ಸೆನ್ಸೆಕ್ಸ್ ಗೂಳಿ ಹೂಂಕಾರಕ್ಕೆ ಹೂಡಿಕೆದಾರರ ಕುಣಿತ!

Published : Jul 10, 2018, 05:01 PM IST
ಸೆನ್ಸೆಕ್ಸ್ ಗೂಳಿ ಹೂಂಕಾರಕ್ಕೆ ಹೂಡಿಕೆದಾರರ ಕುಣಿತ!

ಸಾರಾಂಶ

ಸೆನ್ಸೆಕ್ಸ್ ಗೂಳಿ ಹೂಂಕಾರಕ್ಕೆ ಹೂಡಿಕೆದಾರರ ಕುಣಿತ 36 ರ ಗಡಿ ದಾಟಿ ಮುನ್ನುಗ್ಗಿದ ಸೆನ್ಸೆಕ್ಸ್ ಸೂಚ್ಯಂಕ ಐಟಿ, ಗ್ಯಾಸ್, ಪಬ್ಲಿಕ್ ಸೆಕ್ಟರ್ ಷೇರುಗಳಲ್ಲಿ ಹೆಚ್ಚಳ ನಿಫ್ಟಿ ಕೂಡ 10,900 ಅಂಶಗಳಿಗೆ ಏರಿಕೆ 

ಮುಂಬೈ(ಜು.10): ಜಾಗತಿಕ ವ್ಯಾಪಾರ ಯುದ್ಧದ ಹಿನ್ನೆಲೆಯಲ್ಲಿ ಕುಸಿತದ ಹಾದಿ ಹಿಡಿದಿದ್ದ ಸೆನ್ಸೆಕ್ಸ್​ ಚೇತರಿಕೆ ಕಾಣುವ ಲಕ್ಷಣ ಗೋಚರವಾಗಿದೆ. 36 ಸಾವಿರದಿಂದ ಕೆಳಗಿಳಿದಿದ್ದ ಸೆನ್ಸೆಕ್ಸ್​ ಮತ್ತೆ 36 ರ ಗಡಿ ದಾಟಿ ಮುನ್ನುಗ್ಗುತ್ತಿರುವುದೇ ಇದಕ್ಕೆ ಸಾಕ್ಷಿ.

ಇಂದು ಷೇರುಪೇಟೆ ರಿಂಗ್ ಬಾರಿಸುತ್ತಿದ್ದಂತೆ 200 ಅಂಕಗಳ ಏರಿಕೆ ದಾಖಲಿಸುವ ಮೂಲಕ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 36,138 ಅಂಕಗಳಿಗೆ ಏರಿಕೆಯಾಯಿತು. ಪ್ರಮುಖ 30 ಷೇರುಗಳ ಇಂಡೆಕ್ಸ್​ 238 ಅಂಶಗಳಷ್ಟು ಏರಿಕೆ ದಾಖಲಿಸಿತು. ಐಟಿ, ಇಂಧನ, ಗ್ಯಾಸ್​, ಟೆಕ್​​, ಆಟೋ,  ಪಬ್ಲಿಕ್​ ಸೆಕ್ಟರ್​ ಷೇರುಗಳಲ್ಲಿ ಹೆಚ್ಚಳ ಕಂಡುಬಂದವು. 

ಇನ್ನು  ರಾಷ್ಟ್ರೀಯ ಷೇರು ಪೇಟೆ ನಿಫ್ಟಿ 10,900 ಅಂಶಗಳಿಗೆ ಏರಿಕೆ ದಾಖಲಿಸಿತು.  ಇಂದು 61.85 ಅಂಕ ಏರಿಕೆ ಕಾಣುವ ಮೂಲಕ 10,914 ಅಂಕಗಳಿಗೆ ತಲುಪಿತು. ಯೆಸ್​ ಬ್ಯಾಂಕ್​, ಆರ್​ಐಎಲ್​, ಅದಾನಿ ಪೋರ್ಟ್ಸ್​, ಹೆಚ್​ಡಿಎಫ್​ಸಿ, ಬಜಾಜ್​ ಆಟೋ,  ಭಾರ್ತಿ ಏರ್​ಟೆಲ್​, ಟಾಟಾಸ್ಟೀಲ್​, ಇನ್​ಫೋಸಿಸ್​ ಷೇರುಗಳ ಬೆಲೆ ಸರಿ ಸುಮಾರು 1.72 ರಷ್ಟು ಏರಿಕೆ ಕಂಡವು. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ