ರಕ್ಷಾ ಬಂಧನಕ್ಕಾಗಿ ಚಿನ್ನದ ಲಡ್ಡೂ: ಕೇಳಬೇಡ ಎಷ್ಟು ದುಡ್ಡು?

Published : Aug 23, 2018, 12:19 PM ISTUpdated : Sep 09, 2018, 09:31 PM IST
ರಕ್ಷಾ ಬಂಧನಕ್ಕಾಗಿ ಚಿನ್ನದ ಲಡ್ಡೂ: ಕೇಳಬೇಡ ಎಷ್ಟು ದುಡ್ಡು?

ಸಾರಾಂಶ

ಈ ರಕ್ಷಾ ಬಂಧನಕ್ಕೆ ತನ್ನಿ ಚಿನ್ನದ ಲಡ್ಡೂ! ಸೂರತ್ ನ ಸಿಹಿ ತಿನಿಸುಗಳ ಅಂಗಡಿ! ಬಂಗಾರದ ಲೇಪನದ ಲಡ್ಡೂ ತಯಾರಿಕೆ! ಒಂದು ಕಜೆ ಲಡ್ಡೂ ಬೆಲೆ ಎಷ್ಟು ಗೊತ್ತಾ?   

ಸೂರತ್(ಆ.23): ಸಿಹಿ ತಿಂಡಿಗಳಿಗೂ ಭಾರತೀಯರಿಗೂ ಬಿಡಲಾರದ ನಂಟು. ಎಲ್ಲಾ ಹಬ್ಬಗಳಲ್ಲೂ ಸಿಹಿ ತಿನಿಸು ಇರಲೇಬೇಕು. ಅದರಲ್ಲೂ ರಕ್ಷಾ ಬಂಧನ ಸಂದರ್ಭದಲ್ಲಿ ಅಣ್ಣ-ತಂಗಿಯರ ಸಂಭ್ರಮಕ್ಕೆ ಸಿಹಿ ತಿನಿಸೇ ಮಧ್ಯಸ್ಥಿಕೆ ವಹಿಸೋದು.

ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಗುಜರಾತಿಗಳನ್ನು ಯಾರಾದರೂ ಮೀರಿಸಲು ಸಾಧ್ಯವೇ. ಸಿಹಿ ತಿನ್ನಲು ನೆಪ ಹುಡುಕುವ ಗುಜರಾತಿಗಳು, ತರಹೇವಾರಿ ಸಿಹಿ ತಿನಿಸುಗಳನ್ನು ತಯಾರಿಸುವಲ್ಲಿ ಸಿದ್ದಹಸ್ತರು. ಅದರಂತೆ ರಕ್ಷಾ ಬಂಧನದ ಸಂದರ್ಭಕ್ಕೆ  ಸೂರತ್ ನ ಅಂಗಡಿಯೊಂದು ಬಂಗಾರದ ಲೇಪನದ ಸಿಹಿ ತಿನಿಸುಗಳನ್ನು ತಯಾರಿಸಿದೆ. 24 ಕ್ಯಾರೆಟ್ ಶುದ್ಧ ಚಿನ್ನದಲ್ಲಿ ವಿಧ ವಿಧದ ಲಡ್ಡುಗಳನ್ನು ತಯಾರಿಸಲಾಗಿದೆ.

‘24 ಕ್ಯಾರೆಟ್ ಮಿಠಾಯಿ ಮ್ಯಾಹಜಿಕ್’ಎಂಬ ಹೆಸರಿನ ಈ ಅಮಗಡಿಯಲ್ಲಿ ವಿಧ ವಿಧವಾದ ಚಿನ್ನದ ಲೇಪನಗಳ ಲಡ್ಡೂಗಳನ್ನು ತಯಾರಿಸಲಾಗಿದೆ. ವಿಶೇಷವಾಗಿ ರಕ್ಷಾ ಬಂಧನ ಹಬ್ಬಕ್ಕಾಗಿಯೇ ಈ ಲಡ್ಡುಗಳನ್ನೂ ತಯಾರಿಸಲಾಗಿದ್ದು, ಒಂದು ಕೆಜಿ ಲಡ್ಡೂ ಬೆಲೆ 9000 ರೂ.    

80 ವರ್ಷದಷ್ಟು ಹಳೆಯ ಈ ಸ್ವೀಟ್  ಅಂಗಡಿ ಈ ಬಾರಿಯ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದು,  ಅದರಂತೆ ಚಿನ್ನದ ಲಡ್ಡೂಗಳನ್ನು ತಯಾರಿಸಿದೆ ಎನ್ನಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!