
ಮುಂಬೈ (ಜು.15) ಭಾರಿ ನಿರೀಕ್ಷೆ ಹುಟ್ಟು ಹಾಕಿದ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಇದೇ ಮೊದಲ ಬಾರಿಗೆ ಬಿಡುಗಡೆಯಾಗಿದೆ. ಮುಂಬೈನಲ್ಲಿ ಮೊದಲ ಶೋ ರೂಂ ಉದ್ಘಾಟನೆಗೊಂಡಿದೆ. ಇದೀಗ ಭಾರತದಲ್ಲಿ ಟೆಸ್ಲಾ ವೈ ಮಾಡೆಲ್ ಕಾರು ಬಿಡುಗಡೆಯಾಗಿದೆ. ಭಾರತದಲ್ಲಿ ಟೆಸ್ಲಾ ಕಾರಿನ ಬೆಲೆ 59.89 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಇನ್ನು ಮುಂಬೈ, ದೆಹಲಿ ಸೇರಿದಂತೆ ಪ್ರಮು ನಗರಗಳಲ್ಲಿ ಟೆಸ್ಲಾ ಚಾರ್ಜಿಂಗ್ ಸ್ಟೇಶನ್ ಕೂಡ ಆರಂಭಗೊಳ್ಳುತ್ತಿದೆ.
ಟೆಸ್ಲಾ ವೈ ಮಾಡೆಲ್ ಬೆಲೆ ಪಟ್ಟಿ ಬಹಿರಂಗ
ಟೆಸ್ಲಾ ವೈ ಮಾಡೆಲ್ RWD; 59.89 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಟೆಸ್ಲಾ ವೈ ಮಾಡೆಲ್ ಲಾಂಗ್ ರೇಂಜ್ ; 67.89 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಭಾರತದಲ್ಲಿ ಬಿಡುಗಡೆಯಾಗಿರುವ ವೈ ಮಾಡೆಲ್ RWD ಕಾರಿನ ಆನ್ ರೋಡ್ ಬೆಲೆ 61.07 ಲಕ್ಷ ರೂಪಾಯಿ ಹಾಗೂ ಲಾಂಗ್ ರೇಂಜ್ ಮಾಡೆಲ್ ಕಾರಿನ ಆನ್ ರೋಡ್ ಬೆಲೆ 69.15 ಲಕ್ಷ ರೂಪಾಯಿ.
ಇದರ ಜೊತೆಗೆ ಹೆಚ್ಚುವರಿಯಾಗಿ ಕೆಲ ಆಕ್ಸಸರಿ ಅವಕಾಶವಿದೆ. FSD (ಫುಲ್ ಸೆಲ್ಫ್ ಡ್ರೈವಿಂಗ್) ಫೀಚರ್ ಸೇರಿಸಲು ಹೆಚ್ಚುವರಿಯಾಗಿ 6 ಲಕ್ಷ ರೂಪಾಯಿ ಪಾವತಿಸಬೇಕು. ಬೇಸ್ ವೇರಿಯೆಂಟ್ ಕಾರ ಸರ್ವೀಸ್ ಹಾಗೂ ನಿರ್ವಹಣಾ ವೆಚ್ಚಾ 50,000 ರೂಪಾಯಿ. ಇದಕ್ಕೆ ಶೇಕಡಾ 18 ರಷ್ಟು ಜಿಎಸ್‌ಟಿ ಸೇರ್ಪಡೆಯಾಗುತ್ತದೆ.
622 ಕಿಲೋಮೀಟರ್ ಮೈಲೇಜ್
ಟೆಸ್ಲಾ ವೈ ಮಾಡೆಲ್ ಕಾರು 60 kWh ಹಾಗೂ 75 kWh ಬ್ಯಾಟರಿ ಪ್ಯಾಕ್ ಆಯ್ಕೆ ಲಭ್ಯವಿದೆ. ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 295 hp ಪವರ್ ಹೊಂದಿದೆ. 60 kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು 75 kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 622 ಕಿಲೋಮೀಟರ್ ಮೈಲೇಜ್ ನೀಡಲಿದೆ.
15.4 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, 8 ಇಂಚಿನ ರೇರ್ ಸ್ಕ್ರೀನ್, ಪವರ್ ಎಡ್ಜ್‌ಸ್ಟೇಬಲ್ ಫ್ರಂಟ್ ಸೀಟ್, ಡ್ಯುಯೆಲ್ ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 19 ಇಂಚಿನ ಕ್ರಾಸ್‌ಪ್ಲೋ ವ್ಹೀಲ್, ಫಿಕ್ಸೆಡ್ ಗ್ಲಾಸ್ ರೂಫ್ ಸೇರಿದಂತೆ ಹಲವು ಫೀಚರ್ಸ್ ಲಭ್ಯವಿದೆ.