Electric 2 Wheeler Sales ಕೇಂದ್ರದ ಸಬ್ಸಿಡಿಯಿಂದ ಹೊಸ ದಾಖಲೆ ನಿರ್ಮಾಣ, ವಾರಕ್ಕೆ 5,000 ಟು ವ್ಹೀಲರ್ ಸೇಲ್!

By Suvarna NewsFirst Published Dec 25, 2021, 5:47 PM IST
Highlights
  • ಎಲೆಕ್ಟ್ರಿಕ್  ದ್ವಿಚಕ್ರ ವಾಹನ ಮಾರಾಟದಲ್ಲಿ ಭಾರತ ದಾಖಲೆ
  • ಪ್ರತಿ ವಾರ 5,000ಕ್ಕೂ ಹೆಚ್ಚು ಎಲೆಕ್ಟ್ರಿಕ್ 2 ವ್ಹೀಲರ್ ಮಾರಾಟ
  • ಅತೀ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ಉತ್ಪಾದನೆಯಾಗುತ್ತಿರುವ ದೇಶ ಭಾರತ

ನವದೆಹಲಿ(ಡಿ.25): ಭಾರತೀಯರು ನಿಧಾನವಾಗಿ ಎಲೆಕ್ಟ್ರಿಕ್ ವಾಹನದತ್ತ(Electric Vehicle) ವಾಲುತ್ತಿದ್ದಾರೆ. ಕೇಂದ್ರದ ಸಬ್ಸಿಡಿ, ಕೆಲ ರಾಜ್ಯಗಳು ಘೋಷಿಸಿದ ನೆರವಿನಿಂದ ಇದೀಗ ಎಲೆಕ್ಟ್ರಿಕ್ ವಾಹನ ಮಾರಟ(Electric Vehicle Sales) ಗಣನೀಯವಾಗಿ ಏರಿಕೆ ಕಂಡಿದೆ. ಪೆಟ್ರೋಲ್, ಡೀಸೆಲ್(Petrol Diesel price) ಬೆಲೆ ಏರಿಕೆ, ಇಂಧನ ವಾಹನ ಬೆಲೆ ಏರಿಕೆ, ನಿರ್ವಹಣೆಗಳಿಂದ ಜನರು ಹೈರಾಣಾಗಿದ್ದಾರೆ. ಹೀಗಾಗಿ ಎಲೆಕ್ಟ್ರಿಕ್ ವಾಹನದತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ(Electric 2 Wheeler Sales) ಭಾರತ ದಾಖಲೆ ಬರೆದಿದೆ. ಇದೀಗ ಪ್ರತಿ ವಾರ 5,000 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟವಾಗುತ್ತಿದೆ.

ಕೇಂದ್ರ FAME ಸ್ಕೀಮ್ ಜಾರಿಗೊಳಿಸುವ ಮೊದಲು ದೇಶದಲ್ಲಿ ಪ್ರತಿ ವಾರ ಗರಿಷ್ಠ 700 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವಾಗುತ್ತಿತ್ತು. ಆದರೆ FAME ಯೋಜನೆ ಜಾರಿಗೊಳಿಸಿದ ಬಳಿಕ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಏರಿಕೆ ಕಂಡಿದೆ. ಇದೀಗ ವಾರಕ್ಕೆ 5,000 ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಮಾರಾಟವಾಗುತ್ತಿದೆ.  ಸಬ್ಸಡಿ(subsidy) ಮೂಲಕ ವಾಹನಗಳ ಬೆಲೆ ಕಡಿತಗೊಂಡಿದೆ. ಇದರ ಜೊತೆಗೆ ದೆಹಲಿ ಸೇರಿದಂತೆ ಕೆಲ ರಾಜ್ಯಗಲ್ಲಿ ಸ್ಥಳೀಯ ಸರ್ಕಾರಗಳು ಕೆಲ ರಿಯಾಯಿತಿ ಘೋಷಿಸಿದೆ. ಇದರಿಂದ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಗಣನೀಯ ಹೆಚ್ಚಳವಾಗಿದೆ.

Tata electric vehicles ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಟಾಟಾ ಮೋಟಾರ್ಸ್ ತಯಾರಿ, 700 ಕೋಟಿ ರೂ ಹೂಡಿಕೆ!

FAME ಸ್ಕೀಮ್‌ಗಾಗಿ ಕೇಂದ್ರ ಸರ್ಕಾರ 10,000 ಕೋಟಿ ರೂಪಾಯಿ ತೆಗೆದಿಟ್ಟಿದೆ. ಈ ಹಣವನ್ನು ಎಲೆಕ್ಟ್ರಕ್ ವಾಹನ ಖರೀದಿದಾರರಿಗೆ ಸಬ್ಸಿಡಿ, ದೇಶದಲ್ಲಿನ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಪ್ರೋತ್ಸಾಹ ಹಾಗೂ ನೆರವು, ಚಾರ್ಜಿಂಗ್ ಸ್ಟೇಶನ್(Charging) ಅಳವಡಿಸುವಿಕೆ ಸೇರಿದಂತೆ ಹಲವು ಕಾರಣಗಳಿಗೆ ಬಳಕೆ ಮಾಡಲಾಗುತ್ತಿದೆ. 

2021ರಲ್ಲಿ ಮಾರಾಟವಾದ 1.4 ಲಕ್ಷ ಎಲೆಕ್ಟ್ರಿಕ್ ವಾಹನಗಳ ಪೈಕಿ 1.19 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, 20,420 ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಹಾಗೂ 580 ಎಲೆಕ್ಟಿಕ್ ಕಾರುಗಳಿಗೆ ಕೇಂದ್ರದಿಂದ ಸಬ್ಸಿಡಿ ನೀಡಲಾಗಿದೆ.  FAME II ಅಡಿಯಲ್ಲಿ 2021ರ ಇದುವಗೆ 500 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಸಬ್ಸಿಡಿ ರೂಪದಲ್ಲಿ ನೀಡಲಾಗಿದೆ. ಇದುವರೆಗೆ ಭಾರತದಲ್ಲಿ 1.85 ಲಕ್ಷ ಎಲೆಕ್ಟ್ರಿಕ್ ವಾಹನಗಳಿಗೆ ಕೇಂದ್ರದಿಂದ ಸಬ್ಸಡಿ ನೆರವು ನೀಡಲಾಗಿದೆ.

Electric Vehicle ಕಾರು ಸಾಲದಿಂದ ಆದಾಯ ತೆರಿಗೆ ಉಳಿಸಲು ಸಾಧ್ಯ, ಇಲ್ಲಿದೆ ಟಿಪ್ಸ್!

ಕೇಂದ್ರ ಸರ್ಕಾರ 1,000 ಕೋಟ ರೂಪಾಯಿಗಳನ್ನು ದೇಶದಲ್ಲಿ ಚಾರ್ಜಿಂಗ್ ಸ್ಟೇಶನ್ ಅಳವಡಿಸಲು ಮೀಸಲಿಟ್ಟಿದೆ. ಇನ್ನು FAME II ಯೋಜನೆಯಲ್ಲಿ ಮತ್ತೊಂದು ಅಂಶವನ್ನು ಸೇರಿಸಲಾಗಿದೆ. ಭಾರತದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಅತೀ ಕಡಿಮೆ ಬೆಲೆಯಲ್ಲಿ ವಾಹನ ಲಭ್ಯವಾಗುವಂತೆ ಮಾಡಿದರೆ ವಿಶೇಷ ಸೌಲಭ್ಯವನ್ನು ಸರ್ಕಾರದಿಂದ ಪಡೆಯಲು ಅರ್ಹರಾಗಿದ್ದಾರೆ. FAME II ಯೋಜನೆ ಎಪ್ರಿಲ್ 1, 2019 ರಿಂದ ಆರಂಭಗೊಂಡಿದ್ದು, ಮಾರ್ಚ್ 31, 2022ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಮತ್ತೆ ವಿಸ್ತರಿಸಲು ಮುಂದಾಗಿದೆ. 2024ರ ವರೆಗೆ ಈ ಯೋಜನೆ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

Electric Scooter Charging ಕೇವಲ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ ಹೀರೋ ಸ್ಕೂಟರ್ EV!

ಎಲೆಕ್ಟ್ರಿಕ್ ವಾಹನ ಮಾರಾಟ ಹಾಗೂ ಉತ್ಪಾದನೆ ವಿಚಾರದಲ್ಲಿ 2021ರ ಕ್ಯಾಲೆಂಡರ್ ಇಯರ್ ಹೆಚ್ಚು ಸಂತಸ ನೀಡಿದ ವರ್ಷವಾಗಿದೆ. ಕಾರಣ ಮಾರಾಟದಲ್ಲಿ ದಾಖಲೆ ಬರೆದ ಭಾರತ, ಹಲುವ ಹೊಸ ವಾಹನಗಳ ಉತ್ಪಾದನೆ ಹಾಗೂ ಬಿಡುಗಡೆಯಾಗಿದೆ. ಈ ಮೂಲಕ ಭಾರತದಲ್ಲಿ ಎಲೆಕ್ಟ್ಕಿಕ್ ವಾಹನದ ರೂಪವನ್ನೇ ಬದಲಿಸಿದೆ. ಈ  ವರ್ಷ ಒಲಾ ಸ್ಕೂಟರ್, ಸಿಂಪಲ್ ಒನ್, ಬೌನ್ಸಿ ಇನ್ಫಿನಿಟಿ, Eeve ಸೋಲ್, ಇ ಬೈಕ್ ಗೋ, ಒಕಾಯ, ಇವಿಟ್ರಿಕ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ.  ಇದರ ಜೊತೆಗೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಭಾರತದಲ್ಲಿ ಲಭ್ಯವಿದೆ.
 

click me!