
ಲಂಡನ್[ಜ.18]: ಭಾರತದ ಬ್ಯಾಂಕ್‌ಗಳಿಗೆ 9,000 ಕೋಟಿ ರು. ಸಾಲ ಮರುಪಾವತಿಸದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, 2008ರಲ್ಲಿ ಫ್ರಾನ್ಸ್‌ನಲ್ಲಿ ಖರೀದಿಸಿದ್ದ ಐಷಾರಾಮಿ ಮನೆ ಸೂಕ್ತ ನಿರ್ವಹಣೆ ಇಲ್ಲದೆ ದೂಳು ಹಿಡಿಯುತ್ತಿದೆ.
ಈ ಮನೆ ಖರೀದಿಗೆ ಮಲ್ಯ ಪಡೆದಿದ್ದ ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಆ ಹಣ ವಸೂಲಿಗೆ ಅವರ ಐಷಾರಾಮಿ ಬಂಗಲೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕೊಡುವಂತೆ ಕತಾನ್ ನ್ಯಾಷನಲ್ ಬ್ಯಾಂಕ್ ಸ್ಥಳೀಯ ಕೋರ್ಟ್‌ಗೆ ಮನವಿ ಮಾಡಿದೆ.
ನಿಮ್ಮ ಗಮನಕ್ಕೆ: ಸೀಜ್ ಮಾಡಿದ ಮಲ್ಯ ಆಸ್ತಿ ಏನ್ಮಾಡಬೇಕೆಂದು ಹೇಳಿದ ಕೋರ್ಟ್!
2008ರಲ್ಲಿ ಮಲ್ಯ ಫ್ರಾನ್ಸ್‌ನ ದ್ವೀಪವೊಂದರಲ್ಲಿ 3.21 ಎಕರೆ ಪ್ರದೇಶದಲ್ಲಿರುವ 17 ಬೆಡ್‌ರೂಮ್‌ಗಳು, ಖಾಸಗಿ ಸಿನಿಮಾ ಹಾಲ್, ಖಾಸಗಿ ಹೆಲಿಪಾಡ್, ಸ್ವಂತದ ನೈಟ್‌ಕ್ಲಬ್ ಸೇರಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ‘ಲೀ ಗ್ರಾಂಡ್ ಜಾರ್ಡಿನ್’ ಎಂಬ ಐಷಾರಾಮಿ ಬಂಗಲೆಯನ್ನು 213 ಕೋಟಿ ರು. ವೆಚ್ಚದಲ್ಲಿ ಖರೀದಿ ಮಾಡಿದ್ದರು. ಆದರೆ ಅದರ ದುರಸ್ತಿ ಕಾರ್ಯ ಸರಿಯಾಗಿ ನಡೆದ ಕಾರಣ ಅದು ದೂಳು ಹಿಡಿಯುತ್ತಿದೆ. ಹೀಗಾಗಿ ಅದರ ಮೌಲ್ಯವೂ ಇಳಿಕೆಯಾಗಿದೆ ಎಂದು ಬ್ಯಾಂಕ್ ಆರೋಪಿಸಿದೆ. ಸದ್ಯ ಈ ಮನೆಯನ್ನೂ ಮಾರಾಟಕ್ಕೆ ಇಡಲಾಗಿದೆ.
ಮಲ್ಯ ಸೇರಿ ಟಾಪ್ 30 ದೊಡ್ಡ ಸುಸ್ತಿದಾರರ ಹೆಸರು ಬಹಿರಂಗ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.