ಕೊರೋನಾದಿಂದ ತಂದೆ ಸಾವು; ಆಸ್ಪತ್ರೆಗೆ ಕಾರು ನುಗ್ಗಿಸಿ ದಾಂಧಲೆ ಮಾಡಿದ ಜನ ನಾಯಕ!

By Suvarna News  |  First Published May 17, 2021, 2:50 PM IST
  • ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ಸಾವು
  • ಕೋಪಗೊಂಡ ಜನ ನಾಯಕನಿಂದ ಆಸ್ಪತ್ರೆ ಮೇಲೆ ದಾಳಿ
  • ರೋಗಿಗಳು ಚಿಕಿತ್ಸೆ ಪಡೆಯುತ್ತದ ವಾರ್ಡ್‌ಗೆ ಕಾರು ನುಗ್ಗಿಸಿದ ಲೀಡರ್

ನಾಸಿಕ್(ಮೇ.17): ಕೊರೋನಾ ವೈರಸ್ ಕಾರಣ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಕುಟುಂಬಸ್ಥರು ಆಸ್ಪತ್ರೆ ಹಾಗೂ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರೆ, ಇತ್ತ ಸರ್ಕಾರದ ಮೇಲೆ, ಸ್ಥಳೀಯ ಆಡಳಿತ ಮೇಲೂ ಟೀಕೆ ವ್ಯಕ್ತವಾಗುತ್ತಿದೆ. ಇನ್ನೂ ಕೆಲವರು ಆಸ್ಪತ್ರೆ ಮೇಲೆ ದಾಳಿ ಮಾಡಿದ ಘಟನೆಗಳೂ ವರದಿಯಾಗಿದೆ. ಇದೀಗ ನಾಸಿಕ್‌ನ ಬಿಜೆಪಿ MLA ತನ್ನ ತಂದೆಯ ಸಾವಿಗೆ ಸೇಡು ತೀರಿಸಲು ಕೋವಿಡ್ ಕೇರ್ ಸೆಂಟರ್ ವಾರ್ಡ್ ಒಳಗೆ ಕಾರು ನುಗ್ಗಿಸಿ ದಾಂಧಲೆ ಮಾಡಿದ ಘಟನೆ ನಡೆದಿದೆ.

ಪ್ರಧಾನಿ ಮೋದಿ ಟೀಕಿಸಿದ ಪೊಸ್ಟರ್ ಪ್ರಕರಣದ ಹಿಂದೆ ಆಮ್ ಆದ್ಮಿ; 25 ಮಂದಿ ಅರೆಸ್ಟ್!.

Tap to resize

Latest Videos

undefined

ಆಸ್ಪತ್ರೆಗೆ ಕಾರು ನುಗ್ಗಿಸಿ ದಾಂಧೆ ಮಾಡಿದ ಬಿಜೆಪಿ ನಾಯಕ ರಾಜೇಂದ್ರ ತಾಂಜೆ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ನಾಸಿಕ್‌ನ ಬೈಕ್ಟೋ ಕೋವಿಡ್ ಕೇರ್ ಸೆಂಟರ್‍‌ನಲ್ಲಿ ರಾಜೇಂದ್ರ ತಾಂಜೆ ತಂದೆ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾಂಜೆ ತಂದೆ ಸಾವನ್ನಪ್ಪಿದ್ದರು.

ಈ ಘಟನೆಯಿಂದ ಆಕ್ರೋಶಗೊಂಡ  ತಾಂಜೆ ತಂದೆ ಸಾವಿಗೆ ಕಾರಣರಾದ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ದಾಳಿ ಮಾಡಲುು ಮುಂದಾಗಿದ್ದದಾರೆ. ಶನಿವಾರ (ಮೇ.15) ರಂದು ತಾಂಜೆ ಕಂಠ ಪೂರ್ತಿ ಕುಡಿದು, ರಾತ್ರಿ ತಮ್ಮ ಇನೋವಾ ಕಾರನ್ನು ಬೈಕ್ಟೋ ಕೋವಿಡ್ ಕೇರ್ ಸೆಂಟರ್ ವಾರ್ಡ್‌ನೊಳಗೆ ನುಗ್ಗಿಸಿದ್ದಾರೆ. 

ಕೋವಿಡ್ ಕೇರ್ ಸೆಂಟರ್ ಮುಂಭಾಗದಲ್ಲಿ ಹಾಕಲಾಗಿದ್ದ ಗಾಜು ಸಂಪೂರ್ಣ ಪುಡಿ ಪುಡಿಯಾಗಿದೆ. ಪಕ್ಕದಲ್ಲೇ ಕೋವಿಡ್ ಸೋಂಕಿತರು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಆಸ್ಪತ್ರಯಲ್ಲಿ ಚೇತರಿಸಿಕೊಳ್ಳುತ್ತಿರುವ ಹಲವ ಸೋಂಕಿತರು ವಾಕಿಂಗ್ ಮಾಡುತ್ತಿದ್ದ ಸಮಯದಲ್ಲೇ ತಾಂಜೆ ಕಾರು ನುಗ್ಗಿಸಿ ದಾಂಧಲೆ ಮಾಡಿದ್ದಾರೆ.

ತಕ್ಷಣವೇ ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ತಾಂಜೆಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಂದೆಯ ಅಗಲಿಕೆಯ ನೋವಿಗೆ ಈ ರೀತಿ ಮಾಡಿರುವುದಾಗಿ ತಾಂಜೆ ಹೇಳಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಸರಿಯಾದ ಆರೈಕೆ ಸಿಗುತ್ತಿಲ್ಲ. ಇದರಿಂದ ಹಲವರು ಸಮಸ್ಯೆಯಲ್ಲಿ ಸಿಲುಕಿದ್ದಾರೆ ಎಂದು ವಿಚಾರಣೆಯಲ್ಲಿ ಹೇಳಿದ್ದಾರೆ.

 

click me!