ಭಾರತೀಯ ಮಾರುಕಟ್ಟೆಯಲ್ಲಿ ಕ್ವಿಡ್, ಟ್ರೈಬರ್, ಡಸ್ಟರ್ ಮತ್ತು ಕೈಗರ್ ಕಾರುಗಳ ಮೂಲಕ ತನ್ನದೇ ಆದ ಪ್ರಭಾವಳಿಯನ್ನು ಹೊಂದಿರುವ ರೆನೋ ಇಂಡಿಯಾ ಇದೀಗ ಮಾರ್ಚ್ ತಿಂಗಳಲ್ಲಿ ಬಿಎಸ್6 ಕಾರುಗಳ ಖರೀದಿ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಈ ಆಫರ್‌ಗಳು ಅತ್ಯುತ್ತಮವಾಗಿದ್ದು, ರೆನೋ ಕಾರುಗಳ ಖರೀದಿಗೆ ಪ್ಲ್ಯಾನ್ ಮಾಡಿಕೊಂಡಿದ್ದರೆ ಖರೀದಿಸಲು ಇದು ಅತ್ಯುತ್ತಮ ಸಮಯ ಎಂದು ಹೇಳಬಹುದು.
ಬಜೆಟ್ ಸಬ್‌ಕಾಂಪಾಕ್ಟ್ ಕಾರು ಕೈಗರ್ ಮೂಲಕ ಸಂಚಲನ ಸೃಷ್ಟಿಸಿರುವ ರೆನೋ ಕಂಪನಿ ಇದೀಗ ಆಫರ್ ಘೋಷಿಸಿದ್ದು, ರೆನೋ ಕಂಪನಿಯ ಕಾರುಗಳ ಖರೀದಿ ಮೇಲೆ ಗ್ರಾಹಕರು ಗರಿಷ್ಠ 75 ಸಾವಿರ ರೂಪಾಯಿವರೆಗೂ ಲಾಭ ಪಡೆಯಬಹುದಾಗಿದೆ
ರೆನೋ ಇಂಡಿಯಾ ತನ್ನ ಕ್ವಿಡ್ ಹ್ಯಾಚ್‌ಬ್ಯಾಕ್, ಟ್ರೈಬರ್ ಸಬ್ ಕಾಂಪಾಕ್ಟ್ ಎಂಪಿವಿ ಮತ್ತು ಡಸ್ಟರ್ ಕಾಂಪಾಕ್ಟ್ ಎಸ್‌ಯುವಿ ಬಿಎಸ್6 ಕಾರು ಖರೀದಿಗಳ ಮೇಲೆ ಆಫರ್ ಘೋಷಿಸಿದ್ದು, ಈ ಆಫರ್‌ಗಳು ಮಾರ್ಚ್ 31ರವರೆಗೆ ಮಾತ್ರ ಇರಲಿವೆ. ಈ ಕಾರುಗಳ ಖರೀದಿಗೆ ಯೋಜನೆ ರೂಪಿಸುವವರು ಇದೀಗ ಖರೀದಿಗೆ ಸಕಾಲವಾಗಿದೆ ಮತ್ತು ಗರಿಷ್ಠ ಡಿಸ್ಕೌಂಡ್ ಪಡೆದುಕೊಳ್ಳಬಹುದು.
undefined
ಓಲಾದಿಂದ ಜಗತ್ತಿನ ಅತಿದೊಡ್ಡ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಫ್ಯಾಕ್ಟರಿ!
ವಿಶೇಷ ಆಫರ್‌ವೊಂದನ್ನು ರೆನೋ ಇಂಡಿಯಾ ನೀಡುತ್ತಿದೆ. ಗ್ರಾಮೀಣ ಭಾಗದ ಗ್ರಾಹಕರಿಗೆ ಮತ್ತು ಕಾರ್ಪೊರೇಟ್‌ಗೆ ವಿಶೇಷ ಡಿಸ್ಕೌಂಟ್ ದೊರೆಯಲಿದೆ. ಕಂಪನಿಯು ಈ ಬಂಪರ್ ಆಫರ್‌ಗಳನ್ನು ಮಾರ್ಚ್ 31ರವರೆಗ ಮಾತ್ರವೇ ಒದಗಿಸುತ್ತಿದ್ದು, ದೇಶಾದ್ಯಂತ ಇರುವ ಡೀಲರ್‌ಗಳ ಮಧ್ಯೆ ಈ ಆಫರ್‌ಗಳಲ್ಲಿ ವ್ಯತ್ಯಾಸ ಕೂಡ ಇರಬಹುದು. ಕ್ವಿಡ್ ಮತ್ತು ಟ್ರೈಬರ್ ಖರೀದಿ ಮೇಲೆ ಕಂಪನಿಯ ವಿಶೇಷ ಹಣಕಾಸು ಸೇವೆಯನ್ನು ಕೂಡ ಒದಗಿಸುತ್ತಿದೆ. ಈ ಎರಡೂ ಕಾರುಗಳ ಖರೀದಿಗೆ ಶೇ.5.99 ಬಡ್ಡಿ ದರದ ಸಾಲದ ನೆರವು ನೀಡುತ್ತಿದೆ.
ಜನಪ್ರಿಯ ಡಸ್ಟರ್ ಮಾಡೆಲ್‌ನ ಎರಡೂ ವರ್ಷನ್ ಮೇಲೂ ವಿಶೇಷ ಲಾಭಗಳನ್ನು ಕಂಪನಿ ನೀಡುತ್ತಿದೆ. 1.3 ಲೀ. ಟರ್ಬೋ ವೆರಿಯೆಂಟ್ ಖರೀದಿ ಮೇಲೆ ಒಟ್ಟು 75 ಸಾವಿರ ರೂಪಾಯಿವರೆಗೆ ಡಿಸ್ಕೌಂಟ್ ಸಿಗಲಿದೆ. ಇದರಲ್ಲಿ 30 ಸಾವಿರ ರೂಪಾಯಿವರೆಗೆ ಕ್ಯಾಶ್ ಬೆನೆಫಿಟ್, 30 ಸಾವಿರ ರೂಪಾಯಿವರೆಗೆ ಎಕ್ಸ್‌ಚೇಂಜ್ ಬೆನೆಫಿಟ್ ಸಿಗಲಿದೆ. ಜೊತೆಗೆ 15 ಸಾವಿರ ರೂಪಾಯಿವರೆಗೆ ಲಾಯಲ್ಟಿ ಲಾಭವೂ ಸಿಗಬಹುದು. ಡಸ್ಟರ್ ಆರ್‌ಎಕ್ಸ್ಎಸ್ ಮತ್ತು ಆರ್‌ಎಕ್ಸ್‌ಜೆಡ್ ವೆರಿಯೆಂಟ್ಸ್ ಮೇಲೆ ಮಾತ್ರವೇ ಎಕ್ಸ್‌ಚೇಂಜ್ ಆಫರ್‌ಗಳನ್ನು ಕಂಪನಿ ನೀಡುತ್ತಿದೆ. ಹಾಗೆಯೇ ಕಾರ್ಪೋರೆಟ್ ಡಿಸ್ಕೌಂಟ್ 30 ಸಾವಿರ ರೂಪಾಯಿವರೆಗೆ ನೀಡಲಿದೆ. ಆದರೆ, ಈ ಕಾರ್ಪೋರೇಟ್ ಕಂಪನಿಗಳು ಮತ್ತು ಪಿಎಸ್‌ಯುಗಳು ಕಂಪನಿ ಸಿದ್ಧಪಡಿಸಿರುವ ಲಿಸ್ಟ್‌ನಲ್ಲಿರಬೇಕು.
ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್, ಮಾರ್ಚ್ ಅಂತ್ಯದವರೆಗೆ ಮಾತ್ರ!
ಇನ್ನು 1.5 ಲೀಟರ್ ಪೆಟ್ರೋಲ್ ವರ್ಷನ್ ಡಸ್ಟರ್ ಖರೀದಿ ಮೇಲೂ 45 ಸಾವಿರ ರೂಪಾಯಿವರೆಗೂ ಡಿಸ್ಕೌಂಟ್ ಸಿಗಲಿದೆ. ಇದರಲ್ಲಿ ಎಕ್ಸ್‌ಚೇಂಜ್ ಬೆನೆಫಿಟ್ಸ್ 30 ಸಾವಿರ ರೂಪಾಯಿ ಹಾಗೂ ಲಾಯಲ್ಟಿ ಬೆನೆಫಿಟ್ಸ್ 15 ಸಾವಿರ ರೂಪಾಯಿವರೆಗೆ ಸಿಗಲಿದೆ.
ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ರೆನೋ ಕ್ವಿಡ್ ಖರೀದಿ ಮೇಲೆ ಒಟ್ಟು 50 ಸಾವಿರ ರೂಪಾಯಿವರೆಗೂ ಲಾಭ ಸಿಗಲಿದೆ. ಈ ಪೈಕಿ ಎಕ್ಸ್‌ಚೇಂಜ್ ಬೋನಸ್ 20000 ರೂ ಹಾಗೂ ಕ್ಯಾಶ್ ಡಿಸ್ಕೌಂಟ್ 20 ಸಾವಿರ ರೂಪಾಯಿ ಇರಲಿದೆ. ಇನ್ನು 10 ಸಾವಿರ ರೂಪಾಯಿ ಲಾಯಲ್ಟಿ ಬೋನಸ್ ಕೂಡ ಸಿಗಲಿದೆ. ಇಷ್ಟು ಮಾತ್ರವಲ್ಲದೇ ಪಿಎಸ್‌ಯು ಮತ್ತು ಸ್ವೀಕಾರಗೊಂಡ ಕಾರ್ಪೋರೇಟ್ ಡಿಸ್ಕೌಂಡ್ 10 ಸಾವಿರ ರೂಪಾಯಿ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ ಹೆಚ್ಚುವರಿಯಾಗಿ 5000 ರೂಪಾಯಿ ರಿಯಾಯ್ತಿ ಸಿಗಲಿದೆ. ಅಂದರೆ, ಈ ಆಫರ್ ರೈತರು, ಸರಪಂಚ್ ಮತ್ತು ಗ್ರಾಪಂ ಸದಸ್ಯರಿಗೆ ಮಾತ್ರವೇ ಅನ್ವಯವಾಗಲಿದೆ.
ಭಾರತದಲ್ಲಿ ಉತ್ಪಾದಿಸಿದ 20 ಲಕ್ಷ ಕಾರನ್ನು ವಿದೇಶಕ್ಕೆ ರಫ್ತು ಮಾಡಿದ ಮಾರುತಿ!
ಅದೇ ರೀತಿ ಟ್ರೈಬರ್ ಎಂಪಿವಿ ಖರೀದಿ ಮೇಲೆಯೂ ಗ್ರಾಹಕರು 60 ಸಾವಿರ ರೂಪಾಯಿವರೆಗೂ ಲಾಭಪಡೆದುಕೊಳ್ಳಬಹುದು. ಈ 60 ಸಾವಿರ ರೂಪಾಯಿ ಲಾಭದಲ್ಲಿ 30 ಸಾವಿರ ರೂಪಾಯಿ ನಗದು ರಿಯಾಯ್ತಿ, ಎಕ್ಸ್‌ಚೇಂಜ್ ಬೆನೆಫಿಟ್ಸ್ 20 ಸಾವಿರ ರೂಪಾಯಿ ಇದ್ದರೆ, 10 ಸಾವಿರ ರೂಪಾಯಿವರೆಗೆ ಲಾಯಲ್ಟಿ ಬೋನಸ್ ಸಿಗಲಿದೆ. ಟ್ರೈಬರ್ ವೆರಿಯೆಂಟ್ಸ್ ಪ್ರಕಾರ ಬೆನಿಫಿಟ್ಸ್‌ಗಳಲ್ಲಿ ವ್ಯತ್ಯಾಸವಾಗಬಹುದು. ಕಾರ್ಪೊರೇಟ್ ಬೋನಸ್ ಕೂಡ 10 ಸಾವಿರ ರೂಪಾಯಿವರೆಗೆ ಸಿಗಬಹುದು ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ 5 ಸಾವಿರ ರೂಪಾಯಿವರೆಗೂ ಲಾಭ ದೊರೆಯಬಹುದು.
ರೆನೋ ಇಂಡಿಯಾ ನೀಡುತ್ತಿರುವ ಆಫರ್‌ಗಳನ್ನ ಗಮನಿಸಿದರೆ ಕ್ವಿಡ್, ಟ್ರೈಬರ್ ಹಾಗೂ ಡಸ್ಟರ್ ಕಾರುಗಳನ್ನು ಖರೀದಿಸಲು ಇದು ಬೆಸ್ಟ್ ಟೈಮ್ ಎಂದು ಹೇಳಬಹುದು. ಯಾಕೆಂದರೆ, ಅತ್ಯುತ್ತಮ ಲಾಭವನ್ನು ನೀವು ಪಡೆಯಲಿದ್ದೀರಿ.