Yezdi Roadking return ಬೈಕ್ ಪ್ರಿಯರ ಹೊಸ ವರ್ಷದ ಸಂಭ್ರಮ ಡಬಲ್, ಜ.13ಕ್ಕೆ ಐತಿಹಾಸಿಕ ಯೆಜ್ಡಿ ರೋಡ್‌ಕಿಂಗ್ ಅನಾವರಣ!

By Suvarna News  |  First Published Dec 25, 2021, 8:31 PM IST
  • ಮತ್ತೆ ಬರುತ್ತಿದೆ ಐತಿಹಾಸಿಕ ಯೆಜ್ಡಿ ರೋಡ್‌ಕಿಂಗ್ ADV ಬೈಕ್
  • ಜನವರಿ 13, 2022ಕ್ಕೆ ಯೆಜ್ಡಿ ರೋಡ್‌ಕಿಂಗ್ ಅನಾವರಣ
  • ಜಾವಾ ಮೋಟಾರ್ ಬೈಕ್ ಬಳಿಕ ಇದೀಗ ಯೆಜ್ಡಿ ಸರದಿ
     

ನವದೆಹಲಿ(ಡಿ.25): ಹೊಸ ವರ್ಷದ ಸಂಭ್ರಮ(New Year 2022) ಡಬಲ್ ಆಗುತ್ತಿದೆ. ಐತಿಹಾಸಿಕ, ಮಿಂಚಿ ಮರೆಯಾಗಿದ್ದ ಯೆಜ್ಡಿ ಬೈಕ್(Yezdi Bike) ಮತ್ತೆ ಭಾರತದ ರಸ್ತೆಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಜಾವಾ ಮೋಟಾರ್‌ಸೈಕಲ್(Jawa Motorcycles) ಬಳಿಕ ಇದೀಗ ಭಾರತದಲ್ಲಿ ಯೆಜ್ಡಿ ಅಬ್ಬರ ಆರಂಭಗೊಳ್ಳುತ್ತಿದೆ. 80-90ರ ದಶಕದಲ್ಲಿ ಯೆಜ್ಡಿ ಬೈಕ್ ಕರ್ನಾಟಕ ಹಾಗೂ ದೇಶದಲ್ಲಿ ಮಾಡಿದ್ದ ಮೋಡಿ ಬೈಕ್ ಪ್ರಿಯರು ಮರೆತಿಲ್ಲ. ಇದೀಗ ಅದೇ ಯೆಜ್ಡಿ ಇದೀಗ ಹೊಸ ರೂಪದಲ್ಲಿ ಅನಾವರಣಗೊಳ್ಳುತ್ತಿದೆ. ಜನವರಿ 13, 2022ರಲ್ಲಿ ಹೊಚ್ಚ ಹೊಸ ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್(Yezdi roadking ADV) ಬೈಕ್ ಅನಾವರಣಗೊಳ್ಳುತ್ತಿದೆ.

ಕ್ಲಾಸಿಕ್ ಲೆಜೆಂಡ್ ಕಂಪನಿ ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್(Bike) ಅನಾವರಣ ಮಾಡುತ್ತಿದೆ. ಈ ಮೂಲಕ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಲು ಯೆಜ್ಡಿ ಸಜ್ಜಾಗಿದೆ. ಯೆಜ್ಡಿ ನೂತನ ಬೈಕ್ ಕುರಿತು ಅಧಿಕೃತ ಫೋಟೋಗಳು ಬಿಡುಗಡೆಯಾಗಿಲ್ಲ. ಆದರೆ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈಗಾಗಲೇ ಕ್ಲಾಸಿಕ್ ಲೆಜೆಂಡ್ಸ್ ಸಾಮಾಜಿಕ ಜಾಲತಾಣ ಮೂಲಕ ಯೆಜ್ಡಿ ರೋಡ್‌ಕಿಂಗ್ ಅನಾವರಣ ಶೀಘ್ರದಲ್ಲೇ ಎಂಬ ಸೂಚನೆ ನೀಡಿತ್ತು. ಇದೀಗ ದಿನಾಂಕ ಬಹಿರಂಗ ಪಡಿಸಿದೆ.

Latest Videos

undefined

Yezdi Roadking Teaser ಭಾರತದ ರಸ್ತೆಗಿಳಿಯಲು ಸಜ್ಜಾದ ಐಕಾನಿಕ್ ಯೆಜ್ಡಿ ರೋಡ್‌ಕಿಂಗ್, ಟೀಸರ್ ಲಾಂಚ್!

ಭಾರತದಲ್ಲಿ ಅಧಿಕೃತವಾಗಿ ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್ ಅನಾವರಣಗೊಳ್ಳುತ್ತಿದೆ. ಆದರೆ ಹೆಚ್ಚಿನ ಮಾಹಿತಿಗಳನ್ನು ಯೆಜ್ಡಿ ಬಹಿರಂಗ ಪಡಿಸಿಲ್ಲ. ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್ 334cc ಎಂಜಿನ್ ಹೊಂದಿರುವ ಸಾಧ್ಯತೆ ಇದೆ. ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಯೆಜ್ಡಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್ 30.64bhp ಪವರ್ 32.74Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದೇ ಎಂಜಿನ್ ಜಾವಾ ಪೆರಾಕ್ ಬಾಬರ್ ಬೈಕ್‌ನಲ್ಲಿ ಬಳಸಲಾಗಿದೆ.  ಅಡ್ವೆಂಚರ್ ಬೈಕ್‌ಗೆ ಇರಬೇಕಾದ ಪವರ್ ಹಾಗೂ ಸಸ್ಪೆನ್ಶನ್ ನೀಡಲು ಕ್ಲಾಸಿಕ್ ಲೆಜೆಂಡ್ ಮುಂದಾಗಿದೆ.

ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!

ನೂತನ ಯೆಜ್ಡಿ ರೋಡ್‌ಕಿಂಗ್ ಎರಡು ವೇರಿಯೆಂಟ್‌ಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಜನವರಿ 13 ರಂದು ಯೆಜ್ಡಿ ರೋಡ್‌ಕಿಂಗ್ ಅನಾವರಣಗೊಳ್ಳಲಿದೆ. ಫೆಬ್ರವರಿಯಲ್ಲಿ ರೋಡ್‌ಕಿಂಗ್ ಅಡ್ವೆಂಚರ್ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಬಹಿರಂಗವಾಗಲಿದೆ. ಜೊತೆ ಅಷ್ಟೇ ವೇಗದಲ್ಲಿ ಡೆಲಿವರಿ ಆರಂಭಿಸಲು ಕ್ಲಾಸಿಕ್ ಲೆಜೆಂಡ್ ಮುಂದಾಗಿದೆ.

ಯೆಜ್ಡಿ ರೋಡ್‌ಕಿಂಗ್ 1978ರಿಂದ 1996ರ ವೆರೆಗೆ ಭಾರತದಲ್ಲಿ ಅಬ್ಬರಿಸಿತ್ತು. 250 ಸಿಸಿ ಎಂಜಿನ್ ಹೊಂದಿದ್ದ ಯೆಜ್ಡಿ ರೋಡ್‌ಕಿಂಗ್ ಪ್ರಮುಖವಾಗಿ ನಾಲ್ಕು ಬೈಕ್‌ಗಳನ್ನು ಬಿಡುಗಡೆ ಮಾಡಿತ್ತು. ಯೆಜ್ಡಿ ರೋಡ್‌ಕಿಂಗ್ ಸಿಬಿ ಯುನಿಟ್ ಮಾಡೆಲ್ಸ್, ಯೆಜ್ಡಿ ಆಯಿಲ್ ಕಿಂಗ್, ಯೆಜ್ಡಿ ಸಿಡಿಔ ಯುನಿಟ್ ಮಾಡೆಲ್ಸ್ ಹಾಗೂ ಯೆಡ್ಜಿ ಮೋನಾರ್ಕ್ ಮಾಡೆಲ್ ಭಾರತದಲ್ಲಿ ಭಾರಿ ಸಂಚನ ಸೃಷ್ಟಿಸಿತ್ತು.

ಯೆಜ್ಡಿ ರೋಡ್‌ಕಿಂಗ್ ತನ್ನ ಉತ್ಪಾದನೆಯನ್ನು ಮೈಸೂರಿನಲ್ಲಿ ಆರಂಭಿಸಿತ್ತು. ದೇಶದಲ್ಲಿ ಅತಿ ಮೆಚ್ಚಿನ ಬೈಕ್ ಆಗಿ ಹೊರಹೊಮ್ಮಿತ್ತು. ಆದರೆ ಪ್ರತಿಸ್ಪರ್ಧೆ ಸೇರಿದಂತೆ ಹಲವು ಕಾರಣಗಳಿಂದ ಯೆಜ್ಡಿ ಭಾರತದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿತ್ತು. ಆದರೆ ಯೆಜ್ಡಿ ನೆನೆಪುಗಳು ಈಗಲೂ ಹಾಗೇ ಇದೆ. ಇದೀಗ ಮತ್ತೆ ಐತಿಹಾಸಿಕ ಕ್ಷಣಕ್ಕೆ ಹೊಸ ವರ್ಷ ಸಾಕ್ಷಿಯಾಗಲಿದೆಯ

ಕ್ಲಾಸಿಕ್ ಲೆಜೆಂಡ್ಸ್ 2018ರಲ್ಲಿ ಜಾವಾ ಬೈಕ್ ಮತ್ತೆ ಬಿಡುಗಡೆಯಾಗಿತ್ತು. ಬರೋಬ್ಬರಿ 22 ವರ್ಷಗಳ ಬಳಿಕ ಜಾವಾ ಮತ್ತೆ ಬಿಡುಗಡೆಯಾಗಿತ್ತು. ಜಾವಾ ಕ್ಲಾಸಿಕ್, ಜಾವಾ 42 ಹಾಗೂ ಜಾವಾ ಪೆರಾಕ್ ಬಾಬರ್ ಬೈಕ್ ಬಿಡುಗಡೆಯಾಗಿತ್ತು. ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಜಾವಾ ಬೈಕ್ ಭಾರತದಲ್ಲಿ ಬಿಡುಗಡೆಯಾಗಿತ್ತು. 293 ಸಿಸಿ ಎಂಜಿನ್ ಹೊಂದಿರುವ ಜಾವಾ ಬೈಕ್ 6 ಬಣ್ಣಗಳಲ್ಲಿ ಲಭ್ಯವಿದೆ. 

click me!