ಕೇಂದ್ರ ಬಜೆಟ್ ಮಂಡನೆಗೆ ತಯಾರಿ ನಡುವೆ ಈ 7 ಕುತೂಹಲ ಮಾಹಿತಿ ನಿಮಗೆ ತಿಳಿದಿರಬೇಕು!

By Chethan Kumar  |  First Published Jul 11, 2024, 3:17 PM IST

2024-25ರ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಸಜ್ಜಾಗಿದ್ದಾರೆ. ಈ ಬಜೆಟ್‌ಗೂ ಮುನ್ನ ಕೇಂದ್ರ ಬಜೆಟ್ ಕುರಿತು ಕೆಲ ರೋಚಕ ಹಾಗೂ ಆಸಕ್ತಿಕರ ಮಾಹಿತಿ ನೀವು ತಿಳಿದಿರಬೇಕು. ಇಲ್ಲಿವೆ ಕೇಂದ್ರ ಬಜೆಟ್‌ನ 7 ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್.
 


ನವದೆಹಲಿ(ಜು.11) ಪ್ರಧಾನಿ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಈ ಆರ್ಥಿಕ ವರ್ಷದ ಪೂರ್ಣ ಪ್ರಮಾಣ ಬಜೆಟ್ ಮಂಡನೆಗೆ ತಯಾರಿ ನಡೆದಿದೆ. ಜುಲೈ 23ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಮಧ್ಯಮಂತರ ಬಜೆಟ್ ಮಂಡಿಸಲಾಗಿತ್ತು. ಮೈತ್ರಿ ಸರ್ಕಾರದ ಕಾರಣ ಈ ಬಾರಿಯ ಬಜೆಟ್ ನಿರೀಕ್ಷೆಗಳು ದುಪ್ಪಟ್ಟಾಗಿದೆ.ಇದರ ನಡುವೆ ಕೇಂದ್ರ ಬಜೆಟ್ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಮೊದಲ ಬಜೆಟ್ ಮಂಡನೆ
ಭಾರತದಲ್ಲಿ ಆರ್ಥಿಕ ವರ್ಷದ ಆಯವ್ಯಯ ಮಂಡನೆ ಆರಂಭಗೊಂಡಿದ್ದು ಬ್ರಿಟಿಷ್ ಕಾಲದಲ್ಲಿ. ಬ್ರಿಟನ್ ಆಡಳಿತದಲ್ಲಿದ್ದ ಕೆಲ ನಿಯಮಗಳು ಭಾರತದಲ್ಲೂ ಜಾರಿಯಾಗಿತ್ತು. ಎಪ್ರಿಲ್ 7, 1860ರಲ್ಲಿ ಭಾರತದಲ್ಲಿ ಮೊದಲ ಬಜೆಟ್ ಮಂಡಿಸಲಾಗಿತ್ತು. ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯಲ್ಲಿ ಈ ಬಜೆಟ್ ಮಂಡನೆಯಾಗಿತ್ತು. ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲಿಯಮ್ಸ್ ಭಾರತದ ಮೊದಲ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Latest Videos

undefined

ಸ್ವಾತಂತ್ರ್ಯ ಭಾರತದ ಮೊದಲ ಬಜೆಟ್
ಸ್ವಾತಂತ್ರ್ಯ ಬಳಿಕ ಮೊದಲ ಬಜೆಟ್ ನವೆಂಬರ್ 26, 1947ರಂದು ಮಂಡಿಸಲಾಯಿತು. ಅಂದಿನ ಹಣಕಾಸು ಸಚಿವ ಆರ್‌ಕೆ ಶಣ್ಮುಖಂ ಚೆಟ್ಟಿ ಈ ಬಜೆಟ್ ಮಂಡಿಸಿದ್ದರು.

ಕೇಂದ್ರ ಬಜೆಟ್‌ನಲ್ಲಿ 50 ಸಾವಿರ ಕೋಟಿ ನೀಡುವಂತೆ ಕಿಂಗ್‌ ಮೇಕರ್‌ಗಳ ಪಟ್ಟು

ಸುದೀರ್ಘ ಬಜೆಟ್ ಭಾಷಣ
ಬಜೆಟ್ ಮಂಡನೆ ವೇಳೆ ಸುದೀರ್ಘ ಬಜೆಟ್ ಮಾಡಿದ ಹೆಗ್ಗಳಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಪಾತ್ರರಾಗಿದ್ದಾರೆ. 2020-21ರಲ್ಲಿ ನಿರ್ಮಲಾ ಸೀತಾರಾಮ್ ಆಯವ್ಯಯ ಮಂಡನೆ ವೇಳೆ 2 ಗಂಟೆ 42 ನಿಮಿಷಗಳ ಕಾಲ ಭಾಷಣ ಮಾಡಿದ್ದರು. ಇದು ಬಜೆಟ್ ಮಂಡನೆಯ ಸುದೀರ್ಘ ಭಾಷಣ ಎಂದು ದಾಖಲಾಗಿದೆ.

ಬಜೆಟ್ ಮಂಡನೆ ಸಮಯ ಬದಲಾಗಿದ್ದು ಯಾವಾಗ?
ಬ್ರಿಟೀಷರ ಆಳ್ವಿಕೆಯಲ್ಲಿ ಅವರ ಅನುಕೂಲತೆ, ಬ್ರಿಟನ್ ಸಮಯಕ್ಕೆ ತಕ್ಕಂತೆ ಭಾರತದಲ್ಲಿ ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು. ಫೆಬ್ರವರಿ 1999ರ ತನಕ ಸಂಜೆ 5 ಗಂಟೆಗೆ ಬಜೆಟ್ ಮಂಡನೆ ಆರಂಭಗೊಳ್ಳುತ್ತಿತ್ತು. ಆದರೆ ಯಶವಂತ್ ಸಿನ್ಹ ಈ ಸಮಯವನ್ನು 5 ರಿಂದ ಬೆಳಗ್ಗೆ 11 ಗಂಟೆಗೆ ಬದಲಾಯಿಸಿದರು.

ಅತೀ ಹೆಚ್ಚು ಪದಗಳ ಬಜೆಟ್ ಭಾಷಣ ದಾಖಲೆ
ಭಾರತದ ಬಜೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಪದಗಳ ಬಜೆಟ್ ಭಾಷಣ ದಾಖಲೆ ಮನ್‌ಮೋಹನ್ ಸಿಂಗ್ ಹೆಸರಿನಲ್ಲಿದೆ. 1991ರ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಮನ್‌ಮೋಹನ್ ಸಿಂಗ್ 18,604 ಪದಗಳ ಬಜೆಟ್ ಭಾಷಣ ಮಾಡಿದ್ದರು.

ಗರಿಷ್ಠ ಬಾರಿ ಬಜೆಟ್ ಮಂಡಿಸಿದ ಕೀರ್ತಿ
ಅತೀ ಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದು ಯಾರು? ಮೊರಾರ್ಜಿ ದೇಸಾಯಿ ಗರಿಷ್ಠ ಭಾರಿ ಬಜೆಟ್ ಮಂಡಿಸಿದ ದಾಖಲೆ ಬರೆದಿದ್ದಾರೆ. ಮೊರಾರ್ಜಿ ದೇಸಾಯಿ 10 ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. 

ಅಕ್ಕಿ ಕೊಡ್ತೇವೆ, ಆದರೆ ಖರೀದಿಗೆ ರಾಜ್ಯದಲ್ಲಿ ಹಣವೇ ಇಲ್ಲ: ಪ್ರಲ್ಹಾದ್ ಜೋಶಿ

ಅತ್ಯಂತ ಕಡಿಮೆ ಬಜೆಟ್ ಭಾಷಣ ಮಾಡಿದ್ದು ಯಾರು?
ನಿರ್ಮಲಾ ಸೀತಾರಾಮನ್ ಸುದೀರ್ಘ ಬಜೆಟ್ ಭಾಷಣ ದಾಖಲೆ ಬರೆದಿದ್ದರೆ, 1977ರಲ್ಲಿ ಹಿರುಭಾಯಿ ಮುಲ್ಲಿಜ್‌ಭಾಯಿ ಪಟೇಲ್(ಹೆಎಂ ಪಟೇಲ್) 800 ಪದಗಳಲ್ಲಿ ಬಜೆಟ್ ಭಾಷಣ ಮುಗಿಸಿದ್ದರು.

click me!