ಪ್ರತಿಯೊಬ್ಬರೂ ಉತ್ತಮ ಆರೋಗ್ಯಕ್ಕಾಗಿ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಮಾಡ್ಲೇಬೇಕು. ಬರೀ ಇದನ್ನು ಮಾಡಿ ಆರೋಗ್ಯ ಕಾಪಾಡಿಕೊಳ್ತಿರೋರು ನೀವಾಗಿದ್ದರೆ, ಇನ್ಮುಂದೆ ವರ್ಕ್ ಔಟ್ ಮಾಡ್ತಾ ಹಣ ಗಳಿಕೆ ಶುರು ಮಾಡಿ. ಅದು ಹೇಗೆ ಅಂತಾ ನಾವು ಹೇಳ್ತೇವೆ.
ಜೀವನದುದ್ದಕ್ಕೂ ಫಿಟ್ನೆಸ್ ಕಾಯ್ದುಕೊಳ್ಳುವುದು ಬಹಳ ಮುಖ್ಯ. ದೈಹಿಕ ಆರೋಗ್ಯಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ನಿಯಮಿತವಾಗಿ ವಾಕಿಂಗ್ ಮಾಡ್ಬೇಕು. ಫಿಟ್ನೆಸ್ ನಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆ ಮತ್ತು ಮಾನಸಿಕ ಖಿನ್ನತೆಯಿಂದ ದೂರವಿರಬಹುದು. ವೈದ್ಯಕೀಯ ವೆಚ್ಚ ಇದ್ರಿಂದ ಕಡಿಮೆಯಾಗುತ್ತದೆ. ನೀವು ಪ್ರತಿ ದಿನ ನಿಯಮಿತವಾಗಿ ವಾಕಿಂಗ್ ಮಾಡ್ತೀರಿ ಎಂದಾದ್ರೆ ವಾಕಿಂಗ್ ಜೊತೆ ಹಣ ಗಳಿಸಲು ಅವಕಾಶವಿದೆ. ಅನೇಕ ಫಿಟ್ನೆಸ್ ಅಪ್ಲಿಕೇಶನ್ ಗಳು ನಿಮಗೆ ಉಡುಗೊರೆ, ಹಣವನ್ನು ನೀಡುತ್ತವೆ. ನಾವಿಂದು ವಾಕಿಂಗ್ ಮಾಡ್ತಾ ಹಣ ಗಳಿಸಲು ನಿಮಗೆ ನೆರವಾಗುವು ಅಪ್ಲಿಕೇಷನ್ ಯಾವುದು ಅಂತಾ ಹೇಳ್ತೇವೆ.
ಗ್ರೋಫಿಟರ್ (Growfitter) : ಗೂಗಲ್ ಪ್ಲೇ ಸ್ಟೋರ್ ನಿಂದ ನೀವು ಗ್ರೋಫಿಟರ್ ಅಪ್ಲಿಕೇಷನ್ ಡೌನ್ಲೋಡ್ ಮಾಡ್ಬೇಕು. ನೀವು ಸೈನ್ ಅಪ್ ಮಾಡ್ತಿದ್ದಂತೆ 20 ಕ್ವಾಯಿನ್ಸ್ ಸಿಗುತ್ತದೆ. ನೀವು ಬೇರೆಯವರಿಗೆ ರೆಫರ್ ಮಾಡಿದ್ರೆ ನಿಮಗೆ 15 ಕ್ವಾಯಿನ್ಸ್ ಸಿಗುತ್ತದೆ. ಮೌಂಟೇನ್ ಬೈಕ್, ಚಿನ್ನದ ನಾಣ್ಯ, ಮೊಬೈಲ್ ಫೋನ್, ಅಲೆಕ್ಸಾ, ಯೋಗ ಮ್ಯಾಟ್, ವೋಚರ್ ಗಳು ಈ ಅಪ್ಲಿಕೇಷನ್ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಷನ್ ನಲ್ಲಿ ವಾಕಿಂಗ್, ರನ್ನಿಂಗ್ ಮತ್ತು ಸೈಕ್ಲಿಂಗ್ ಮಾಡಿದವರಿಗೆ ರಿವಾರ್ಡ್ ಸಿಗುತ್ತದೆ. ಪ್ರತಿದಿನ ನೀವು ಪ್ರತಿ 1,000 ಹೆಜ್ಜೆ ನಡೆದ್ರೆ ನಿಮಗೆ ಒಂದು GroFitter ಪಾಯಿಂಟ್ ಸಿಗುತ್ತದೆ. ಈ ಪಾಯಿಂಟ್ ಮೂಲಕ ನೀವು ನಿಮ್ಮಿಷ್ಟದ ವಸ್ತುವನ್ನು ಖರೀದಿ ಮಾಡಬಹುದು. ಅದನ್ನು ಅಪ್ಲಿಕೇಷನ್ ಮನೆಗೆ ಉಚಿತವಾಗಿ ವಿತರಿಸುತ್ತದೆ.
Business Ideas : ಬಹುಬೇಡಿಕೆಯಿರುವ ಈ ಬ್ಯುಸಿನೆಸ್ ಶುರು ಮಾಡಿ, ಲಾಭ ಗಳಿಸಿ
ಸ್ಟೆಪ್ ಸೆಟ್ ಗೋ (Step Set Go) : ಈ ಅಪ್ಲಿಕೇಷನ್ ಕೂಡ ಗೋಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಇದು ಪೆಡೋಮೀಟರ್, ಕ್ಯಾಲೋರಿ ಕೌಂಟರ್ ಮತ್ತು ಸ್ಪೋರ್ಟ್ಸ್ ಟ್ರ್ಯಾಕರ್ ಆಗಿದೆ. ನೀವು ನಡೆಯುವ ಪ್ರತಿ ಹೆಜ್ಜೆಗೆ ಇದು ಉಡುಗೊರೆ ನೀಡುತ್ತದೆ. ಆರೋಗ್ಯ, ಫಿಟ್‌ನೆಸ್ ಮತ್ತು ವ್ಯಾಯಾಮದ ಮೂಲಕ ಜನರಿಗೆ ಮನರಂಜನೆ ನೀಡುವ ಗುರಿಯನ್ನು ಇದು ಹೊಂದಿದೆ. ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹೆಜ್ಜೆ ನಡೆಯಿರಿ. ಎಸ್ ಎಸ್ ಜಿ ನಾಣ್ಯವನ್ನು ಪಡೆಯಿರಿ. ಮಿ ಬ್ಯಾಂಡ್, ಐಫೋನ್ ಎಕ್ಸ್ ಎಸ್ ಇತ್ಯಾದಿ ಬಹುಮಾನವನ್ನು ನೀವು ಗೆಲ್ಲಬಹುದು. ಭಾರತ ಮತ್ತು ಇತರ ಹಲವು ದೇಶಗಳಲ್ಲಿ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಷನ್ ಇದಾಗಿದೆ.
ಹ್ಯಾವ್ ಫಿಟ್ನೆಸ್ (Hav. Fitness) : ಇದು ಭಾರತದ ಅತ್ಯಂತ ಜನಪ್ರಿಯ ಅಪ್ಲಿಕೇಷನ್ ಆಗಿದೆ. ಹೊಸ ಆವೃತ್ತಿ ಜೂನ್ 2021ರಂದು ಬಿಡುಗಡೆಯಾಗಿದೆ. ಆಹಾರದ ಅಪ್ಲಿಕೇಷನ್ ಆಗಿದ್ದ ಇದು ಈಗ ನೀರು, ನಿದ್ರೆ, ದೈಹಿಕ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತದೆ. ವಾಕಿಂಗ್ ಮಾಡ್ತಾ ಹಣ ಸಂಪಾದಿಸಲು ಇದು ಒಳ್ಳೆಯ ಅಪ್ಲಿಕೇಷನ್. ಬ್ರ್ಯಾಂಡೆಡ್ ವಸ್ತುಗಳ ವೋಚರ್ ಗಳನ್ನು ಕೂಡ ನೀವು ಪಡೆಯಬಹುದು. ನೀವೇ ಇದ್ರಲ್ಲಿ ಗೋಲ್ ಸೆಟ್ ಮಾಡಿಕೊಳ್ಳಬೇಕು. ಹಾಗೆಯೇ ನಿಮ್ಮ ಸ್ನೇಹಿತರಿಗೆ ಸವಾಲು ಹಾಕಬಹುದು.
Personal Finance: ಆನ್ಲೈನ್ ನಲ್ಲಿ ಹಣ ಗಳಿಸೋದು ಹೇಗೆ?
ರನ್ಟೋಪಿಯಾ (Runtopia) : ರುಂಟೋಪಿಯಾ ಉತ್ತಮ ಸಾಫ್ಟ್ವೇರ್ ಆಗಿದೆ. ಇದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ನಿಮ್ಮ ವಾಕ್ ಟ್ರ್ಯಾಕ್ ಮಾಡಿ ನೀವು ಅನೇಕ ವಸ್ತುಗಳನ್ನು ಮತ್ತು ಹಣವನ್ನು ಗಳಿಸಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದು ಲಭ್ಯವಿದೆ
ಸ್ಟೆಪ್ಬೆಟ್ (Stepbet) : ಇದು ಬರೀ ನಿಮ್ಮ ಹೆಜ್ಜೆಯನ್ನು ಕೌಂಟ್ ಮಾಡಿ ಗಿಫ್ಟ್ ನೀಡೋದಿಲ್ಲ. ಇದ್ರಲ್ಲಿ ನೀವು ಚಾಲೆಂಜ್ ಮಾಡಬೇಕು. ನಿಮಗೆ ಚಾಲೆಂಜ್ ಇಷ್ಟವಿದ್ದರೆ ಮಾತ್ರ ಈ ಅಪ್ಲಿಕೇಷನ್ ಡೌನ್ಲೋಡ್ ಮಾಡಿ. ಚಾಲೆಂಜ್ ಮಾಡಿ ಹಣ ಕಳೆದುಕೊಳ್ಳುವ ಭಯವಿದ್ದರೆ ಇದ್ರ ಸುದ್ದಿಗೆ ಹೋಗ್ಬೇಡಿ.