
ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲ್ಸ ಮಾಡಿದ್ರೂ ತಿಂಗಳಿಗೆ 15 -20 ಸಾವಿರ ಸಂಬಳ ಸಿಗೋದು ಕಷ್ಟ ಎನ್ನುವವರೇ ಹೆಚ್ಚು. ಯಾರದ್ದೋ ಕಂಪನಿಗೆ ನೀವು ಕಷ್ಟಪಟ್ಟು ದುಡಿತೀರಿ. ನಿಮ್ಮ ದುಡಿಮೆಯಿಂದ ಅವ್ರು ಕೈತುಂಬಾ ಲಾಭ ಪಡೀತಾರೆಯೇ ವಿನಃ ಬಂದ ಲಾಭದಲ್ಲಿ ನಿಮಗೆ ಪಾಲು ನೀಡೋದಿರಲಿ, ಶ್ಲಾಘನೆ ಕೂಡ ಮಾಡೋದಿಲ್ಲ. ಕೆಲವರಿಗೆ ಸಂಬಳ ಹೆಚ್ಚಿಗೆ ಬಂದ್ರೂ ನೆಮ್ಮದಿ ಇಲ್ಲ. ಪ್ರತಿ ದಿನ ಒಂದೊಂದು ಸಮಸ್ಯೆ ಎದುರಿಸಿ 9 -6 ಗಂಟೆ ಕೆಲ್ಸ ಮಾಡಿ ಅನೇಕರು ಬೇಸತ್ತಿದ್ದಾರೆ. ನೆಮ್ಮದಿ ಬೇಕು, ಸ್ವಂತ ಬ್ಯುಸಿನೆಸ್ ಮಾಡ್ಬೇಕು, ತಿಂಗಳಿಗೆ 40 – 50 ಸಾವಿರವಾದ್ರೂ ಆದಾಯ ಸಿಗ್ಬೇಕು ಎನ್ನುವವರಿಗೆ ಸದ್ಯ ಅನೇಕ ಅವಕಾಶಗಳಿವೆ. ನೀವು ಯಾವ ಬ್ಯುಸಿನೆಸ್ (Business) ಮಾಡ್ತಿರಿ ಎಂಬುದನ್ನು ಮೊದಲು ಆಯ್ಕೆ ಮಾಡ್ಕೊಳ್ಬೇಕು. ನಂತ್ರ ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಸಂಗ್ರಹಿಸಿ, ಸೂಕ್ತ ತಯಾರಿ ನಡೆಸಿ ಫೀಲ್ಡ್ ಗಿಳಿದ್ರೆ ಸಕ್ಸಸ್ ನಿಶ್ಚಿತ.
ನೀವು ಬಟ್ಟೆಯನ್ನು ಹೇಗೆ ಮಾರಾಟ ಮಾಡ್ತೀರಿ ಅನ್ನೋದು ಕೂಡ ಮುಖ್ಯವಾಗುತ್ತದೆ. ಆನ್ಲೈನ್, ಆಫ್ ಲೈನ್ ಎರಡರಲ್ಲೂ ನೀವು ಬಟ್ಟೆಗಳನ್ನು ಮಾರಾಟ ಮಾಡ್ಬಹುದು. ಬೀದಿ ಬದಿಯಲ್ಲಿ ಸಣ್ಣ ಜಾಗವನ್ನು ಬಾಡಿಗೆಗೆ ಪಡೆದು ನೀವು ಬಟ್ಟೆ ವ್ಯಾಪಾರ ಶುರು ಮಾಡೋದು ಒಳ್ಳೆಯದು. ಇದ್ರ ಜೊತೆಯಲ್ಲೇ ನೀವು ಆನ್ಲೈನ್ ಮಾರಾಟ ಮಾಡ್ಬಹುದು. ಬಟ್ಟೆ ಮಾರಾಟಕ್ಕೆ ದೊಡ್ಡ ಶೋ ರೂಮ್ ಅಗತ್ಯವಿಲ್ಲ. ಬೀದಿ ಬದಿಯಲ್ಲಿ ತಳ್ಳುವ ಬಂಡಿಯಲ್ಲಿ ಬಟ್ಟೆ ಮಾರಾಟ ಮಾಡಿದ್ರೂ ಜನ ಖರೀದಿ ಮಾಡ್ತಾರೆ.
ಸಗಟು ಮಾರುಕಟ್ಟೆಯಿಂದ ಬಟ್ಟೆಗಳನ್ನು ಖರೀದಿ ಮಾಡ್ಬೇಕು. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಬಟ್ಟೆಗಳು ಎಲ್ಲಿ ಸಿಗುತ್ವೆ ಎಂಬುದನ್ನು ಸರ್ಚ್ ಮಾಡಿ ಬಟ್ಟೆ ಖರೀದಿ ಮಾಡಿ. ಆ ನಂತ್ರ ಜನನಿಬಿಡ ಪ್ರದೇಶ, ಶಾಲೆ- ಕಾಲೇಜು, ಮಾರ್ಕೆಟ್ ಪ್ಲೇಸ್ ನಲ್ಲಿ ನೀವು ಅಂಗಡಿ ಶುರು ಮಾಡಿ. ಹಳ್ಳಿಗಳಲ್ಲಿ ಕೂಡ ನೀವು ಅಂಗಡಿ ತೆರೆಯಬಹುದು. ಸಣ್ಣ ಪಟ್ಟಣಗಳಲ್ಲಿ ನಿಮ್ಮ ಮನೆಯಿದ್ರೆ ಮನೆ ಮುಂದೆಯೇ ಸಣ್ಣ ಅಂಗಡಿ ಶುರು ಮಾಡ್ಬಹುದು.
ರೆಡಿಮೆಡ್ ಬಟ್ಟೆ ವ್ಯಾಪಾರ (Readymade clothing business ಕ್ಕೆ ಎಷ್ಟು ಬಂಡವಾಳ ಅಗತ್ಯ? : ರೆಡಿಮೆಡ್ ಬಟ್ಟೆ ಬ್ಯುಸಿನೆಸ್ ಗೆ ಹೆಚ್ಚಿನ ಬಂಡವಾಳದ ಅಗತ್ಯವಿರುವುದಿಲ್ಲ. ಆರಂಭಿಕ ಹಂತದಲ್ಲಿ, ನೀವು 20 ರಿಂದ 30 ಸಾವಿರ ರೂಪಾಯಿ ಹೂಡಿಕೆ ಮಾಡುವ ಮೂಲಕ ವ್ಯಾಪಾರ ಶುರು ಮಾಡ್ಬಹುದು, 15 ರಿಂದ 20 ಸಾವಿರ ರೂಪಾಯಿ, ಬಟ್ಟೆಗಳ ಸ್ಟಾಕ್ ಖರೀದಿಸಲು ಖರ್ಚು ಮಾಡಿ. ಉಳಿದ ಹಣವನ್ನು ಅಂಗಡಿ ಅಥವಾ ತಳ್ಳುವ ಗಾಡಿ ಖರೀದಿಗೆ ಬಳಸಿ. ಗ್ರಾಹಕರಿಂದ ಉತ್ತಮ ರೆಸ್ಪಾನ್ಸ್ ಬಂದಂತೆ ನೀವು ಸ್ಟಾಕ್ ಹೆಚ್ಚು ಮಾಡ್ತಾ ಹೋಗ್ಬಹುದು.
ಗಳಿಕೆ ಎಷ್ಟು? : ನೀವು ಯಾವ ಜಾಗದಲ್ಲಿ ಮಾರಾಟ ಮಾಡ್ತಿದ್ದೀರಿ, ನಿಮ್ಮ ಬಟ್ಟೆ ಗುಣಮಟ್ಟ,ಬೆಲೆ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ದಿನಕ್ಕೆ 2 ರಿಂದ 3 ಸಾವಿರ ರೂಪಾಯಿ ಮೌಲ್ಯದ ಬಟ್ಟೆ ಮಾರಾಟ ಮಾಡಿದ್ರೆ, ತಿಂಗಳಿಗೆ 60 ರಿಂದ 70 ಸಾವಿರ ಬ್ಯುಸಿನೆಸ್ ತಲುಪಬಹುದು. ಎಲ್ಲ ಖರ್ಚು ಕಳೆದ್ರೂ ನಿಮಗೆ 45 ರಿಂದ 50 ಸಾವಿರ ರೂಪಾಯಿ ಲಾಭ ಸಿಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.