ಮೇ 1 ರಿಂದ ಹಿರಿಯ ನಾಗರಿಕರಿಗೆ ನೆಮ್ಮದಿ, ಬದಲಾಗಲಿದೆ ಈ ಎಲ್ಲ ನಿಯಮ

Published : Apr 29, 2025, 03:35 PM ISTUpdated : Apr 29, 2025, 04:19 PM IST
ಮೇ 1 ರಿಂದ ಹಿರಿಯ ನಾಗರಿಕರಿಗೆ ನೆಮ್ಮದಿ, ಬದಲಾಗಲಿದೆ ಈ ಎಲ್ಲ ನಿಯಮ

ಸಾರಾಂಶ

ಹಿರಿಯ ನಾಗರಿಕರ ಹಿತಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಉಳಿತಾಯ ಯೋಜನೆಯ ಬಡ್ಡಿ ದರ ಶೇ.8.2ಕ್ಕೆ ಏರಿಕೆ, ಡಿಜಿಟಲ್ ಸೇವೆಗಳ ಸುಲಭ ಲಭ್ಯತೆ, ತೆರಿಗೆ ವಿನಾಯಿತಿ ಹೆಚ್ಚಳ, ಆರೋಗ್ಯ ತಪಾಸಣೆ ಮತ್ತು ಪ್ರಯಾಣದಲ್ಲಿ ರಿಯಾಯಿತಿ ಒದಗಿಸಲಾಗಿದೆ. ನಿವೃತ್ತಿ ಯೋಜನೆಯಲ್ಲೂ ಬದಲಾವಣೆಗಳನ್ನು ತರಲಾಗಿದೆ.

ಹಿರಿಯ ನಾಗರಿಕರು (Senior citizens) ಜೀವನ ಮತ್ತಷ್ಟು ಸುರಕ್ಷಿತ, ಆರಾಮದಾಯಕ, ಆರ್ಥಿಕ ನೆಮ್ಮದಿಯಿಂದ ಕೂಡಿರಲಿ ಎನ್ನುವ ಕಾರಣಕ್ಕೆ ಭಾರತ ಸರ್ಕಾರ, ಪ್ರತಿ ವರ್ಷ ಹಿರಿಯ ನಾಗರಿಕರಿಗಾಗಿ ಅನೇಕ ಯೋಜನೆ (Scheme) ಹಾಗೂ ಸೌಲಭ್ಯಗಳನ್ನು ಜಾರಿಗೆ ತರುತ್ತದೆ.  ಈ ವರ್ಷ ಕೂಡ ಕೇಂದ್ರ ಸರ್ಕಾರ (Central Government), ಹಿರಿಯ ನಾಗರಿಕರಿಗಾಗಿ ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಮೇ ಒಂದರಿಂದ ನಾಲ್ಕು ಬದಲಾವಣೆ ಮೂಲಕ ಹಿರಿಯ ನಾಗರಿಕರ ಮುಖದಲ್ಲಿ ನಗು ಮೂಡಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗಳು, ಹಿರಿಯ ನಾಗರಿಕರ ಆರ್ಥಿಕ ಸ್ಥಿತಿಯನ್ನು ಬಲಗೊಳಿಸುವ ಜೊತೆಗೆ ಆರೋಗ್ಯ, ಪ್ರಯಾಣ, ತೆರಿಗೆ ಹಾಗೂ ಪಿಂಚಣಿ ಸೇರಿದಂತೆ ಸಾಮಾನ್ಯ ಸೇವೆ ಕೂಡ ಸುಲಭವಾಗಿ ಲಭ್ಯವಾಗಲಿದೆ.

ಮೇ 1 ರಿಂದ  ಜಾರಿಗೆ ಬರಲಿದೆ ಈ ನಿಯಮ : 
ಹಿರಿಯ ನಾಗರಿಕರ ಉಳಿತಾಯ ಯೋಜನೆ  :
ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಉಳಿತಾಯ ಯೋಜನೆಯಾಗಿದೆ. 60 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಈ ಯೋಜನೆ ಜಾರಿಗೆ ಬಂದಿದೆ. 2025ರಿಂದ ಈ ಯೋಜನೆಯಡಿ ಸಿಗುವ ಬಡ್ಡಿ ದರದಲ್ಲಿ ಬದಲಾವಣೆ ಮಾಡಲಾಗಿದೆ. ಮೇ. ಒಂದರಿಂದ  ಶೇಕಡಾ 8.2ರಷ್ಟು ಬಡ್ಡಿ ಲಭ್ಯವಾಗಲಿದೆ. ಈ ಯೋಜನೆ ಲಾಭ ಪಡೆಯಲು ಸಾವಿರ ರೂಪಾಯಿ ಕನಿಷ್ಠ ಹೂಡಿಕೆ ಮಾಡ್ಬೇಕು. ಗರಿಷ್ಠ ಮೂವತ್ತು ಲಕ್ಷದವರೆಗೆ ಹೂಡಿಕೆ ಮಾಡ್ಬಹುದು. ಈ ಯೋಜನೆ ಅವಧಿ ಐದು ವರ್ಷವಿದ್ದು, ತೆರಿಗೆ ವಿನಾಯತಿ ಕೂಡ ಲಭ್ಯವಿದೆ. 

ಪ್ರತಿ ದಿನ ಕೇವಲ 7 ರುಪಾಯಿ ಉಳಿಸಿ, ತಿಂಗಳಿಗೆ ₹5000 ಸಾವಿರ ಪಿಂಚಣಿ ಪಡೆಯಿರಿ!

ನಿವೃತ್ತಿ ಯೋಜನೆಯಲ್ಲಿ ಬದಲಾವಣೆ : ಸರ್ಕಾರ ಮೇ ಒಂದರಿಂದ ನಿವೃತ್ತಿ ಯೋಜನೆಯಲ್ಲಿ ಅನೇಕ ಬದಲಾವಣೆ ತರಲಿದೆ. ಇದ್ರಲ್ಲಿ ಲಕ್ಷಾಂತರ ಹಿರಿಯ ನಾಗರಿಕರಿಗೆ, ವಿಧವೆಯರಿಗೆ ಮತ್ತು ವಿಕಲಾಂಗರಿಗೆ ಲಾಭವಾಗಲಿದೆ. ಇನ್ಮುಂದೆ ಈ ಯೋಜನೆಯಡಿ ಪ್ರತಿ ವರ್ಷ ಫಿಜಿಕಲ್ ಲೈಫ್ ಸರ್ಟಿಫಿಕೆಟ್ ನೀಡುವ ಅಗತ್ಯವಿರೋದಿಲ್ಲ. ಮೊಬೈಲ್ ಅಥವಾ ಅಪ್ಲಿಕೇಷನ್ ಮೂಲಕ ನೀವು ಈ ಸರ್ಟಿಫಿಕೆಟ್ ಜಮಾ ಮಾಡಬಹುದು. ಎಲ್ಲ ಫಲಾನುಭವಿಗಳಿಗೆ ಆಧಾರ್ ಪರಿಶೀಲನೆ ಕಡ್ಡಾಯವಾಗಲಿದೆ. ಇನ್ಮುಂದೆ ಅವರ ಕೆಲಸಕ್ಕೆ ತಕ್ಕಂತೆ ಪಿಂಚಣಿ ಮೂರು ಸಾವಿರದಿಂದ ಹತ್ತು ಸಾವಿರದವರೆಗೆ ಲಭ್ಯವಾಗಲಿದೆ.  ಪಿಂಚಣಿ ನೇರವಾಗಿ ಬ್ಯಾಂಕ್ ಖಾತೆಗೆ ಹೋಗಲಿದೆ. 

ತೆರಿಗೆ ವಿನಾಯಿತಿ : ಕೇಂದ್ರ ಸರ್ಕಾರ ಈ ವರ್ಷದ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ನೀಡಿದೆ. ಹನ್ನೆರಡು ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಹೊಂದಿದವರು ತೆರಿಗೆ ಪಾವತಿಸಬೇಕಾಗಿಲ್ಲ. ಫಿಕ್ಸೆಡ್ ಡೆಪೋಸಿಟ್ ಮತ್ತು ಉಳಿತಾಯ ಖಾತೆ ಮೇಲಿನ ಟಿಡಿಎಸ್ ಮಿತಿ ಒಂದು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 75 ವರ್ಷ ಮೇಲ್ಪಟ್ಟ ನಾಗರಿಕರ ತೆರಿಗೆ ಪಾವತಿ ಸುಲಭವಾಗಿದೆ. 

ಹಿರಿಯ ನಾಗರಿಕರಿಗೆ ಡಿಜಿಟಲ್ ಸೇವೆ : ಡಿಜಿಟಲ್ ಇಂಡಿಯಾ ಮಶಿನ್ ಅಡಿಯಲ್ಲಿ ಕೇಂದ್ರ ಸರ್ಕಾರ, ಹಿರಿಯ ನಾಗರಿಕರಿಗಾಗಿ ಅನೇಕ ಡಿಜಿಟಲ್ ಸೇವೆ ಶುರು ಮಾಡಿದೆ.  ಡಿಜಿಟಲ್ ಲೈಫ್ ಸರ್ಟಿಫಿಕೆಟ್, ಆಧಾರ್ ವೆರಿಫಿಕೇಷನ್ ಸೌಲಭ್ಯವನ್ನು ನೀಡುವ ಜೊತೆಗೆ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ. ಇದಲ್ಲದೆ, ಎಲ್ಲ ಯೋಜನೆಗೆ ಆನ್ಲೈನ್ ಮೂಲಕವೇ ಹಿರಿಯ ನಾಗರಿಕರು ಅರ್ಜಿ ಸಲ್ಲಿಸಬಹುದು. 

ಶೀಘ್ರದಲ್ಲಿಯೇ 70,000 ರೂ.ಗೆ 10 ಗ್ರಾಂ ಬಂಗಾರ; ₹27,000 ಇಳಿಕೆ ಮಾಹಿತಿ ಕೊಟ್ಟ ಚಿನ್ನದ ಗಣಿಯ ಸಿಇಒ

ಉಚಿತ ತಪಾಸಣೆ : ಆಯುಷ್ ಮಾನ್ ಯೋಜನೆ ಅಡಿ ಐದು ಲಕ್ಷದವರೆಗೆ ಕ್ಯಾಶ್ ಲೆಸ್ ಸೇವೆ ಲಭ್ಯವಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ, ವೃದ್ಧರಿಗಾಗಿ ವಿಶೇಷ ಹೆಲ್ತ್ ಕಾರ್ಡ್ ಲಭ್ಯವಾಗಲಿದೆ.

  ಪ್ರಯಾಣಿಕರಿಗೆ ಸಿಗಲಿದೆ ಈ ಸೌಲಭ್ಯ : ಅರವತ್ತು ವರ್ಷ ಮೇಲ್ಪಟ್ಟ ಪುರುಷರು ಹಾಗೂ ಐವತ್ತೆಂಟು ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರಯಾಣ ಶುಲ್ಕದಲ್ಲಿ ರಿಯಾಯಿತಿ ಲಭ್ಯವಿದೆ. ಅಲ್ಲದೆ ಅನೇಕ ರಾಜ್ಯಗಳಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಗೋಡೌನ್ ನಲ್ಲಿದ್ದ ಗೋಣಿ ಚೀಲ ಬ್ಯಾಗ್ ಆಯ್ತು, 11 ಸಾವಿರ ಗಳಿಸಿ ಬ್ಯುಸಿನೆಸ್ ಐಡಿಯಾ ಹೇಳಿದ ಹುಡುಗ
ಯಶಸ್ವಿ ವ್ಯಕ್ತಿಗಳು ಫ್ರೀ ಇರುವಾಗ ಏನು ಮಾಡ್ತಾರೆ? ಸಕ್ಸಸ್ ಬೇಕು ಅಂದ್ರೆ ನೀವು ಇದನ್ನೆ ಮಾಡಿ