
ವಾಷಿಂಗ್ಟನ್: ಎಚ್1ಬಿ ವೀಸಾದಾರರ ಸಂಗಾತಿಗಳಿಗೂ ಉದ್ಯೋಗ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಅಮರಿಕದ 'ಸೇವ್ ಜಾಬ್ಸ್' ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ನ್ಯಾಯಾಲಯವೊಂದು ವಜಾ ಮಾಡಿದೆ. ಎಚ್1ಬಿ ವೀಸಾ ಹೊಂದಿರುವ ಭಾರತೀಯರ ಸಂಗಾತಿಗಳು ದೊಡ್ಡ ಪ್ರಮಾಣದಲ್ಲಿ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ದೇಶದ ಐಟಿ ಉದ್ಯಮಕ್ಕೆ ಇದರಿಂದ ಸಹಾಯವಾಗಿದೆ. ಅವರು ನೌಕರಿಗೆ ಅರ್ಹರು ಎಂದು ವಾಷಿಂಗ್ಟನ್ ಜಿಲ್ಲಾ ಕೋರ್ಟ್ (Washington District Court) ತಿಳಿಸಿದೆ.
ಅಮೆರಿಕದಲ್ಲಿ ಉದ್ಯೋಗದಲ್ಲಿ ಪಡೆಯುವ ವಿದೇಶಿಗರಿಗೆ ಎಚ್1ಬಿ (H1B visa)ವೀಸಾ ನೀಡಲಾಗುತ್ತಿದೆ. 2013 ರಲ್ಲಿ ಬರಾಕ್ ಒಬಾಮ (Barack Obama) ಸರ್ಕಾರವು ಎಚ್1ಬಿ ವೀಸಾದಾರರ ಸಂಗಾತಿಗಳಿಗಳಿಗೂ ಉದ್ಯೋಗ ಪಡೆಯುವ ಅವಕಾಶವನ್ನು ಜಾರಿಗೊಳಿಸಿತ್ತು. ಆದರೆ, ಇದರಿಂದ ಸ್ಥಳೀಯರಿಗೆ ಉದ್ಯೋಗವಕಾಶಗಳು ಕೈತಪ್ಪುತ್ತಿದ್ದು, ಈ ನಿಯಮವನ್ನು ರದ್ದುಗೊಳಿಸಬೇಕೆಂದು ಸೇವ್ ಜಾಬ್ಸ್ ಸಂಸ್ಥೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಇದರಿಂದ ಯಾವುದೇ ಸಮಸ್ಯೆಯಿಲ್ಲ. ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ತೀರ್ಪು ನೀಡಿದೆ.
H-1B ಇದ್ರೆ ಸಾಕು, ಸಂಗಾತಿಗೂ ಕೆಲಸ ಮಾಡೋ ಅನುಮತಿ
ಭಾರತೀಯರಿಗೆ ಮತ್ತೆ ಎಚ್1 ಬಿ ಶಾಕ್!
ಎಚ್1 ಬಿ ವೀಸಾದಡಿ ಅಮೆರಿಕಕ್ಕೆ ತೆರಳ ಬಯಸುವ ಭಾರತೀಯರ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸುವ ನಿಯಮಗಳನ್ನು ಅಮೆರಿಕ ಸರ್ಕಾರ 2021ರ ಜನವರಿಯಲ್ಲಿ ಜಾರಿಗೊಳಿಸಿತ್ತು. ಸ್ಥಳೀಯರ ಉದ್ಯೋಗ ಕಾಪಾಡುವ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಜಾರಿಗೊಳಿಸಿರುವ ಹೊಸ ನೀತಿಯಿಂದಾಗಿ ಹೆಚ್ಚಿನ ವೇತನ ಇರುವವರಿಗೆ ಸುಲಭವಾಗಿ ಎಚ್1 ಬಿ ವೀಸಾ ಸಿಗಲಿದ್ದರೆ, ಸಣ್ಣ ವೇತನದ ನೌಕರರರಿಗೆ ಇಂಥ ವೀಸಾ ಪಡೆಯುವುದು ಕಷ್ಟವಾಗಲಿದೆ. ಅದರಲ್ಲೂ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗವನ್ನೂ ಮಾಡುತ್ತಿದ್ದ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳಿಗೆ ಹೊಸ ನೀತಿ ಮಾರಕವಾಗಿ ಪರಿಣಮಿಸಲಿದೆ. ಹಾಲಿ ಜಾರಿಯಲ್ಲಿದ್ದ ಲಾಟರಿ ವ್ಯವಸ್ಥೆಯ ಬದಲಾಗಿ ಈ ಹೊಸ ನೀತಿ ಜಾರಿಗೊಳಿಸಲಾಗಿದೆ.
ಅಮೆರಿಕ ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿರುವ ಹೊಸ ನೀತಿ ಅನ್ವಯ ಹೆಚ್ಚಿನ ವೇತನ ಮತ್ತು ಕೌಶಲ್ಯ ಹೊಂದಿದವರಿಗೆ ಎಚ್1 ಬಿ ವೀಸಾ ವಿತರಣೆಯಲ್ಲಿ ಆದ್ಯತೆ ನೀಡಲಾಗುವುದು. ಜೊತೆಗೆ ಇಂಥ ವೀಸಾದಡಿ ಕೆಲಸ ಮಾಡುತ್ತಿರುವವರಿಗೆ ಅಥವಾ ಉದ್ಯೋಗ ಆಧರಿತ ಗ್ರೀನ್‌ಕಾರ್ಡ್ ಹೊಂದಿರುವವರಿಗೆ ವೇತನದ ಮಿತಿ ಹೆಚ್ಚಿಸಲಾಗಿದೆ. ಈ ಮೂಲಕ ಕಡಿಮೆ ವೇತನದ ಉದ್ಯೋಗವನ್ನು ಅಮೆರಿಕನ್ನರಿಗೇ ಉಳಿಸಿಕೊಳ್ಳುವ ಯತ್ನವನ್ನು ಸರ್ಕಾರ ಮಾಡಿದೆ.
ಉದ್ಯೋಗಕ್ಕೆ ನೇಮಕಾತಿ ನಡೆಯುವ ಪ್ರದೇಶದಲ್ಲಿನ ಸರಾಸರಿ ವೇತನಕ್ಕಿಂತ ಹೆಚ್ಚಿನ ವೇತನ ನೀಡುವ ಕಂಪನಿಗಳಿಗೆ ಹೊಸ ವೀಸಾ ನೀಡಿಕೆಯಲ್ಲಿ ಸರ್ಕಾರ ಆದ್ಯತೆ ನೀಡಲಿದೆ. ಅಲ್ಲದೆ ಹೊಸ ನೀತಿಯಲ್ಲಿ ಎಚ್1 ಬಿ ವೀಸಾ ವಿತರಿಸುವ ಕಂಪನಿಗಳು, ಕೆಳ ಹಂತದ ನೌಕರರಿಗೆ ಈ ಹಿಂದಿನ ವೇತನಕ್ಕಿಂತ ಕನಿಷ್ಠ 35ರಷ್ಟುಹೆಚ್ಚು ವೇತನ ನೀಡುವುದು ಕಡ್ಡಾಯವಾಗಲಿದೆ. ಹಿಂದೆ ಈ ಪ್ರಮಾಣ ಶೇ.17ರಷ್ಟಿತ್ತು. ಇನ್ನು ಉನ್ನತ ವಲಯದ ಉದ್ಯೋಗಿಗಳಿಗೆ ಹಿಂದಿನದ್ದಕ್ಕಿಂತ ಶೇ.90ರಷ್ಟುಹೆಚ್ಚು ವೇತನ ನೀಡುವುದು ಕಡ್ಡಾಯ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.