45 ಸಾವಿರ ರೂಗೆ ಮಾರುತಿ 800ನ್ನು ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತಿಸಿದ ಪಿಯುಸಿ ವಿದ್ಯಾರ್ಥಿ!

By Suvarna News  |  First Published Oct 2, 2023, 12:37 PM IST

ರೋಲ್ಸ್ ರಾಯ್ಸ್ ಕಾರು ಹಲವರ ಕನಸು. ಆದರೆ ಕೋಟಿ ಕೋಟಿ ರೂಪಾಯಿ ಮೌಲ್ಯದ ಕಾರು ಖರೀದಿ ಸುಲಭದ ಮಾತಲ್ಲ. ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕೇವಲ 45,000 ರೂಪಾಯಿಗೆ ರೋಲ್ಸ್ ರಾಯ್ಸ್ ಕಾರು ತಯಾರಿಸಿದ್ದಾನೆ. ಮಾರುತಿ 800 ಕಾರು ಬಳಸಿ ಈ ರೋಲ್ಸ್ ರಾಯ್ಸ್ ಕಲ್ಲಿನಾನ್ ಮಾಡೆಲ್ ರೀತಿಯ ಕಾರು ರೆಡಿ ಮಾಡಲಾಗಿದೆ.
 


ತ್ರಿಶೂರ್(ಅ.02) ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಆರಂಭಿಕ ಬೆಲೆ 6.95 ಕೋಟಿ ರೂಪಾಯಿ. ಇದು ಎಕ್ಸ್ ಶೋ ರೂಂ ಬೆಲೆ. ಇದೀಗ ಈ ದುಬಾರಿ ಕಾರನ್ನು ಕೇವಲ 45,000 ರೂಪಾಯಿಯಲ್ಲಿ ನಿರ್ಮಾಣ ಮಾಡಲಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿ ಈ ರೋಲ್ಸ್ ರಾಯ್ಯ್ ಮಿನಿ ಕಲ್ಲಿನಾನ್ ನಿರ್ಮಾಣದ ಹಿಂದಿನ ರೂವಾರಿ. ಮಾರುತಿ ಸುಜುಕಿಯ ಹಳೇ 800 ಕಾರನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಇದೀಗ ಈ 800 ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಾಗಿ ಪರಿವರ್ತನೆಗೊಂಡಿದೆ. ಈತನ ಹೊಸ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಕೇರಳದ ತ್ರಿಶೂರ್ ಜಿಲ್ಲೆಯ ಕೊಡಂಗಲ್ಲೂರಿನ ಸಮೀಪದ ದ್ವಿತೀಯ ಪಿಯುಸಿ ವಿದ್ಯಾರ್ಥಿಹದೀಫ್ ಸಾಧನೆ ಕೇರಳದಲ್ಲಿ ಮನೆಮಾತಾಗಿದೆ. ನಾಲ್ಕೈದು ತಿಂಗಳಿನಿಂದ ಸತತ ಪರಿಶ್ರಮ ಇದೀಗ ಫಲಕೊಟ್ಟಿದೆ. ಹಳೇ 800 ಕಾರು ಖರೀದಿಸಿದ ಹಾದೀಫ್ ಈ ಕಾರಿನ ಬಾಡಿ ಹಾಗೂ ಎಂಜಿನ್ ಸಂಪೂರ್ಣವಾಗಿ ಬೇರ್ಪಡಿಸಿದ್ದಾನೆ. ತನ್ನ ನೆಚ್ಚಿನ ರೋಲ್ಸ್ ರಾಯ್ಸ್ ಮಿನಿ ಕಲ್ಲಿನಾನ್ ಕಾರಿನ ಡಿಸೈನ್ ರೆಡಿ ಮಾಡಿದ್ದಾನೆ. ಈ ಕಾರಿನ ಕುರಿತು ಟ್ರಿಕ್ಸ್ ಟ್ಯೂಬ್ ಅನ್ನೋ ಯೂಟ್ಯೂಬ್ ಚಾನೆಲ್ ಬೆಳಕು ಚೆಲ್ಲಿದೆ.

Tap to resize

Latest Videos

ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಅತ್ಯಾಕರ್ಷಕ MS ಕಸ್ಟಮ್ಸ್‌ ಬೈಕ್ ಅನಾವರಣ!

ರೋಲ್ಸ್ ರಾಯ್ಸ್ ಕಾರಿನ ಡಿಸೈನ್ ಹಿಡಿದು ಕೆಲಸ ಆರಂಭಿಸಿದ್ದಾನೆ. ಪ್ರತಿಯೊಂದು ಬಾಡಿ, ಚಾರ್ಸಿ, ಇಂಟಿರಿಯರ್ ಸೇರಿದಂತೆ ಎಲ್ಲವನ್ನೂ ಹಾದೀಫ್ ಕೈಯಿಂದಲೇ ಮಾಡಿದ್ದಾನೆ. ನಾಜೂಕಾಗಿ ಹಾದೀಫ್ ಈ ಎಲ್ಲಾ ಕೆಲಸ ಮಾಡಿದ್ದಾನೆ.ಸೀಟು ಸೇರಿದಂತೆ ಎಲ್ಲವನ್ನೂ ರೋಲ್ಸ್ ರಾಯ್ಸ್ ಕಲ್ಲಿನಾನ್ ಮಾದರಿಯಲ್ಲಿ ನಿರ್ಮಾಣ ಮಾಡಿದ್ದಾನೆ.

ಸದ್ಯ ಈ ಕಾರಿನ ಸಂಪೂರ್ಣ ಕೆಲಸ ಮುಗಿದಿಲ್ಲ. ಇಷ್ಟೇ ಅಲ್ಲ ಈ ಕಾರನ್ನು ರಸ್ತೆಗಿಳಿಸುವ ಯಾವುದೇ ಅನುಮತಿ ಪತ್ರಗಳು ಇಲ್ಲ. ಆದರೆ ವಿದ್ಯಾರ್ಥಿಯ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬಾಲ್ಯದಿಂದಲೇ ಕಾರಿನ ಮೇಲೆ ಅತೀವ ಆಸಕ್ತಿ. ಹೀಗಾಗಿ ನಾನು 9ನೇ ತರಗತಿಯಲ್ಲಿರುವಾಗ ಬೈಕ್ ಎಂಜಿನ್ ಬಳಸಿ 2 ಸೀಟಿನ ಜೀಪ್ ನಿರ್ಮಾಣ ಮಾಡಿದ್ದೆ. ಕೆಲ ವರ್ಷಗಳ ಹಿಂದೆ ಬಾರಿ ವೈರಲ್ ಆಗಿತ್ತು. 

ಕಿಚನ್, ಬಾಥ್‌ರೂಂ, ಟಾಯ್ಲೆಟ್; ಈ ಇನೋವಾ ಕಾರಿನಲ್ಲಿ ಎಲ್ಲವೂ ಇದೆ!

ಈ ಜೀಪ್ ನೋಡಿದ್ದ ಪರಿಚಯಸ್ಥರೊಬ್ಬರು ಕಡಿಮೆ ಬೆಲೆಗೆ ತಮ್ಮ 800 ಕಾರನ್ನು ನನಗೆ ನೀಡಿದ್ದರು. ಈ ಕಾರಿನಲ್ಲಿ ನಾನು ರೋಲ್ಸ್ ರಾಯ್ಸ್ ಕಲ್ಲಿನಾನ್ ಮಿನಿ ಕಾರನ್ನು ಡಿಸೈನ್ ಮಾಡಿ ರೆಡಿ ಮಾಡಿದ್ದೇನೆ. ಹೆಡ್‌ಲೈಟ್ ಡೂಮ್ ಸೇರಿದಂತೆ ಕೆಲ ಕೆಲಸಗಳು ಬಾಕಿ ಇವೆ. ಶೀಘ್ರದಲ್ಲೇ ಈ ಕೆಲಸ ಮುಗಿಸುತ್ತೇನೆ. ಈಗಾಗಲೇ ಹಲವರು ಕಾರು ಮಾಡಿಫೈ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ವಾಣಿಜ್ಯ ರೂಪದಲ್ಲಿ ನಾನು ಯಾವುದೇ ಆಲೋಚನೆ ಮಾಡಿಲ್ಲ. ಆದರೆ ಬೇಡಿಕೆ ಹೆಚ್ಚಾಗುತ್ತಿದೆ 


 

click me!