ಎಲೆಕ್ಟ್ರಿಕ್‌ ಜರ್ನಿ ಆರಂಭಿಸಿದ ಪುನೀತ್‌ ರಾಜ್‌ಕುಮಾರ್‌ ಮಿಲನ ಬ್ಯೂಟಿ ಪಾರ್ವತಿ, ಮಹೀಂದ್ರಾ ಕಾರ್‌ ಆಯ್ಕೆಯ ಹಿಂದಿದೆ ಈ ರಹಸ್ಯ!

Published : Aug 24, 2026, 04:31 PM IST
Parvathy Thiruvothu New Car

ಸಾರಾಂಶ

'ಮಿಲನ' ಚಿತ್ರದ ನಟಿ ಪಾರ್ವತಿ ತಿರುವೋತ್ ಹೊಸ ಮಹೀಂದ್ರಾ ಎಕ್ಸ್‌ಇವಿ 9e ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸಿದ್ದಾರೆ. ಈ ಕಾರಿನ ಚಾಲನಾ ಅನುಭವ, ಹಿಂಬದಿ ಸೀಟಿನ ಆರಾಮ ಹಾಗೂ ಮೌಲ್ಯಕ್ಕೆ ತಕ್ಕ ಸೌಲಭ್ಯಗಳು ತಮಗೆ ಇಷ್ಟವಾಗಿವೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಬೆಂಗಳೂರು (ಆ.24):  ತಮ್ಮ ಅದ್ಭುತ ಅಭಿನಯದ ಮೂಲಕ ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ಪಾರ್ವತಿ ತಿರುವೋತ್ ತಮ್ಮ ಗ್ಯಾರೇಜ್‌ಗೆ ಹೊಸ ಐಷಾರಾಮಿ ಕಾರ್‌ ಖರೀದಿ ಮಾಡಿದ್ದಾರೆ. ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ ಸೂಪರ್‌ಹಿಟ್‌ ಸಿನಿಮಾ ಮಿಲನ ಹಾಗೂ ಪೃಥ್ವಿ ಚಿತ್ರದಲ್ಲಿ ನಟಿಸಿದ್ದ ಪಾರ್ವತಿ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡಿಲ್ಲ. ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಐ ನೋಬಡಿ' (I Nobody) ಸಿನಿಮಾದಲ್ಲಿ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡು ಮೆಚ್ಚುಗೆ ಪಡೆದಿದ್ದ ನಟಿ, ಇದೀಗ ಹೊಸ ಇಂಟೆಲಿಜೆಂಟ್ ಎಲೆಕ್ಟ್ರಿಕ್ ಎಸ್‌ಯುವಿ ಒಂದಕ್ಕೆ ಒಡತಿಯಾಗಿದ್ದಾರೆ.

ಮಹೀಂದ್ರಾ ಸಂಸ್ಥೆಯ ಅತ್ಯಂತ ಆಧುನಿಕ ಇವಿ ಮಾಡೆಲ್ ಆಗಿರುವ 'ಮಹೀಂದ್ರಾ ಎಕ್ಸ್‌ಇವಿ 9e' (Mahindra XEV 9e) ಕಾರ್‌ ಅನ್ನು ಪಾರ್ವತಿ ಖರೀದಿಸಿದ್ದಾರೆ. ಕೊಚ್ಚಿಯ ಶೋರೂಂಗೆ ತಮ್ಮ ತಂದೆ ಮತ್ತು ತಾಯಿಯೊಂದಿಗೆ ಆಗಮಿಸಿ ಅವರು ಕಾರಿನ ಡೆಲಿವರಿ ಪಡೆದುಕೊಂಡಿದ್ದಾರೆ. ಈ ಸಂಭ್ರಮದ ಕ್ಷಣದ 'ರೀಲ್ಸ್' ವಿಡಿಯೋವನ್ನು 'ಆಟೋಬಾನ್ ಮಹೀಂದ್ರಾ' (Autobahn Mahindra) ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

'ನನ್ನ ಪಾಲಿಗೆ ಇದು ಬ್ರ್ಯಾಂಡ್ ನ್ಯೂ ಬೀಸ್ಟ್' - ನಟಿ ಪಾರ್ವತಿ

ಕಾರು ಡೆಲಿವರಿ ಪಡೆದ ಬಳಿಕ ಮಾತನಾಡಿದ ನಟಿ ಪಾರ್ವತಿ ತಿರುವೋತ್, "ಈ ವಾಹನವನ್ನು ನೋಡಿದರೆ ನನಗೆ ಇದು ಬೀಸ್ಟ್‌ ತರಹ ಅನಿಸುತ್ತದೆ. ಈ ಕಾರಿನಲ್ಲಿ ಮುಖ್ಯವಾಗಿ ಮೂರು ಸಂಗತಿಗಳು ನನಗೆ ಅವೆಲ್ಲವೂ ಇಷ್ಟವಾಗಿವೆ," ಎಂದು ಸಂತಸ ವ್ಯಕ್ತಪಡಿಸಿದರು:

ಡ್ರೈವಿಂಗ್ ಕಂಫರ್ಟ್: ಚಾಲನೆ ಮಾಡುವವರಿಗೆ ಅತ್ಯುತ್ತಮ ಕಂಫರ್ಟ್ ಹಾಗೂ ಮೋಜಿನ ಡ್ರೈವಿಂಗ್ ಅನುಭವ (Fun Joy Driving Experience) ನೀಡುತ್ತದೆ.

ದ್ವಿತೀಯ ಸಾಲಿನ ಆಸನ (Second Row Seats): ನನ್ನ ತಂದೆ-ತಾಯಿಗೆ ಅತ್ಯಂತ ಆರಾಮದಾಯಕ ಮತ್ತು ಸುಖಕರ ಪ್ರಯಾಣವನ್ನು ಖಾತರಿಪಡಿಸುವುದು ನನಗೆ ಮುಖ್ಯವಾಗಿತ್ತು. ಈ ಕಾರಿನ ಹಿಂಭಾಗದ ಸೀಟುಗಳು ಆ ಅಗತ್ಯವನ್ನು ಸಂಪೂರ್ಣವಾಗಿ ಪೂರೈಸುತ್ತವೆ.

ಮೌಲ್ಯಕ್ಕೆ ತಕ್ಕ ಸೌಲಭ್ಯ (Value for Money): ಈ ಬೆಲೆಗೆ ಅತ್ಯುತ್ತಮ ಹಾಗೂ ಆಧುನಿಕ ಸೌಲಭ್ಯಗಳನ್ನು ನೀಡಲಾಗಿದೆ. ಜೊತೆಗೆ ಇದು ಎಲೆಕ್ಟ್ರಿಕ್ ವಾಹನವಾಗಿರುವುದರಿಂದ ಪರಿಸರಕ್ಕೂ ಯಾವುದೇ ಹಾನಿಯಿಲ್ಲ.

ಎಕ್ಸ್‌ಇವಿ 9e ಕಾರಿನ ವೈಶಿಷ್ಟ್ಯಗಳು ಹಾಗೂ ಬೆಲೆ

ಆರಂಭಿಕ ಬೆಲೆ: ಈ ಕಾರಿನ ಶೋರೂಂ ಬೆಲೆ ₹21.90 ಲಕ್ಷದಿಂದ (Ex-showroom) ಪ್ರಾರಂಭವಾಗುತ್ತದೆ.

ಬ್ಯಾಟರಿ ಹಾಗೂ ಮೈಲೇಜ್: 59 kWh ಮತ್ತು 79 kWh ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದ್ದು, ಒಮ್ಮೆ ಚಾರ್ಜ್ ಮಾಡಿದರೆ 500 ಕಿಲೋಮೀಟರ್‌ಗಿಂತಲೂ ಹೆಚ್ಚಿನ ಮೈಲೇಜ್ (Range) ನೀಡುತ್ತದೆ.

ವೇಗ: ಕೇವಲ 6.8 ಸೆಕೆಂಡುಗಳಲ್ಲಿ 0 ಯಿಂದ 100 ಕಿಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಇತರ ಫೀಚರ್ಸ್‌: ಕಾರಿನೊಳಗೆ 31-ಇಂಚಿನ ವಿಶಾಲವಾದ 'ಸಿನಿಮಾಸ್ಕೋಪಿಕ್' ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ (Cinemascopic Infotainment Display), ಪನೋರಮಿಕ್ ಸನ್‌ರೂಫ್ ಹಾಗೂ ವಿವಿಧ ಮಾದರಿಯ ಡ್ರೈವ್ ಮೋಡ್‌ಗಳು ಸೇರಿ ಹತ್ತಾರು ಪ್ರೀಮಿಯಂ ಫೀಚರ್‌ಗಳನ್ನು ಒದಗಿಸಲಾಗಿದೆ.

PREV
Read more Articles on
click me!

Recommended Stories

ಟ್ರಾನ್ಸ್‌ಫಾರ್ಮರ್ ಕದಿಯೋಕೆ ಹೋದ್ರು; ಕೆಸರು ‘ನೋ ಎಂಟ್ರಿ’ ಅಂದಿತು! ಕಳ್ಳರ ಕಾರು-ಟ್ರಕ್‌ ಎರಡೂ ಸಿಕ್ಕಿಬಿತ್ತು
ಸೆ.1ರ ಒಳಗಾಗಿ ಬುಕ್ ಮಾಡಿ; ಟಾಟಾ ನೆಕ್ಸಾನ್, ಪಂಚ್, ಹ್ಯಾರಿಯರ್ ಸೇರಿ ಎಲ್ಲಾ ಕಾರುಗಳ ದರ ಭಾರೀ ಏರಿಕೆ!