
ನವದೆಹಲಿ[ಏ.17]: ಇನ್ನು ಮುಂದೆ ಭಾರತದ ಎಲ್ಲಾ ಬ್ಯಾಂಕುಗಳು ವಾರದಲ್ಲಿ 5 ದಿನ ಮಾತ್ರ ತೆರದಿರಲಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಎರಡೂ ದಿನ ಬ್ಯಾಂಕ್ ಕೆಲಸ ನಿರ್ವಹಿಸುವುದಿಲ್ಲ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ, ಬ್ಯಾಂಕುಗಳು ಇನ್ನುಮುಂದೆ ವಾರದಲ್ಲಿ 5 ದಿನ ಕೆಲಸ ಮಾಡುವುದಾಗಿ ಆರ್‌ಬಿಐ ನಿರ್ದೇಶಿಸಿದೆ. ಬ್ಯಾಂಕುಗಳ ಕೆಲಸದ ಅವಧಿ ಬೆಳಗ್ಗೆ 9:30-5:30. ಇದೇ ರೀತಿ ಬೇರೆ ವಿಭಾಗಗಳೂ ಏಕೆ ನಿಯಮ ತರಬಾರದು? ಮೆಟ್ರೋ ಸಿಟಿಗಳಾದ ಮುಂಬೈ, ಸೂರತ್‌ನಲ್ಲಿ ಜನರು ಸಾಕಷ್ಟುಹಣ ದುಡಿಯುತ್ತಾರೆ, ಆದರೆ ಅವರ ಜೀವನ ಗುಣಮಟ್ಟಹೇಗಿದೆ?’ ಎಂದು ಬರೆಯಲಾಗಿದೆ. ಜೂನ್ 1ರಿಂದ ಎಲ್ಲಾ ಬ್ಯಾಂಕುಗಳಲ್ಲಿ ಈ ನಿಯಮ ಜಾರಿಯಾಗುವುದಾಗಿಯೂ ಹೇಳಲಾಗಿದೆ.
ಆದರೆ ಆಲ್ಟ್‌ನ್ಯೂಸ್ ಈ ಬಗ್ಗೆ ಪರಿಶೀಲಿಸಿದಾಗ ಇದೊಂದು ಸುಳ್ಳು ಸಂದೇಶ ಎಂದು ತಿಳಿದುಬಂದಿದೆ. 2017ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಸುಳ್ಳು ಸಂದೇಶ ಹರಿದಾಡುತ್ತಿದೆ. ವಾಸ್ತವವಾಗಿ ಆರ್‌ಬಿಐ ಪ್ರಕಟಣೆ 2015ರ ಪ್ರಕಾರ ಎಲ್ಲಾ ಬ್ಯಾಂಕುಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ಕೆಲಸ ನಿರ್ವಹಿಸುವುದಿಲ್ಲ. ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನ ಕಾರ್ಯನಿರ್ವಹಿಸಲಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.