8 ಕೋಟಿ ರೂ. ಮೌಲ್ಯದ ರೋಲ್ಸ್‌ ರಾಯ್ಸ್‌ ಕಾರು ಬಿಟ್ಟು ಟಾಟಾ ವಾಹನದಲ್ಲಿ ಪ್ರಯಾಣ ಮಾಡಿದ ಅನಂತ್ ಅಂಬಾನಿ!

By BK Ashwin  |  First Published Jan 6, 2024, 5:23 PM IST

ಟಾಟಾ ಕಂಪನಿಯ ರೇಂಜ್ ರೋವರ್ ಎಸ್‌ಯುವಿಯಲ್ಲಿ ಅನಂತ್ ಅಂಬಾನಿ ಪ್ರಯಾಣಿಸಿದ್ದಾರೆ. ಹಾಗೂ, ರೇಂಜ್ ರೋವರ್ ಎಸ್‌ಯುವಿ ರೋಲ್ಸ್ ರಾಯ್ಸ್ ಕಲಿನನ್‌ಗಿಂತ ಅಗ್ಗವಾಗಿದೆ.


ಮುಂಬೈ (ಜನವರಿ 6, 2024): ಮುಕೇಶ್ ಅಂಬಾನಿ ಅವರ ಕುಟುಂಬವು ದೇಶದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ. ಹಾಗೂ, ಕುಟುಂಬದ ಸದಸ್ಯರು ಅವರು ಹೋದಲ್ಲೆಲ್ಲಾ ಭದ್ರತಾ ಕಾರುಗಳ ದೀರ್ಘ ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಾರೆ. ಇದೇ ರೀತಿ, ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಅತಿ ದುಬಾರಿ ಐಷಾರಾಮಿ ಕಾರುಗಳಲ್ಲಿ ಸಂಚರಿಸುತ್ತಾರೆ.

ಮುಕೇಶ್‌ ಅಂಬಾನಿಯವರ 15 ಸಾವಿರ ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆಯ ಪಾರ್ಕಿಂಗ್ ಸ್ಥಳದಲ್ಲಿ ಹಲವು ಉನ್ನತ ಮಟ್ಟದ ಕಾರುಗಳು ಇವೆ. ಈ ಪೈಕಿ, ಮುಕೇಶ್ ಅಂಬಾನಿ ‘ಬಾಂಬ್ ಪ್ರೂಫ್’ Mercedes-Benz S680 ಗಾರ್ಡ್ ಸೆಡಾನ್‌ನಲ್ಲಿ ಪ್ರಯಾಣಿಸಿದರೆ, ಅನಂತ್ ಅಂಬಾನಿ ಆಗಾಗ್ಗೆ ರೋಲ್ಸ್ ರಾಯ್ಸ್ ಕಲ್ಲಿನನ್ SUV ಕಾರಿನಲ್ಲಿ ಪ್ರಯಾಣಿಸುತ್ತಾರೆ.

Tap to resize

Latest Videos

undefined

 

ಮದ್ವೆ ಎಂಟ್ರಿ ಅಂದ್ರೆ ಇದಪ್ಪಾ...! ಮದುಮಕ್ಕಳನ್ನು ಬಿಟ್ಟು ಅಂಬಾನಿ ದಂಪತಿಯನ್ನೇ ನೋಡಿದ ಅತಿಥಿಗಳು!

ಆದರೆ, ಅಪರೂಪದ ದೃಶ್ಯದಲ್ಲಿ ಟಾಟಾ ಕಂಪನಿಯ ರೇಂಜ್ ರೋವರ್ ಎಸ್‌ಯುವಿಯಲ್ಲಿ ಅನಂತ್ ಅಂಬಾನಿ ಪ್ರಯಾಣಿಸಿದ್ದಾರೆ. ಹಾಗೂ, ರೇಂಜ್ ರೋವರ್ ಎಸ್‌ಯುವಿ ರೋಲ್ಸ್ ರಾಯ್ಸ್ ಕಲಿನನ್‌ಗಿಂತ ತುಲನಾತ್ಮಕವಾಗಿ ಅಗ್ಗವಾಗಿದೆ. ರೋಲ್ಸ್ ರಾಯ್ಸ್ ಕಲಿನನ್ ಭಾರತದ ಅತ್ಯಂತ ದುಬಾರಿ ಎಸ್‌ಯುವಿಯಾಗಿದ್ದು, ಇದರ ಬೆಲೆ 8 ಕೋಟಿ ರೂ.

turns heads at the Kalina Airport, effortlessly blending luxury!🤩✈️ pic.twitter.com/bESV1LLRxR

— Bollywood Khabri (@BwoodKhabri09)

ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ, ರಿಲಯನ್ಸ್ ನ್ಯೂ ಎನರ್ಜಿ ಬ್ಯುಸಿನೆಸ್ ಅನ್ನು ನೋಡಿಕೊಳ್ಳುತ್ತಿದ್ದಾರೆ. ಇವರ ಹೆಸರಲ್ಲಿನಲ್ಲಿರೋ ನಿವ್ವಳ ಆಸ್ತಿ ಮೌಲ್ಯ ತಿಳಿದಿಲ್ಲವಾದರೂ, ಅವರು ದೇಶದ ಅನೇಕ ಬಿಲಿಯನೇರ್‌ಗಳಿಗಿಂತ ಹೆಚ್ಚು ಶ್ರೀಮಂತರಾಗಿದ್ದಾರೆ ಎಂದು ವರದಿಯಾಗಿದೆ. ಅನಂತ್ ಅಂಬಾನಿ ವಾಚ್‌ಗಳು ಮತ್ತು ಕಾರುಗಳಲ್ಲಿ ತಮ್ಮ ವಿಲಕ್ಷಣ ಅಭಿರುಚಿಗೆ ಹೆಸರುವಾಸಿಯಾಗಿದ್ದಾರೆ.

ಅನಂತ್ ಅಂಬಾನಿ ಅಮೆರಿಕದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಧ್ಯಯನ ಮುಗಿಸಿದರು ಮತ್ತು ಈಗ ರಿಲಯನ್ಸ್ ನ್ಯೂ ಎನರ್ಜಿ ಬಿಸಿನೆಸ್ ಅನ್ನು ನಿರ್ವಹಿಸುತ್ತಿದ್ದಾರೆ. ಅವರು ರಿಲಯನ್ಸ್ 02C ಮತ್ತು ರಿಲಯನ್ಸ್ ನ್ಯೂ ಸೋಲಾರ್ ಎನರ್ಜಿಯ ನಿರ್ದೇಶಕರ ಹುದ್ದೆಯಲ್ಲಿದ್ದಾರೆ. ಇನ್ನು, ಅನಂತ್ ಅಂಬಾನಿ ಅವರ ನಿವ್ವಳ ಆಸ್ತಿ ಮೌಲ್ಯವು 40 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಎಂದು ಹೇಳಲಾಗಿದೆ.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅದ್ಧೂರಿ ಮದುವೆಗೆ ಇನ್ನೆಷ್ಟು ದಿನ ಕಾಯಬೇಕು?

click me!