ಭಾರತದ ರಸ್ತೆಗಿಳಿದ ವಿಶ್ವದ ಮೊದಲ ಸೂಪರ್ ಟೂರರ್‌ , ಬೆಂಗಳೂರಿನಲ್ಲಿ ಆಸ್ಟನ್ ಮಾರ್ಟಿನ್ ಡಿಬಿ12 ಲಾಂಚ್!

Published : Oct 16, 2023, 01:06 PM IST
ಭಾರತದ ರಸ್ತೆಗಿಳಿದ ವಿಶ್ವದ ಮೊದಲ ಸೂಪರ್ ಟೂರರ್‌ , ಬೆಂಗಳೂರಿನಲ್ಲಿ ಆಸ್ಟನ್ ಮಾರ್ಟಿನ್ ಡಿಬಿ12 ಲಾಂಚ್!

ಸಾರಾಂಶ

110 ವರ್ಷದ ಇತಿಹಾಸದ ಬ್ರಿಟಿಷ್ ಐಷಾರಾಮಿ ಆಸ್ಟಿನ್ ಮಾರ್ಟಿನ್ ಕಾರು ಇದೀಗ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. ವಿಶೇಷ ಅಂದರೆ ಇದು ವಿಶ್ವದ ಮೊದಲ ಸೂಪರ್ ಟೂರರ್ ಕಾರಗಿದ್ದು, ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ , ವಿಶೇಷತೆ ಹಾಗೂ ಲಭ್ಯತೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರು(ಅ.15): ವಿಶ್ವದಲ್ಲೇ ಅತ್ಯಂತ ಜನಪ್ರಿಯ ಬ್ರಿಟಿಷ್‌ ಅಲ್ಟ್ರಾ ಲಕ್ಷುರಿ ಸ್ಪೋರ್ಟ್ಸ್ ಕಾರು ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಆಸ್ಟಿನ್ ಮಾರ್ಟಿನ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. ಇದೀಗ ಬೆಂಗಳೂರಿನಲ್ಲಿ ಆಸ್ಟನ್ ಮಾರ್ಟಿನ್ ಡಿ12 ಕಾರು ಬಿಡುಗಡೆ ಮಾಡಲಾಗಿದೆ. ವಿಶ್ವದ ಪ್ರಥಮ ಸೂಪರ್ ಟೂರರ್‌ ಆಸ್ಟನ್ ಮಾರ್ಟಿನ್ ಡಿಬಿ12 ಆರಂಭಿಕ ಬೆಲೆ 4.59 ಕೋಟಿ ರೂಪಾಯಿ(ಎಕ್ಸ್ ಶೋರೂಂ). ಗ್ರಾಹಕರು ಈ ಕಾರು ಖರೀದಿಸಿ ತಮಗೆ ಬೇಕಾದ ರೀತಿಯಲ್ಲಿ ಕಸ್ಟಮೈಸ್ಡ್ ಮಾಡುವ ಅವಕಾಶವಿದೆ.  

ಆಸ್ಟನ್ ಮಾರ್ಟಿನ್‌ನ 110 ವರ್ಷಗಳ ಇತಿಹಾಸದಲ್ಲಿ, ಭಾರತದಲ್ಲಿ 95 ವರ್ಷಗಳ ಅಸ್ತಿತ್ವವನ್ನು ಹೊಂದಿದೆ.1928 ರಲ್ಲಿ ಮೊದಲ ಆಸ್ಟನ್ ಮಾರ್ಟಿನ್ ಎಸ್ ಟೈಪ್ ಸ್ಟೋರ್ಟ್ಸ್‌ ಅನ್ನು ಆಮದು ಮಾಡಿಕೊಳ್ಳಲಾಗಿತ್ತು. ಮೊದಲ ಬಾರಿಗೆ ಭಾರತದಲ್ಲಿ ಆಸ್ಟನ್ ಮಾರ್ಟಿನ್‌ ಆಗಮಿಸಿದಾಗಿನಿಂದಲೂ ಆಸ್ಟನ್ ಮಾರ್ಟಿನ್‌ನ ಹೊಸ ರೇಂಜ್ ಅನ್ನು ನಮ್ಮ ಗ್ರಾಹಕರು ಮೆಚ್ಚಿಕೊಳ್ಳುತ್ತಿದ್ದಾರೆ. ಅಲ್ಟ್ರಾ ಲಕ್ಷುರಿ ಎಸ್‌ಯುವಿ, ಡಿಬಿಎಕ್ಸ್ ಮತ್ತು ಡಿಬಿಎಚ್‌707 ಸೇರಿದಂತೆ, ವಾಂಟೇಜ್ ಸ್ಪೋರ್ಟ್ಸ್‌ ಕಾರ್‌ ಕೂಡ ಆಮದು ಮಾಡಿಕೊಳ್ಳಲಾಗಿದ್ದು, ಈಗ ವಿಶ್ವದ ಮೊದಲ ಸೂಪರ್ ಟೂರರ್‌ ಡಿಬಿ12 ಕೂಡ ಭಾರತಕ್ಕೆ ಬಂದಿದೆ.

ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ, 25 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಟಾಟಾ ಹ್ಯಾರಿಯರ್, ಸಫಾರಿ!

ಭಾರತದ ರಸ್ತೆಗಿಳಿದ ವಿಶ್ವದ ಮೊದಲ ಸೂಪರ ಟೂರರ್‌
ಗ್ರಾಹಕರು ಮತ್ತು ಡೀಲರ್‌ಗಳಲ್ಲಿ ಉತ್ಸಾಹವನ್ನು ತುಂಬಿಸಿದ ಆಸ್ಟನ್ ಮಾರ್ಟಿನ್‌ ಭಾರತದ ಮಾರುಕಟ್ಟೆಗೆ ಡಿಬಿ12 ಅನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ.

ಆಸ್ಟನ್ ಮಾರ್ಟಿನ್‌ನ ಅತ್ಯಂತ ನಿರೀಕ್ಷಿತ ಮುಂದಿನ ತಲೆಮಾರಿನ ಸ್ಪೋರ್ಟ್ಸ್‌ ಕಾರ್‌ ಡಿಬಿ12, ಆಸ್ಟನ್ ಮಾರ್ಟಿನ್‌ ಕಳೆದ 75 ವರ್ಷಗಳಿಂದಲೂ ಡಿಬಿ ಬ್ಲಡ್‌ಲೈನ್‌ನ ಇತಿಹಾಸವನ್ನು ಹೊಂದಿದೆ. ಹಲವು ವರ್ಷಗಳಿಂದಲೂ ಉತ್ಪನ್ನ ಬೆಳವಣಿಗೆಯಲ್ಲಿ ಪರಿಣಿತಿ ಹೊಂದಿರುವ ಆಸ್ಟನ್ ಮಾರ್ಟಿನ್‌, ಈ ಮಾಡೆಲ್ ಅನ್ನು ಆಧುನಿಕ ಅಲ್ಟ್ರಾ ಲಕ್ಷುರಿ, ಅತ್ಯಧಿಕ ಪರ್ಫಾರ್ಮೆನ್ಸ್‌ ಬ್ರ್ಯಾಂಡ್‌ ಆಗಿ ರೂಪಿಸಿದೆ. ಇತ್ತೀಚಿನ ತಂತ್ರಜ್ಞಾನದೊಂದಿಗೆ ಕಾಲಾತೀತ ವಿನ್ಯಾಸ, ಅದ್ಭುತ ಕರಕುಶಲತೆ ಮತ್ತು ಅತ್ಯಂತ ಉತ್ಸಾಹಕರ ಚಾಲನೆ ಅನುಭವವನ್ನು ನೀಡುತ್ತದೆ.

ವಿಶ್ವದ ಮೊದಲ ಸೂಪರ್‌ ಟೂರರ್‌ ಎಂದು ಹೆಸರು ಪಡೆದಿರುವ ಡಿಬಿ12 ಪ್ರಸ್ತುತ ಜಿಟಿ ಅಟೊಮೊಬೈಲ್ ಸೆಗ್ಮೆಂಟ್‌ಗಿಂತ ವಿಶಿಷ್ಟವಾಗಿದ್ದು, ಹೊಸ ಕ್ಯಾಟಗರಿಯನ್ನೇ ಸೃಷ್ಟಿಸಿದೆ. ಈ ವರ್ಗದಲ್ಲೇ ಅತ್ಯಂತ ಮುಂಚೂಣಿಯಲ್ಲಿರುವ ಇದು 202 ಎಂಪಿಎಚ್ ಗರಿಷ್ಠ ವೇಗ, 0-60 ಎಂಪಿಎಚ್ ಅನ್ನು 3.5 ಸೆಕೆಂಡುಗಳಲ್ಲಿ ಸಾಧಿಸುವುದು ಮತ್ತು ಅದ್ಭುತ 4.0 ಟ್ವಿನ್ ಟರ್ಬೋ ವಿ8 ಇಂಜಿನ್ ಅನ್ನು ಹೊಂದಿದೆ. ಇದನ್ನು ಆಸ್ಟನ್ ಮಾರ್ಟಿನ್ ಇಂಜಿನಿಯರುಗಳು ಅದ್ಭುತವಾಗಿ ಟ್ಯೂನ್ ಮಾಡಿದ್ದಾರೆ.

ಚಿತ್ರದಲ್ಲಿ ಬಳಸಿದ ಹಳೇ ಟಾಟಾ ಸುಮೋ ಕಾರು ಖರೀದಿಸಿದ ಸೌತ್ ಮೆಘಾಸ್ಟಾರ್!

ಇದರ ಅದ್ಭುತ ತಂತ್ರಜ್ಞಾನ, ನವೀನ ವಿನ್ಯಾಸ ಮತ್ತು ಅದ್ಭುತ ಲಕ್ಷುರಿಯಿಂದಾಗಿ ಗ್ರಾಹಕರು, ಸಂಭಾವ್ಯ ಖರೀದಿದಾರರು ಮತ್ತು ಡೀಲರುಗಳಲ್ಲಿ ಡಿಬಿ12 ಭಾರಿ ಉತ್ಸಾಹವನ್ನು ಹುಟ್ಟುಹಾಕಿದೆ. ಇದು ಮೊದಲು ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಅನಾವರಣಗೊಂಡಾಗಿನಿಂದಲೂ ಈ ಕುತೂಹಲ ಹುಟ್ಟಿಕೊಂಡಿತ್ತು.

ಭವಿಷ್ಯದ ಅನಾವರಣ: ಡಿಬಿ12
ಡಿಬಿ12 ಹೊಸ  ದಿಕ್ಸೂಚಿಯನ್ನು ನೀಡಿದೆ. ಸುಧಾರಿತ ಕಾರ್ಯಕ್ಷಮತೆ, ನಿರ್ವಹಣೆ ಮತ್ತು ಡೈನಾಮಿಕ್ಸ್, ಬೋಲ್ಡ್ ಆದ ವಿನ್ಯಾಸ ಮತ್ತು ಅತ್ಯುತ್ತಮ ಒಳಾಂಗಣ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಇದು ಹೊಂದಿದ್ದು, ಅತ್ಯಂತ ಪರಿಪೂರ್ಣವಾಗಿದೆ ಮತ್ತು ಆಸ್ಟನ್ ಮಾರ್ಟಿನ್‌ನ ಇತಿಹಾಸದಲ್ಲೇ ಅತ್ಯಂತ ಉತ್ತಮ ಗುಣಮಟ್ಟದ್ದು ಎಂದು ಪರಿಗಣಿಸಲ್ಪಟ್ಟಿದೆ.

ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಮತ್ತು ಚಾಲಕರ ಬೇಡಿಕೆಯನ್ನು ಪೂರೈಸುವ ಮತ್ತು ಅವರನ್ನು ಖುಷಿಪಡಿಸುವ ಇದು ವರ್ಗದಲ್ಲೇ ಮುಂಚೂಣಿಯಲ್ಲಿರುವ 680ಪಿಎಸ್‌/800ಎನ್‌ಎಂ ವಿ8 ಟ್ವಿನ್ ಟರ್ಬೋ ಪವರ್‌ಟ್ರೇನ್‌ ಅನ್ನು ಹೊಂದಿದೆ. 8 ಸ್ಪೀಡ್ ಅಟೊಮ್ಯಾಟಿಕ್‌ ಟ್ರಾನ್ಸ್‌ಮಿಶನ್ ಮೂಲಕ ಪವರ್‌ ಒದಗಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಎಲೆಕ್ಟ್ರಾನಿಕ್ ರೇರ್ ಡಿಫರೆನ್ಷಿಯಲ್ ಅನ್ನು ಆಸ್ಟನ್ ಮಾರ್ಟಿನ್ ಡಿಬಿ ಮಾಡೆಲ್‌ ಹೊಂದಿದೆ. ಅಸಲೀತನ, ಸಾಮರ್ಥ್ಯ ಮತ್ತು ಪ್ಯಾಷನ್‌ ಅನ್ನು ಆಸ್ಟನ್ ಮಾರ್ಟಿನ್‌ನ ಈ ಮಾಡೆಲ್‌ ಒಳಗೊಂಡಿದೆ. ಇದರ ಡ್ರೈವಿಂಗ್ ಅನುಭವಕ್ಕೆ ಸಾಟಿಯೇ ಇಲ್ಲ.

ಈ ಮಧ್ಯೆ, ಡಿಬಿ12 ಸ್ಟೈಲ್‌ನಲ್ಲೂ ಹೊಸತನವಿದೆ. ಹೊಚ್ಚ ಹೊಸ ಫ್ರಂಟ್ ಎಂಡ್ ಇದರಲ್ಲಿದ್ದು, ಹೆಚ್ಚು ಶಕ್ತಿಯುತ ಭಾವವನ್ನು ಇದು ಒದಗಿಸುತ್ತದೆ. ಇದು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಿದ ಒಳಾಂಗಣವನ್ನು ಹೊಂದಿದೆ. ಆಸ್ಟನ್ ಮಾರ್ಟಿನ್‌ನಲ್ಲಿ ಇನ್ ಹೌಸ್ ಅಭಿವೃದ್ಧಿಪಡಿಸಿದ ಮತ್ತು ವಿನ್ಯಾಸ ಮಾಡಿದ ಅತ್ಯಾಧುನಿಕ ಮನರಂಜನೆ ಸಿಸ್ಟಮ್ ಅನ್ನು ಇದು ಒಳಗೊಂಡಿದೆ.

ಭಾರತದ ಲಕ್ಷುರಿ ವಾಹನ ಉದ್ಯಮದಲ್ಲಿ ಆಸ್ಟನ್ ಮಾರ್ಟಿನ್‌ ಎಂದಿಗೂ ಉತ್ತುಂಗದಲ್ಲೇ ಇದೆ. ಡಿಬಿಎಕ್ಸ್‌ ಮತ್ತು ಡಿಬಿಎಕ್ಸ್‌707 ಬಿಡುಗಡೆಯ ಮೂಲಕ ಇದು ಇನ್ನಷ್ಟು ಉತ್ತುಂಗಕ್ಕೇರಿದೆ. ಡಿಬಿ12 ಬಿಡುಗಡೆ ಮಾಡಿದ ನಂತರದಲ್ಲಿ ಭಾರತದಲ್ಲಿ ಅಲ್ಟ್ರಾ ಲಕ್ಷುರಿ ವಿಭಾಗವೊಂದು ತೆರೆದುಕೊಂಡಿದೆ. ಭಾರತದಲ್ಲಿ ಅಲ್ಟ್ರಾ ಲಕ್ಷುರಿ ಅಟೊಮೊಬೈಲ್ ವಲಯದಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿರುವ ಆಸ್ಟನ್ ಮಾರ್ಟಿನ್‌, ಡಿಬಿ12 ಮೂಲಕ ವಿನ್ಯಾಸ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಕ್ಕೆ ಹೊಸ ಮಾನದಂಡಗಳನ್ನು ನಿಗದಿಪಡಿಸಿದೆ.

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ