
ರೆಡಿಮೆಡ್ (Readymade) ವಸ್ತು, ರೆಡಿಮೆಡ್ ಆಹಾರಕ್ಕೆ ಹೆಚ್ಚಿನ ಬೇಡಿಕೆಯಿದೆ. ಜನರು ಪ್ಯಾಕೆಟ್ ಫುಡ್ (Packet Food)ಗಳನ್ನು ಹೆಚ್ಚು ಇಷ್ಟಪಡ್ತಿದ್ದಾರೆ. ಮನೆಯಲ್ಲಿ ಕಷ್ಟಪಟ್ಟು ಮಾಡ್ತಿದ್ದ ಆಹಾರಗಳೆಲ್ಲ ಈಗ ಪ್ಯಾಕೆಟ್ ನಲ್ಲಿ ಸಿಗ್ತಿವೆ. ಕೆಲಸದ ಒತ್ತಡದಿಂದಾಗಿ ಜನರು ಮನೆಯಲ್ಲಿ ಆಹಾರ ತಯಾರಿಸಲು ಸುಲಭ ಉಪಾಯಗಳನ್ನು ಹುಡುಗ್ತಿದ್ದಾರೆ. ಅಕ್ಕಿ ನೆನೆ ಹಾಕಿ ಅದನ್ನು ರುಬ್ಬಿ ದೋಸೆ ಮಾಡಲು ಸಮಯ ಬೇಕು. ಆದ್ರೀಗ ಮಾರುಕಟ್ಟೆಯಲ್ಲಿ ರುಬ್ಬಿದ ಅಕ್ಕಿ ಹಿಟ್ಟು ಸಿಗ್ತಿದೆ. ಮನೆಯಲ್ಲಿ ಬೆಳ್ಳುಳ್ಳಿ ಸಿಪ್ಪೆ ತೆಗೆದು ಅದನ್ನು ಜಜ್ಜಲು ಕೂಡ ಸಮಯಬೇಕು. ಜನರ ಅಗತ್ಯತೆಯನ್ನು ನೋಡಿ ಕಂಪನಿಗಳು ಬೆಳ್ಳುಳ್ಳಿ ಪೇಸ್ಟ್ ಮಾರುಕಟ್ಟೆಗೆ ತಂದಿವೆ. ಬರೀ ಇವೇ ಅಲ್ಲ ಇನ್ನೂ ಅನೇಕ ಆಹಾರ ಪದಾರ್ಥಗಳಿವೆ. ಸಾಮಾನ್ಯವಾಗಿ ಬಹುತೇಕ ಮಸಾಲೆ ಅಡುಗೆಗೆ ಈರುಳ್ಳಿ ಬೇಕೇಬೇಕು. ಈರುಳ್ಳಿ ಕತ್ತರಿಸುವುದು ಒಂದು ಸವಾಲಾದ್ರೆ ಈರುಳ್ಳಿ ಬೆಲೆ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಒಮ್ಮೊಮ್ಮೆ ಹುಡುಕಿದ್ರೂ ಈರುಳ್ಳಿ ಮಾರುಕಟ್ಟೆಯಲ್ಲಿ ಸಿಗೋದಿಲ್ಲ, ಮತ್ತೆ ಕೆಲವೊಮ್ಮೆ ಈರುಳ್ಳಿ ಬೆಲೆ ಗಗನಕ್ಕೇರಿರುತ್ತದೆ. ಹಾಗಾಗಿ ಜನರಿಗೆ ಈರುಳ್ಳಿ (Onion ) ಸಮಸ್ಯೆಯಾಗದಿರಲಿ, ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರದಿರಲಿ ಎಂಬ ಕಾರಣಕ್ಕೆ ಈರುಳ್ಳಿ ಪೇಸ್ಟ್ ಮಾರುಕಟ್ಟೆಗೆ ಬಂದಿದೆ. ಈರುಳ್ಳಿ ಪೇಸ್ಟ್ ಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕೂಡ ಇದೆ. ನೀವೂ ಬ್ಯುಸಿನೆಸ್ ಮಾಡುವ ಪ್ಲಾನ್ ನಲ್ಲಿದ್ದರೆ ಈರುಳ್ಳಿ ಪೇಸ್ಟ್ ತಯಾರಿಸಿ ಮಾರಾಟ ಮಾಡ್ಬಹುದು.
ಈರುಳ್ಳಿ ಪೇಸ್ಟ್ ವ್ಯವಹಾರ ಶುರುಮಾಡಲು ಎಷ್ಟು ವೆಚ್ಚವಾಗುತ್ತದೆ?: ಖಾದಿ ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಈರುಳ್ಳಿ ಪೇಸ್ಟ್ ತಯಾರಿಸುವ ವ್ಯವಹಾರದ ಕುರಿತು ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯ ಪ್ರಕಾರ 4.19 ಲಕ್ಷ ರೂಪಾಯಿಗೆ ಈರುಳ್ಳಿ ಪೇಸ್ಟ್ ಮಾಡುವ ವ್ಯಾಪಾರ ಆರಂಭಿಸಬಹುದು. ಈ ವರದಿಯ ಪ್ರಕಾರ, ಈರುಳ್ಳಿ ಪೇಸ್ಟ್ ತಯಾರಿಸುವ ಕಾರ್ಖಾನೆ ಸ್ಥಾಪಿಸಲು ಶೆಡ್ ನಿರ್ಮಿಸಬೇಕಾಗುತ್ತದೆ. ಇದಕ್ಕೆ ಸುಮಾರು 1 ಲಕ್ಷ ರೂಪಾಯಿ ಖರ್ಚಾಗುತ್ತದೆ. ನಿಮ್ಮ ಬಳಿ ಕಟ್ಟಡವಿದ್ದರೆ ಅದರಲ್ಲಿಯೇ ವ್ಯವಹಾರ ಶುರು ಮಾಡಬಹುದು. ಆಗ ಕಟ್ಟಡ ಹಾಗೂ ಅದ್ರ ಬಾಡಿಗೆ ಉಳಿಯುತ್ತದೆ.
ಇದನ್ನೂ ಓದಿ: Business Idea: ಅತಿ ಹೆಚ್ಚು ಬೇಡಿಕೆಯಿರೋ ಈ ಬ್ಯುಸಿನೆಸ್ ಶುರು ಮಾಡಿ ಲಾಭ ಗಳಿಸಿ
ಪೇಸ್ಟ್ ತಯಾರಿಸಲು ಬಾಣಲೆ, ಸಣ್ಣ ಪಾತ್ರೆಗಳು, ಮಗ್, ಕಪ್, ಆಟೋಕ್ಲೇವ್ ಸ್ಟೀಮ್ ಕುಕ್ಕರ್, ಡೀಸೆಲ್ ಫರ್ನೇಸ್, ಕ್ರಿಮಿನಾಶಕ ಟ್ಯಾಂಕ್ ಇತ್ಯಾದಿಗಳಿಗೆ ಸುಮಾರು 1.75 ಲಕ್ಷ ರೂಪಾಯಿ ಖರ್ಚಾಗುತ್ತದೆ. ಕಚ್ಚಾ ವಸ್ತುವಿನ ಅಗತ್ಯವಿದೆ. ಈರುಳ್ಳಿ ಸೇರಿ ಕಚ್ಚಾ ವಸ್ತುಗಳ ಖರೀದಿ, ಪ್ಯಾಕಿಂಗ್, ಸಾಗಣೆ ಮತ್ತು ಕಾರ್ಮಿಕರ ವೇತನ ಇತ್ಯಾದಿಗಳಿಗೆ ಸುಮಾರು 2.75 ಲಕ್ಷ ರೂಪಾಯಿ ಖರ್ಚು ಮಾಡ್ಬೇಕಾಗುತ್ತದೆ. ಈರುಳ್ಳಿ ಪೇಸ್ಟ್ ತಯಾರಿಸುವ ಈ ಘಟಕವು ಒಂದು ವರ್ಷದಲ್ಲಿ ಸುಮಾರು 193 ಕ್ವಿಂಟಾಲ್ ಈರುಳ್ಳಿ ಪೇಸ್ಟ್ ತಯಾರಿಸುತ್ತದೆ. ಈ ವ್ಯವಹಾರ ತಯಾರಿಸಲು ಹೆಚ್ಚಿನ ಹಣದ ಅಗತ್ಯವಿಲ್ಲ. ಸರ್ಕಾರ ನಿಮಗೆ ಸಹಾಯ ಮಾಡುತ್ತದೆ. ಈ ವ್ಯವಹಾರಕ್ಕೆ ನೀವು ಸಾಲ ಪಡೆಯಬಹುದು. ಮುದ್ರಾ ಯೋಜನೆ ಅಡಿಯಲ್ಲಿ ಸರ್ಕಾರ ಈ ಯೋಜನೆಗೆ ಸಾಲ ನೀಡುತ್ತದೆ.
ಇದನ್ನೂ ಓದಿ: Parents Tips: ಮಕ್ಕಳಿಗೆ ಹಣದ ಮೌಲ್ಯ ಕಲಿಸೋದು ಹೇಗೆ? ಯಾವಾಗ?
ಈರುಳ್ಳಿ ಪೇಸ್ಟ್ ತಯಾರಿಕೆಯಿಂದಾಗುವ ಗಳಿಕೆ ಎಷ್ಟು ? : ಕೆವಿಐಸಿಯ ವರದಿ ಪ್ರಕಾರ, ಇದಕ್ಕೆ ಶ್ರಮ ಅಗತ್ಯ. ನೀವು ವರ್ಷದಲ್ಲಿ ಎಷ್ಟು ಪೇಸ್ಟ್ ತಯಾರಿ ಮಾಡ್ತೀರಿ ಹಾಗೇ ಎಷ್ಟು ಮಾರಾಟ ಮಾಡ್ತೀರಿ ಎಂಬುದರ ಮೇಲೆ ಲಾಭ ಅಡಗಿದೆ. ಒಂದು ವರ್ಷದಲ್ಲಿ ನೀವು 7.50 ಲಕ್ಷ ರೂಪಾಯಿ ವ್ಯವಹಾರ ನಡೆಸಿದ್ದೇವೆ ಎಂದಿಟ್ಟುಕೊಂಡರೆ ಎಲ್ಲ ಖರ್ಚು ಕಳೆದರೆ 1.75 ಲಕ್ಷ ಉಳಿತಾಯವಾಗಲಿದೆ. ಈ ವ್ಯವಹಾರಕ್ಕೆ ಮಾರ್ಕೆಟಿಂಗ್ ಬಹಳ ಮುಖ್ಯ. ದೊಡ್ಡ ಪ್ರಮಾಣದಲ್ಲಿ ಹಾಗೂ ಚಿಲ್ಲರೆ ಮಾರಾಟಗಾರರಿಗೆ ನೀವು ಮಾರಾಟ ಮಾಡಿದ್ರೆ ಹೆಚ್ಚು ಲಾಭ ಪಡೆಯಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.