ಯುಗಾದಿ ಹಬ್ಬಕ್ಕೆ ಕೆಲವೇ ದಿನ ಬಾಕಿ ಇರುವಾಗ ಮಾಂಸಹಾರಿಗಳಿಗೆ ಶಾಕಿಂಗ್ ನ್ಯೂಸ್!

By Suvarna News  |  First Published Apr 3, 2024, 4:28 PM IST

ಯುಗಾದಿ ಹಬ್ಬ, ಹೊಸ ತೊಡಕು ಹಬ್ಬದ ಕೆಲವೇ ದಿನಕ್ಕೆ ಮೊದಲು ಮಾಂಸಹಾರ ಪ್ರೀಯರಿಗೆ ಶಾಕಿಂಗ್ ನ್ಯೂಸ್‌ ಇದೆ. ಕೋಳಿ, ಮೀನು ಸೇರಿ ಇತರ ಮಾಂಸಗಳ ಬೆಲೆ ಹೆಚ್ಚಳವಾಗಿದೆ. ಮಾಂಸ ಪೂರೈಕೆಯ ಕುಸಿತ ಮತ್ತು ಇನ್ನಿತರ ಕಾರಣಗಳಿಂದ ಬೆಲೆ ಏರಿಕೆಯ ಬಿಸಿ ತಟ್ಟಿದೆ.


ಬೆಂಗಳೂರು (ಏ.3): ಯುಗಾದಿ ಹಬ್ಬ, ಹೊಸ ತೊಡಕು ಹಬ್ಬದ ಕೆಲವೇ ದಿನಕ್ಕೆ ಮೊದಲು ಮಾಂಸಹಾರ ಪ್ರೀಯರಿಗೆ ಶಾಕಿಂಗ್ ನ್ಯೂಸ್‌ ಇದೆ. ಕೋಳಿ, ಮೀನು ಸೇರಿ ಇತರ ಮಾಂಸಗಳ ಬೆಲೆ ಹೆಚ್ಚಳವಾಗಿದೆ. ಮಾಂಸ ಪೂರೈಕೆಯ ಕುಸಿತ ಮತ್ತು ಇನ್ನಿತರ ಕಾರಣಗಳಿಂದ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಬಿಸಿಲಿನ ತಾಪಮಾನದಿಂದ ಕೋಳಿ, ಮೀನು ದರ ಏರಿಕೆಯಾಗಿದೆ. ಬಿಸಿಲಿನ ತಾಪದ ಏರಿಕೆಯಿಂದ ಸಮುದ್ರದಲ್ಲಿ ಮೀನಿನ ಕ್ಷಾಮ ಹೆಚ್ಚಾಗಿದೆ. ಇನ್ನೊಂದೆಡೆ ಬಿಸಿಲಿನ ಬೇಗೆಗೆ ಕೋಳಿಗಳನ್ನು ಸಾಕುವುದು ಕಷ್ಟಕರವಾಗಿದೆ. ಇನು ತರಕಾರಿ, ಮಾಂಸ ಪದಾರ್ಥಗಳ ದರ ಕೂಡ ಏರಿಕೆಯ ಹಾದಿ ಹಿಡಿದಿದೆ.

Tap to resize

Latest Videos

ಪಾರಿವಾಳಕ್ಕೆ ಆಹಾರ ಹಾಕಿದ್ದೇ ತಪ್ಪಾಯ್ತು… ನಾರಿಗೆ 2.5 ಲಕ್ಷ ದಂಡವಿಧಿಸಿದ ನಗರಸಭೆ

ಮಾರುಕಟ್ಟೆಯಲ್ಲಿ  ಸ್ಕಿನ್‌ ಔಟ್ ಬಾಯ್ಲರ್‌ ಕೋಳಿ ಕೆಜಿಗೆ 230-240 ರೂಪಾಯಿ ತಲುಪಿದೆ. ಟೈಸನ್‌ 270 ರೂಪಾಯಿ, ಸಜೀವ ಬಾಯ್ಲರ್‌ ಕೋಳಿ ಕೆಜಿಗೆ 160-170 ರೂಪಾಯಿ ತನಕ ಬೆಲೆ ಏರಿಕೆಯಾಗಿದೆ. ಟೈಸನ್‌ ಜೀವಂತ ಕೋಳಿಗೆ ಕೆಜಿಗೆ 185 ರಿಂದ 190 ರೂಪಾಯಿ ತಲುಪಿದೆ. ಹೀಗಾಗಿ ಪ್ರತಿ ವಾರ 5-6 ರೂಪಾಯಿ ಏರಿಕೆ ಸಾಧ್ಯತೆಯ ಬಗ್ಗೆ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಸಾಲೆ ಆಹಾರ ತಿಂದು ಯೋನಿ ಉರಿ ಹೆಚ್ಚಾಗಿದ್ಯಾ? ಪರಿಹಾರ ಇಲ್ಲಿದೆ ನೋಡಿ

ಇದೀಗ ಗ್ರಾಹಕರು ದಿನನಿತ್ಯದ ವಸ್ತುಗಳನ್ನು ಖರೀದಿಸಲು ಅಂಗಡಿಗೆ  ಹೋದರೆ ಸಾಕು. ಕಿಸೆ ಖಾಲಿಯಾಗುವಷ್ಟರ ಮಟ್ಟಿಗೆ  ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಈ ನಡುವೆ ಮಾಂಸಹಾರಿಗಳ ಜೀಬಿಕೆ ಕತ್ತರಿ ಬೀಳಲಿದ್ದು, ಮೀನು, ಕೋಳಿ, ಆಡು, ಕುರಿ ಮಾತ್ರವಲ್ಲ ಹಂದಿ ಮಾಂಸಕ್ಕೂ ಊಹಿಸದಷ್ಟು ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 300ರ ಆಸುಪಾಸಿನಲ್ಲಿದ್ದ ಹಂದಿ ಮಾಂಸದ ಬೆಲೆ 450-500ರ ಗಡಿ ದಾಟಿದೆ. ಬೆಂಗಳೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹಂದಿ ಮಾಂಸದ ಬಳಕೆ ಹೆಚ್ಚು. ಪ್ರಸಕ್ತ ಮದುವೆ ಮತ್ತು ಇತರ ಸಮಾರಂಭಗಳ ಹಿನ್ನೆಲೆಯಲ್ಲಿ ಪೂರೈಕೆ ಕೂಡ ಕಮ್ಮಿ ಇದ್ದು ಬೆಲೆ ಏರಿಕೆಯಾಗಿದೆ.

click me!