ಭಾರತದಲ್ಲೀಗ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಗಳಿಗೆ ಸಮನಾಗಿರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚುತ್ತಿರುವ ತೈಲೋತ್ಪನ್ನಗಳ ಬೆಲೆ ಹಾಗೂ ಪರಿಸರ ಮಾಲಿನ್ಯವನ್ನು ತಡೆಯುವುದಕ್ಕಾಗಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (Electric Vehical)ಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರಕಾರ (Central Govt) ಹಾಗೂ ರಾಜ್ಯ ಸರಕಾರ (State Govt)ಗಳು ಸಾಕಷ್ಟು ಉತ್ತೇಜನವನ್ನು ನೀಡುತ್ತಿವೆ. ಇದರ ಪರಿಣಾಮ ಕಳೆದ ಎರಡ್ಮೂರು ವರ್ಷದಲ್ಲಿ ಸಾಕಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೆಚ್ಚಳವನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹೆದ್ದಾರಿ ರಸ್ತೆ ಸಾರಿಸೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು, ಮುಂದಿನ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಯು, ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಬೆಲೆಗೆ ಸಮನಾಗಿರುತ್ತದು ಎಂದು ಹೇಳಿದ್ದಾರೆ. ಸರಕಾರದ ಭಾರೀ ಉತ್ತೇಜನದ ಹೊರತಾಗಿಯೂ ದುಬಾರಿ ಬೆಲೆಯ ಕಾರಣದಿಂದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಲ್ಲಿ ಜನರು ಖರೀದಿಸುತ್ತಿಲ್ಲ ಎಂಬ ಆರೋಪವಿದೆ. ಆ ಹಿನ್ನನೆಲೆಯಲ್ಲಿ ಗಡ್ಕರಿ ಅವರು ಮಾತುಗಳು ಮಹತ್ವ ಪಡೆದುಕೊಳ್ಳುತ್ತವೆ. ಭಾರತವು ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯಿಂದ ಸ್ವಲ್ಪವೇ ದೂರವಿದೆ ಮತ್ತು ಮುಂದಿ ಎರಡು ವರ್ಷಗಳಲ್ಲಿ ಈ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಪೆಟ್ರೋಲ್, ಡಿಸೇಲ್ ವಾಹನಗಳ ಮಟ್ಟಕ್ಕೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.
ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಅವರು, ಎಲೆಕ್ಟ್ರಿಕ್ ವಾಹನಗಳ ವೆಚ್ಚ ಅಧಿಕವಾಗಿದೆ ಯಾಕೆಂದರೆ, ಅವುಗಳ ಸಂಖ್ಯೆ ಕಡಿಮೆ ಇದೆ. 250ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹೆಚ್ಚು ಅಗ್ಗದಲ್ಲಿ ಇವಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಬಗ್ಗೆ ಕೆಲಸ ಮಾಡುತ್ತಿವೆ. ಹಾಗಾಗಿ, ಭಾರತವು ಇವಿ ಕ್ರಾಂತಿಯನ್ನು ಎದುರು ನೋಡುತ್ತಿದೆ ಎಂದು ಹೇಳಿದರು.
ಎಲೆಕ್ಟ್ರಿಕ್ ವಾಹನಗಳಿಗೆ ಭಾರತವು ಶೀಘ್ರವೇ ಬೃಹತ್ ಇವಿ ಮಾರುಕಟ್ಟೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಗಡ್ಕರಿ ಅವರು, ಮುಂದಿನ ಐದು ವರ್ಷಗಳಲ್ಲಿ 600 ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯವೂ ಸೇರಿದಂತೆ ವೇಸೈಡ್ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
Apple Electric Car: 2025ಕ್ಕೆ ಸ್ಟೀರಿಂಗ್ ಇಲ್ಲದ, ಸ್ವಯಂಚಾಲಿತ ಕಾರ್?!
ಸದ್ಯದ ಮಟ್ಟಿಗೆ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ (EV Two Wheelers) ಮಾರುಕಟ್ಟೆಯು ಬೂಮ್ ಪಡೆದುಕೊಳ್ಳುತ್ತಿದೆ. ಪೆಟ್ರೋಲ್ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ. ಹಾಗಾಗಿ, ಒಲಾ ಎಲೆಕ್ಟ್ರಿಕ್ (Ola Electric), ಎಥೇರ್ ಎನರ್ಜಿ ( Ather Energy ) ಸೇರಿದಂತೆ ಸಾಕಷ್ಟು ಪ್ರಮಾಣದಲ್ಲಿ ಸ್ಟಾರ್ಟ್‌ಅಪ್‌ಗಳು ಹೆಚ್ಚಾಗಿರುವುದನ್ನು ಗಮನಿಸಬಹುದು. ಆದರೆ, ಇದೇ ಪ್ರಮಾಣದಲ್ಲಿ ನಾಲ್ಕು ಚಕ್ರ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೇಳುವಂತಿಲ್ಲ. ಕೆಲವೇ ಕಂಪನಿಗಳು ನಾಲ್ಕು ಚಕ್ರ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿವೆ.
ನಿಮಗೆ ದುಬಾರಿ, ಮಾಲಿನ್ಯಕಾರಕ ಸಾಂಪ್ರದಾಯಿಕ ಇಂಧನ ಚಾಲನೆಯ ವಾಹನ ಮತ್ತು ಕಡಿಮೆ ನಿರ್ವಹಣೆ, ಶೂನ್ಯ-ಹೊರಸೂಸುವಿಕೆ ಎಲೆಕ್ಟ್ರಿಕ್ ವಾಹನಗಳ ನಡುವೆ ಆಯ್ಕೆಯನ್ನು ನೀಡಿದರೆ, ನೀವು ಯಾವುದನ್ನು ಆರಿಸಿಕೊಳ್ಳುತ್ತೀರಿ? ಎಂದು ಪ್ರಶ್ನಿಸಿದ ಗಡ್ಕರಿ (Nitin Gakari) ಅವರು, ಈ ಹಿನ್ನೆಲೆಯಲ್ಲೆ ನಾನು ಎಲೆಕ್ಟ್ರಿಕ್ ವಾಹನಗಳು ಮತ್ತು ಎಥೆನಾಲ್, ಜೈವಿಕ-ಎಲ್‌ಎನ್‌ಜಿ, ಹಸಿರು ಹೈಡ್ರೋಜನ್‌ನಂತಹ ಪರ್ಯಾಯ ಇಂಧನಗಳ ಆಧರಿತ ವಾಹನಗಳ ಬಳಕೆಯನ್ನು ನಾವು ಉತ್ತೇಜಿಸುತ್ತಿದ್ದೇವೆ ಎಂದು ಹೇಳಿದರು.
ಈಗಾಗಲೇ ಭಾರತೀಯ ವಾಹನ ಮಾರುಕಟ್ಟೆಯೂ (Indian Automobile market) ಬದಲಾವಣೆಯ ತಿರುವಿನಲ್ಲಿ ಬಂದು ನಿಂತಿದೆ. ಬಹಳಷ್ಟು ಜನರು ವಾಹನಗಳ ಖರೀದಿ ಮಾಡುವ ಮುನ್ನ ಈಗ ಎಲೆಕ್ಟ್ರಿಕ್ ವಾಹನ (Electric Vehicles)ಗಳ ಬಗ್ಗೆ ಯೋಚಿಸುವಂಥ ಖಂಡಿತವಾಗಿಯೂ ನಿರ್ಮಾಣವಾಗಿದೆ. ಆದರೆ, ಇನ್ನೂ ಕ್ರಮಿಸಬೇಕಾದ ದಾರಿ ಬಹಳ ದೂರವಿದೆ. ಯಾಕೆಂದರೆ, ಇವಿಗಳಿಗೆ ಬೇಕಾಗಿರುವ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಭಾರತವು ಇನ್ನೂ ಹಿಂದುಳಿದಿದೆ. ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಗುರಿ ಇದ್ರೆ, ಸರ್ಕಾರವು ಮೂದಲಿಗೆ ಮೂಲಸೌಕರ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ.
New Car Launch: ಅಪ್‌ಡೇಟ್‌ಗಳೊಂದಿಗೆ ರಸ್ತೆಗಿಳಿಯಲಿದೆ ಹೊಸ ಮಾರುತಿ ವಿಟಾರಾ ಬ್ರೆಜಾ