Pe ಪ್ರತ್ಯಯ ಸೇರಿಸಿಕೊಂಡಿರುವ ಬಗ್ಗೆ ಭಾರತ್ ಪೇ ಹಾಗೂ ಫೋನ್ ಪೇ ಕಂಪನಿಗಳ ನಡುವೆ ಕಳೆದ ಐದು ವರ್ಷಗಳಿಂದ ನಡೆಯುತ್ತಿದ್ದ ನ್ಯಾಯಾಂಗ ಹೋರಾಟವನ್ನು ಕೊನೆ ಮಾಡಲು ನಿರ್ಧಾರ ಮಾಡಲಾಗಿದೆ.
ಮುಂಬೈ (ಮೇ.26): ಡಿಜಿಟಲ್ ಪೇಮೆಮಟ್ ಕಂಪನಿಗಳಾದ ಭಾರತ್ ಪೇ (BharatPe) ಹಾಗೂ ಫೋನ್ ಪೇ (PhonePe) ಸಂಸ್ಥೆಗಳು ತಮ್ಮ ಹೆಸರಿನಲ್ಲಿರುವ ಪೇ (Pe) ಪ್ರತ್ಯಯಕ್ಕೆ ಕುರಿತಾದ ಟ್ರೇಡ್‌ಮಾರ್ಕ್‌ಗೆ ಸಂಬಂಧಿಸಿದ ತಮ್ಮ ದೀರ್ಘಕಾಲದ ಕಾನೂನು ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಿದ್ದಾಗಿ ಭಾನುವಾರ ಘೋಷಣೆ ಮಾಡಿದೆ. ಈ ಸೆಟಲ್‌ಮೆಂಟ್‌ನೊಂದಿಗೆ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಎಲ್ಲಾ ರೀತಿಯ ಮುಕ್ತ ನ್ಯಾಯಾಂಗ ಪ್ರಕ್ರಿಯೆಯನ್ನು ಅಂತ್ಯಗೊಳಿಸಲಾಗಿದೆ. ಪೇ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಕಂಪನಿಗಳು ಬಹು ನ್ಯಾಯಾಲಯಗಳಲ್ಲಿ ದೀರ್ಘಕಾಲದ ಕಾನೂನು ವಿವಾದಗಳಲ್ಲಿ ಭಾಗಿಯಾಗಿದ್ದವು. ಮುಂದಿನ ಹಂತವಾಗಿ, BharatPe ಮತ್ತು PhonePe ಈಗಾಗಲೇ ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯಲ್ಲಿ ಪರಸ್ಪರರ ವಿರುದ್ಧದ ಎಲ್ಲಾ ವಿರೋಧಗಳನ್ನು ಹಿಂತೆಗೆದುಕೊಳ್ಳಲು ಕ್ರಮಗಳನ್ನು ತೆಗೆದುಕೊಂಡಿವೆ, ಇದು ತಮ್ಮ ಗುರುತುಗಳ ನೋಂದಣಿಯೊಂದಿಗೆ ಮುಂದುವರಿಯಲು ಸಹಾಯ ಮಾಡುತ್ತದೆ.
ಇದಲ್ಲದೆ, ಎರಡೂ ಸಂಸ್ಥೆಗಳು ದೆಹಲಿ ಹೈಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿರುವ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ಯರ್ಥ ಒಪ್ಪಂದದ ಅಡಿಯಲ್ಲಿ ಕಟ್ಟುಪಾಡುಗಳನ್ನು ಅನುಸರಿಸಲು ಇತರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತವೆ.
ಇದು ಡಿಜಿಟಲ್ ಪೇಮೆಂಟ್ ಇಂಡಸ್ಟ್ರಿಯಲ್ಲಿ ಅತ್ಯಂತ ಧನಾತ್ಮಕ ಬೆಳವಣಿಗೆಯಾಗಿದೆ. ಎರಡೂ ಕಂಪನಿಗಳ ಮ್ಯಾನೇಜ್‌ಮೆಂಟ್ ಈ ಹಂತದಲ್ಲಿ ತೋರಿರುವ ಪ್ರಬುದ್ಧತೆ ಹಾಗೂ ವೃತ್ತಿಪರತೆಯನ್ನು ನಾನು ಮುಕ್ತವಾಗಿ ಶ್ಲಾಘನೆ ಮಾಡುತ್ತೇನೆ. ಈಗಿರುವ ಎಲ್ಲಾ ರೀತಿಯ ಕಾನೂನು ವ್ಯಾಜ್ಯಗಳನ್ನು ಮುಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಆ ಮೂಲಕ ಎರಡೂ ಕಂಪನಿಗಳು ತಮ್ಮ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಡಿಜಿಟಲ್ ಪೇಮೆಂಟ್‌ನ ವ್ಯವಸ್ಥೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಹಾಕುತ್ತೇವೆ ಎಂದು ಭಾರತ್ ಪೇ ಕಂಪನಿಯ ನಿರ್ದೇಶಕ ಮಂಡಳಿಯ ಚೇರ್ಮನ್ ರಜನೀಶ್ ಕುಮಾರ್ ಹೇಳಿದ್ದಾರೆ.
ಫೋನ್‌ಪೇ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ಅವರು, "ಈ ಫಲಿತಾಂಶವು ಎರಡೂ ಕಂಪನಿಗಳಿಗೆ ಮುನ್ನಡೆಯಲು ಪ್ರಯೋಜನವನ್ನು ನೀಡುತ್ತದೆ ಮತ್ತು ಒಟ್ಟಾರೆಯಾಗಿ ಭಾರತೀಯ ಫಿನ್‌ಟೆಕ್ ಉದ್ಯಮವನ್ನು ಬೆಳೆಸುವಲ್ಲಿ ನಮ್ಮ ಸಾಮೂಹಿಕ ಶಕ್ತಿಯನ್ನು ಕೇಂದ್ರೀಕರಿಸುತ್ತದೆ." ಎಂದಿದ್ದಾರೆ.
ಗೂಗಲ್ ಪ್ಲೇಸ್ಟೋರ್‌ಗೆ ಟಕ್ಕರ್ ನೀಡಲು ‘ಇಂಡಸ್ ಆ್ಯಪ್‌ಸ್ಟೋರ್’ ಎಂಟ್ರಿ, ಕನ್ನಡ ಸಹಿತ 12 ಭಾಷೆಗಳಲ್ಲಿ ಲಭ್ಯ
2019ರಲ್ಲಿ ಭಾರತ್ ಪೇ ಕಂಪನಿಯ ಮೇಲೆ ಫೋನ್‌ಪೇ 'ಪೇ' ಎನ್ನುವ ಪ್ರತ್ಯಯವನ್ನು ಬಳಕೆ ಮಾಡಿದ ಕಾರಣಕ್ಕೆ ಕೋರ್ಟ್ ಕೇಸ್ ದಾಖಲು ಮಾಡಿತ್ತು. ಹಿಂದಿ ಹಾಗೂ ಇಂಗ್ಲೀಷ್ ಎರಡರಲ್ಲೂ ಈ ಟ್ರೇಡ್‌ಮಾರ್ಕ್‌ಅನ್ನು ಬಳಕೆ ಮಾಡಿತ್ತು. 'ಪೇ' ಎನ್ನು ಪ್ರತ್ಯಯಕ್ಕೆ ತನ್ನ ಟ್ರೇಡ್‌ಮಾರ್ಕ್ ಇದೆ ಎಂದು ವಾದ ಮಾಡಿದ್ದ ಫೋನ್ ಪೇ, ಟೈಗರ್ ಗ್ಲೋಬಲ್ ಮಾಲೀಕತ್ವದ ಭಾರತ್ ಪೇ ಮೇಲೆ ಇಂಜಕ್ಷನ್ ಆರ್ಡರ್ ಹಾಕಿತ್ತು.
ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಅಮೆಜಾನ್ ಪೇ ಬಳಕೆದಾರರು ಪ್ರತಿದಿನ ಎಷ್ಟು ಯುಪಿಐ ಪಾವತಿ ಮಾಡ್ಬಹುದು?