ರೈತರನ್ನು 'ಉದ್ಧಾರ' ಮಾಡಕ್ಕೆ ಬರ್ತಿದೆ ವಾಲ್‌ಮಾರ್ಟ್: 181 ಕೋಟಿ ಹೂಡಿಕೆ!

Published : Sep 27, 2018, 05:28 PM IST
ರೈತರನ್ನು 'ಉದ್ಧಾರ' ಮಾಡಕ್ಕೆ ಬರ್ತಿದೆ ವಾಲ್‌ಮಾರ್ಟ್: 181 ಕೋಟಿ ಹೂಡಿಕೆ!

ಸಾರಾಂಶ

ಭಾರತದ ರೈತರನ್ನು ಉದ್ಧಾರ ಮಾಡತ್ತಂತೆ ವಾಲ್‌ಮಾರ್ಟ್! ರೈತರಿಗಾಗಿ ಬರೋಬ್ಬರಿ 181 ಕೋಟಿ ರೂ. ಹೂಡಿಕೆ ಮಾಡ್ತಿದೆ ವಾಲ್‌ಮಾರ್ಟ್! ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಕನಸಿಗೆ ಸಾಥ್! ರೈತರ ಜೀವನೋಪಾಯ ಸುಧಾರಿಸಲು ಭಾರತದಲ್ಲಿ ಭಾರೀ ಹೂಡಿಕೆ

ನವದೆಹಲಿ(ಸೆ.27): 2023ರ ವೇಳೆಗೆ ಚಿಲ್ಲರೆ ವಹಿವಾಟು ದೈತ್ಯ ಸಂಸ್ಥೆಯಾದ ವಾಲ್‌ಮಾರ್ಟ್ ಭಾರತದಲ್ಲಿ 181 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಮೂಲಕ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಯಾದ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವದಕ್ಕೆ ಸಹಕರಿಸಲಿದೆ.

ಮುಂದಿನ ಐದು ವರ್ಷಗಳಲ್ಲಿ ರೈತರ ಜೀವನೋಪಾಯವನ್ನು ಸುಧಾರಿಸಲು ವಾಲ್‌ಮಾರ್ಟ್ ಫೌಂಡೇಶನ್ 25 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎನ್ನಲಾಗಿದೆ.

ಚಿಲ್ಲರೆ ಕ್ಷೇತ್ರದ ದೈತ್ಯ ಮುಂದಿನ ಐದು ವರ್ಷಗಳಲ್ಲಿ ತನ್ನ ಕ್ಯಾಶ್ ಆಂಡ್ ಕ್ಯಾರಿ ಳಿಗೆಯಲ್ಲಿ ಮಾರಾಟವಾದ ಶೇ.25 ರಷ್ಟು ಆದಾಯವನ್ನು ನೇರವಾಗಿ ರೈತರಿಗೆ ನೀಡುವ ಗುರಿ ಇದೆ. ಸಣ್ಣ ರೈತರು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿದ್ದು  ಈ ಕ್ಷೇತ್ರದಲ್ಲಿ ಶೇ. 50ರಷ್ಟು ಮಂದಿ ತೊಡಗಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ.

2022 ರ ಹೊತ್ತಿಗೆ ರೈತರು ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ಅದರ ಉಪಕ್ರಮವು ಭಾರತದ ಆಹಾರ ಭದ್ರತೆಯನ್ನು ಸುಧಾರಿಸುತ್ತದೆ ಮತ್ತು ಆರ್ಥಿಕತೆಯನ್ನು  ಬಲಪಡಿಸುತ್ತದೆ ಎನ್ನುವ ವಿಶ್ವಾಸವಿದೆ.

ಹೊಸ ಹೂಡಿಕೆಯಿಂದ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ಧಿಗೆ ಸಹಾಯ ಆಗಲಿದ್ದು ಗ್ರಾಮೀಣ ಪ್ರದೇಶಗಳ ಆದಾಯ ಹೆಚ್ಚಳವಾಗಲಿದೆ. ರೈತ ಸಂಘಟನೆಗಳಿಗೆ ಅಧಿಕಾರ ನೀಡಿ ರಾಷ್ಟ್ರವ್ಯಾಪಿ ರೈತರ ಬೆಂಬಲ ಜಾಲಕ್ಕೆ ಸಂಪರ್ಕ ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಹೇಳಿದೆ.

ಲಕ್ನೋದಲ್ಲಿ ಹಣಕಾಸಿನ ಉಪಕ್ರಮವನ್ನು ಘೋಷಿಸಿದ ವಾಲ್‌ಮಾರ್ಟ್ ಇಂಟರ್ ನ್ಯಾಷನಲ್ ಮುಖ್ಯ ಕಾರ್ಯನಿರ್ವಾಹಕ ಜುಡಿತ್ ಮ್ಯಾಕ್ಕೆನಾ, ಕಂಪನಿಯು ಸಣ್ಣ ರೈತರಿಗೆ ಹೆಚ್ಚು ಅವಕಾಶವನ್ನು ಸೃಷ್ಟಿಸುತ್ತಿದೆ ದೇಶಾದ್ಯಂತ ಅದರ ಸರಕು ಸರಬರಾಜು ಸರಪಣಿಗೆ ಮತ್ತು ಅಂಗಡಿಗಳಿಗೆ ಕೃಷಿ ಉತ್ಪನ್ನಗಳನ್ನು ಅಲ್ಲಿನ ಸ್ಥಳೀಯ ಮೂಲಗಳಿಂದಲೇ ಖರೀದಿಸಲಾಗುತ್ತದೆ ಎಂದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!