
ಮನುಷ್ಯನ ಆಸೆಗೆ ಮಿತಿಯಿಲ್ಲ. ಕೈಗೆ ಹಣ (Money) ಬಂದಂತೆ ನಮ್ಮ ಕನಸು,ಆಸೆಗಳು ದೊಡ್ಡದಾಗ್ತಾ ಹೋಗುತ್ತವೆ. ಕಡಿಮೆ ಸಂಬಳ (Salary )ಬರುವಾಗ ಸಣ್ಣ ಮನೆ(Home)ಯಲ್ಲಿದ್ದ ವ್ಯಕ್ತಿ ಸಂಬಳ ಹೆಚ್ಚಾಗ್ತಿದ್ದಂತೆ ದೊಡ್ಡ ಮನೆಗೆ ಶಿಫ್ಟ್ ಆಗ್ತಾನೆ. ಆತನ ಐಷಾರಾಮಿ (Luxury) ಬದುಕು ವಿಸ್ತಾರಗೊಳ್ತಾ ಹೋಗುತ್ತದೆ. ಹಾಗಾಗಿ ಎಷ್ಟು ಸಂಬಳ ಬಂದ್ರೂ ನಮಗೆ ಅದು ಕಡಿಮೆ. ನನಗೆ ಸಂಬಳ ಕಡಿಮೆ,ಹಾಗಾಗಿ ಉಳಿತಾಯ (Savings )ಸಾಧ್ಯವಿಲ್ಲ ಎನ್ನುವವರು ಅನೇಕರಿದ್ದಾರೆ. ತಿಂಗಳ ಕೊನೆಯಲ್ಲಿ ಕೈನಲ್ಲಿ ಹಣ ಇರೋದಿಲ್ಲ,ಇನ್ನು ಉಳಿತಾಯದ ಮಾತೆಲ್ಲಿ ಎಂಬುವವರನ್ನು ನಾವು ನೋಡಿದ್ದೇವೆ. ಸಂಬಳ ಹೆಚ್ಚಿದ್ದರೆ ಆರಾಮವಾಗಿ ಖರ್ಚು ಮಾಡಬಹುದು. ಕುಟುಂಬದ ಅಗತ್ಯತೆ ಪೂರೈಸಬಹುದು ಮತ್ತು ಉಳಿತಾಯ ಮಾಡಬಹುದು ಎಂದುಕೊಳ್ತಾರೆ. ಮೊದಲೇ ಹೇಳಿದಂತೆ ಸಂಬಳ ಹೆಚ್ಚಿದ್ದರೂ ಇದು ಸಾಧ್ಯವಾಗುವುದಿಲ್ಲ. ಮೂಲತಃ ಉಳಿತಾಯ ಮಾಡಲು ಮನಸ್ಸು ಬೇಕು. ಕಡಿಮೆ ಸಂಬಳದಲ್ಲಿಯೂ ಉಳಿತಾಯ ಮಾಡಬಹುದು. ಕಡಿಮೆ ಸಂಬಳದಲ್ಲಿ ಹೇಗೆ ಉಳಿತಾಯ ಮಾಡಬಹುದು ಎಂಬ ಮಾರ್ಗಗಳು ಇಲ್ಲಿವೆ. ಅದರ ಸಹಾಯದಿಂದ ನೀವು ಕಡಿಮೆ ಸಂಬಳದಲ್ಲಿಯೂ ಸಹ ಉತ್ತಮ ಉಳಿತಾಯ ಮಾಡಬಹುದು.
ಹಣವನ್ನು ಉಳಿಸುವ ಮಾರ್ಗಗಳು:
ಮಾಸಿಕ ಬಜೆಟ್ : ಮೊದಲನೆಯದಾಗಿ, ನಿಮ್ಮ ತಿಂಗಳ ಬಜೆಟ್ ಸಿದ್ಧಪಡಿಸಿಕೊಳ್ಳಿ. ನಿಮಗೆ ಯಾವುದು ಮುಖ್ಯ ಮತ್ತು ಯಾವುದು ಮುಖ್ಯವಲ್ಲ ಎಂಬುದನ್ನು ನಿರ್ಧರಿಸಿ. ನಂತ್ರ ಬಜೆಟ್‌ನಲ್ಲಿ ಅಗತ್ಯವಿರುವ ವಿಷಯಗಳನ್ನು ಮಾತ್ರ ಸೇರಿಸಿ. ಮುಂದಿನ ತಿಂಗಳು ಖರೀದಿಸಿದರೂ ಆಗುತ್ತೆ ಎಂಬ ವಸ್ತುಗಳನ್ನು ಪಟ್ಟಿಯಿಂದ ತೆಗೆದು ಹಾಕಿ. ಅದರಂತೆ ಖರೀದಿ,ಖರ್ಚು ಮಾಡಿ. ಯಾವುದೇ ಕಾರಣಕ್ಕೂ ಅನಗತ್ಯ ವಸ್ತುಗಳನ್ನು ಖರೀದಿಸಿ,ಹಣ ಹಾಳು ಮಾಡಬೇಡಿ. ಸಿದ್ಧಪಡಿಸಿದ ಬಜೆಟ್ ಅನುಸರಿಸಲು ಪ್ರಯತ್ನಿಸಿ.
Official Documents : ವ್ಯಕ್ತಿಯೊಬ್ಬನ ಸಾವಿನ ಬಳಿಕ ಆಧಾರ್, ಪಾನ್ ಕಾರ್ಡ್ ಏನಾಗುತ್ತೆ ಗೊತ್ತಾ?
ಹೂಡಿಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ :
ಕಡಿಮೆ ಸಂಬಳದಲ್ಲಿಯೂ ಹಣ ಉಳಿತಾಯ ಮಾಡಲು ಬಯಸುವವರು ಮೊದಲು ಅತ್ಯುತ್ತಮ ಹೂಡಿಕೆಯಲ್ಲಿ ಹಣ ಹೂಡಿಕೆ ಶುರು ಮಾಡ್ಬೇಕು. ಎಲ್‌ಐಸಿ, ಎಫ್‌ಡಿ ಸೇರಿದಂತೆ ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಚಿನ್ನ ಖರೀದಿ ಮೂಲಕ ಕೂಡ ನೀವು ಹಣ ಉಳಿಸಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಈ ಯೋಜನೆ ಲಿಂಕ್ ಆಗಿದ್ದರೆ ಪ್ರತಿ ತಿಂಗಳು ಯೋಜನೆಗೆ ಹಣ ವರ್ಗಾವಣೆಯಾಗುವಂತೆ ಮಾಡಿಕೊಳ್ಳಿ. ಇದ್ರಿಂದ ನಿಮ್ಮ ಅರಿವಿಲ್ಲದೆ ಒಂದು ಮೊತ್ತ ಉಳಿತಾಯವಾಗ್ತಿರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಉಳಿತಾಯದ ಈ ಹಣ ನಿಮ್ಮ ನೆರವಿಗೆ ಬರುತ್ತದೆ.
ಅನಗತ್ಯ ಖರ್ಚುಗಳಿಂದ ದೂರವಿರಿ :
ಅನೇಕ ಬಾರಿ ಜನರು ತಮ್ಮ ಸಂಬಳಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ. ಇದರಿಂದಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ಪ್ರವಾಸ,ಹೊಟೇಲ್ ಊಟ ಸೇರಿದಂತೆ ಯಾವುದೇ ಮೋಜು ಮಾಡುವುದಾದ್ರೂ ನೀವು ನಿಮ್ಮ ಸಂಬಳವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿ.
Round Up 2021: ಬದಲಾದ ಬ್ಯುಸಿನೆಸ್ ಟ್ರೆಂಡ್, ವರ್ಕ್ ಫ್ರಂ ಹೋಂಗೆ ಹೊಂದಿಕೊಂಡ ಉದ್ಯೋಗಿಗಳು
ಶಾಪಿಂಗ್ : ಬಹುತೇಕರಿಗೆ ಶಾಪಿಂಗ್ ಇಷ್ಟ. ಆಗಾಗ ಶಾಪಿಂಗ್ ಗೆ ಹೋಗುವ ಜನರು ಬೇಕಾಬಿಟ್ಟಿ ವಸ್ತುಗಳನ್ನು ಖರೀದಿ ಮಾಡ್ತಾರೆ. ತಿಂಗಳಿಗೆ ಎರಡು-ಮೂರು ಬಾರಿ ಶಾಪಿಂಗ್ ಮಾಡಿ,ದುಬಾರಿ ಬೆಲೆಯ ಬಟ್ಟೆ,ಪಾದರಕ್ಷೆ ಸೇರಿದಂತೆ ಕೆಲವೊಮ್ಮೆ ಅಗತ್ಯವಿಲ್ಲದ ವಸ್ತುಗಳನ್ನು ಮನೆಗೆ ತಂದು ಹಾಳು ಮಾಡ್ತೆಎ ಇದು ಅನಗತ್ಯ. ಈ ಹಣವನ್ನು ನೀವು ಉಳಿಸಬಹುದು. ಮೊದಲು ಉಳಿತಾಯಕ್ಕೆ ಹಣವಿಟ್ಟ ನಂತ್ರ ಇಂಥ ಖರ್ಚಿಗೆ ಮುಂದಾಗಿ.
ಯುಟಿಲಿಟಿ ಬಿಲ್ : ಕರೆಂಟ್ ಬಿಲ್,ವಾಟರ್ ಬಿಲ್,ಗ್ಯಾಸ್ ಬಿಲ್,ಇಂಟರ್ನೆಟ್ ಬಿಲ್ ಸೇರಿದಂತೆ ಅನೇಕ ಬಿಲ್ ಗಳನ್ನು ನಾವು ನಿರ್ಲಕ್ಷ ಮಾಡ್ತೆವೆ. ಆದ್ರೆ ಈ ಎಲ್ಲ ಬಿಲ್ ಗಳನ್ನು ಒಟ್ಟುಗೂಡಿಸಿ ನೋಡಿದಾಗ ನೀವು ಇದಕ್ಕೆ ಎಷ್ಟು ಖರ್ಚು ಮಾಡಿದ್ದೀರಿ ಎಂಬುದು ಗೊತ್ತಾಗುತ್ತದೆ. ಹಾಗಾಗಿ ಈ ಬಿಲ್ ಗಳು ಕಡಿಮೆ ಬರುವಂತೆ ನೀವು ಎಚ್ಚರಿಕೆ ವಹಿಸಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.