ಈ ವರ್ಷದ ಅಂತ್ಯದ ವೇಳೆಗೆ ಭಾರತದ ಮಾರುಕಟ್ಟೆಯಲ್ಲಿ ಕಾರು ಲಭ್ಯವಾಗಲಿದೆ. ಇದು ಭಾರತದಲ್ಲಿ ಲಾಂಚ್ ಆಗುತ್ತಿರುವ ಸಿಟ್ರಾನ್‌ನ 4ನೇ ಕಾರು.
ಗಣೇಶ್ ಪ್ರಸಾದ್
ನವದೆಹಲಿ (ಏಪ್ರಿಲ್ 29, 2023): ಹ್ಯುಂಡಾಯ್ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಕ್‌ಗಳಿಗೆ ಪ್ರತಿಸ್ಪರ್ಧಿಯಾಗಬಲ್ಲಂತಹ ಕಾರನ್ನು ಫ್ರೆಂಚ್ ಕಂಪನಿ ಸಿಟ್ರಾನ್ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಸಿ3 ಏರ್‌ಕ್ರಾಸ್ ಹೆಸರಿನ 7 ಸೀಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಹೊರಭಾಗದ ಡಿಸೈನ್‌ನಿಂದ ಗ್ರಾಹಕರನ್ನು ಸೆಳೆಯುವ ಸಿಟ್ರಾನ್ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಬಯಸುತ್ತಿದ್ದು, ಇದೀಗ ತನ್ನ ಹೊಸ ಕಾರಿನ ಜಾಗತಿಕ ಅನಾವರಣವನ್ನು ಭಾರತದಲ್ಲಿ ಮಾಡಿದೆ.
ಈ ವರ್ಷದ ಅಂತ್ಯದ ವೇಳೆಗೆ ಭಾರತದ ಮಾರುಕಟ್ಟೆಯಲ್ಲಿ ಕಾರು ಲಭ್ಯವಾಗಲಿದೆ. ಇದು ಭಾರತದಲ್ಲಿ ಲಾಂಚ್ ಆಗುತ್ತಿರುವ ಸಿಟ್ರಾನ್‌ನ 4ನೇ ಕಾರು. ಈ ಹಿಂದಿನ ಕಾರುಗಳು ಬಿಡುಗಡೆಯಾದ ಬಳಿಕ ಬಳಕೆದಾರರು ನೀಡಿದ ಪ್ರತಿಕ್ರಿಯೆಗಳನ್ನು ಆಧಾರವಾಗಿಟ್ಟುಕೊಂಡು ಈ ಕಾರನ್ನು ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರಿನ ಶೇ.90 ಭಾಗವನ್ನು ಭಾರತದಲ್ಲೇ ಭಾರತೀಯರೇ ತಯಾರಿಸಿದ್ದಾರೆ ಎಂಬುದು ಇದರ ವಿಶೇಷ.
undefined
ಇದನ್ನು ಓದಿ: 5 ವರ್ಷದಿಂದ ಕೂಡಿಟ್ಟಿದ್ದ ಚಿಲ್ಲರೆ ನಾಣ್ಯ ಕೊಟ್ಟು ಸ್ಕೂಟರ್ ಖರೀದಿ ಕನಸು ನನಸು ಮಾಡ್ಕೊಂಡ ವ್ಯಾಪಾರಿ..!
ಈ ಕಾರು 5 ಸೀಟರ್ ಮತ್ತು 7 ಸೀಟರ್ ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, 1.6 ಲೀಟರ್‌ನ ಟರ್ಬೋ ಸೋಲೋ ಪೆಟ್ರೋಲ್ ಎಂಜಿನ್ ಹೊಂದಿದೆ. 1 ಲೀಟರ್‌ಗೆ 17 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಇದೇ ರೇಂಜ್‌ನಲ್ಲಿರುವ ಎಸ್‌ಯುವಿಗಳಿಗೆ ಹೋಲಿಸಿದರೆ ಇದು ಗ್ರೌಂಡ್ ಕ್ಲಿಯರೆನ್ಸ್‌ನಲ್ಲಿ ಉತ್ತಮ ಎಂದೇ ಹೇಳಬಹುದು. 4.3 ಮೀ. ಉದ್ದವಿರುವ ಈ ಎಸ್‌ಯುವಿ 2671 ಮಿ.ಮೀ. ವೀಲ್‌ಬೇಸ್, 200 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
5 ಸೀಟರ್ ಕಾರಿನಲ್ಲಿ 444 ಲೀ. ಬೂಟ್ ಸ್ಪೇಸ್ ಲಭ್ಯವಿದೆ. ಆದರೆ 7 ಸೀಟರ್‌ನಲ್ಲಿ ಯಾವುದೇ ಬೂಟ್ ಸ್ಪೇನ್ ಇಲ್ಲ. ಇದರಲ್ಲೂ ಬೂಟ್ ಸ್ಪೇಸ್ ಬೇಕಿದ್ದರೆ ಹಿಂದಿನ ಸೀಟುಗಳನ್ನು ಮಡಿಸಿಡಬೇಕು. ಅಲ್ಲದೇ ಈ ಸೀಟುಗಳನ್ನು ಮನೆಯಲ್ಲೇ ತೆಗೆದಿಟ್ಟು ಹೋಗಲು ಅವಕಾಶ ನೀಡಲಾಗಿದೆ. ಹೀಗೆ ಮಾಡಿದರೆ ಬೂಟ್‌ಸ್ಪೇಸ್ 511 ಲೀ.ಗೆ ಹೆಚ್ಚಳವಾಗಲಿದೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಓಲಾ EV ಹಬ್ ತಮಿಳುನಾಡಿಗೆ! ರಾಜ್ಯದ ಕೈತಪ್ಪಿದ್ದೇಕೆ? ಮೋಹನ್‌ದಾಸ್ ಪೈ ಪ್ರಶ್ನೆ
ಹೊರಭಾಗದಿಂದ ದೊಡ್ಡದಾಗಿ ಕಂಡರೂ ಒಳಭಾಗದಲ್ಲಿ ಅದಕ್ಕೆ ಅನುಗುಣವಾದ ಸ್ಥಳಾವಕಾಶ ಇಲ್ಲ. ಮುಂಭಾಗ ಮತ್ತು ಮಧ್ಯದ ಸೀಟುಗಳಲ್ಲಿ ಆರಾಮಾಗಿ ಕೂರಬಹುದಾದರೂ ಹಿಂದಿನ ಸೀಟು ಮಕ್ಕಳಿಗೆ ಮಾತ್ರ ಎನ್ನುವಂತಿದೆ. ಒಳಭಾಗದ ವಿನ್ಯಾಸ ನೋಡಲು ಚೆನ್ನಾಗಿ ಕಾಣುತ್ತದೆ. 10.2 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, 5 ಯುಎಸ್‌ಬಿ ಪೋರ್ಟ್, ಮೊಬೈಲ್‌ಗಳನ್ನು ಇಡಲು ಮಾಡಿರುವ ಪ್ರತ್ಯೇಕ ಜಾಗಗಳು ಪ್ರಯಾಣದಲ್ಲೂ ಮೊಬೈಲ್ ಬಳಸುವವರನ್ನು ಆಕರ್ಷಿಸುತ್ತವೆ. ಅತೀ ದೊಡ್ಡದು ಎನಿಸುವ ಎಸಿ ನಾಬ್‌ಗಳು, ಪ್ಲಿಪ್ ಅಪ್ ಡೋರ್ ಲಾಕ್, ಬಾಗಿಲಿನ ಕೀ ಇದೊಂದು ಹಳೆಯ ಕಾರು ಎನ್ನುವಂತಹ ಭಾವ ನೀಡುತ್ತವೆ. ಈ ಕಾರಿನ ಬೆಲೆ ಇನ್ನೂ ನಿರ್ಧಾರವಾಗಿಲ್ಲ. ಇದರಲ್ಲಿ ಬೆಲೆ ಇಳಿಸಲು ಕಂಪನಿ ತೆಗೆದುಕೊಂಡಿರುವ ಕ್ರಮಗಳು, ಇದೇ ರೇಂಜ್‌ನ ಇತರ ಕಾರುಗಳಿಗೆ ಸ್ಪರ್ಧೆ ನೀಡಬೇಕಿದ್ದರೆ, ಈ ಕಾರು 9ರಿಂದ 12 ಲಕ್ಷ ರೂ.ಗೆ ಲಾಂಚ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಈ ಊರಲ್ಲಿ ಇನ್ಮುಂದೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಕಾರುಬಾರು; ಪೆಟ್ರೋಲ್ ವೆಹಿಕಲ್ಸ್ ನೋಂದಣಿ ನಿಷೇಧ