BMW ಡ್ರೈವಿಂಗ್-ಮ್ಯೂಸಿಕ್ ಫೆಸ್ಟಿವಲ್, ಏ.12-13ಕ್ಕೆ 2ನೇ ಆವೃತ್ತಿಯ JOYTOWN ಸಂಭ್ರಮ!

By Suvarna News  |  First Published Feb 14, 2024, 5:50 PM IST

BMW ಜಾಯ್‌ಟೌನ್ ಫೆಸ್ಟಿವಲ್ 2ನೇ ಆವೃತ್ತಿಗೆ ಸಜ್ಜಾಗುತ್ತಿದೆ. ಆಕರ್ಷಕ ಸಂಗೀತ, ಡ್ರೈವಿಂಗ್ ಥ್ರಿಲ್ , ವಿವಿಧ ಬಗೆಯ ತಿನಿಸುಗಳ ಸಂಭ್ರಮ ಜೊತೆಗೆ BMW, MINI ಮತ್ತು BMW ಮೋಟಾರ್ರಾಡ್ ವಿನೋದದ ಸವಿ ಆನಂದಿಸಲು ವೇದಿಕೆ ಸಜ್ಜಾಗಿದೆ.
 


ಮುಂಬೈ(ಫೆ.14) BMWಗ್ರೂಪ್ ಇಂಡಿಯಾ ಇದೀಗ ಎರಡನೇ ಆವೃತ್ತಿ ಜಾಯ್‌ಟೌನ್ ವೇದಿಕೆಗೆ ಸಜ್ಜುಗೊಳಿಸಿದೆ. ಎರಡು ದಿನಗಳ ಡ್ರೈವಿಂಗ್, ಮ್ಯೂಸಿಕ್, ಆಹಾರ ಫೆಸ್ಟಿವಲ್ BMW ಗ್ರಾಹಕರು ಹಾಗೂ ಆಸಕ್ತರು ಸಂಭ್ರಮವನ್ನು ಡಬಲ್ ಮಾಡಲಿದೆ. ಎರಡು ದಿನಗಳ ತಲ್ಲೀನಗೊಳಿಸುವ ಬ್ರಾಂಡ್ ಎಕ್ಸ್ ಪೀರಿಯೆನ್ಸ್ ಉತ್ಸವವು ಮುಂಬೈನ ಅಭಿಮಾನಿಗಳು ಮತ್ತು ಉತ್ಸಾಹಿಗಳನ್ನು ಏಪ್ರಿಲ್ 12-13, 2024ರಂದು ಮುಂಬೈನ ಮಹಾಲಕ್ಷ್ಮಿ ರೇಸ್ ಕೋರ್ಸ್‌ನಲ್ಲಿ ನಡೆಯಲಿದೆ.

JOYTOWN ಫೆಸ್ಟಿವಲ್‌ನಲ್ಲಿ BMW, MINI ಮತ್ತು BMW ಮೋಟಾರ್ರಾಡ್ ಕಾರುಗಳು , ಬೈಕ್ ಗಳು, ಸಂಗೀತ, ಮನರಂಜನೆ ತರುವ ಪರಿಪೂರ್ಣ ಮಿಶ್ರಣದ ವಿನೂತನ ಅನುಭವ ನೀಡುತ್ತದೆ. BMWxಡ್ರೈವ್ ಶಕ್ತಿ, ಚುರುಕುತನ ಮತ್ತು ಕಲಿತನವನ್ನು ಪ್ರದರ್ಶಿಸುವ ಪರಿಣಿತರು ವಿಶೇಷವಾಗಿ ವಿನ್ಯಾಸಗೊಳಿಸಲಾದ ಟ್ರ್ಯಾಕ್ ಅನ್ನು ಎಕ್ಸ್ ಪರ್ಟ್ ಮೇಲ್ವಿಚಾರಣೆಯಲ್ಲಿ ಪ್ರದರ್ಶಿಸುತ್ತಾರೆ.ಅದ್ಧೂರಿ ಲೈವ್ ಕಾರ್ಯಕ್ರಮದ ವೇದಿಕೆಯು ಅವಿಸ್ಮರಣೀಯ ಸಂಜೆಗೆ ಸಜ್ಜಾಗಿದೆ. ಈ ಸರಣಿಯಲ್ಲಿ ಜಾಗತಿಕ ಸೆನ್ಸೇಷನ್ ಗಳಾದ ದಿ ಚೈನ್ ಸ್ಮೋಕರ್ಸ್, ಪವರ್ ಹೌಸ್ ಪ್ರದರ್ಶಕರಾದ ದಿಲ್ಜಿತ್ ದೋಸಾಂಜ್ ಡೈನಮಿಕ್ ಮತ್ತು ವೈವಿಧ್ಯಮಯ ಸಂಗೀತದ ಪ್ರಯಾಣ ನೀಡುತ್ತದೆ. ಪ್ರಮುಖ ಕಲಾವಿದರು ಮತ್ತು ಬ್ಯಾಂಡ್ ಗಳು ಇಂಡೀ, ಪಾಪ್ ಮತ್ತು ಎಲೆಕ್ಟ್ರಾನಿಕ್ ಸಂಗೀತವು ಆಡಿಯೊಫಿಲ್ ಗಳು ಮತ್ತು ಸಂಗೀತಪ್ರಿಯರಿಗೆ ಸಮಾನವಾಗಿ ರಂಜಿಸುತ್ತದೆ.

Tap to resize

Latest Videos

undefined

8 ವರ್ಷ ಬ್ಯಾಟರಿ ವಾರೆಂಟಿ, 440 ಕಿ.ಮಿ ಮೈಲೇಜ್: BMW iX1 ಎಲೆಕ್ಟ್ರಿಕ್ ಕಾರು ಬಿಡುಗಡೆ!

ಈ ಕಲಾವಿದರ ಅದ್ಭುತ ಸಮೂಹವನ್ನು ಬುಕ್ ಮೈ ಶೋದ ಲೈನ್ ಮನರಂಜನೆಯ ವಿಭಾಗದ ಬುಕ್ ಮೈಶೋ ಲೈವ್ ರೂಪಿಸಿದೆ.  JOYTOWN ಪ್ರವೇಶದ ಅರ್ಲಿ ಬರ್ಡ್ ಟಿಕೆಟ್ ಗಳು ವಿಶೇಷವಾಗಿ ಬುಕ್ ಮೈಶೋದಲ್ಲಿ INR 3999ಕ್ಕೆ ಲಭ್ಯವಿವೆ. 10 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶ ಉಚಿತ. ಟಿಕೆಟ್ ಗಳನ್ನು ಕಾಯ್ದಿರಿಸಲು Click Here ಮಾಡಿರಿ. 

ಮುಂಬೈನಲ್ಲಿ JOYTOWN ನ ಎರಡನೇ ಆವೃತ್ತಿ ತರುತ್ತಿರುವುದು ಮಹತ್ತರ ಉತ್ಸಾಹವಾಗಿದ್ದು ಇದು ಆವಿಷ್ಕಾರಕ ಉತ್ಸವವಾಗಿದ್ದು ಅದು ಉಜ್ವಲವಾದ ಸಂಗೀತದ ವಿಶ್ವವನ್ನು ಸಂಯೋಜಿಸುತ್ತದೆ ಎಂದು BMW ಗ್ರೂಪ್ ಇಂಡಿಯಾ ಅಧ್ಯಕ್ಷ ವಿಕ್ರಮ್ ಪವಾಹ್ ಹೇಳಿದ್ದಾರೆ.  

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್‌ ಔಟ್‌ ಆದ ಬಿಎಂಡಬ್ಲ್ಯೂ ಐಎಕ್ಸ್‌1 ಐಷಾರಾಮಿ ಎಲೆಕ್ಟ್ರಿಕ್‌ ಎಸ್‌ಯುವಿ!

BMW ಝೋನ್ ಇಡೀ ಉತ್ಪನ್ನ ಶ್ರೇಣಿ ಒಳಗೊಂಡಿದ್ದು ವಿಶೇಷವಾದ ಪ್ರದರ್ಶನ ವಲಯಗಳಾದ ಸಿಟಿ ಸರ್ಕ್ಯೂಟ್, ಅಡ್ವೆಂಚರ್ ಟ್ರೈಲ್, ಅಡ್ರಿನಲಿನ್ ಅಲೇ ಮತ್ತು BMWಎಲೆಕ್ಟ್ರಿಕ್ ಝೋನ್ ಒಳಗೊಂಡಿದೆ.BIG LOVE  ಜೀವನಕ್ಕೆ ಆಶಾದಾಯಕ MINI ಪ್ರವೃತ್ತಿಯಾಗಿದ್ದು ಎಲ್ಲರಿಗೂ ಮುಕ್ತವಾಗಿರುತ್ತದೆ ಮತ್ತು MINI BIG LOVE  ಝೋನ್ ಆವರಣದಲ್ಲಿದ್ದು ಇನ್ವೆಂಟಿವ್ ನೆಸ್, ಕ್ರಿಯೇಟಿವಿಟಿ ಮತ್ತು ರೋಮಾಂಚನ ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಸಂದರ್ಶಕರಿಗೆ MINI ಯ ವಿಶಿಷ್ಟ ಮತ್ತು ಆವಿಷ್ಕಾರಕ ಡಿಸೈನ್ಸ್ ಅನುಭವ ಹೊಂದುವ ಅವಕಾಶ ದೊರೆಯುತ್ತದೆ. ಪ್ರಮುಖವಾಗಿ MINI ಯ ಎರಡು ಪ್ರಮುಖ ಮಾಡೆಲ್ ಗಳಾದ ತನ್ನ ಸಾಹಸದ ಸ್ಫೂರ್ತಿ ಮತ್ತು ವಿಶಾಲ ವಿನ್ಯಾಸದ MINI ಕಂಟ್ರಿಮ್ಯಾನ್ ಮತ್ತು MINI-3 ಲೆಜೆಂಡರಿ ಡೋರ್ ಹ್ಯಾಚ್ ಪ್ರದರ್ಶನದಲ್ಲಿದ್ದು  ಅದು ಕಿರಿದಾದ ನಗರದ ಚಾಲನೆಯಲ್ಲಿ ವಿನೋದ ಮತ್ತು ಚುರುಕುತನದ ಅಂತಃಸ್ಸತ್ವ ಮೈಗೂಡಿದೆ. ಈ ಝೋನ್ MINI ವಿಶ್ವಕ್ಕೆ ತಲ್ಲೀನಗೊಳಿಸುವ ಆವಿಷ್ಕಾರದ ಭರವಸೆ ನೀಡುತ್ತದೆ.

click me!