BMW ಹೊಸ ಮೈಲಿಗಲ್ಲು: 1 ಲಕ್ಷ ತಲುಪಿದ ದೇಶೀಯ ಉತ್ಪಾದಿತ ಕಾರುಗಳ ಸಂಖ್ಯೆ

By Suvarna News  |  First Published Mar 7, 2022, 12:40 PM IST

*ಚೆನ್ನೈ ಘಟಕದಲ್ಲಿ ಹೊಸ ದಾಖಲೆ ನಿರ್ಮಾಣ
*ಬಿಎಂಡಬ್ಲ್ಯು ಇಂಡಿವಿಜುವಲ್ 740Li M ಸ್ಪೋರ್ಟ್ ಆವೃತ್ತಿ
13 ಮಾದರಿಗಳನ್ನು ಸ್ಥಳೀಯವಾಗಿ ಉತ್ಪಾದನೆ


Auto Desk: ದೇಶೀಯ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಬಿಎಂಡಬ್ಲ್ಯು (BMW) ಸಮೂಹ ತನ್ನ ಚೆನ್ನೈ ಘಟಕದಲ್ಲಿ ತನ್ನ ಒಂದು ಲಕ್ಷದ ಸ್ಥಳೀಯವಾಗಿ ಉತ್ಪಾದಿಸಲಾದ ಕಾರನ್ನು ಹೊರತಂದಿದೆ. ಬಿಎಂಡಬ್ಲ್ಯು ಇಂಡಿವಿಜುವಲ್ 740Li M ಸ್ಪೋರ್ಟ್ (BMW individual 740 Li M sports) ಆವೃತ್ತಿಯು ಈ ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಡಬ್ಲ್ಯು ಸಮೂಹದ ಚೆನ್ನೈ ಘಟಕದ ವ್ಯವಸ್ಥಾಪಕ ನಿರ್ದೇಶಕ ಥಾಮಸ್ ಡೋಸ್, “1,00,000ನೇ ‘ಮೇಡ್-ಇನ್-ಇಂಡಿಯಾ ಕಾರು ನಮ್ಮ  ಘಟಕದಿಂದ ಹೊರಬರುತ್ತಿರುವುದು ಸಂತೋಷ ಮತ್ತು ಹೆಮ್ಮೆಯ ವಿಷಯ” ಎಂದಿದ್ದಾರೆ.
ಚೆನ್ನೈನ ಬಿಎಂಡಬ್ಲ್ಯು ಘಟಕ  2007ರ  ಮಾರ್ಚ್ 29ರಂದು ಕಾರ್ಯಾಚರಣೆ ಪ್ರಾರಂಭಿಸಿದ್ದು, ಈ ವರ್ಷ ತನ್ನ 15 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

ಬಿಎಂಡಬ್ಲ್ಯು ಸಮೂಹ ತನ್ನ ಸ್ಥಳೀಯವಾಗಿ ಉತ್ಪಾದಿಸಿದ ಕಾರು ಮಾದರಿಗಳ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಿದೆ. ಸದ್ಯ 13 ಮಾದರಿಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತದೆ –  ಬಿಎಂಡಬ್ಲ್ಯು 2 ಸರಣಿ ಗ್ರ್ಯಾನ್ ಕೂಪ್ (BMW 2 series gran  coupe), ಬಿಎಂಡಬ್ಲ್ಯು 3 ಸರಣಿ (BMW 3 series), ಬಿಎಂಡಬ್ಲ್ಯು  3 ಸರಣಿ ಗ್ರ್ಯಾನ್ ಲಿಮೋಸಿನ್ (BMW 3 series gran limosis), ಬಿಎಂಡಬ್ಲ್ಯು ಎಂ340ಐ (BMW M340i), ಬಿಎಂಡಬ್ಲ್ಯು 5 ಸರಣಿ (BMW 50 series)  ಬಿಎಂಡಬ್ಲ್ಯು 6 ಸರಣಿ ಗ್ರ್ಯಾನ್ ಟ್ಯುರಿಸ್ಮೊ  (BMW 7 series gran turisto) ಬಿಎಂಡಬ್ಲ್ಯು 7 ಸರಣಿ (BMW 7 series), ಬಿಎಂಡಬ್ಲ್ಯು ಎಕ್ಸ್1 (BMW X1),  ಬಿಎಂಡಬ್ಲ್ಯು ಎಕ್ಸ್3 (BMW X3) ಬಿಎಂಡಬ್ಲ್ಯು ಎಕ್ಸ್5 ( BMW X5) , ಬಿಎಂಡಬ್ಲ್ಯು ಎಕ್ಸ್7 (BMW X7)  ಮತ್ತು ಮಿನಿ ಕಂಟ್ರೀಮ್ಯಾನ್ (MINI Countryman). 

Tap to resize

Latest Videos

ಇದನ್ನೂ ಓದಿ: BMW MINI ಭಾರತದಲ್ಲಿ 47.20 ಲಕ್ಷ ರೂ. ದರದ ಎಲೆಕ್ಟ್ರಿಕ್ ಮಿನಿ ಕೂಪರ್ ಎಸ್ ಬಿಡುಗಡೆ!

ಈ ಘಟಕದಲ್ಲಿ ಶೇ.100ರಷ್ಟು ಹಸಿರು ಇಂಧನ ಬಳಸಲಾಗುತ್ತದೆ, ದೇಶದ ಒಟ್ಟು ಬಿಎಂಡಬ್ಲ್ಯು ಸಮೂಹದಲ್ಲಿ 650ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದಾರೆ.ಇತ್ತೀಚೆಗೆ ಬಿಎಂಡಬ್ಲ್ಯು ಸಮೂಹ ಭಾರತದಲ್ಲಿ ಆಲ್-ಎಲೆಕ್ಟ್ರಿಕ್ ಮಿನಿ ಕೂಪರ್ ಎಸ್ಇ (MINI couper SE) ಅನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ 47.20 ಲಕ್ಷ  ರೂ. (ಎಕ್ಸ್ ಶೋರೂಂ).  ಇದು ಸಂಪೂರ್ಣವಾಗಿ ಆಮದು ಮಾಡಲಾದ ಮಾದರಿಯಾಗಿದೆ. ಇದು 50 ಕೆಡಬ್ಲ್ಯು (50kW) ಚಾರ್ಜ್ ಪಾಯಿಂಟ್ ಮೂಲಕ 36 ನಿಮಿಷಗಳಲ್ಲಿ ಶೇ. 0-80 ರಷ್ಟು ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 

ಎ11ಕೆಡಬ್ಲ್ಯು (A11kW ವಾಲ್ ಬಾಕ್ಸ್) 150 ನಿಮಿಷಗಳಲ್ಲಿ ಶೇ. 0-80ರಷ್ಟು ಚಾರ್ಜ್ ಮಾಡಬಹುದು. ಮೊದಲ ಬ್ಯಾಚ್ನಲ್ಲಿ ಭಾರತಕ್ಕೆ ಕೇವಲ 30 ವಾಹನಗಳು ಬರಲಿವೆ. 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರೀ ಬುಕ್ ಆಗಿರುವ ವಾಹನಗಳನ್ನು ಡೆಲಿವರಿ ಮಾಡುವುದಾಗಿ ಕಂಪನಿ ತಿಳಿಸಿದೆ.ಇದರೊಂದಿಗೆ ಬಿಎಂಡಬ್ಲ್ಯು ಈಗ ಮತ್ತೊಮ್ಮೆ 2022 ಎಕ್ಸ್4 ಫೇಸ್ಲಿಫ್ಟ್ ಎಸ್ಯುವಿಯ (2022 X4 Facelift SUV) ಮೊದಲ ಲುಕ್ ಬಿಡುಗಡೆಗೊಳಿಸಿದೆ.

ಇದನ್ನೂ ಓದಿMini Electric ಭಾರತದಲ್ಲಿ ದಶಕದ ಸಂಭ್ರಮ, ಮೊದಲ ಆಲ್ ಎಲೆಕ್ಟ್ರಿಕ್ ಮಿನಿ ಕಾರ್ ಬಿಡುಗಡೆ!

ಇದರ ಪ್ರೀ ಬುಕಿಂಗ್ ಈಗಾಗಲೇ ಆರಂಭಗೊಂಡಿದೆ ಮತ್ತು 50 ಸಾವಿರ ರೂ.ಟೋಕನ್ ಮೊತ್ತ ನೀಡಿ ಕಾಯ್ದರಿಸಬಹುದಾಗಿದೆ. ಇದು ಯಾವಾಗ ಬಿಡುಗಡೆಯಾಗಬಹುದುಎ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ದೊರೆತಿರುವ ಮಾಹಿತಿ ಪ್ರಕಾರ, ಹೊಸ ಮಾದರಿ ಹಲವು ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ. ಇದು ಎಲ್ಇಡಿ ಹೆಡ್ಲೈಟ್, 13.2 ಇಂಜಿನ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಇನ್ಫೋಟೈನ್ಮೆಂಟ್ ಟಚ್ಸ್ಕ್ರೀನ್ಗಳನ್ನು ಒಳಗೊಂಡಿರಲಿದೆ.

click me!