12 ವಂಚಕರ ಆಸ್ತಿ ಹರಾಜು ಹಾಕಲಿರುವ ಎಸ್‌ಬಿಐ

First Published Jun 10, 2018, 6:40 PM IST
Highlights

ವಿಜಯ್ ಮಲ್ಯ ಮತ್ತು ನೀರವ್ ಮೋದಿ ಭಾರತದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶ ಸೇರಿದ್ದಾರೆ. ಆದರೆ ಇತ್ತ ಭಾರತದಲ್ಲಿಯೂ ಕೆಲ ಮರುಪಾವತಿ ಮಾಡದ ಮಹಾಶಯರು ಹಾಗೆ ಇದ್ದಾರೆ. ಆದರೆ ಇವರೆಲ್ಲರಿಗೂ ಬ್ರೇಕ್ ಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಯೋಜನೆಯೊಂದನ್ನು ರೂಪಿಸಿದೆ. ಹಾಗಾದರೆ ಎಸ್ ಬಿಐ ತೆಗೆದುಕೊಂಡಿರುವ ದಿಟ್ಟ ಕ್ರಮ ಏನು? ಮುಂದೆ ಓದಿ 

ದೆಹಲಿ:  ವಿಜಯ್ ಮಲ್ಯ ಮತ್ತು ನೀರವ್ ಮೋದಿ  ಭಾರತದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶ ಸೇರಿದ್ದಾರೆ. ಆದರೆ ಇತ್ತ ಭಾರತದಲ್ಲಿಯೂ ಕೆಲ ಮರುಪಾವತಿ ಮಾಡದ ಮಹಾಶಯರು ಹಾಗೆ ಇದ್ದಾರೆ. ಆದರೆ ಇವರೆಲ್ಲರಿಗೂ ಬ್ರೇಕ್ ಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಯೋಜನೆಯೊಂದನ್ನು ರೂಪಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  12 ಎನ್ ಪಿಎ[ನಾನ್ ಫರ್ಮಾಮಿಂಗ್ ಅಕೌಂಟ್] ಗೆ ಸಂಬಂಧಿಸಿದ ಆಸ್ತಿ ಹರಾಜು ಹಾಕಿಕೊಳ್ಳಲು ತೀರ್ಮಾನ ಮಾಡಿದೆ. 1325 ಕೋಟಿ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು ಜೂನ್ 25ರಂದು ಖಾತೆಗಳಿಗೆ ಸಂಬಂಧಿಸಿದ ಆಸ್ತಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಅಂಕಿತ್ ಮಿತ್ತಲ್ ಆ್ಯಂಡ್ ಪವರ್ ಲಿಮಿಟೆಡ್ [690.08ಕೋಟಿ ರೂ.], ಮಾರ್ಡನ್ ಸ್ಟೀಲ್ಸ್[122 ಕೋಟಿ] ಗುಡ್ ಹೆಲ್ತ್ ಅಗ್ರೀಟೆಕ್[10.9.14  ಕೋಟಿ ರೂ.] ಅಮಿತ್ ಕಾಟನ್ಸ್[84.70ಕೋಟಿ], ಇಂಡ್ ಸ್ವಿಫ್ಟ್ ಲಿಮಿಟೆಡ್[80.49ಕೋಟಿ] ಖಾತೆಗಳ ಆಸ್ತಿಯನ್ನು ಎಸ್ ಬಿಐ ಹರಾಜು ಹಾಕಲಿದೆ.

ಇದರ ಜತೆಗೆ ನಿಖಿಲ್ ರಿಫೈನರಿಸ್, ಬಾಸ್ಕರ್ ಶ್ರಾಛಿ, ಗಣೇಶ್ ಐರನ್, ಅಸ್ಮಿತಾ ಪೇಪರ್ಸ್, ಫೋರೆಲ್ ಲ್ಯಾಬ್ಸ್, ಕಾರ್ತಿಕ್ ಅಗ್ರೋ ಇಂಡಸ್ಟ್ರೀಸ್, ಅಭಿನಂದನ್ ಇಂಟರೆಕ್ಸಿಮ್ ಖಾತೆಳಿಗೂ ಹರಾಜು ಶಿಕ್ಷೆ ನೀಡಲಾಗಿದೆ.

ಖಾತೆ ಉಳಿಸಿಕೊಳ್ಳಲು ಬಯಸುವ ಉದ್ಯಮಿದಾರರು ಬ್ಯಾಂಕ್ ನೊಂದಿಗೆ ವ್ಯವಹರಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಬಗೆಯ  ಎನ್ ಪಿಎ ಖಾತೆಗಳು ಹೆಚ್ಚಿರುವುದರಿಂದಲೆ ಸಾಲ ಮರುಪಾವತಿಯ ವಿಷಯದಲ್ಲಿ ಎಸ್ ಬಿಐ ಗೆ ಹೊಡೆತ ಬಿದ್ದಿದ್ದು  ಮಾರ್ಚ್‌ ಅಂತ್ಯಕ್ಕೆ ಕೊನೆಯಾದ 4 ನೇ ತ್ರೈಮಾಸಿಕದಲ್ಲಿ 7,718 ಕೋಟಿ ರೂ ನಷ್ಟವಾಗಿತ್ತು.

click me!